Homa Significance and Benefits: ಹಿಂದೂ ಸಂಪ್ರದಾಯದಲ್ಲಿ ಹೋಮ ಹವನ ಆಚರಣೆ: ಆಧ್ಯಾತ್ಮಿಕ ಮಹತ್ವ ಮತ್ತು ಪ್ರಯೋಜನಗಳು

Homa Havana Significance: ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ನೆಲೆಸಿದ್ದರೆ ಧಾರ್ಮಿಕ ನಂಬಿಕೆಗಳ ಪ್ರಕಾರ ಆ ಮನೆಯಲ್ಲಿ ಹೋಮವನ್ನು ಮಾಡಬೇಕು. ಇದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ. ಹೋಮದಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗಿ ಗುಣಾತ್ಮಕ ಶಕ್ತಿಯು ನೆಲೆಯಾಗುತ್ತದೆ.

Homa Significance and Benefits: ಹಿಂದೂ ಸಂಪ್ರದಾಯದಲ್ಲಿ ಹೋಮ ಹವನ ಆಚರಣೆ: ಆಧ್ಯಾತ್ಮಿಕ ಮಹತ್ವ ಮತ್ತು ಪ್ರಯೋಜನಗಳು
ಹಿಂದೂ ಸಂಪ್ರದಾಯದಲ್ಲಿ ಹೋಮ ಹವನ ಆಚರಣೆ
Follow us
|

Updated on: Oct 01, 2024 | 4:03 AM

Homa Havana Significance and Benefits: ಹಿಂದೂ ಧರ್ಮದಲ್ಲಿ ಹೋಮ ಹವನಾದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಪ್ರತಿ ಶುಭ ಕಾರ್ಯಕ್ರಮಗಳಲ್ಲೂ ಹೋಮ ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ಹೋಮವನ್ನು ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ ಎಂದು ಹೇಳಲಾಗಿದೆ. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಹೋಮ ಮಾಡುವುದರಿಂದ ಪರಿಸರವು ಕೂಡ ಶುದ್ಧಿಯಾಗುತ್ತದೆಯಂತೆ. ಹೋಮ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯು ಸಾಕಷ್ಟು ಪ್ರಯೋಜನಗಳನ್ನು ಪಡೆದಿದೆ.

ಒಂದು ಸಂಸ್ಕೃತ ಶಬ್ದವಾದ ಹೋಮ (ಹವನ ಎಂದೂ ಪರಿಚಿತವಾಗಿದೆ) ಶುದ್ಧಿಗೊಳಿಸಲಾದ ಅಗ್ನಿಯಲ್ಲಿ ಅರ್ಪಣೆಗಳನ್ನು ಮಾಡುವುದು ಪ್ರಮುಖ ಕ್ರಿಯೆಯಾದ ಯಾವುದೇ ಧಾರ್ಮಿಕ ಕ್ರಿಯಾವಿಧಿಯನ್ನು ಸೂಚಿಸುತ್ತದೆ. ಪ್ರಾಚೀನ ಕಾಲದಲ್ಲಿ ಋಷಿಗಳಿಂದ ಅದರ ಆಚರಣೆಯು ವೈದಿಕ ಯುಗಕ್ಕೆ ನಿಕಟವಾಗಿತ್ತು. ಈಗ ಹೋಮ-ಹವನ ಶಬ್ದಗಳನ್ನು ಯಜ್ಞ ಮತ್ತು ಅಗ್ನಿಹೋತ್ರ ಶಬ್ದಗಳಿಂದ ಅದಲುಬದಲು ಮಾಡಬಹುದು. ನೆಲದಲ್ಲಿ ಕುಳಿ ಮಾಡಿ ಹೋಮಕುಂಡವನ್ನು ತಯಾರಿಸಲಾಗುತ್ತದೆ. ಹೋಮಕುಂಡವನ್ನು ಕಟ್ಟಲು ಸಾಮಾನ್ಯವಾಗಿ ಇಟ್ಟಿಗೆ, ಕಲ್ಲು ಅಥವಾ ತಾಮ್ರವನ್ನು ಬಳಸಲಾಗುತ್ತದೆ.

ರೋಗದಿಂದ ಮುಕ್ತಗೊಳಿಸುತ್ತದೆ: ಹೋಮ ಮಾಡುವುದರಿಂದ ಯಾವುದೇ ರೀತಿಯ ಮಾರಕ ಮತ್ತು ಅಪಾಯಕಾರಿ ರೋಗವನ್ನು ತೊಡೆದು ಹಾಕಬಹುದಾಗಿದೆ. ಹೋಮದ ಸಮಯದಲ್ಲಿ ಆ ಹೊಗೆಯನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದೆ. ಹೋಮದ ಸಮಯದಲ್ಲಿ ಹೊಗೆ ದೇಹದೊಳಗೆ ಹೋಗಿ ಟೈಫಾಯ್ಡ್ನಂತಹ ತೀವ್ರ ಮತ್ತು ಮಾರಣಾಂತಿಕ ಕಾಯಿಲೆಯನ್ನು ತರುವ ಬ್ಯಾಕ್ಟೇರಿಯಾಗಳನ್ನು ತೆಗೆದು ಹಾಕುತ್ತದೆ. ಇದಲ್ಲದೇ ಸಂಪೂರ್ಣ ದೇಹವು ಶುದ್ಧವಾಗುತ್ತದೆ. ಆದರೆ ಮೆದುಳು, ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಯಿರುವವರು ಹೋಮದಿಂದ ದೂರವಿರಬೇಕು.

ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ: ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ನೆಲೆಸಿದ್ದರೆ ಧಾರ್ಮಿಕ ನಂಬಿಕೆಗಳ ಪ್ರಕಾರ ಆ ಮನೆಯಲ್ಲಿ ಹೋಮವನ್ನು ಮಾಡಬೇಕು. ಇದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ. ಹೋಮದಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗಿ ಗುಣಾತ್ಮಕ ಶಕ್ತಿಯು ನೆಲೆಸುತ್ತದೆ.

ಸೂಕ್ಷ್ಮಜೀವಿಗಳ ನಾಶ: ಯಜ್ಞದ ಸಮಯದಲ್ಲಿ ಹೋಮಕ್ಕೆ ಅರ್ಪಿಸುವ ವಸ್ತುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹೋಮದ ಸಮಯದಲ್ಲಿ ವಸ್ತುಗಳನ್ನು ಹೋಮ ಕುಂಡಕ್ಕೆ ಅರ್ಪಿಸುವುದರಿಂದ ಚಿಕ್ಕ ವೈರಸ್​​ಗಳು ನಾಶವಾಗುತ್ತದೆ. ವಾತಾವರಣವನ್ನು ಶುದ್ಧೀಕರಿಸುತ್ತದೆ. ಹೀಗೆ ಶುದ್ಧವಾದ ವಾತಾವರಣದಲ್ಲಿ ಯಾವ ವೈರಸ್​​ಗಳು ಇರಲು ಸಾಧ್ಯವಿಲ್ಲ ಎನ್ನುವುದು ನಂಬಿಕೆಯಾಗಿದೆ.

ಉತ್ತಮ ಆರೋಗ್ಯಕ್ಕೆ ಸಹಕಾರಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಯಾವುದೇ ಔಷಧಿಗಳನ್ನು ತೆಗೆದುಕೊಂಡರು ಗುಣಮುಖವಾಗದ ರೋಗಿಗಳಿಗೆ ಹೋಮದ ಹೊಗೆಯನ್ನು ಹೀರಲು ಹೇಳುತ್ತಾರೆ. ಇದು ಅವರ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ ಮತ್ತು ಬಹುಬೇಗ ಅನಾರೋಗ್ಯದಿಂದ ಹೊರಬರುವಂತೆ ಮಾಡುತ್ತದೆ ಎನ್ನುತ್ತಾರೆ. ಆದರೆ ಈ ಪ್ರಕ್ರಿಯೆಯು ದೇಹದಲ್ಲಿ ಯಾವ ಅಂಶಗಳ ಕೊರತೆಯಿದೆ ಮತ್ತು ಅದಕ್ಕೆ ಯಾವ ಔಷಧಿ ಸೂಕ್ತ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಬ್ರಾಹ್ಮಿ, ಗುಗ್ಗುಲು Guggul, ನಾಗಕೇಸರ, ಚಂದನ, ಕರ್ಪೂರ, ಅಗರ ಈ ರೀತಿಯ ವಸ್ತುಗಳನ್ನು ಅವರ ಅನಾರೋಗ್ಯಕ್ಕೆ ಕಾರಣವೇನೆಂಬೂದನ್ನು ತಿಳಿದು ಅದನ್ನು ತುಪ್ಪ ಮತ್ತು ಸಕ್ಕರೆಯಲ್ಲಿ ಬೆರೆಸಿ ಹೋಮಕ್ಕೆ ಅರ್ಪಿಸಲಾಗುತ್ತದೆ.

ಇದನ್ನೂ ಓದಿ: Durga devi and Weapons: ದುರ್ಗಾದೇವಿ ಈ ಆಯುಧಗಳನ್ನು ಧರಿಸಿರುವುದು ಏಕೆ? ಯಾರು, ಯಾವ ಅಸ್ತ್ರ ಕೊಟ್ಟರು? ಜೀವನದ ಪಾಠಗಳೇನು?

ದುಷ್ಟ ಗ್ರಹಗಳ ಪ್ರಭಾವವನ್ನು ತೊಡೆದು ಹಾಕುತ್ತದೆ: ಆಗಾಗ ಜಾತಕದಲ್ಲಿ ಕಂಡುಬರುವ ಗ್ರಹಗಳ ಚಲನೆಯು ವ್ಯಕ್ತಿಯ ಜೀವನದ ಮೇಲೆ, ಆತನ ದಿನನಿತ್ಯದ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇಂತಹ ಸಮಸ್ಯೆಗಳನ್ನು ಅಂದರೆ ಗ್ರಹಗತಿಗಳಿಂದ ಉಂಟಾಗುವ ಸಮಸ್ಯೆಗಳನ್ನು ಹೋಮದಿಂದ ನಿವಾರಿಸಿಕೊಳ್ಳಬಹುದು.

ಮನಸ್ಸಿನ ಗೊಂದಲವನ್ನು ನಿವಾರಿಸುತ್ತದೆ: ವ್ಯಕ್ತಿಯು ಹೋಮ-ಹವನಾದಿಗಳ ಮೂಲಕ ಮಾನಸಿಕ ಶಾಂತಿಯನ್ನು ಪಡೆಯುತ್ತಾನೆ ಮತ್ತು ಅದು ಆ ವ್ಯಕ್ತಿಯ ಮನಸ್ಸಿನಲ್ಲಿ ಧಾರ್ಮಿಕ ನಂಬಿಕೆಯನ್ನು ಬಲಪಡಿಸುತ್ತದೆ. ಸಂತೋಷಕರ ಜೀವನವನ್ನು ತಮ್ಮದಾಗಿಸಿಕೊಳ್ಳಲು ಹೋಮವನ್ನು ಮಾಡಬೇಕು. ಹೋಮ ಮಾಡುವುದರಿಂದ ಮನೆಯಲ್ಲಿರುವ ಕುಟುಂಬದ ಸದಸ್ಯರಲ್ಲಿ ಮಾನಸಿಕ ಶಾಂತಿಯು ನೆಲೆಯಾಗಲು ಸಹಕಾರಿಯಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಪುನಃ ಶುರು, ಬೆಂಗಳೂರು ನಿವಾಸಿಗಳೇ ಎಚ್ಚರ!
ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಪುನಃ ಶುರು, ಬೆಂಗಳೂರು ನಿವಾಸಿಗಳೇ ಎಚ್ಚರ!
ಲೋಕಾಯುಕ್ತ ದಾಳಿ, ಹುಮ್ನಾಬಾದ್ ಸಾರಿಗೆ ತನಿಖಾ ಕಚೇರಿ ಸಿಬ್ಬಂದಿಗೆ ಶಾಕ್!
ಲೋಕಾಯುಕ್ತ ದಾಳಿ, ಹುಮ್ನಾಬಾದ್ ಸಾರಿಗೆ ತನಿಖಾ ಕಚೇರಿ ಸಿಬ್ಬಂದಿಗೆ ಶಾಕ್!
ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ?
ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ?