ನವರಾತ್ರಿಯ ಎರಡು ಮತ್ತು ಮೂರನೇಯ ದಿನದ ಪೂಜೆ ದೇವಿಯ ಯಾವ ಸ್ವರೂಪಕ್ಕೆ ಸಲ್ಲಬೇಕು? ಅದರ ಫಲವೇನು?ಇಂದಿನ ವಿಶೇಷ ಭಕ್ಷ್ಯವೇನು?

ದೇವಜಾತಾ ಎಂದರೆ ದೇವತೆಗಳೆಲ್ಲರೂ ತಮ್ಮ ಅಂತಶ್ಶಕ್ತಿಯನ್ನು ಏಕರೂಪಕ್ಕೆ ಧಾರೆಯೆರೆದು ಉದಯಿಸಿದ ಒಂದು ತಾಯಿಯ ರೂಪ. ಈ ರೂಪವು ಏಕತೆಯನ್ನು ಅರ್ಥಾತ್ ಐಕ್ಯತೆಯನ್ನು ಸಾರುತ್ತದೆ. ಅವರವರ ಕರ್ಮಫಲಕ್ಕನುಗುಣವಾಗಿ ಫಲವನ್ನು ಅನುಭವಿಸುತ್ತಾರೆ... ಅಷ್ಟೇ . ಆದರೆ ಅಧ್ಯಾತ್ಮ ಸಾಧಕರಲ್ಲಿ ಬೇಧವಿಲ್ಲ ಎಂಬುದನ್ನು ಈ ಶಕ್ತಿ ಸಾರಲು ಈ ಪ್ರಕಟವಾಯಿತು.

ನವರಾತ್ರಿಯ ಎರಡು ಮತ್ತು ಮೂರನೇಯ ದಿನದ ಪೂಜೆ ದೇವಿಯ ಯಾವ ಸ್ವರೂಪಕ್ಕೆ ಸಲ್ಲಬೇಕು? ಅದರ ಫಲವೇನು?ಇಂದಿನ ವಿಶೇಷ ಭಕ್ಷ್ಯವೇನು?
Brahmacharini and Chandraghanta
Updated By: ಅಕ್ಷಯ್​ ಪಲ್ಲಮಜಲು​​

Updated on: Sep 27, 2022 | 6:32 AM

ದುರ್ಗತಿಯ ನಾಶಕ್ಕಾಗಿ ಮನುಷ್ಯನು ತನ್ನ ಮನಸ್ಸನ್ನು ಭಕ್ತಿಯನ್ನು ಒಡಗೂಡಿಸಿ ಶ್ರೀದುರ್ಗೆಯ ಪಾದಸೇವೆ ಮಾಡಿ ಕ್ಷೇಮವನ್ನು ಪಡೆಯಲು ಅತ್ಯುತ್ತಮ ಸಮಯವೆಂದರೆ ಅದು ನವರಾತ್ರಿ. ಅದರಲ್ಲಿ ಎರ‍ಡನೇಯ ದಿನ ದುರ್ಗಾದೇವಿಯ ದೇವ ಜಾತಾ ಎಂಬ ರೂಪವನ್ನು ಆರಾಧಿಸಬೇಕು. ಕೆಲವು ಕಡೆ ಬ್ರಹ್ಮಚಾರಿಣೀ ಎಂಬ ರೂಪದಲ್ಲೂ ಆರಾಧಿಸುವ ಕ್ರಮವಿದೆ.

ದೇವಜಾತಾ ಎಂದರೆ ದೇವತೆಗಳೆಲ್ಲರೂ ತಮ್ಮ ಅಂತಶ್ಶಕ್ತಿಯನ್ನು ಏಕರೂಪಕ್ಕೆ ಧಾರೆಯೆರೆದು ಉದಯಿಸಿದ ಒಂದು ತಾಯಿಯ ರೂಪ. ಈ ರೂಪವು ಏಕತೆಯನ್ನು ಅರ್ಥಾತ್ ಐಕ್ಯತೆಯನ್ನು ಸಾರುತ್ತದೆ. ಅವರವರ ಕರ್ಮಫಲಕ್ಕನುಗುಣವಾಗಿ ಫಲವನ್ನು ಅನುಭವಿಸುತ್ತಾರೆ… ಅಷ್ಟೇ . ಆದರೆ ಅಧ್ಯಾತ್ಮ ಸಾಧಕರಲ್ಲಿ ಬೇಧವಿಲ್ಲ ಎಂಬುದನ್ನು ಈ ಶಕ್ತಿ ಸಾರಲು ಈ ಪ್ರಕಟವಾಯಿತು.

ಈ ದೇವಿಯ ಸ್ವರೂಪಕ್ಕೆ ಪ್ರಿಯವಾದ ಭಕ್ಷ್ಯ ಸ್ನಿಗ್ಧೌದನ ಸ್ನಿಗ್ಧ ಎಂದರೆ ನಯದ ಅಂಶವಿರುವುದು ಎಂದು ತಾತ್ಪರ್ಯ. ಓದನ ಅಂದರೆ ಅನ್ನ. ಅರ್ಥಾತ್ ತುಪ್ಪದಿಂದ ಮಿಶ್ರಿತವಾದ ಸಿಹಿಯಾದ ಅನ್ನ ಎಂದು. ಈ ಎರಡನೇ ದಿನದಂದು ತುಪ್ಪದಿಂದಕೂಡಿದ ಸಿಹಿ ಅನ್ನವನ್ನು ದೇವ ಜಾತಾ ಅಥವಾ ಬ್ರಹಚಾರಿಣೀ ಎಂಬ ಶ್ರೀದೇವಿಯ ಕುರಿತಾಗಿ ನೈವೇದ್ಯ ಮಾಡಬೇಕು. ಶುಚಿರ್ಭೂತರಾಗಿ ಗುರು ಮತ್ತು ಗಣಪತಿಯನ್ನು ಪ್ರಾರ್ಥಿಸಿಕೊಂಡು ಈ ಕೆಳಗಿನ ಶ್ಲೋಕದಿಂದ ತಾಯಿಯನ್ನು ಧ್ಯಾನಿಸಿ –

ಹಂಸಾರೂಢಾಂ ಶುಕ್ಲವರ್ಣಾಂ ಶುಕ್ಲಮಾಲ್ಯಾದಿ ಅಲಂಕೃತಾಮ್ |

ಚತುರ್ಭುಜಾಂ ಸೃಕ್ ಸ್ರುವೌ ಚ ಕಮಂಡಲ್ವಕ್ಷಮಾಲಿಕಾಮ್ |

ಬಿಭ್ರತೀಂ ಪೂಜಯೇದ್ದೇವೀಂ ದ್ವಿತೀಯಾಯಾಂ ಸದಾ ನೃಪ |

ಶುದ್ಧ ಮನಸ್ಸಿನಿಂದ ಷೋಡಶೋಪಚಾರಗಳನ್ನು ಮಾಡಿರಿ. ಪೂಜಾಕಾಲದಲ್ಲಿ ಬಿಳಿಯ ವಸ್ತ್ರವನ್ನು ಇಟ್ಟು ಮತ್ತು ಉಟ್ಟು ಪೂಜಿಸಿ. ಮನೆಯಲ್ಲಿ ಅನ್ಯೋನ್ಯವಾದ ಏಕತೆಯನ್ನು ಈ ಪೂಜಾಫಲವಾಗಿ ಹೊಂದಿ ಅಭಿವೃದ್ಧಿಯಾಗುವುದು.

ಮೂರನೇಯ ದಿನ: ತಾಯಿಯನ್ನು “ಮಹಿಷಮರ್ದಿನೀ ದುರ್ಗಾ”ಎಂಬ ಹೆಸರಿನಿಂದ ಅಥವಾ “ಚಂದ್ರಘಂಟಾ” ಎಂಬ ಸ್ವರೂಪದಲ್ಲಿ ಪೂಜಿಸಬೇಕು. ಈ ದಿನದಂದು ತಾಯಿಗೆ ಗುಡಾನ್ನಪ್ರೀತ ಮಾನಸಾ ಎನ್ನುವರು. ಅಂದರೆ ಮೂರನೇಯ ದಿನದಂದು ದುರ್ಗೆಗೆ ಗುಡಾನ್ನ ಅತ್ಯಂತ ಪ್ರಿಯವಾದ ಭಕ್ಷ್ಯ. ಗುಡಾನ್ನವೆಂದರೆ ಬೆಲ್ಲದಿಂದ ಬೇಯಿಸದ ಅನ್ನ ಅಥವಾ ಬೆಲ್ಲದ ಅನ್ನ. ಇದನ್ನು ಮಾಡಿ ತಾಯಿಗೆ ಈ ದಿನ ಸಮರ್ಪಿಸಬೇಕು. ನಮ್ಮ ಮನೋಚಾಂಚಲ್ಯ ದೂರವಾಗಿ ಕಾರ್ಯದಲ್ಲಿ ಧೈರ್ಯ ಮತ್ತು ದೃಢತೆ ಲಭಿಸುವುದು ಈ ದಿನದಲ್ಲಿ ತಾಯಿಯ ಪೂಜೆ ಮಾಡಿದರೆ. ಬೊಗಸೆಯಲ್ಲಿ ಹೂವನ್ನು ಹಿಡಿದು.

ಗೌರಾಂಗೀಂ ದ್ವಿಭುಜಾಂ ದೇವೀಂ ಕಲ್ಹಾರದ್ವಯ ಧಾರಿಣೀಂ |

ಸಿಂಹಾರೂಢಾಂ ತೃತೀಯಾಯಾಂ ಗೌರವಸ್ತ್ರಾಂ ಪ್ರಪೂಜಯೇತ್ ||

ಈ ಶ್ಲೋಕವನ್ನು ಹೇಳುತ್ತಾ ದೇವಿಯನ್ನು ಧ್ಯಾನಿಸಿ. ಬೊಗಸೆಯ ಹೂವನ್ನು ದೇವಿಗೆ ಅರ್ಪಿಸಿ. ಹಾಗೇ ಗುಡಾನ್ನವನ್ನು ನೈವೇದ್ಯ ಮಾಡಿ ಪೂಜೆಯನ್ನು ಮಾಡಿರಿ. ಈ ದಿನ ಗೌರವಸ್ತ್ರ ಅಂದರೆ ಗಂಧದ ಬಣ್ಣದ ವಸ್ತ್ರ ಅತ್ಯಂತ ವಿಶೇಷ . ಶ್ರದ್ಧೆಯಿಂದ ಪೂಜಿಸಿ ಸಾರ್ಥಕತೆಯನ್ನು ಹೊಂದೋಣ.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು