ಶ್ರಾವಣ ಮಾಸ ಶುರುವಾಗಿದೆ, ಹಿಂದೂ ಧರ್ಮದಲ್ಲಿ ಕಲಶಕ್ಕೆ ವಿಶೇಷ ಸ್ಥಾನವಿದೆ: ವಾಸ್ತು ದೋಷ ತಡೆಯಲು ಕಲಶ ಎಲ್ಲಿಡಬೇಕು? ತಿಳಿದುಕೊಳ್ಳಿ

Kalash Puja: ಹಿಂದೂ ಧರ್ಮದಲ್ಲಿ ಕಲಶವನ್ನು ಗಣಪತಿಯ ರೂಪವೆಂದು ಪರಿಗಣಿಸಲಾಗಿದೆ. ಸಂಪ್ರದಾಯದಲ್ಲಿ ಇದನ್ನು ಮಂಗಳದ ಸಂಕೇತವಾಗಿ ಬಳಸುತ್ತಾರೆ. ಮಂಗಳಕರ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಕಲಶವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಗೆ ಸಂಬಂಧಿಸಿದ ಎಲ್ಲಾ ರೀತಿಯ ವಾಸ್ತು ದೋಷಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.

ಶ್ರಾವಣ ಮಾಸ ಶುರುವಾಗಿದೆ, ಹಿಂದೂ ಧರ್ಮದಲ್ಲಿ ಕಲಶಕ್ಕೆ ವಿಶೇಷ ಸ್ಥಾನವಿದೆ: ವಾಸ್ತು ದೋಷ ತಡೆಯಲು ಕಲಶ ಎಲ್ಲಿಡಬೇಕು? ತಿಳಿದುಕೊಳ್ಳಿ
ಹಿಂದೂ ಧರ್ಮದಲ್ಲಿ ಕಲಶಕ್ಕೆ ವಿಶೇಷ ಸ್ಥಾನವಿದೆ
Follow us
|

Updated on: Aug 18, 2023 | 1:32 PM

ಇಂದು ಮಾನವನ ಜೀವನ ಪಯಣ ಬಹಳಷ್ಟು ಬಾರಿ ಜೀವನಪರ್ಯಂತ ಸುಖ ದುಃಖಗಳಿಂದ ಕೂಡಿರುತ್ತದೆ. ಕೆಲವೊಮ್ಮೆ ಯಾರ ಜೀವನದಲ್ಲೂ ಕೆಲವೊಂದು ಸಮಸ್ಯೆಗಳು ದಿಢೀರನೆ ಉದ್ಭವಿಸಿಬಿಡುತ್ತವೆ. ಅವು ದೂರವಾಗುವ ಲಕ್ಷಣಗಳೇ ಇರುವುದಿಲ್ಲ. ಅಂತಹಯ ಸಂದರ್ಭಗಳಲ್ಲಿ ಹಿಂದೂ ಧರ್ಮದಲ್ಲಿ (Hindu) ಕಲಶವನ್ನು ಪೂಜಿಸುವುದು (Kalash Puja) ಜೀವನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ತೊಂದರೆಗಳನ್ನು ತೊಡೆದುಹಾಕಿ, ಸಂತೋಷ ಮತ್ತು ಅದೃಷ್ಟವನ್ನು ಪಡೆಯಲು ಉತ್ತಮ ಮಾರ್ಗವಾಗಿದೆ ಎಂದು ನಂಬಲಾಗಿದೆ. ಎಲ್ಲಾ ದೇವರುಗಳು ಮತ್ತು ಗ್ರಹಗಳು ಕಲಶದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.. ಬೇರೆ ರೀತಿಯಲ್ಲಿ ಹೇಳುವುದಾದರೆ, ಕಲಶವು ಬ್ರಹ್ಮಾಂಡದ ಸಂಕೇತವಾಗಿದೆ ಮತ್ತು ಅದು ಇಲ್ಲದೆ ಯಾವುದೇ ಪೂಜೆ ಪೂರ್ಣಗೊಳ್ಳುವುದಿಲ್ಲ. ಕುಂಭ ಅಥವಾ ಕಲಶಕ್ಕೆ ಸಂಬಂಧಿಸಿದ ದೋಷ ಪರಿಹಾರದ ಬಗ್ಗೆ ವಿವರವಾಗಿ ತಿಳಿಯೋಣ (Spiritual).

 ಕಲಶ ಪೂಜೆ: ವೃತ್ತಿ ಮತ್ತು ವ್ಯಾಪಾರ ಅಭಿವೃದ್ಧಿಗಾಗಿ..

ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನಿಮ್ಮ ವೃತ್ತಿಜೀವನದಲ್ಲಿ ನೀವು ಬಯಸಿದ ಯಶಸ್ಸನ್ನು ಪಡೆಯದಿದ್ದರೆ ಅಥವಾ ನಿಮ್ಮ ವ್ಯವಹಾರದಲ್ಲಿ ಲಾಭದ ಬದಲು ನೀವು ನಷ್ಟವನ್ನು ಎದುರಿಸುತ್ತಿದ್ದರೆ.. ಎರಡರಲ್ಲೂ ಪ್ರಗತಿ ಸಾಧಿಸಲು ನೀವು ಕಲಶದ ಜ್ಯೋತಿಷ್ಯ ಪರಿಹಾರವನ್ನು ಪ್ರಯತ್ನಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೂಜಾ ಕೋಣೆಯಲ್ಲಿ ಅಕ್ಷತೆ ತುಂಬಿದ ಹೊಸ ತಾಮ್ರದ ಪಾತ್ರೆ ಇಡುವುದರಿಂದ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಇಷ್ಟಾರ್ಥಗಳು ಈಡೇರುತ್ತವೆ. ಆದರೆ ಕಲಶಕ್ಕೆ ಸಂಬಂಧಿಸಿದ ಈ ಪರಿಹಾರವನ್ನು ಯಾರಿಗೂ ಹೇಳದೆ.. ಯಾರೂ ನೋಡದಹಾಗೆ ಮಾಡಬೇಕು ಎಂಬುದು ನೆನಪಿಡಿ.

ಕೆಲವರು ಜೀವನದಲ್ಲಿ ಎಷ್ಟೇ ಕಷ್ಟಪಟ್ಟರೂ, ಎಷ್ಟೇ ದುಡಿದರೂ ಹಣ ಉಳಿಯುವುದಿಲ್ಲ ಎಂದು ದೂರುತ್ತಾರೆ. ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ.. ಕಲಶಕ್ಕೆ ಸಂಬಂಧಿಸಿ ಪರಿಹಾರ ಕಂಡುಕೊಳ್ಳಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಅಕ್ಷತೆ ಪಾತ್ರೆಯಲ್ಲಿ ಅಕ್ಕಿ ಮತ್ತು ಗೋಧಿಯೊಂದಿಗೆ ಐದು ನಾಣ್ಯಗಳನ್ನು ಹಾಕಿದ ನಂತರ, ಕಲಶವನ್ನು ಕೆಂಪು ಬಟ್ಟೆಯಿಂದ ಮುಚ್ಚಬೇಕು. ಅದರ ನಂತರ ಈ ಕಲಶವನ್ನು ಹಣದ ಸ್ಥಳದಲ್ಲಿ ಇರಿಸಿ. ಈ ಪರಿಹಾರವನ್ನು ಶುದ್ಧತೆ ಮತ್ತು ನಂಬಿಕೆಯೊಂದಿಗೆ ಮಾಡುವುದರಿಂದ ಅದ್ಭುತವಾದ ಪ್ರಯೋಜನಗಳನ್ನು ತರುತ್ತದೆ ಎಂದು ನಂಬಲಾಗಿದೆ.

 ಕಲಶ ಪೂಜೆ: ವಾಸ್ತು ದೋಷ ನಿವಾರಣೆಗಾಗಿ

ಹಿಂದೂ ಧರ್ಮದಲ್ಲಿ ಕಲಶವನ್ನು ಗಣಪತಿಯ ರೂಪವೆಂದು ಪರಿಗಣಿಸಲಾಗಿದೆ. ಸಂಪ್ರದಾಯದಲ್ಲಿ ಇದನ್ನು ಮಂಗಳದ ಸಂಕೇತವಾಗಿ ಬಳಸುತ್ತಾರೆ. ಮಂಗಳಕರ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಕಲಶವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಗೆ ಸಂಬಂಧಿಸಿದ ಎಲ್ಲಾ ರೀತಿಯ ವಾಸ್ತು ದೋಷಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾಸ್ತು ದೋಷಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಮನೆಯ ಈಶಾನ್ಯ ಮೂಲೆಯಲ್ಲಿರುವ ಕಮಲದ ಮೇಲೆ ಕಲಶ, ಮಾವಿನ ಎಲೆಗಳು, ಹೂವುಗಳು ಮತ್ತು ನಾಣ್ಯಗಳನ್ನು ಇಡಬೇಕು.

 ಕಲಶ ಪೂಜೆ: ಮನೆಯಲ್ಲಿ ಕಲಶವನ್ನು ಎಲ್ಲಿ ಇಡಬೇಕು

ವಾಸ್ತು ಪ್ರಕಾರ ಕಲಶವನ್ನು ಮನೆಯಲ್ಲಿ ಇರಿಸಲು ಕೆಲವು ಸ್ಥಳಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಲಶವನ್ನು ಮನೆಯ ಪ್ರವೇಶ ದ್ವಾರದಲ್ಲಿ ಇಡುವುದರಿಂದ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ಅದೇ ರೀತಿ ಗಂಗಾಜಲ ತುಂಬಿದ ಕಲಶವನ್ನು ಪೂಜಾ ಮಂದಿರದಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಹೆಚ್ಚಿನ ಆಧ್ಯಾತ್ಮಿಕ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

(ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯು ನಂಬಿಕೆಯನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಜನರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಮಾಹಿತಿ ಒದಗಿಸಿದ್ದೇವೆ)

ತಾಜಾ ಸುದ್ದಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ