AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆ-ತಾಯಿಯಿಂದ ಉತ್ತಮ ಸಂಸ್ಕಾರ ಪಡೆದರೆ ಮಕ್ಕಳು ಉತ್ತಮರು, ಸಫಲರೂ ಆಗುತ್ತಾರೆ! ಚಾಣಕ್ಯ ಹೇಳೋದೇನು?

Chanakya Niti in Kannada: ನಿಮ್ಮ ಮಕ್ಕಳ ಎದುರೇ ಅಪ್ಪ-ಅಮ್ಮ ಆಗಿ ನೀವು ತಪ್ಪು ಹಾದಿ ಹಿಡಿಯಬೇಡಿ. ಸದಾ ಒಳ್ಳೆಯದ್ದನ್ನೇ ಬಯಸಿ, ಒಳ್ಳೆಯದ್ದನ್ನು ಮಾಡಿ. ಭಾಷೆ, ಆಡುವ ಮಾತಿನ ಮೇಲೆ ನಿಗಾವಹಿಸಿ ಸಂಸ್ಕಾರದಿಂದ ಮಾತನಾಡಬೇಕು. ಎದುರಿಗಿನ ವ್ಯಕ್ತಿಗಳ ಜೊತೆ ಉಚಿತ ರೀತಿಯಲ್ಲಿ ವ್ಯವಹರಿಸಬೇಕು. ಏಕೆಂದರೆ ಅಪ್ಪ-ಅಮ್ಮ ಏನು ಮಾಡುತ್ತಾರೋ ಮಕ್ಕಳೂ ಡಿಟ್ಟೋ ಅದನ್ನೇ ಮಾಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ತಂದೆ-ತಾಯಿಯಿಂದ ಉತ್ತಮ ಸಂಸ್ಕಾರ ಪಡೆದರೆ ಮಕ್ಕಳು ಉತ್ತಮರು, ಸಫಲರೂ ಆಗುತ್ತಾರೆ! ಚಾಣಕ್ಯ ಹೇಳೋದೇನು?
ತಂದೆ-ತಾಯಿಯಿಂದ ಸಂಸ್ಕಾರ ಪಡೆದ ಮಕ್ಕಳು ಉತ್ತಮರು ಮತ್ತು ಸಫಲರೂ ಆಗಿರುತ್ತಾರೆ! ಚಾಣಕ್ಯ ಹೇಳೋದೇನು?
TV9 Web
| Updated By: ಸಾಧು ಶ್ರೀನಾಥ್​|

Updated on: Nov 20, 2021 | 7:40 AM

Share

ನೂರಾರು ವರ್ಷಗಳ ಹಿಂದೆ ಆಚಾರ್ಯ ಚಾಣಕ್ಯ ಹೇಳಿರುವ ತಿಳಿವಳಿಕೆಯ ಮಾತುಗಳು ಎಂದೆಂದಿಗೂ ಅಜರಾಮರ. ಚಾಣಕ್ಯ ಹೇಳುವ ಜೀವನದ ಪಾಠಗಳನ್ನು (Chanakya Niti) ಅಳವಡಿಸಿಕೊಂಡರೆ ಖಂಡಿತ ಮನುಷ್ಯ ಉನ್ನತಿಯತ್ತ ಸಾಗಬಹುದು. ಕೌಟಿಲ್ಯ ಅಥವಾ ವಿಷ್ಣುಗುಪ್ತಾ ಹೆಸರಿನಿಂದ ಕರೆಯಿಸಿಕೊಳ್ಳುವ ಆಚಾರ್ಯ ಚಾಣಕ್ಯ ಒಂದು ರೀತಿಯಲ್ಲಿ ಹೇಳಬೇಕು ಅಂದರೆ ವಿಲಕ್ಷಣವಾಗಿ ಪ್ರತಿಭೆಯ ಗಣಿಯಾಗಿದ್ದ. ಚಾಣಕ್ಯ ಅಸಾಧಾರಣ ಬುದ್ಧಿವಂತನಾಗಿದ್ದ. ತನ್ನ ಬುದ್ಧಿ ಕೌಶಲ್ಯದಿಂದ ನಂದ ವಂಶವನ್ನು ಸೋಲಿಸಿ, ಚಂದ್ರಗುಪ್ತ ಮೌರ್ಯನನ್ನು ಸಾಮ್ರಾಟನನ್ನಾಗಿಸಿದ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಪ್ರಧಾನವಾಗಿದೆ. ಆದರೂ ಚಾಣಕ್ಯ ಸಾಧಾರಣ ಜೀವನ ನಡೆಸಿದ. ಚಾಣಕ್ಯನ ನೀತಿಗಳನ್ನು ಯಾರೇ ಆಗಲಿ ಅಳವಡಿಸಿಕೊಂಡರೆ ಅವರು ಜೀವನದಲ್ಲಿ ಸಾಫಲ್ಯ ಕಂಡು, ಉತ್ತಮರಾಗುತ್ತಾರೆ. ಆದರೆ ಅವರಲ್ಲಿ ಸಂಸ್ಕಾರ (sacraments) ಎಂಬುದು ಇರಬೇಕು.

ಚಾಣಕ್ಯ ಖಾಸಗೀ ಜೀವನ, ರಾಜನೀತಿ, ಸಂಪತ್ತಿನ ಬಗ್ಗೆ ಗಹನವಾದ ಮಾತುಗಳನ್ನು ಹೇಳಿದ್ದ. ಮಕ್ಕಳ ಸಂಸ್ಕಾರದಲ್ಲಿ ಅಪ್ಪ-ಅಮ್ಮ ಕೊಡುಗೆ ಬಹಳವಾಗಿರುತ್ತದೆ ಎಂಬುದನ್ನು ಹೇಳಿದ್ದ. ಯಾವುದೇ ಅಪ್ಪ-ಅಮ್ಮ ತಮ್ಮ ಸಂತಾನದ ಕಲ್ಯಾಣವನ್ನು ಬಯಸಿ, ಯೋಗ್ಯರನ್ನಾಗಿಸಲು ಶ್ರಮಿಸುತ್ತಾರೆ. ಇದಕ್ಕಾಗಿ ಅಪ್ಪ-ಅಮ್ಮ ಕಠೋರ ಶ್ರಮ ಪಡುತ್ತಾರೆ. ತನ್ನ ಸಂತತಿಯ ಉಜ್ವಲ ಭವಿಷ್ಯ ಬಯಸಿ, ತಮ್ಮ ಪ್ರತಿಯೊಂದು ಖುಷಿಯನ್ನು ನಗುನಗುತಾ ತ್ಯಾಗ ಮಾಡುತಾ ಜೀವನ ನಡೆಸುತ್ತಾರೆ. ತಮ್ಮ ಮಕ್ಕಳ ಪ್ರತಿ ಕಷ್ಟವನ್ನೂ ದೂರ ಮಾಡಲು ಸದಾ ಸಿದ್ಧವಾಗಿರುತ್ತಾರೆ. ತಮಗೆ ಎಷ್ಟೇ ಕಷ್ಟವಾದರೂ ತಮ್ಮ ಮಕ್ಕಳ ಔನ್ನತ್ಯವನ್ನು ಬಯಸುತ್ತಾರೆ.

1. ನೈತಿಕತೆಯ ಮಹತ್ವವನ್ನು ಮಕ್ಕಳಿಗೆ, ಮನದಟ್ಟುಪಡಿಸಬೇಕು: ತಂದೆ-ತಾಯಿ ತಮ್ಮ ಮಕ್ಕಳ ಸಾಫಲ್ಯ ಬಯಸುವವರಾದರೆ ಅವರು ಆ ಮಕ್ಕಳಿಗೆ ನೈತಿಕತೆಯ ಮಹತ್ವವನ್ನು ಮನದಟ್ಟುಪಡಿಸಬೇಕು. ನೈತಿಕ ಗುಣಗಳನ್ನುಬೋಧಿಸಬೇಕು. ಮಕ್ಕಳನ್ನು ದೇಶದ ಮಹಾನ್​ ವ್ಯಕ್ತಿಗಳನ್ನಾಗಿ ಮಾಡಬೇಕು ಅಂದರೆ ಮಕ್ಕಳನ್ನು ಆ ದಿಕ್ಕಿನತ್ತ ಪ್ರೇರೇಪಿಸಬೇಕು.

2. ತಪ್ಪು ಹಾದಿ ಹಿಡಿಯಬೇಡಿ: ನಿಮ್ಮ ಮಕ್ಕಳ ಎದುರೇ ಅಪ್ಪ-ಅಮ್ಮ ಆಗಿ ನೀವು ತಪ್ಪು ಹಾದಿ ಹಿಡಿಯಬೇಡಿ. ಸದಾ ಒಳ್ಳೆಯದ್ದನ್ನೇ ಬಯಸಿ, ಒಳ್ಳೆಯದ್ದನ್ನು ಮಾಡಿ. ಭಾಷೆ, ಆಡುವ ಮಾತಿನ ಮೇಲೆ ನಿಗಾವಹಿಸಿ ಸಂಸ್ಕಾರದಿಂದ ಮಾತನಾಡಬೇಕು. ಎದುರಿಗಿನ ವ್ಯಕ್ತಿಗಳ ಜೊತೆ ಉಚಿತ ರೀತಿಯಲ್ಲಿ ವ್ಯವಹರಿಸಬೇಕು. ಏಕೆಂದರೆ ಅಪ್ಪ-ಅಮ್ಮ ಏನು ಮಾಡುತ್ತಾರೋ ಮಕ್ಕಳೂ ಡಿಟ್ಟೋ ಅದನ್ನೇ ಮಾಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.