ನಾಮಕರಣ ಸಂಸ್ಕಾರ: ಮಗುವಿಗೆ ನಾಮಕರಣ ಮಾಡುವ ಮುನ್ನ ತಂದೆ-ತಾಯಿಯಾಗಿ ಈ 5 ಸಂಗತಿಗಳು ನಿಮಗೆ ತಿಳಿದಿರಲಿ!
ಆಧುನಿಕ ಅಪ್ಪ-ಅಮ್ಮ ಸೀದಾ ಅಂತರ್ಜಾಲದಲ್ಲಿ ಈಜಾಡಿ ಮಗುವಿಗೆ ಯಾವುದೋ ಒಂದು ಹೆಸರನ್ನು ಹೆಕ್ಕಿ ತೆಗೆದು, ತಮಗೆ ಇಷ್ಟವಾದ್ದನ್ನು ಇಟ್ಟುಬಿಡುತ್ತಾರೆ. ಆದರೆ ಸುಸಂಬದ್ಧವಾಗಿದೆಯಾ? ಎಂಬುದನ್ನು ವಿಚಾರಿಸಿ ನೋಡುವುದಿಲ್ಲ. ಆದರೆ ಇದು ಸರಿಯಾದ ನಿಯಮ ಅಲ್ಲ. ಹೆಸರು ಸದಾ ಅರ್ಥಪೂರ್ಣವಾಗಿರಬೇಕು. ಅದು ನಾಮಕರಣ ಸಂಸ್ಕಾರಕ್ಕೆ ತಕ್ಕಂತೆ ಇರಬೇಕು.
ನಿಮ್ಮ ಮಗುವಿಗೆ ನಾಮಕರಣ ಮಾಡುವ ಮುನ್ನ ತಂದೆ-ತಾಯಿಯಾಗಿ ನೀವು ಈ 5 ಸಂಗತಿಗಳನ್ನು ತಿಳಿದಿರಲೇಬೇಕು. ಆದರೆ ಈಗಿನ ಕಾಲದ ಅಪ್ಪ-ಅಮ್ಮ (Parenting) ಏನು ಮಾಡುತ್ತಿದ್ದಾರೆ ಅಂದ್ರೆ ಸೀದಾ ಇಂಟರ್ನೆಟ್ನಲ್ಲಿ ಜಾಲಾಡಿ, ತಮಗಿಷ್ಟವಾದ ಯಾವುದೋ ಹೆಸರು ಸೆಲೆಕ್ಟ್ ಮಾಡಿಕೊಂಡು, ಯಾವುದೂ ಘಳಿಗೆಯಲ್ಲಿ ನಾಮಕರಣ (Christening) ಅಂತಾ ಮಾಡಿಬಿಡುತ್ತಾರೆ. ಆದರೆ ನಾಮಕರಣಕ್ಕೂ ಅನೇಕ ರೀತಿರಿವಾಜುಗಳು, ಅಮ್ಮ-ಅಮ್ಮನ ಕರ್ತವ್ಯಗಳು ಇರುತ್ತವೆ. ಆದರೆ ಜ್ಯೋತಿಷ್ಯದ ಪ್ರಕಾರ ನಾಮಕರಣ ಸಂಸ್ಕಾರವು (Naming) 16 ಸಂಸ್ಕಾರಗಳ ಪೈಕಿ ಒಂದಾಗಿದ್ದು, ಅದನ್ನು ಶ್ರದ್ಧಾ ಭಕ್ತಿಯಿಂದ ಪೂರೈಸಬೇಕಾಗುತ್ತದೆ. ಮಗುವಿನ (Child) ಉಜ್ವಲ ಭವಿಷ್ಯಕ್ಕಾಗಿ ಈ ನಿಯಮಗಳನ್ನುಆದ್ಯಂತವಾಗಿ ಪಾಲಿಸಬೇಕಾಗುತ್ತದೆ.
ಮಗು ಅಮ್ಮನ ಗರ್ಭದಲ್ಲಿ ಇರುವಾಗಲೇ ಅಪ್ಪ-ಅಮ್ಮ ಆ ಮಗುವಿನ ಅಷ್ಟೂ ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಹೆಣೆದು, ಪ್ಲಾನಿಂಗ್ ಶುರು ಮಾಡುತ್ತಾರೆ. ಪೋಷಕರಲ್ಲಿ ಅಷ್ಟು ತವಕ, ಕೌತುಕ, ಆಸಕ್ತಿ ಮನೆ ಮಾಡಿರುತ್ತದೆ. ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದರು ಅಂತಾ ಮಗುವಿನ ಹೆಸರನ್ನೂ ನಿರ್ಣಯಿಸಿಬಿಡುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಸಮಂಜಸವಲ್ಲ. ಸನಾತನ ಧರ್ಮದಲ್ಲಿ ಬರುವ 16 ಸಂಸ್ಕಾರಗಳಲ್ಲಿ ನಾಮಕರಣ ಸಂಸ್ಕಾರವೂ ಒಂದಾಗಿದ್ದು, ಅದನ್ನು ಚಾಚೂ ತಪ್ಪದೆ ಪಾಲಿಸಬೇಕಾಗುತ್ತದೆ.
ಹೆಸರು, ನಾಮ ಎಂಬುದು ಆ ಮಗುವಿನ ಜೀವಿತದುದ್ದಕ್ಕೂ ಒಂದು ಹೆಗ್ಗುರುತಾಗಿ ಉಳಿಯುವಂತಹುದು. ಈವೂ ಅಷ್ಟೇ ನಿಮ್ಮ ಮಗುವಿಗೆ ಈಗಿಂದೀಗಲೇ ನಾಮಕರಣ ಮಾಡಬೇಕು ಅಂದುಕೊಂಡಿದ್ದರೆ ಈ ಮಾತುಗಳನ್ನು ಧ್ಯಾನದಿಂದ ಆಲಿಸಿ, ಪಾಲಿಸಿ:
ರಾಶಿಗೆ ಅನುಗುಣವಾಗಿ ಹೆಸರನ್ನು ಇಡಬೇಕು: ಮಗುವಿನ ಹೆಸರನ್ನು ಯಾವಾಗಲೂ ಆ ಮಗುವಿನ ಜನ್ಮ ಕುಂಡಲಿಗೆ ಅನುಸಾರವಾಗಿ ಇಡಬೇಕು. ಗ್ರಹ, ನಕ್ಷತ್ರ ಮತ್ತು ರಾಶಿಯ ಲೆಕ್ಕಾಚಾರದಲ್ಲಿ ಮಗುವಿನ ಹೆಸರು ನಿರ್ಧರಿತವಾಗುತ್ತದೆ. ಮಗು ಹುಟ್ಟಿದಾಗ ನಿಗದಿಯಾಗುವ ಕುಂಡಲಿಯನ್ನು ಆಧರಿಸಿ, ಜ್ಯೋತಿಷಿಗಳು ಆ ಮಗುವಿಗೆ ಸಮಂಜಸವೆನಿಸುವ ಹೆಸರಿನ ಮೊದಲ ಅಕ್ಷರವನ್ನು ಸೂಚಿಸುತ್ತದೆ. ಆ ಅಕ್ಷರದಿಂದಲೇ ಆರಂಭವಾಗುವ ಹೆಸರನ್ನು ನೀವು ಮಗುವಿಗೆ ಇಡಬೇಕು.
ಯಾವ ದಿನ, ಘಳಿಗೆ, ಮುಹೂರ್ತದಲ್ಲಿ ನಾಮಕರಣ ಮಾಡಬೇಕು: ಮಗುವಿನೆ ನಾಮಕರಣ ಸಂಸ್ಕಾರ ಮಾಡುವ ಮುನ್ನ ಆ ವಿಶೇಷ ದಿನ ಯಾವುದು ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ. ಜ್ಯೋತಿಷ್ಯದ ನಿಯಮಗಳ ಪ್ರಕಾರ ನಾಮಕರಣ ಸಂಸ್ಕಾರವು ಮಗು ಹುಟ್ಟಿದ 11, 12ನೆಯ ಅಥವಾ 16ನೆಯ ದಿನ ಇಡಬೇಕು. ಇದಕ್ಕಾಗಿ ನಿಮ್ಮ ಜ್ಯೋತಿಷಿಗಳನ್ನು ಸಂಪರ್ಕಿಸಿ ಶುಭ ದಿನ ಯಾವುದು ಎಂಬುದನ್ನು ನಿರ್ಧರಿಸಿಕೊಳ್ಳಿ. ಆದರೆ ಹುಣ್ಣಿಮೆ ಅಥವಾ ಅಮಾವಾಸ್ಯೆಯ ದಿನ ಮಗುವಿಗೆ ನಾಮಕರಣ ಮಾಡಬಾರದು.
ನಕ್ಷತ್ರದ ಬಗ್ಗೆ ನಿಗಾ ಇರಲಿ: ನಾಮಕರಣ ಸಂಸ್ಕಾರವನ್ನು ಸರಿಯಾದ ನಕ್ಷತ್ರದಲ್ಲಿ ಮಾಡಿದರೆ ತುಂಬಾ ಶುಭದಾಯಕವಾಗಿರುತ್ತದೆ. ಶಾಸ್ತ್ರಗಳಲ್ಲಿ ಅನುರಾಧ, ಪುನರ್ವಸು, ಮಾಘ, ಉತ್ತರಾ, ಉತ್ತರಾಷಾಢ, ಉತ್ತರ ಭಾದ್ರ, ಶತಭಿಷ, ಸ್ವಾತಿ, ಧನಿಷ್ಠಾ, ಶ್ರವಣ, ರೋಹಿಣಿ, ಅಶ್ವಿನಿ, ಮೃಗಶಿರಾ, ರೇವತಿ, ಹಸ್ತಾ ಮತ್ತು ಪುಷ್ಯ ನಕ್ಷತ್ರಗಳಲ್ಲಿ ಬರುವ ಘಳಿಗೆಗಳು ನಾಮಕರಣಕ್ಕೆ ತುಂಬಾ ಶುಭದಾಯಕ.
ಹೆಸರು ಅರ್ಥಪೂರ್ಣವಾಗಿರಬೇಕು: ಆಧುನಿಕ ಅಪ್ಪ-ಅಮ್ಮ ಸೀದಾ ಅಂತರ್ಜಾಲದಲ್ಲಿ ಈಜಾಡಿ ಮಗುವಿಗೆ ಅಸಂಬದ್ಧವಾಗಿ ಯಾವುದೋ ಒಂದು ಹೆಸರನ್ನು ಹೆಕ್ಕಿ ತೆಗೆದು, ತಮಗೆ ಇಷ್ಟವಾದ್ದನ್ನು ಇಟ್ಟುಬಿಡುತ್ತಾರೆ. ಆದರೆ ಸುಸಂಬದ್ಧವಾಗಿದೆಯಾ? ಎಂಬುದನ್ನು ವಿಚಾರಿಸಿ ನೋಡುವುದಿಲ್ಲ. ಆದರೆ ಇದು ಸರಿಯಾದ ನಿಯಮ ಅಲ್ಲ. ಹೆಸರು ಸದಾ ಅರ್ಥಪೂರ್ಣವಾಗಿರಬೇಕು. ಏಕೆಂದರೆ ಹೆಸರಿನ ಅರ್ಥವು ಆ ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅರ್ಥಪೂರ್ಣ ಹೆಸರನ್ನು ಹುಡುಕಿ, ಜ್ಯೋತಿಷಿಗಳ ಸಲಹೆ ಪಡೆದು ನಿಮ್ಮ ಮಗುವಿಗೆ ನಾಮಕರಣ ಮಾಡಬೇಕು.
ಹೆಸರಿನ ಅಕ್ಷರಗಳ ಸಂಖ್ಯೆಯೂ ಸಮಂಜಸವಾಗಿರಬೇಕು: ಸಂಖ್ಯಾಶಾಸ್ತ್ರವೂ ಮಗುವಿನ ನಾಮಕರಣದಲ್ಲಿ ತುಂಬಾ ಮಹತ್ವ ಪಡೆಯುತ್ತದೆ. ಹೆಸರಿಗೆ ಅನುಗುಣವಾಗಿ ನಾಮಾಂಕವನ್ನು ಅನುಸರಿಸಬೇಕಾಗುತ್ತದೆ. ಈ ನಾಮಾಂಕವು ಮಗುವಿನ ಭವಿಷ್ಯ ನಿರ್ಧರಿಸುವಂತಹದೂ ಆಗಿರುತ್ತದೆ. ಹಾಗಾಗಿ ಜ್ಯೋತಿಷಗಳ ಸಲಹೆ ಪಡೆದು ಹೆಸರು ಇಡುವಾಗ ಅದರ ಸಂಖ್ಯಾಶಾಸ್ತ್ರದ (numerology) ಬಗ್ಗೆಯೂ ಕೇಳಿ ತಿಳಿದುಕೊಳ್ಳಿ. ಇದು ಮಗುವಿಗೆ ಇನ್ನೂ ಶುಭದಾಯಕವಾಗಿರುತ್ತದೆ. ಈ ಜಗತ್ತಿನಲ್ಲಿ ಅಪ್ಪ-ಅಮ್ಮ ಮಾಡುವುದೆಲ್ಲಾ ಮಗುವಿನ ಶ್ರೇಯಸ್ಸಿಗಾಗಿಯೇ ಅಲ್ಲವೇ!? ಅದಕ್ಕೆ ನೀವೂ ಇದನ್ನು ಅನುಸರಿಸಿ.