Mysore Dasara 2022: ವಿಶ್ವವಿಖ್ಯಾತ ಮೈಸೂರು ದಸರಾ 2022: ಈ ಬಾರಿ 41 ಸ್ತಬ್ಧಚಿತ್ರಗಳಿಗೆ ಅವಕಾಶ

ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಕಂಗೊಳಿಸುತ್ತಿದ್ದು, ದೀಪಾಲಂಕಾರ ನೋಡಲು ಜನಸಾಗರ ಹುರಿದು ಬರುತ್ತಿದೆ. ಮೈಸೂರು ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿವೆ.

Mysore Dasara 2022: ವಿಶ್ವವಿಖ್ಯಾತ ಮೈಸೂರು ದಸರಾ 2022: ಈ ಬಾರಿ 41 ಸ್ತಬ್ಧಚಿತ್ರಗಳಿಗೆ ಅವಕಾಶ
ಸ್ತಬ್ದಚಿತ್ರ (ಸಂಗ್ರಹ ಚಿತ್ರ)
Edited By:

Updated on: Sep 28, 2022 | 1:59 PM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2022 ಹಿನ್ನೆಲೆ ಈ ಬಾರಿ 41 ಸ್ತಬ್ದಚಿತ್ರಗಳಿಗೆ ಅವಕಾಶ ನೀಡಲಾಗಿದೆ. ಪ್ರತಿ‌ ಜಿಲ್ಲೆಯ ಒಂದು ಸ್ತಬ್ದಚಿತ್ರ. ಸ್ತಬ್ದಚಿತ್ರ ಉಪಸಮಿತಿಯಿಂದ 03, ಮೈಸೂರು ವಿವಿ 01, ಚೆಸ್ಕಾಂ 01, ಸಮಾಜ ಕಲ್ಯಾಣ ಇಲಾಖೆ 01, ಪ್ರವಾಸೋದ್ಯಮ ಇಲಾಖೆ 01, ಲಿಡಕರ್ 01, ಕೌಶಲ್ಯ ಕರ್ನಾಟಕ 01, ಕೆಎಂಎಫ್ 01, ಕಾವೇರಿ ನೀರಾವರಿ ನಿಗಮದ ಒಂದು ಸ್ತಬ್ಧಚಿತ್ರ, ಆಜಾದಿ ಕಾ ಅಮೃತ ಮಹೋತ್ಸವ ಸಾರುವ ಸ್ತಬ್ದಚಿತ್ರ ಸೇರಿ ಹಲವು ಸ್ತಬ್ದಚಿತ್ರಗಳು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗಿಯಾಗಲಿವೆ. ಇನ್ನೂ ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಕಂಗೊಳಿಸುತ್ತಿದ್ದು, ದೀಪಾಲಂಕಾರ ನೋಡಲು ಜನಸಾಗರ ಹುರಿದು ಬರುತ್ತಿದೆ. ಮೈಸೂರು ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿವೆ.

ಬೆಟ್ಟದ ಹೂವು ಸಿನಿಮಾ ಉದ್ಘಾಟನೆ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್

ಬೆಟ್ಟದ ಹೂವು ಸಿನಿಮಾ ಉದ್ಘಾಟನೆ ಮಾಡಿದ ಮೂಲಕ ದಸರಾ ಚಲನ ಚಿತ್ರೋತ್ಸವಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ ಉದ್ಘಾಟನೆ ಮಾಡಿದರು. ಶಕ್ತಿಧಾಮ ಮಕ್ಕಳು ಕೂಡ ದಸರಾ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಬರಲಿಲ್ಲ. ಬದಲಾಗಿ ಕಾಲೇಜ್ ಸ್ಟುಡೇಂಟ್ಸ್ ಜೊತೆ ಅಶ್ವಿನಿ ಸಿನಿಮಾ ನೋಡಿದರು. 5 ನಿಮಿಷ ಸಿನಿಮಾ ನೋಡಿ ಅಶ್ವಿನಿ ಹೊರಟರು. ಇಂದು ಸಂಜೆ 6.30ಕ್ಕೆ ಅಪ್ಪು ನಮನ ಹೆಸರಿನ ಕಾರ್ಯಕ್ರಮದೊಂದಿಗೆ ಯುವ ದಸರಾ ಉದ್ಘಾಟನೆಯಾಗಲಿದ್ದು, ಡಾ. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕರಾದ ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್ ಗಾಯನವಿರಲಿದೆ. ಅಪ್ಪು ಸಿನಿಮಾದ ಹಾಡುಗಳಿಗೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ. ಈ ಬಾರಿಯ ಯುವ ದಸರಾ ಡಾ. ಪುನೀತ್ ರಾಜಕುಮಾರಗೆ ಅರ್ಪಣೆ ಆಗಲಿದೆ.

‘ದಸರಾ ದರ್ಶನ’ KSRTC ಬಸ್​ಗಳಿಗೆ ಚಾಲನೆ

‘ದಸರಾ ದರ್ಶನ’ KSRTC ಬಸ್​ಗಳಿಗೆ ಬಿಜೆಪಿ ಶಾಸಕ ಎಸ್​.ಎ.ರಾಮದಾಸ್​ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು. 3 ದಿನ ದಸರಾ ದರ್ಶನಕ್ಕೆ ಒಟ್ಟು 81 ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಮೈಸೂರಿನ 1 ತಾಲೂಕಿಗೆ ಮೂರು ಬಸ್​​ಗಳ ನಿಯೋಜನೆ ಮಾಡಿದ್ದು, 3 ದಿನಗಳಲ್ಲಿ 4,455 ಜನರಿಗೆ ದಸರಾ ತೋರಿಸುವ ನಿರ್ಧರಿಸಲಾಗಿದೆ. 9.30ಕ್ಕೆ ಕೆ.ಎಸ್.ಆರ್.ಟಿ.ಸಿ ಚಾಲನೆ  ಕಾರ್ಯಕ್ರಮಕ್ಕೆ ಸಮಯ ನಿಗದಿಯಾಗಿತ್ತು. ಆದರೆ ಉಸ್ತುವಾರಿ ಸಚಿವರಿಗಾಗಿ ಕಾದು ಕಾದು ಶಾಸಕ ಹಾಗೂ ಅಧಿಕಾರಿಗಳು ಸುಸ್ತಾದರು. ವಿಶ್ವ ವಿಖ್ಯಾತ ದಸರಾ ನೋಡಲು ಜಿಲ್ಲಾಡಳಿತ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದೆ. ಸ್ಥಳೀಯ ಶಾಸಕ ರಾಮದಾಸ್ ಬಂದು ಒಂದು ಗಂಟೆಯಾದರು ಸಚಿವ ಸ್ಥಳಕ್ಕೆ ಬಂದಿರಲಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Web

TV9 Kannada

Read More
Loading...
Unable to load recommendations.
Follow Us