AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2022: ದುರ್ಗಾ ದೇವಿಯ 10 ಆಯುಧಗಳ ಹೆಸರು ಹಾಗೂ ಅವುಗಳ ಮಹತ್ವ

ನವರಾತ್ರಿ (Navratri ) ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ ಮತ್ತು ಈ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ.

Navratri 2022: ದುರ್ಗಾ ದೇವಿಯ 10 ಆಯುಧಗಳ ಹೆಸರು ಹಾಗೂ ಅವುಗಳ ಮಹತ್ವ
Maa Durga
TV9 Web
| Updated By: ನಯನಾ ರಾಜೀವ್|

Updated on:Sep 20, 2022 | 4:51 PM

Share

ನವರಾತ್ರಿ (Navratri ) ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ ಮತ್ತು ಈ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ದುರ್ಗಾ ದೇವಿಯನ್ನು ಅತ್ಯಂತ ಶಕ್ತಿಶಾಲಿ ದೇವತೆ ಎಂದು ಪರಿಗಣಿಸಲಾಗಿದೆ.

ದೇವಿಯ ಹತ್ತು ತೋಳುಗಳಲ್ಲಿ ಆಯುಧಗಳಿವೆ ಮತ್ತು ಈ ಆಯುಧಗಳಿಂದ ದುರ್ಗಾ ಮಾತೆಯು ತನ್ನ ಭಕ್ತರನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾಳೆ ಎಂದು ನಂಬಲಾಗಿದೆ. ಈ ವರ್ಷ, ನವರಾತ್ರಿಯ ಆಚರಣೆಯು ಸೆಪ್ಟೆಂಬರ್ 26 ರಂದು ಪ್ರಾರಂಭವಾಗಿ ಅಕ್ಟೋಬರ್ 5 ರಂದು ಕೊನೆಗೊಳ್ಳಲಿದೆ. ತಾಯಿ ದುರ್ಗೆಯ ಆಯುಧಗಳ ಮಹತ್ವವನ್ನು ತಿಳಿಯೋಣ

ಧಾರ್ಮಿಕ ನಂಬಿಕೆಗಳ ಪ್ರಕಾರ ದುರ್ಗಾ ದೇವಿಯನ್ನು ಅತ್ಯಂತ ಶಕ್ತಿಶಾಲಿ ದೇವತೆ ಎಂದು ಪರಿಗಣಿಸಲಾಗಿದೆ.

ತ್ರಿಶೂಲ: ತ್ರಿಶೂಲವನ್ನು ಶಿವನು ದುರ್ಗಾದೇವಿಗೆ ನೀಡಿದನೆಂದು ನಂಬಲಾಗಿದೆ. ಅದರ ಮೂರು ಚೂಪಾದ ತುದಿಗಳು ಅಥವಾ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳ ಮೂರು ಗುಣಲಕ್ಷಣಗಳ ಸಂಕೇತವಾಗಿದೆ. ತ್ರಿಗುಣಗಳು ಸತ್ವ, ರಾಜ ಮತ್ತು ತಮ

ಸುದರ್ಶನ ಚಕ್ರ: ಶ್ರೀಕೃಷ್ಣನು ದುರ್ಗಾ ದೇವಿಗೆ ಸುದರ್ಶನ ಚಕ್ರವನ್ನು ಉಡುಗೊರೆಯಾಗಿ ನೀಡಿದ್ದಾನೆ. ಪ್ರಪಂಚವು ದೇವತೆಯಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಬ್ರಹ್ಮಾಂಡವು ಸೃಷ್ಟಿಯ ಕೇಂದ್ರದ ಸುತ್ತ ಸುತ್ತುತ್ತದೆ ಎಂದು ಇದು ಸಂಕೇತಿಸುತ್ತದೆ.

ಕಮಲ: ಕಮಲವನ್ನು ಜ್ಞಾನವನ್ನು ಪ್ರತಿನಿಧಿಸುವ ಬ್ರಹ್ಮ ದೇವರ ಸಂಕೇತವೆಂದು ಪರಿಗಣಿಸಲಾಗಿದೆ. ಅರ್ಧ ಅರಳಿದ ಕಮಲವು ಮಾನವನ ಮನಸ್ಸಿನಲ್ಲಿ ಆಧ್ಯಾತ್ಮಿಕ ಪ್ರಜ್ಞೆಯ ಉದಯದ ಸಂಕೇತವಾಗಿದೆ.

ಖಡ್ಗ: ಖಡ್ಗ  ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುವ ಶಕ್ತಿ ಇರುತ್ತದೆ. ಹಾಗೆಯೇ ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಕೂಡ ಆಕೆ ನಾಶಪಡಿಸುತ್ತಾಳೆ ಎನ್ನುವ ನಂಬಿಕೆ.

ಸುದರ್ಶನ ಚಕ್ರ: ಚಕ್ರವು ಜೀವಿತಾವಧಿಯನ್ನು ಪ್ರತಿನಿಧಿಸುತ್ತದೆ. ಅದು ನಾವು ಎಷ್ಟು ಸಮಯ ಬದುಕಿರುತ್ತೇವೋ ಅಷ್ಟು ಸಮಯ ನಮ್ಮ ದೇಹದಲ್ಲಿ ಸುತ್ತುತ್ತದೆ. ಚಕ್ರವು ನಮಗೆ ಸಮಯ ಎಲ್ಲವನ್ನು ನಾಶ ಮಾಡುತ್ತದೆ ಎನ್ನುವುದನ್ನು ತಿಳಿಸುತ್ತದೆ. ಆಂತರಿಕ ಜಾಗೃತಿಯನ್ನು ಮುಡಿಸುವಲ್ಲಿ ಚಕ್ರ ಪ್ರಮುಖ ಪಾತ್ರವನ್ನು ವಹಿಸಿದೆ. ಭಗವಾನ್‌ ವಿಷ್ಣು ತಾಯಿ ದುರ್ಗೆಗೆ ಉಡುಗೊರೆಯಾಗಿ ನೀಡಿದ ಸುದರ್ಶನ ಚಕ್ರವು ಸೃಷ್ಟಿಯ ಕೇಂದ್ರವನ್ನು ಸಂಕೇತಿಸುತ್ತದೆ. ದುರ್ಗಾದೇವಿಗೆ ನಿಷ್ಟ, ಭಕ್ತಿ ಮತ್ತು ಪ್ರೀತಿಯನ್ನು ಪ್ರದರ್ಶಿಸಲು ಚಕ್ರವು ಮನುಷ್ಯರನ್ನು ಪ್ರೇರೇಪಿಸುತ್ತದೆ.

ವಜ್ರ: ಇಂದ್ರದೇವನ ಉಡುಗೊರೆ ವಜ್ರವು ಆತ್ಮದ ಪರಿಶ್ರಮ ಮತ್ತು ಕಷ್ಟವನ್ನು ಪರಿಹರಿಸುವ ಶಕ್ತಿಯ ಸಂಕೇತವಾಗಿದೆ. ದುರ್ಗಾ ಮಾತೆಯು ತನ್ನ ಭಕ್ತರನ್ನು ಅದಮ್ಯ ಆತ್ಮವಿಶ್ವಾಸ ಮತ್ತು ಇಚ್ಛಾ ಶಕ್ತಿಯಿಂದ ಬಲಶಾಲಿಯಾಗುತ್ತಾಳೆ.

ಬಿಲ್ಲು ಮತ್ತು ಬಾಣ: ಇದು ವಾಯುವಿನ ಅಸ್ತ್ರವಾಗಿದ್ದು, ವಾಯು ತನ್ನ ಅಸ್ತ್ರವನ್ನು ದುರ್ಗೆಗೆ ನೀಡುತ್ತಾನೆ. ಅನಾದಿಕಾಲದಿಂದಲೂ ಬಿಲ್ಲ ಮತ್ತು ಬಾಣವನ್ನು ಪ್ರಮುಖ ಶಸ್ತ್ರಾಸ್ತ್ರವನ್ನಾಗಿ ಬಳಸಲಾಗುತ್ತದೆ. ದೇವರುಗಳು, ರಾಜರುಗಳು ಯುದ್ಧದ ಸಮಯದಲ್ಲಿ ಬಿಲ್ಲು, ಬಾಣಗಳನ್ನು ಬಳಸುತ್ತಿದ್ದರು.

ಈಟಿ: ಈಟಿಯು ಮಂಗಳಕರ ಸಂಕೇತವಾಗಿದೆ, ಇದು ಉರಿಯುತ್ತಿರುವ ಶಕ್ತಿಯನ್ನು ಸಹ ಪ್ರತಿನಿಧಿಸುತ್ತದೆ. ಇದು ಸರಿ ಮತ್ತು ತಪ್ಪು ಕಾರ್ಯಗಳ ನಡುವಿನ ವ್ಯತ್ಯಾಸವನ್ನು ತಿಳಿದಿದೆ.

ಶಂಖ: ಬ್ರಹ್ಮಾಂಡವು ಸೃಷ್ಟಿಯಾದಾಗ ಶಂಖವು ಮೊದಲು ಹುಟ್ಟಿಕೊಂಡಿತು. ಆ ಸಮಯದಲ್ಲಿ ಶಂಖದಿಂದ ಮೊದಲು ಹೊರಹೊಮ್ಮಿದ ಶಬ್ಧವೇ ಓಂ. ಶಂಖವನ್ನು ಹಿಂದೂ ಧರ್ಮದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಹಾವು: ದುರ್ಗಾ ದೇವಿಯ ಹತ್ತು ಕೈಗಳಲ್ಲಿ ಒಂದು ಕೈ ಖಾಲಿ ಇರುತ್ತದೆ. ಆ ಕೈಯಿಂದ ಭಕ್ತರಿಗೆ ಆಶೀರ್ವಾದ ಮಾಡುತ್ತಾಳೆ ಎಂದು ಹೇಳಲಾಗುತ್ತದೆ. ಮಹಿಷಾಸುರನನ್ನು ಸಂಹರಿಸಲು ಆಕೆ ಅದೇ ಕೈಯಲ್ಲಿ ತ್ರಿಶೂಲವನ್ನೂ ಕೂಡ ಹಿಡಿದಿದ್ದಾಳೆ. ಹತ್ತನೇ ಕೈಯಲ್ಲಿ ದುರ್ಗೆ ಹಾವನ್ನು ಹಿಡಿದಿದ್ದಾಳೆ. ಹಾವು ಯಾವಾಗಲೂ ಶಿವನ ಕೊರಳಲ್ಲಿ ಇರುತ್ತದೆ.

Published On - 4:46 pm, Tue, 20 September 22