Sharan Navratri: ಶರನ್ನ ನವರಾತ್ರಿ ಯಾವಾಗ? ಆಚರಿಸಬೇಕಾದ ಆಚರಣೆ ಹೇಗೆ? ಇತಿಹಾಸ ಮತ್ತು ಮಹತ್ವ

ನವ ಎಂದರೆ ಹೊಸತು ಎಂದು ಸಾಮಾನ್ಯ ಅರ್ಥ. ಹಿಂದೆ ಉಲ್ಲೇಖಿಸಿದಂತೆ ವಾತಾವರಣ ಹೊಸತಾಗಿ ಫಲಿಸುವಕಾಲ. ಆ ಸಮಯದಲ್ಲಿ ಸುಫಲವನ್ನು ನೀಡುವ ತಾಯಿ ಜಗದೀಶ್ವರಿ. ಅವಳ ಸೇವೆ ಮಾಡುವ ಮೂಲಕ ಕೃತಾರ್ಥರಾಗೋಣ. ಏನೀ ನವರಾತ್ರಿಯೆಂದರೆ, ಒಂಭತ್ತು ರಾತ್ರೆ, ಆ ಒಂಭತ್ತು ರಾತ್ರೆಗಳಲ್ಲಿ ಶ್ರೀದೇವಿಯ ಆರಾಧನೆ.

Sharan Navratri: ಶರನ್ನ ನವರಾತ್ರಿ ಯಾವಾಗ? ಆಚರಿಸಬೇಕಾದ ಆಚರಣೆ ಹೇಗೆ? ಇತಿಹಾಸ ಮತ್ತು ಮಹತ್ವ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 22, 2022 | 10:31 AM

ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತನ್ನು ಎಲ್ಲರೂ ಕೇಳಿರುತ್ತೀರಿ. ಆದರೆ ಧರ್ಮ ಎಂದರೇನು ? ಎಂಬುದೇ ಪ್ರಶ್ನೆ. ಪಾಪ ರಹಿತವಾದ ಸಮಾಜಕ್ಕೆ ಹಿತವಾದ ಹಾಗೆಯೇ ತನಗೂ ಒಳಿತಾಗುವ ಕಾರ್ಯವನ್ನು ಸಾಮಾನ್ಯವಾಗಿ ಧರ್ಮ ಎಂದರೆ ತಪ್ಪಾಗಲಾದು. ಸನಾತನ ಪದ್ಧತಿಯ ಪ್ರಕಾರ ಮನುಷ್ಯನು ಕಾಲಕ್ಕನುಗುಣವಾದ ಕರ್ಮವನ್ನು ಮಾಡಬೇಕು. ಅದರಿಂದ ತನ್ನ ಪರಿಸರ , ಮನಸ್ಸು ನೆಮ್ಮದಿಯಿಂದ ಇದ್ದು ಸರ್ವವಿಧದ ಸೌಭಾಗ್ಯಗಳನ್ನು ನಾವು ಪಡೆಯುತ್ತೇವೆ ಎನ್ನುವುದು ಕರ್ಮದ ಫಲ.ಈಗ ನಮ್ಮ ಮುಂದೆ ಬರುವಂತಹ ಕಾಲ ಶರದೃತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷ. ಕಾಲಮಾನ ಪ್ರಕಾರ ಶರದೃತುವಿನಲ್ಲಿ ಮಳೆಯು ಕಡಿಮೆಯಾಗಲು ಆರಂಭಿಸಿ ಆಕಾಶದಲ್ಲಿ ಮೋಡಗಳು ಕಪ್ಪು ಬಣ್ಣವನ್ನು ಬಿಟ್ಟು ಶ್ವೇತವರ್ಣಕ್ಕೆ ಮಾರ್ಪಾಡಾಗಿ ಸ್ವಲ್ಪ ಪ್ರಮಾಣದ ಹಿತವಾದ ಮಳೆಯನ್ನೀಯುತ್ತಾ ವಾತಾವರಣ ಹಚ್ಚಹಸುರಿಂದ ಕಂಗಳೊಸಿ ತರಕಾರಿ ಮೊದಲಾದ ಫಲಗಳು ಬೆಳೆಯುವ ಕಾಲ.

ಈ ಸಮಯದಲ್ಲಿ ಚಂದ್ರನು ಅತ್ಯಂತ ಸುಂದರನಾಗಿ ಗೋಚರಿಸುತ್ತಾನೆ. ಅದಕ್ಕೆ ಶರಚ್ಚಂದ್ರ (ಶರತ್ ಕಾಲದ ಚಂದ್ರ) ಕಾವ್ಯಗಳಲ್ಲಿ ಅತ್ಯಧಿಕವಾಗಿ ಉಲ್ಲೇಖಿಸಲ್ಪಡುತ್ತಾನೆ. ಇಂತಹ ಸುಂದರ ಮನೋಹರ ಕಾಲದಲ್ಲಿ ಪ್ರಕೃತಿ ಸ್ವರೂಪಳಾದ ಜಗಜ್ಜನನಿಯ ಆರಾಧನೆ ಮಾಡುವುದು ಅತ್ಯಂತ ವಿಶೇಷ. ಯಾಕೆಂದರೆ ಪ್ರಕೃತಿವೆನ್ನುವುದು ಸ್ತ್ರೀ ರೂಪ. ಅದರ ಮೂಲ ಮಾತೆ. ಆಕೆ ಶ್ರೀದೇವಿ. ಇಡಿಯ ಜಗತ್ತಿನ ತಾಯಿಯವಳು. ಅವಳ ಆರಾಧನೆ/ಉತ್ಸವ/ವ್ರತ ಮಾಡುವುದರಿಂದ ದೇವತಾಪೂಜೆಯೊಂದಿಗೆ ಪ್ರಕೃತಿಗೆ ಗೌರವ ನೀಡಿದಂತೆಯೂ ಆಗುತ್ತದೆ. ಒಂದು ಪೂಜೆಯಾಗಬೇಕಾದರೆ ಹೂ, ಹಣ್ಣು ಬೇಕೇ ಬೇಕು. ಹೂ ಹಣ್ಣಿನ ಸಲುವಾಗಿ ಗಿಡನೆಡಲೇ ಬೇಕು ಇದರಿಂದ ಸಸ್ಯಾರಾಧನೆ ನಡೆದಂತೆ ಆಯಿತು. ಹೀಗೇ ಪ್ರತಿಯೊಂದು ಧರ್ಮ ಕಾರ್ಯದಿಂದಲೂ ಪರಿಸರಕ್ಕೆ ಕ್ಷೇಮವೇ ಆಗುವುದು.

ಈ ಬಾರಿ ನಾವೆಲ್ಲ ಈ ಪುಣ್ಯಕಾಲದ ಬಗ್ಗೆ ತಿಳಿದು ಆಚರಿಸೋಣ. ನವ ಎಂದರೆ ಹೊಸತು ಎಂದು ಸಾಮಾನ್ಯ ಅರ್ಥ. ಹಿಂದೆ ಉಲ್ಲೇಖಿಸಿದಂತೆ ವಾತಾವರಣ ಹೊಸತಾಗಿ ಫಲಿಸುವಕಾಲ. ಆ ಸಮಯದಲ್ಲಿ ಸುಫಲವನ್ನು ನೀಡುವ ತಾಯಿ ಜಗದೀಶ್ವರಿ. ಅವಳ ಸೇವೆ ಮಾಡುವ ಮೂಲಕ ಕೃತಾರ್ಥರಾಗೋಣ. ಏನೀ ನವರಾತ್ರಿಯೆಂದರೆ, ಒಂಭತ್ತು ರಾತ್ರೆ, ಆ ಒಂಭತ್ತು ರಾತ್ರೆಗಳಲ್ಲಿ ಶ್ರೀದೇವಿಯ ಆರಾಧನೆ. ಹಾಗಾದರೆ ರಾತ್ರೆ ಎಂದಾಕ್ಷಣ ರಾತ್ರೆ ಮಾತ್ರ ಪೂಜಿಸುವುದೇ ಎಂದರೆ ಅಲ್ಲ. ತಾಯಿಯ ಸೇವೆಯನ್ನು ಮಹಾಲಯ ಅಮಾವಾಸ್ಯೆಯ ನಂತರ ಬರುವ ಪಾಡ್ಯದಂದು (ಈ ಸಲ 26/9/22 ರಂದು) ಆರಾಧಿಸಲು ಆರಂಭಿಸಬೇಕು. ಅದು ಹೇಗೆ ಎಂದರೆ… ಸಾಧ್ಯವಿದ್ದಲ್ಲಿ ಮೂರೂ ಸಂಧಿಕಾಲದಲ್ಲಿ. ಅರ್ಥಾತ್ ಬೆಳಗ್ಗೆ , ಮಧ್ಯಾಹ್ನ, ಸಾಯಂಕಾಲ/ರಾತ್ರಿ ವೇಳೆಯಲ್ಲಿ ಪೂಜಿಸುವುದು.

ಈ ಕಾಲವೇ ಪ್ರಶಸ್ತವೇನು ಎಂದರೆ…ಪುರಾಣದ ಆಧಾರದ ಮೇಲೆ ಹೇಳುವುದಾದರೆ.. ಈ ಕಾಲಘಟ್ಟದಲ್ಲೇ ಪ್ರತೀ ಯುಗದಲ್ಲೂ ಜಗದಂಬಿಕೆಯ ಅನುಗ್ರಹದಿಂದ ದೇವಾನುದೇವತೆಗಳಿಗೆ ಹಾಗೂ ಧರ್ಮಕ್ಕೆ ಜಯ ಲಭ್ಯವಾದದ್ದು. ವೈಜ್ಞಾನಿಕವಾಗಿ ಪ್ರಕ್ರತಿ ಈ ಕಾಲದಲ್ಲಿ ಶುಭ್ರವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶುಭ್ರ ಮನಸ್ಸಿಂದ ತಾಯಿ ಶ್ರೀದೇವಿಯ ಆರಾಧನೆ ಮಾಡುವುದು ಉತ್ತಮ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ,  kkmanasvi@gamail.com

Published On - 10:29 am, Thu, 22 September 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್