ಇಂದಿನಿಂದ ಮೈಸೂರು ಮಿರ ಮಿರ ಮಿಂಚಿಂಗ್: ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಿದ ಸಚಿವ ಸುನೀಲ್ ಕುಮಾರ್
126 ಕಿಲೋ ಮೀಟರ್ವರೆಗೂ ದೀಪಾಲಂಕಾರ ಮಾಡಿದ್ದು, 26 ವೃತ್ತದಲ್ಲಿ ವೈರೆಟಿ ಲೈಟಿಂಗ್ಸ್ ಅಳವಡಿಕೆ ಮಾಡಲಾಗಿದೆ. ಇಂದಿನಿಂದ ಮೈಸೂರು ಕಲರ್ ಫುಲ್ ಆಗಿ ಮಿರ ಮಿರ ಮಿಂಚಲಿದೆ.
ಮೈಸೂರು: ಸಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಸುನೀಲ್ ಕುಮಾರ್ ಚಾಲನೆ ನೀಡಿದರು. ಮೈಸೂರಿನ ಕೆ.ಆರ್ ಆಸ್ಪತ್ರೆಯ ಬಳಿ ಇರುವ ವೃತ್ತದಲ್ಲಿ ರಿಮೋಟ್ ಬಟನ್ ಒತ್ತುವುದರ ಮೂಲಕ ವಿದ್ಯುತ್ ದೀಪಾಲಂಕಾರಕ್ಕೆ ಅಧಿಕೃತ ಚಾಲನೆ ನೀಡಲಾಯಿತು. 126 ಕಿಲೋ ಮೀಟರ್ವರೆಗೂ ದೀಪಾಲಂಕಾರ ಮಾಡಿದ್ದು, 26 ವೃತ್ತದಲ್ಲಿ ವೈರೆಟಿ ಲೈಟಿಂಗ್ಸ್ ಅಳವಡಿಕೆ ಮಾಡಲಾಗಿದೆ. ಇಂದಿನಿಂದ ಮೈಸೂರು ಕಲರ್ ಫುಲ್ ಆಗಿ ಮಿರ ಮಿರ ಮಿಂಚಲಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿ ಲಲಿತಾ ಜೆ ರಾವ್‌ಗೆ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲಲಿತಾ ಜೆ ರಾವ್ ಬೆಂಗಳೂರಿನ ನಿವಾಸಿಯಾಗಿದ್ದು, ಸಂಗೀತ ಕ್ಷೇತ್ರಕ್ಕೆ ನೀಡಿರುವ ಅನುಪಮ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ‘ರಾಜ್ಯೋತ್ಸವ’ ಸೇರಿ ಹತ್ತಾರು ಪ್ರಶಸ್ತಿಗೆ ಲಲಿತಾ ಭಾಜನರಾಗಿದ್ದಾರೆ.
ಅರಮನೆ ಮುಂಭಾಗದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಸ್ಪೀಕರ್ ಕಾಗೇರಿ, ಪರಿಷತ್ ಸಭಾಪತಿ ರಘುನಾಥ್ ಮಲ್ಕಾಪುರೆ, ಸಚಿವರಾದ ಎಸ್.ಟಿ.ಸೋಮಶೇಖರ್, ಸುನಿಲ್ ಕುಮಾರ್, ಶಾಸಕ ಎಸ್.ಎ.ರಾಮದಾಸ್, ಮೇಯರ್ ಶಿವಕುಮಾರ್, ಉಪಮೇಯರ್ ರೂಪಾ, ಡಿಸಿ ಡಾ.ಬಗಾದಿ ಗೌತಮ್ ಭಾಗಿಯಾಗಿದ್ದರು.
ಹಿಂದಿನಂತೆ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಗುವುದು: ಸಚಿವ ಎಸ್.ಟಿ.ಸೋಮಶೇಖರ್
ಕೊರೊನಾ ಹಿನ್ನೆಲೆ 2 ವರ್ಷದಿಂದ ದಸರಾವನ್ನು ಸರಳವಾಗಿ ಆಚರಣೆ ಮಾಡಿದ್ದೆವು. ಈ ಬಾರಿ ಹಿಂದಿನಂತೆ ಅದ್ಧೂರಿಯಾಗಿ ದಸರಾ ಆಚರಣೆ ಮಾಡುತ್ತಿದ್ದೇವೆ. 15 ದಿನಗಳ ಹಿಂದೆಯೇ ದಸರಾ ವಸ್ತು ಪ್ರದರ್ಶನ ಉದ್ಘಾಟನೆ ಆಗಬೇಕಿತ್ತು. ಎಲ್ಲಾ ವ್ಯವಸ್ಥೆ ಮಾಡಿಕೊಂಡು ಇಂದಿನಿಂದ ಆರಂಭಿಸಿದ್ದೇವೆ. ದಸರಾ ವಸ್ತು ಪ್ರದರ್ಶನದಲ್ಲಿ ಪುನೀತ್ ರಾಜ್ಕುಮಾರ್ ಪ್ರತಿಮೆ ಇರಿಸಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮಹಾರಾಜ ಓವಲ್ ಮೈದಾನದಲ್ಲಿ ನಡೆಯುತ್ತಿರುವ ದಸರಾ ಯೋಗ ನೃತ್ಯ ರೂಪಕ ಕಾರ್ಯಕ್ರಮವನ್ನು Gss ಯೋಗ ಮುಖ್ಯಸ್ಥರಾ ಶ್ರೀ ಹರಿ, ಚಾಮರಾಜನಗರ ಕ್ಷೇತ್ರದ ಎಂಎಲ್ಎ ನಾಗೇಂದ್ರ ಅವ್ರಿಂದ ಉದ್ಘಾಟನೆ ಮಾಡಿದರು. ವಿವಿಧ ತಂಡಗಳಿಂದ ಇಂದು ನೃತ್ಯ ರೂಪಕದ ಪ್ರದರ್ಶನ ಮಾಡಲಾಯಿತು. ಬಳಿಕ ಮಾತನಾಡಿದ ಎಂಎಲ್ಎ ನಾಗೇಂದ್ರ ಮೋದಿ ಈ ಬಾರಿ ಯೋಗ ಡೇ ಸೆಲೆಬ್ರೇಟ್ ಮಾಡಿದರು. ಯೋಗದಿಂದ ನಮ್ಮ ಶರೀರವನ್ನ ಚೆನ್ನಾಗಿ ಇಟ್ಕೋಬೋದು. ಅರೋಗ್ಯ ಚೆನ್ನಾಗಿರುತ್ತೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:20 pm, Mon, 26 September 22