Navratri 2024 Day 7: ನವರಾತ್ರಿ ಏಳನೇ ದಿನದ ಸ್ವರೂಪ ಕಾಲರಾತ್ರಿ; ದೇವಿಯ ಪೌರಾಣಿಕ ಹಿನ್ನೆಲೆ ಹಾಗೂ ಪೂಜಾ ವಿಧಾನ

ಕಾಲರಾತ್ರಿ ತಾಯಿಯ ವಾಹನ ಕತ್ತೆ ಆಗಿದೆ. ತನ್ನ ಬಲಗೈಯ ಮೇಲ್ಭಾಗದ ವರ ಮುದ್ರೆಯಿಂದ ಸಕಲರಿಗೂ ವರ ನೀಡುತ್ತಿದ್ದು, ಬಲಗೈ ಕೆಳಭಾಗ ಅಭಯ ಮುದ್ರೆಯನ್ನು ಹೊಂದಿದ್ದಾಳೆ. ಇನ್ನು ಆ ಜಗಜ್ಜನನಿಯ ಎಡಭಾಗದ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಇದ್ದರೆ, ಕೆಳಗಿನ ಕೈಯಲ್ಲಿ ಖಡ್ಗ ಇದೆ.

Navratri 2024 Day 7: ನವರಾತ್ರಿ ಏಳನೇ ದಿನದ ಸ್ವರೂಪ ಕಾಲರಾತ್ರಿ; ದೇವಿಯ ಪೌರಾಣಿಕ ಹಿನ್ನೆಲೆ ಹಾಗೂ ಪೂಜಾ ವಿಧಾನ
Navratri 2024 Day 7 Kalaratri
Follow us
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ

Updated on: Oct 03, 2024 | 10:41 AM

ಶರನ್ನವರಾತ್ರಿಯ ಏಳನೇ ದಿನ ಸ್ವರೂಪವನ್ನು ಕಾಲರಾತ್ರಿ ಎಂದು ಕರೆಯಲಾಗುತ್ತದೆ. ಆ ದೇವಿಯ ಶರೀರದ ಬಣ್ಣವು ಗಾಢಾಂಧಕಾರದಂತೆ ಇರುತ್ತದೆ. ತನ್ನ ಜಡೆಯನ್ನು ಕಟ್ಟದೆ ಹಾಗೇ ಬಿಟ್ಟು, ಹರಡಿಕೊಂಡಿದ್ದಾಳೆ. ಇನ್ನು ಕುತ್ತಿಗೆಯಲ್ಲಿ ಫಳಫಳನೆ ಹೊಳೆಯುತ್ತಿರುವ ಮಾಲೆ ಇದೆ. ಆ ತಾಯಿಗೆ ಮೂರು ಕಣ್ಣುಗಳಿವೆ. ಈ ಕಣ್ಣುಗಳು ಯಾವ ರೀತಿ ಇವೆ ಅಂದರೆ, ಬ್ರಹ್ಮಾಂಡದ ರೀತಿಯಲ್ಲಿ ಗೋಲಾಕಾರದಲ್ಲಿ ಇದೆ. ಆ ಕಣ್ಣುಗಳ ಕಿರಣಗಳು ವಿದ್ಯುತ್ ನಂತೆ ವ್ಯಾಪಿಸಿಕೊಂಡಿದೆ. ಆ ತಾಯಿಯು ಉಸಿರನ್ನು ಬಿಡುವಾಗ ಹಾಗೂ ತೆಗೆದುಕೊಳ್ಳುವಾಗ ಬೆಂಕಿಯ ಧಗಧಗಿಸುವ ಜ್ವಾಲೆಗಳು ಹೊರಬರುತ್ತವೆ. ಆ ತಾಯಿಯ ವಾಹನವು ಕತ್ತೆ ಆಗಿದೆ. ತನ್ನ ಬಲಗೈಯ ಮೇಲ್ಭಾಗದ ವರ ಮುದ್ರೆಯಿಂದ ಸಕಲರಿಗೂ ವರ ನೀಡುತ್ತಿದ್ದು, ಬಲಗೈ ಕೆಳಭಾಗ ಅಭಯ ಮುದ್ರೆಯನ್ನು ಹೊಂದಿದೆ. ಇನ್ನು ಆ ಜಗಜ್ಜನನಿಯ ಎಡಭಾಗದ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಇದ್ದರೆ, ಕೆಳಗಿನ ಕೈಯಲ್ಲಿ ಖಡ್ಗ ಇದೆ.

ಈಗಾಗಲೇ ನೀಡಿರುವ ವಿವರಣೆಯಿಂದಲೇ ಖಚಿತವಾಗುತ್ತದೆ, ಕಾಲರಾತ್ರಿಯ ಸ್ವರೂಪದಲ್ಲಿ ದುರ್ಗೆಯು ಭಯಂಕರವಾಗಿ ಕಾಣುತ್ತಾಳೆ. ಆದರೆ ಫಲವನ್ನು ನೀಡುವ ವಿಚಾರಕ್ಕೆ ಬಂದಲ್ಲಿ ಸದಾ ಶುಭ ಫಲಗಳನ್ನೇ ನೀಡುವವಳಾಗಿದ್ದಾಳೆ. ಆದ್ದರಿಂದ ಆಕೆಯನ್ನು ಶುಭಂಕರೀ ಎಂದು ಸಹ ಕರೆಯಲಾಗುವುದು. ಭಕ್ತರು ಅಥವಾ ಆರಾಧಕರು ತಾಯಿಯ ಸ್ವರೂಪಕ್ಕೆ ಹೆದರುವ ಅಗತ್ಯವೇ ಇಲ್ಲ. ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಆರಾಧನೆ ಮಾಡುವುದರೊಂದಿಗೆ ಆರಾಧಕರಿಗೆ ಎದುರಾಗುವ, ಎದುರಾಗಿರುವ ಸಕಲ ಪಾಪ, ಅಡೆ- ತಡೆಗಳು ನಾಶವಾಗುತ್ತವೆ. ಅಕ್ಷಯವಾದಂಥ, ಅಂದರೆ ಕೊನೆಯೇ ಇಲ್ಲದಂಥ ಪುಣ್ಯ ಫಲಗಳು ದೊರೆಯುತ್ತವೆ.

ಇನ್ನು ಕಾಲರಾತ್ರಿ ದೇವಿಯು ಕೂಡ ದುಷ್ಟರು, ರಾಕ್ಷಸರನ್ನು ನಾಶ ಮಾಡುತ್ತಾಳೆ. ಈ ದೇವಿಯ ಸ್ಮರಣೆ ಮಾತ್ರದಿಂದಲೇ ಭೂತ- ಪ್ರೇತ, ರಾಕ್ಷಸರು ಮೊದಲಾದ ದುಷ್ಟರ ಸಮಸ್ಯೆಗಳು ಕರಗಿ ಹೋಗುತ್ತವೆ. ನಿಮಗೆ ಗೊತ್ತಿರಲಿ, ತಾಯಿಯ ಸ್ಮರಣೆಯಿಂದಾಗಿ ಗ್ರಹ ಬಾಧೆಗಳು ಕೂಡ ದೂರವಾಗುತ್ತವೆ. ಯಾರು ಕಾಲರಾತ್ರಿ ದೇವಿಯನ್ನು ಆರಾಧನೆ ಮಾಡುತ್ತಾರೋ ಅಂಥವರಿಗೆ ಬೆಂಕಿಯಿಂದ ಎದುರಾಗುವ ಆತಂಕ, ನೀರಿನಿಂದ ಎದುರಾಗುವ ಬಾಧೆಗಳು, ಪ್ರಾಣಿ- ಪಕ್ಷಿ, ಕ್ರಿಮಿ- ಕೀಟಗಳಿಂದ ಎದುರಾಗಬಹುದು ಬಾಧೆಗಳು ಸಹ ದೂರವಾಗುತ್ತವೆ. ಇನ್ನು ಯಾವುದೇ ಭಯಗಳು ಇಲ್ಲದೆ ಸದಾ ಉಲ್ಲಸಿತರಾಗಿ, ಆಧ್ಯಾತ್ಮಿಕ ಸಂತೋಷದಿಂದ ಇರಬಹುದಾಗಿದೆ.

ಇದನ್ನೂ ಓದಿ: ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಸ್ವರೂಪ; ದೇವಿಯ ಪೂಜೆ ಮಾಡುವುದರಿಂದ ಸಿಗುವ ಫಲಾಫಲಗಳೇನು?

ಕಾಲರಾತ್ರಿ ಸ್ವರೂಪದ ದೇವಿ ಆರಾಧಿಸುವುದರಿಂದ ಪಾಪವಾಗಲಿ, ಶತ್ರುಗಳಾಗಲೀ ಒಂದಿನಿತೂ ಶೇಷ, ಅಂದರೆ ಬಾಕಿ ಉಳಿಯದಂತೆ ನಾಶವಾಗುವುದು ಸತ್ಯ. ಇದೇ ಸ್ವರೂಪದಲ್ಲೇ ಆ ತಾಯಿಯು ಶುಂಭ, ನಿಶುಂಭರೆಂಬ ಕ್ರೂರಿಗಳಾದ ರಾಕ್ಷಸರನ್ನು ನಾಶ ಮಾಡಿದ್ದು. ಆದ್ದರಿಂದ ಆ ದೇವಿಯನ್ನು ತಾಯಿಯಂತೆ ಕಂಡು ಆರಾಧನೆ ಮಾಡಿದಲ್ಲಿ ಎಲ್ಲ ಪಾಪ ವಿನಾಶವಾಗುತ್ತದೆ, ಶತ್ರುಗಳು ಇಲ್ಲದಂತಾಗುತ್ತಾರೆ, ಪಾಪದಿಂದ ಮುಕ್ತರಾಗುತ್ತೀರಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ