Astrological Guidelines: ವಧು-ವರರ ನಕ್ಷತ್ರ ಒಂದೇ ಆಗಿದ್ದರೆ ಮದುವೆಯಾಗಬಾರದೇ? ಜ್ಯೋತಿಷ್ಯ ಸಲಹೆ ಇಲ್ಲಿದೆ

ವಧು-ವರರ ನಕ್ಷತ್ರ ಒಂದೇ ಇದ್ದರೆ ಮದುವೆ ಮಾಡಬಹುದೇ ಎಂಬ ಪ್ರಶ್ನೆಗೆ ಜ್ಯೋತಿಷ್ಯ ಶಾಸ್ತ್ರವು ನಿರ್ದಿಷ್ಟ ನಿಯಮಗಳನ್ನು ಹೊಂದಿದೆ. ಕೆಲವು ನಕ್ಷತ್ರಗಳಲ್ಲಿ ಪಾದಗಳು ಭಿನ್ನವಾಗಿದ್ದಲ್ಲಿ ವಿವಾಹಕ್ಕೆ ಅನುಮತಿ ಇದೆ. ಆದರೆ, ಭರಣಿ, ಆಶ್ಲೇಷ, ಸ್ವಾತಿ ಮುಂತಾದ ಕೆಲವು ನಕ್ಷತ್ರಗಳಲ್ಲಿ ಏಕ ನಕ್ಷತ್ರ ವಿವಾಹವನ್ನು ಕಡ್ಡಾಯವಾಗಿ ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯುವುದು ಉತ್ತಮ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

Astrological Guidelines: ವಧು-ವರರ ನಕ್ಷತ್ರ ಒಂದೇ ಆಗಿದ್ದರೆ ಮದುವೆಯಾಗಬಾರದೇ? ಜ್ಯೋತಿಷ್ಯ ಸಲಹೆ ಇಲ್ಲಿದೆ
ವಧು-ವರರ ನಕ್ಷತ್ರ ಒಂದೇ
Image Credit source: Pinterest

Updated on: Apr 25, 2026 | 10:08 AM

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಲ್ಲಿ ಒಂದೆಂದರೆ, ವಧು-ವರರ ನಕ್ಷತ್ರ ಒಂದೇ ಇದ್ದರೆ ವಿವಾಹ ಮಾಡಬಹುದೇ ಎಂಬುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಕೆಲವು ನಿರ್ದಿಷ್ಟ ನಕ್ಷತ್ರಗಳಲ್ಲಿ ವಧು-ವರರ ಪಾದಗಳು ಭಿನ್ನವಾಗಿದ್ದಂತಹ ಸಂದರ್ಭದಲ್ಲಿ ವಿವಾಹಕ್ಕೆ ಅನುಮತಿ ಇದೆ. ಈ ನಕ್ಷತ್ರಗಳು ರೋಹಿಣಿ, ಆರ್ದ್ರ, ಮಕಾ, ಹಸ್ತ, ವಿಶಾಖ, ಶ್ರವಣ, ಉತ್ತರಾಭಾದ್ರ ಮತ್ತು ರೇವತಿ. ಈ ನಕ್ಷತ್ರಗಳ ಅಡಿಯಲ್ಲಿ, ಪಾದಗಳ ವ್ಯತ್ಯಾಸವಿದ್ದರೆ ವಿವಾಹವು ಸಮಂಜಸವೆಂದು ಪರಿಗಣಿಸಲಾಗುತ್ತದೆ.

ಆದರೆ, ಕೆಲವು ನಕ್ಷತ್ರಗಳ ವಿಚಾರದಲ್ಲಿ ಏಕ ನಕ್ಷತ್ರ ವಿವಾಹವು ಅಷ್ಟು ಸಮಂಜಸವಾಗಿರುವುದಿಲ್ಲ, ಅಂದರೆ ಅವು ಮಧ್ಯಮ ಫಲಿತಾಂಶವನ್ನು ನೀಡುತ್ತವೆ ಮತ್ತು ಹೆಚ್ಚಿನ ಫಲವಿರುವುದಿಲ್ಲ. ಈ ನಕ್ಷತ್ರಗಳು ಅಶ್ವಿನಿ, ಕೃತಿಕ, ಮೃಗಶಿರ, ಪುನರ್ವಸು, ಪುಷ್ಯ, ಪೂರ್ವಾಷಾಡ ಮತ್ತು ಉತ್ತರಾಷಾಡ. ಈ ನಕ್ಷತ್ರಗಳಲ್ಲಿ ಏಕ ನಕ್ಷತ್ರ ವಿವಾಹವು ಅಷ್ಟು ಉತ್ತಮವಲ್ಲ ಎಂದು ಹೇಳಲಾಗುತ್ತದೆ.

YouTube video player

ಇನ್ನು ಕೆಲವು ನಕ್ಷತ್ರಗಳಲ್ಲಿ ಏಕ ನಕ್ಷತ್ರ ವಿವಾಹವನ್ನು ಸಂಪೂರ್ಣವಾಗಿ ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಪಾದಗಳು ಏನೇ ಇರಲಿ, ಏಕ ನಕ್ಷತ್ರ ವಿವಾಹ ಆಗಬಾರದು. ಈ ನಕ್ಷತ್ರಗಳು ಭರಣಿ, ಆಶ್ಲೇಷ, ಸ್ವಾತಿ, ಜ್ಯೇಷ್ಠ, ಮೂಲ, ಧನಿಷ್ಠ, ಶತಭಿಷ ಮತ್ತು ಪೂರ್ವಭಾದ್ರ. ಇಂತಹ ವಿವಾಹದಿಂದ ಯಾರಿಗಾದರೂ ಒಬ್ಬರಿಗೆ ಕಂಟಕ, ಆರೋಗ್ಯ ಸಮಸ್ಯೆಗಳು, ಸಂತಾನ ಭಾಗ್ಯವಿಲ್ಲದಿರುವುದು ಮತ್ತು ಜೀವನಪೂರ್ತಿ ಬಹಳ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಒಂದೇ ನಕ್ಷತ್ರದಲ್ಲಿ ರಾಶಿ ಹೊಂದಿದವರಲ್ಲಿ ನಾನು ಹೆಚ್ಚು, ನೀನು ಹೆಚ್ಚು ಎಂಬಂತಹ ಭಿನ್ನಾಭಿಪ್ರಾಯಗಳು ಬಂದು, ಸಂಬಂಧದಲ್ಲಿ ಇಬ್ಬರೂ ಟೈಗರ್ಸ್‌ ಆದಂತೆ ಆಗುತ್ತದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಹೇಗೆ ಒಂದೇ ರಕ್ತ ಸಂಬಂಧದಲ್ಲಿ ವಿವಾಹವಾದಾಗ ಮಾನಸಿಕ ಏರುಪೇರುಗಳಾಗುವ ಸಾಧ್ಯತೆಗಳನ್ನು ಗಮನಿಸಲಾಗಿದೆಯೋ, ಅದೇ ರೀತಿ ಏಕ ನಕ್ಷತ್ರದ ವಿವಾಹದ ವಿಚಾರದಲ್ಲೂ ಎಚ್ಚರಿಕೆ ವಹಿಸುವುದು ಮುಖ್ಯ. ಆದ್ದರಿಂದ, ಏಕ ನಕ್ಷತ್ರ ವಿವಾಹದ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ತಿಳಿದಿರುವ ಪಂಡಿತರು ಅಥವಾ ಜ್ಯೋತಿಷಿಗಳನ್ನು ಸಂಪರ್ಕಿಸಿ, ವಿಷಯವನ್ನು ಅವರ ಮುಂದೆ ಇಟ್ಟು, ಸಂಪೂರ್ಣವಾಗಿ ಪರಿಷ್ಕಾರ ಮಾಡಿಕೊಂಡು ವಿವಾಹ ಮಾಡಿಕೊಳ್ಳುವುದು ತುಂಬಾನೇ ಒಳ್ಳೆಯದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us