
ರಕ್ಷಾ ಬಂಧನ ಹಬ್ಬ ಸಮೀಪಿಸುತ್ತಿದೆ. ಇದು ಒಡಹುಟ್ಟಿದವರ ಪ್ರೀತಿ ಮತ್ತು ಭರವಸೆಯ ಪವಿತ್ರ ಹಬ್ಬ. ಈ ವರ್ಷ ಆಗಸ್ಟ್ 28ರಂದು ಆಚರಿಸಲಾಗುತ್ತಿದೆ. ಈ ದಿನ ಸಹೋದರಿಯರಿಗೆ ಉಡುಗೊರೆ ನೀಡುವುದು ವಾಡಿಕೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಅಶುಭ ಹಾಗೂ ಸಂಬಂಧಗಳಲ್ಲಿ ಕಹಿ ತರಬಹುದು ಎಂದು ಹೇಳಲಾಗುತ್ತದೆ.
ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಚರ್ಮದಿಂದ ಮಾಡಿದ ಶೂ, ಸ್ಯಾಂಡಲ್ ಅಥವಾ ಬೆಲ್ಟ್‌ಗಳನ್ನು ಉಡುಗೊರೆಯಾಗಿ ನೀಡುವುದು ಅಶುಭ. ಇದು ಒಡಹುಟ್ಟಿದವರ ನಡುವೆ ಅಂತರವನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.
ವಾಚ್ ಮತ್ತು ಕರವಸ್ತ್ರ:
ಕೈ ಗಡಿಯಾರವನ್ನು ಸಮಯ ಮತ್ತು ಅದೃಷ್ಟದ ಸಂಕೇತ ಎನ್ನಲಾಗುತ್ತದೆ. ಗಡಿಯಾರವನ್ನು ಉಡುಗೊರೆಯಾಗಿ ನೀಡುವುದರಿಂದ ನಿಮ್ಮ ಒಳ್ಳೆಯ ಸಮಯ ಅಥವಾ ಶಕ್ತಿಯು ಇತರರಿಗೆ ವರ್ಗಾವಣೆಯಾಗುತ್ತದೆ ಎಂಬ ನಂಬಿಕೆಯಿದೆ. ಕರವಸ್ತ್ರಗಳನ್ನು ಕಣ್ಣೀರು ಮತ್ತು ದುಃಖದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಉಡುಗೊರೆಯಾಗಿ ಕೊಡುವುದರಿಂದ ಸಂಬಂಧಗಳಲ್ಲಿ ಕಣ್ಣೀರು ಹಾಗೂ ಮನಸ್ತಾಪಗಳು ಎದುರಾಗಬಹುದು.
ಸುಗಂಧ ದ್ರವ್ಯದ ಪರಿಮಳವು ಕಾಲಕ್ರಮೇಣ ಮಾಯವಾಗುವಂತೆ, ಅದನ್ನು ನೀಡಿದರೆ ಸಂಬಂಧದಲ್ಲಿನ ಪ್ರೀತಿ ಕಡಿಮೆಯಾಗಿ ಅಂತರ ಅಥವಾ ಆರ್ಥಿಕ ತೊಂದರೆಗಳು ಬರಬಹುದು ಎಂದು ಹೇಳಲಾಗುತ್ತದೆ. ಸುಲಭವಾಗಿ ಒಡೆದುಹೋಗುವ ಗಾಜಿನ ವಸ್ತುಗಳನ್ನು ನೀಡುವುದನ್ನು ತಪ್ಪಿಸಿ. ಇವು ಒಡಹುಟ್ಟಿದವರ ಬಾಂಧವ್ಯದಲ್ಲಿ ಬಿರುಕು ಮೂಡಿಸುವ ಸಂಕೇತವಾಗಿವೆ.
ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!
ಚಾಕು, ಕತ್ತರಿಯಂತಹ ಯಾವುದೇ ಚೂಪಾದ ವಸ್ತುಗಳನ್ನು ನೀಡುವುದು ಸೂಕ್ತವಲ್ಲ. ಇವು ಸಂಬಂಧಗಳಲ್ಲಿ ನಕಾರಾತ್ಮಕತೆ ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುತ್ತವೆ. ಕಪ್ಪು ಬಟ್ಟೆ ಅಥವಾ ಕಪ್ಪು ಬಣ್ಣದ ಯಾವುದೇ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ರಕ್ಷಾ ಬಂಧನದಂತಹ ಶುಭ ದಿನದಂದು ಕಪ್ಪು ವಸ್ತುಗಳನ್ನು ನೀಡುವುದು ಹಗೆತನಕ್ಕೆ ಕಾರಣವಾಗಬಹುದು.
ಹಣವಿಲ್ಲದ ಖಾಲಿ ಪರ್ಸ್ ನೀಡುವುದು ನಷ್ಟದ ಸಂಕೇತ. ಒಂದು ವೇಳೆ ಪರ್ಸ್ ನೀಡಲೇಬೇಕೆಂದಿದ್ದರೆ, ಅದೃಷ್ಟದ ಸಂಕೇತವಾಗಿ ಅದರೊಳಗೆ ಸ್ವಲ್ಪ ಹಣ ಅಥವಾ ನಾಣ್ಯವನ್ನು ಇಟ್ಟು ನೀಡಿ. ಸಹೋದರಿಯ ಪ್ರೀತಿಯ ಜೊತೆಗೆ ಅವಳಿಗೆ ಶ್ರೇಯಸ್ಸು ತರುವ ಮಂಗಳಕರ ವಸ್ತುಗಳನ್ನು ಆಯ್ಕೆ ಮಾಡಿ ಈ ಹಬ್ಬವನ್ನು ಸಂಭ್ರಮಿಸಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ