ಕೊರೊನಾ ಬಾಧೆಯ ಬಳಿಕ ಈ ಬಾರಿ ಅದ್ದೂರಿ ಮೈಸೂರು ದಸರಾ ಮಹೋತ್ಸವ: ರಾಷ್ಟ್ರಪತಿ ಮುರ್ಮು ಉದ್ಘಾಟನಾ ಕಾರ್ಯಕ್ರಮ ಪಟ್ಟಿ ಹೀಗಿದೆ

Chamundeshwari Temple: ಬಳಿಕ ದ್ರೌಪದಿ ಮುರ್ಮು ಅವರು ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ಸೋಮವಾರ ಬೆಳಗ್ಗೆ 10 ಗಂಟೆಗೆ ದಸರಾ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10:45ಕ್ಕೆ ಚಾಮುಂಡಿ ಬೆಟ್ಟದಿಂದ ಮುರ್ಮು ಹೊರಡುವರು.

ಕೊರೊನಾ ಬಾಧೆಯ ಬಳಿಕ ಈ ಬಾರಿ ಅದ್ದೂರಿ ಮೈಸೂರು ದಸರಾ ಮಹೋತ್ಸವ: ರಾಷ್ಟ್ರಪತಿ ಮುರ್ಮು ಉದ್ಘಾಟನಾ ಕಾರ್ಯಕ್ರಮ ಪಟ್ಟಿ ಹೀಗಿದೆ
ಕೊರೊನಾ ಬಾಧೆಯ ಬಳಿಕ ಈ ಬಾರಿ ಅದ್ದೂರಿ ಮೈಸೂರು ದಸರಾ ಮಹೋತ್ಸವ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 22, 2022 | 5:06 PM

ಮೈಸೂರು: ಎರಡು ವರ್ಷಗಳ ಕೊರೊನಾ ಬಾಧೆಯ (Coronavirus) ಬಳಿಕ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವನ್ನು ಅದ್ದೂರಿಯಾಗಿ ನೆರವೇರಿಸಲು ಜಿಲ್ಲಾಡಳಿತ ಸಕಲ ಸಜ್ಜಾಗಿದೆ. ದೇಶದ ಮೊದಲ ಪ್ರಜೆಯೇ ದಸರಾ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 (Mysore Dasara 2020) ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರ ಕಾರ್ಯಕ್ರಮ ಪಟ್ಟಿ ( Itinerary) ಬಿಡುಗಡೆ ಮಾಡಲಾಗಿದೆ.

ಸೆಪ್ಟೆಂಬರ್ 26ರ ಸೋಮವಾರ ಬೆಳಗ್ಗೆ 6.15ಕ್ಕೆ ರಾಷ್ಟ್ರಪತಿ ಮುರ್ಮು ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸೆಪ್ಟೆಂಬರ್ 26ರ ಬೆಳಗ್ಗೆ 9 ಗಂಟೆಗೆ ಮಂಡಕಳ್ಳಿ ಏರ್​ಪೋರ್ಟ್​​ಗೆ ಆಗಮಿಸಲಿದ್ದಾರೆ. ನಂತರ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ದಸರಾ ಉದ್ಘಾಟನೆ ಬಳಿಕ ಹುಬ್ಬಳ್ಳಿಗೆ ತೆರಳಲಿರುವ ರಾಷ್ಟ್ರಪತಿ ಮುರ್ಮು

ಬಳಿಕ ದ್ರೌಪದಿ ಮುರ್ಮು ಅವರು ಚಾಮುಂಡೇಶ್ವರಿ ವಿಗ್ರಹಕ್ಕೆ  (Chamundeshwari Temple) ಪುಷ್ಪಾರ್ಚನೆ ಮಾಡಿ ಸೋಮವಾರ ಬೆಳಗ್ಗೆ 10 ಗಂಟೆಗೆ ದಸರಾ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10:45ಕ್ಕೆ ಚಾಮುಂಡಿ ಬೆಟ್ಟದಿಂದ ಮುರ್ಮು ಹೊರಡುವರು. ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತ್ರ ಮುರ್ಮು ಭಾಗಿಯಾಗಿ, ಬೆಳಗ್ಗೆ 11:15ಕ್ಕೆ ಮೈಸೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಲಿದ್ದಾರೆ.

ಯುವ ದಸರಾ ಮಹೋತ್ಸವ ವಿಜೃಂಭಣೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮಧ್ಯೆ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3ರವರೆಗೆ ಯುವ ದಸರಾ ಮಹೋತ್ಸವವೂ ವಿಜೃಂಭಣೆಯಿಂದ ನಡೆಯಲಿದೆ. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್​​.ಟಿ. ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಪ್ರತಿದಿನ ಸಂಜೆ 6.30ರಿಂದ 10ರವರೆಗೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಯುವ ದಸರಾ ಸಂಗೀತಕ್ಕೆ ಮಂಗ್ಲಿ ಕಾರ್ಯಕ್ರಮ:

ಯುವ ದಸರಾ ವಿಶೇಷ ಅತಿಥಿಯಾಗಿ ನಟ ಸುದೀಪ್​ ಅವರನ್ನು ಆಹ್ವಾನಿಸಲಾಗಿದೆ. ಸೆ. 27ರಂದು ಯುವ ದಸರಾ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮವಿರುತ್ತದೆ. ಸಂಗೀತ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್​, ಮಂಗ್ಲಿ ಭಾಗಿಯಾಗಲಿದ್ದಾರೆ. ಸೆ. 28ರಂದು ಪುನೀತ್ ರಾಜಕುಮಾರ್​​ ನೆನಪಿಗಾಗಿ ಅಪ್ಪು ನಮನ ನೆರವೇರಲಿದೆ. ಗುರುಕಿರಣ್, ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ್ ಅವರಿಂದ ಕಾರ್ಯಕ್ರಮಗಳು ನಡೆಯಲಿವೆ.

ಗುರುಕಿರಣ್, ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ್ ರಿಂದ ಕಾರ್ಯಕ್ರಮ:

29ಕ್ಕೆ ಕನ್ನಿಕಾ ಕಪೂರ್ ಸಂಗೀತ ಕಾರ್ಯಕ್ರಮ. 30ಕ್ಕೆ ಸ್ಯಾಂಡಲ್‌ವುಡ್ ನೈಟ್ ಕಾರ್ಯಕ್ರಮ. ಕನ್ನಡದ ಬಹುತೇಕ ನಟ ನಟಿಯರ ಕಾರ್ಯಕ್ರಮ. 1ಕ್ಕೆ ಶಮಿತಾ ಮಲ್ನಾಡ್ ಸಂಗೀತ ಕಾರ್ಯಕ್ರಮ. 2‌ರಂದು ಹರ್ಷಿಕಾ ಪೂಣ್ಣಚ್ಚ ಮತ್ತು ವಿಜಯ ರಾಘವೇಂದ್ರ ಕಾರ್ಯಕ್ರಮ. ಅಮಿತ್ ತ್ರಿವೇದಿಯಿಂದ ಸಂಗೀತ ಕಾರ್ಯಕ್ರಮ. ಅ. 3 ರಂದು 6.30 ಸುಪ್ರಿಯಾ ರಾಮ್ ಮಹಿಳಾ ಬ್ಯಾಂಡ್ ತಂಡದಿಂದ ಕಾರ್ಯಕ್ರಮ. ಸುನಿಧಿ ಚೌಹನ್ ರಿಂದ ಕಾರ್ಯಕ್ರಮ. ನಟ ಸುದೀಪ್ ಯಾವುದೇ ಸಂಭಾವನೆ ಪಡೆಯದೆ ಯುವ ದಸರಾ ಕಾರ್ಯಕ್ಕೆ ವಿಶೇಷ ಅತಿಥಿಯಾಗಿ ಬರುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್ ಚೇತನ್ ವಿವರಿಸಿದ್ದಾರೆ.

Published On - 3:32 pm, Thu, 22 September 22