Miracles of Meditation: ಧ್ಯಾನವನ್ನು ಮೂಢನಂಬಿಕೆಯೆಂದು ದೂರ ಮಾಡದಿರಿ, ಏಕಾಗ್ರತೆಯಿಂದ ಯಶಸ್ಸು ಕಟ್ಟಿಟ್ಟಬುತ್ತಿ!

Meditation: ಯಾವುದೇ ಕಾರ್ಯಗಳನ್ನು ಏಕಾಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟಬುತ್ತಿ. ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿ ಇಡುವ ಈ ಧ್ಯಾನವನ್ನು ಮೂಢನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಟವೆಂದರೆ ಅತಿಶಯೋಕ್ತಿಯಲ್ಲ.

Miracles of Meditation: ಧ್ಯಾನವನ್ನು ಮೂಢನಂಬಿಕೆಯೆಂದು ದೂರ ಮಾಡದಿರಿ, ಏಕಾಗ್ರತೆಯಿಂದ ಯಶಸ್ಸು ಕಟ್ಟಿಟ್ಟಬುತ್ತಿ!
ಏಕಾಗ್ರತೆಯಿಂದ ಯಾವುದೇ ಕಾರ್ಯ ಮಾಡುವವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ!
Follow us
|

Updated on:Sep 23, 2024 | 7:54 AM

ಧ್ಯಾನ ಎಂದರೆ ಏಕಾಗ್ರತೆ. ನಮ್ಮ ಮನಸ್ಸು ಚಂಚಲವಾಗಿರುತ್ತದೆ. ಈ ಚಂಚಲತೆಯನ್ನು ಹೋಗಲಾಡಿಸಿ ಮನಸ್ಸನ್ನು ಧೃಡವಾಗಿರಿಸುವ ಪ್ರಕ್ರಿಯೆಯೇ ಧ್ಯಾನ. ದೃಢ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಹಾಗೆ ಸರಿಯಾದ ನಿರ್ಣಯಗಳಿಂದ ತೆಗೆದುಕೊಂಡ ನಿರ್ಧಾರವು ತಪ್ಪಾಗಲಿಕ್ಕೆ ಸಾಧ್ಯವಿಲ್ಲ. ಯಾವುದೇ ಕಾರ್ಯಗಳನ್ನು ಏಕಾಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟಬುತ್ತಿ. ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿ ಇಡುವ ಈ ಧ್ಯಾನವನ್ನು ಮೂಢನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಟವೆಂದರೆ ಅತಿಶಯೋಕ್ತಿಯಲ್ಲ.

ನಾವು ದೇವರಿಗೆ ದೀಪವನ್ನು ಹಚ್ಚುವುದು ಏಕೆ?

ಭಗವಂತನು ಜ್ಯೋತಿ ಸ್ವರೂಪನಾಗಿದ್ದಾನೆ. ಅಂತಹುದರಲ್ಲಿ ಆತನಿಗೆ ಭಕ್ತರು ಹಚ್ಚುವ ಜ್ಯೋತಿಗಳಿಂದ ಏನು ಉಪಯೋಗ ಆಗಬೇಕು? ಅಂದರೆ ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ. ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರದ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟು ಕೊಂಡು ದೀಪವನ್ನು ಬೆಳಗುತ್ತೇವೆ. ಹಾಗೆಂದು ವಿದ್ಯುದ್ದೀಪಗಳನ್ನು ಹಚ್ಚುತ್ತೇವೆಂದರೆ ನಿಮ್ಮ ಅಂದಾಜು ತಪ್ಪು ಎನ್ನಬಹುದು. ಏಕೆಂದರೆ, ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಟಿಯನ್ನು ಮಂದವಾಗಿಸುತ್ತದೆ.

ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಅಧಿಕ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಅದನ್ನು ಶ್ರೇಷ್ಠ ಎನ್ನುತ್ತಾರೆ. ಅಂತೆಯೇ ನಂದಾ ದೀಪವನ್ನು ಹಚ್ಚುವುದೇಕೆಂದರೆ, ಹಿಂದಿನ ಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚು ಕಲ್ಲುಗಳ ಘರ್ಷಣೆಯಿಂದ ಅಥವಾ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಟಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ದೀರ್ಘ ಕಾಲದವರೆಗೆ ಉಪಯೋಗಿಸುವ ಉದ್ದೇಶವಿಟ್ಟು ಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿ ಕೊಂಡು ಬಂದಿರ ಬೇಕು.

ನಾವು ಧೂಪವನ್ನು ಹಚ್ಚುವುದೇಕೆ?

ಲೋಭಾನ, ಶ್ರೀಗಂಧ, ಚಂಗಲ ಕೋಷ್ಠ, ಗುಗ್ಗುಳ, ಯಾಲಕ್ಕಿ, ಕೃಷ್ಣಾಗರು, ದೇವದಾರು, ಹಾಲುಮಡ್ಡಿ, ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧ ಮಾಡಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಸೇವಿಸಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ. ಈ ಹತ್ತು ವಿಧವಾದ ಮೂಲಿಕೆಗಳನ್ನು “ದಶಾಂಗ ಧೂಪ” ಎನ್ನುತ್ತಾರೆ. ಸುವಾಸನೆಗಾಗಿ ಹಚ್ಚುವ ಗಂಧದ ಕಡ್ಡಿಗಳು ಹೆಚ್ಚು ಉಪಯೋಗಕಾರಿ ಆಗುವುದಿಲ್ಲ. ಧೂಪವನ್ನು ಹಚ್ಚುವುದರಿಂದ ಅದರ ಸುವಾಸನೆಯು ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ. ಭಕ್ತಿಯಿಂದ ಪ್ರಾರ್ಥನೆ ಮಾಡುವುದಕ್ಕೆ ಅನುಕೂಲವಾದ ಈ ಧೂಪವನ್ನು ಹಚ್ಚುವುದರಲ್ಲಿ ಹುಚ್ಚು ಕೆಲಸ ಅಲ್ಲವೆಂಬುದು ಸತ್ಯವಷ್ಟೇ.

ಇದನ್ನೂ ಓದಿ: Horseshoe Luck – ಮನೆಯ ಬಾಗಿಲಿಗೆ ಕುದುರೆ ಲಾಳ ಹಾಕಿದರೆ ಅದೃಷ್ಟವಂತೆ! ಅದನ್ನು ಹಾಕುವುದು ಹೇಗೆ?

ನಾವು ಪೂಜೆಗೆ ಮುಂಚೆ ಘಂಟೆಯನ್ನೇಕೆ ಭಾರಿಸುತ್ತೇವೆ?

ಎರಡು ಲೋಹಗಳು ಪರಸ್ಪರ ಢಿಕ್ಕಿ ಹೊಡೆದಾಗ ಶಬ್ದ ತರಂಗಗಳು ಉಂಟಾಗುತ್ತವೆ. ಈ ಶಬ್ಧ ತರಂಗಗಳು ಕಿವಿಯನ್ನು ಹೊಕ್ಕು ಮೆದುಳನ್ನು ಸೇರುತ್ತವೆ. ಸಾಮಾನ್ಯವಾಗಿ ಘಂಟೆಗಳನ್ನು ಕಂಚು, ಪಂಚಲೋಹ, ಬೆಳ್ಳಿ ಅಥವ ಹಿತ್ತಾಳೆಯಿಂದ ಮಾಡುತ್ತಾರೆ. ಪೂಜೆ ಮಾಡುವಾಗ ಹೊರಗಿನ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಶುದ್ಧವಾದ ಮನಸ್ಸಿನಿಂದ ಪೂಜಿಸ ಬೇಕು. ಕಂಚಿನ ಘಂಟೆಯ ಸದ್ದು ಕಿವಿಯಲ್ಲಿ ಗುಂಯಿಗುಡುತ್ತಾ ಹೊರಗಿನ ಪ್ರಪಂಚವನ್ನು ಕ್ಷಣ ಕಾಲ ಮರೆಸಿ ಬಿಡುತ್ತದೆ ಗಮನಿಸಿದ್ದೀರಾ? ಅಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಪರಿಪೂರ್ಣ ಶುದ್ಧವಾಗಿರುತ್ತದೆ. ಆ ಸಮಯದಲ್ಲಿ ಮಾಡುವ ಆಲೋಚನೆ ಸಫಲವಾಗುತ್ತದೆ. ಹಾಗೆಯೇ ಘಂಟೆ ಭಾರಿಸುವ ಕೈಗಳ ನಾಡಿಗಳು ಗಂಟೆಯಿಂದ ಹೊರ ಬರುವ ತರಂಗಗಳಿಂದ ಶುದ್ಧವಾಗುತ್ತದೆ. ಪೂಜೆಗೆ ಕಂಚಿನ ಘಂಟೆ ಶ್ರೇಷ್ಠವೆಂದು ಹೇಳಿದ್ದಾರೆ.

ನಾವು ಆಚಮನ ಮಾಡುವುದೇಕೆ?

ಆಚಮನ ಮಾಡುವ ನೀರು ಗಾಳಿಯೊಂದಿಗೆ ಒಳಗೆ ಹೋಗಿ ಅನ್ನನಾಳ ಮತ್ತು ಶ್ವಾಸಕೋಶಗಳು ಸೇರುವ ಸಂಧಿಯಲ್ಲಿ ಸೇರಿರುವ ಕಫ ಮತ್ತು ಕಸದೊಂದಿಗೆ ಹೊಟ್ಟೆಯನ್ನು ಸೇರಿ ಅಲ್ಲಿಂದ ಬಹಿರ್ದೆಸೆಯಲ್ಲಿ ಹೊರ ಬೀಳುತ್ತದೆ. ಗಂಟಲಿನಲ್ಲಿರುವ ಕಫವು ಶಬ್ಧವನ್ನು ಸ್ವಚ್ಛವಾಗಿ ಉಚ್ಛಾರ ಮಾಡಲು ಬಿಡುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯಾಗಿದೆ. ಸ್ವಚ್ಛವಾಗಿ ಉಚ್ಛಾರ ಮಾಡದ ಮಂತ್ರಗಳ ಅರ್ಥಗಳು ಬೇರೆಯೇ ಆಗುತ್ತದೆ. ಇದಕ್ಕೆ ಹಲವಾರು ಉದಾಹರಣೆಗಳಿವೆ. ಈ ರೀತಿಯ ತಪ್ಪುಗಳು ಆಗದಿರಲಿ ಎಂದು ಋಷಿ ಮುನಿಗಳು ಕಂಡು ಕೊಂಡ ಉಪಾಯವೇ ಈ “ಆಚಮನ” ಆಗಿದೆ. ಆಚಮನ ಮಾಡುವಾಗ ವೇದಗಳ, ದೇವರ ಸ್ಮರಿಸಿ ನೀರು ಕುಡಿಯುವುದರಿಂದ ವಿಶೇಷ ಶಕ್ತಿ ಸಿಕ್ಕ ಅನುಭವ ಆಗುವುದು.

ನಾವು ಸಂಕಲ್ಪವನ್ನೇಕೆ ಮಾಡುತ್ತೇವೆ?

ನಾವು ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡ ಬೇಕಾದರೆ ಪೂರ್ವ ಯೋಜನೆ ಅಗತ್ಯ. ಪೂರ್ವ ಯೋಜನೆ ಹಾಕಿ ಕೊಂಡು ಮಾಡುವ ಎಲ್ಲ ಕಾರ್ಯಗಳು ಉತ್ತಮ ಫಲದಾಯಕವಾಗಿದ್ದು ಅದೇ ರೀತಿ ಯಾವುದೇ ಪೂಜಾ ಕೈಂಕರ್ಯಗಳಲ್ಲಿ ಮೊದಲು ಪೂರ್ವ ಯೋಜನೆ ಮಾಡಿ ಕೊಳ್ಳುವ ಸಲುವಾಗಿ ಸಂಕಲ್ಪವನ್ನು ಮಾಡಿ ಕೊಳ್ಳುತ್ತೇವೆ. ಸಂಕಲ್ಪದಲ್ಲಿ ನಾವು ವಾಸಿಸುತ್ತಿರುವ ಸ್ಥಳದ ಪರಿಚಯ, ಈಗಿನ ಕಾಲಮಾನ, ಯಾವ ಉದ್ದೇಶದಿಂದ ಏನು ಮಾಡುತ್ತಿದ್ದೇವೆ? ಯಾರನ್ನು ಉದ್ದೇಶಿಸಿ ಮಾಡುತ್ತಿದ್ದೇವೆ? ಇವೆಲ್ಲದರ ಸಂಕ್ಷಿಪ್ತವಾದ ವಿವರಣೆ ಇರುತ್ತದೆ. ಇದರಿಂದ ಕಾರ್ಯಕ್ರಮದ ಯಾವ ಘಟ್ಟವನ್ನೂ ಮರೆಯುವ ಸಾದ್ಯತೆಯಿರುವುದಿಲ್ಲ. ಆದ್ದರಿಂದ ಸಂಕಲ್ಪ ಮಾಡುವುದರಲ್ಲಿ ಯಾವುದೇ ಕಂದಾಚಾರ ಇಲ್ಲವೆಂಬುದು ಸಾಬೀತಾಗುತ್ತದೆ.

ಇದನ್ನೂ ಓದಿ: Avoid Mirror in Bedroom – ಬೆಡ್​​ ರೂಮ್ ವಾಸ್ತು ಟಿಪ್ಸ್ – ಕನ್ನಡಿ ಎಲ್ಲಿಡಬೇಕು? ಸಾಮಾನ್ಯಾಗಿ ಕೇಳಿಬರುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ!

ನಾವು ಪವಿತ್ರವನ್ನು ಯಾಕೆ ಧರಿಸ ಬೇಕು?

“ಪವಿತ್ರ”ವೆಂದರೆ ಹೆಸರೇ ಹೇಳುವಂತೆ ಬಹಳ ಪವಿತ್ರವಾದದ್ದು. ದರ್ಭೆಗಳನ್ನು ಸೇರಿಸಿ ಕಟ್ಟಿ ಉಂಗುರದಂತೆ ಮಾಡಿ ಉಂಗುರದ ಬೆರಳಿಗೆ ಹಾಕಿ ಕೊಳ್ಳುವ ಸಾಧನವೇ ಪವಿತ್ರ. ದರ್ಭೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಅದರ ರಚನೆ ಹಲವಾರು ಮುಳ್ಳುಗಳಿಂದ ಆಗಿದೆ. ಈ ಮುಳ್ಳುಗಳು ಎಷ್ಟೋ ಬ್ಯಾಕ್ಟೀರಿಯಾಗಳನ್ನು ತಡೆದು ತನ್ನಲ್ಲೆ ಉಳಿಸಿ ಕೊಳ್ಳುತ್ತದೆ. ಈ ಪವಿತ್ರವನ್ನು ಹಾಕಿ ಕೊಂಡು ಪ್ರಾಣಾಯಾಮ ಮಾಡುವುದರಿಂದ ವಾತಾವರಣದಲ್ಲಿನ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರುವ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ. ಇದರಿಂದ ಅನೇಕ ರೋಗಾಣುಗಳು ನಮ್ಮ ದೇಹವನ್ನು ಸೇರುವುದು ತಪ್ಪುತ್ತದೆ ಮತ್ತು ಆರೋಗ್ಯವಾಗಿ ಇರುವುದಕ್ಕೆ ಸಹಕಾರಿಯಾಗಿರುತ್ತದೆ.

ಮನೆಯ ಮುಂದೆ ಸಗಣಿಯಿಂದ ಸಾರಿಸುವುದೇಕೆ?

ಗೋಮಯ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಇವುಗಳನ್ನು ಪಂಚಗವ್ಯ ಎನ್ನುತ್ತೇವೆ. ಇವೆಲ್ಲವೂ ಆಕಳದ್ದಾಗಿರುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ವಿಶೇಷ ಗುಣಗಳಿರುತ್ತವೆ. ವಿಶೇಷವಾಗಿ ಗೋಮಯದಲ್ಲಿ ಸೂಕ್ಷ್ಮಾತಿ ಸೂಕ್ಷ್ಮವಾದ ಬ್ಯಾಕ್ಟೀರಿಯಾಗಳನ್ನು ತಡೆಯುವ ಶಕ್ತಿ ಹೆಚ್ಚಾಗಿರುತ್ತದೆ. ಗೋಮಯದಿಂದ ಮನೆಯ ಮುಂದೆ ಸಾರಿಸಿದರೆ ವಾತಾವರಣದಲ್ಲಿನ ರೋಗಕಾರಕ ಬ್ಯಾಕ್ಟೀರಿಯಾಗಳು ಮನೆಯೊಳಗೆ ಬರದಂತೆ ತಡೆಯುತ್ತದೆ. ಇದರಿಂದ ಅನೇಕ ರೋಗಗಳನ್ನು ಹತ್ತಿರ ಸುಳಿಯದಂತೆ ಮಾಡ ಬಹುದಾಗಿದೆ.

ಇದನ್ನೂ ಓದಿ: ಸಾವಿರಾರು ವರ್ಷಗಳ ಹಿಂದೆಯೇ ಮಳೆ ಕೊಯ್ಲು ಅಳವಡಿಸಿಕೊಂಡು ನಿರ್ಮಿಸಿರುವ ಈ ದೇವಾಲಯಕ್ಕೆ ಹೋಗೋಣಾ ಬನ್ನೀ!

ಹಾಗೆಯೇ ರಂಗವಲ್ಲಿ ಹಾಕುವುದು ನಮ್ಮ ಧರ್ಮದ ವಿಶೇಷ ಸಂಪ್ರದಾಯವಾಗಿದೆ. ಚಿತ್ತಾಕರ್ಷಕ ಬಗೆಬಗೆಯ ರಂಗೋಲಿಗಳನ್ನು ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣಿನಿಂದ ಹಾಕುತ್ತಾರೆ. ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣುಗಳೂ ಸಹ ಜೀವ ನಿರೋಧಕ ಎಂಬುದನ್ನು ಮರೆಯ ಬಾರದು. ಈಗೀಗ ನಗರ ಪ್ರದೇಶಗಳಲ್ಲಿ ಸಮಯದ ಮತ್ತು ಸ್ಥಳದ ಅಭಾವದಿಂದ ಮನೆಯ ಮುಂದೆ ಸಾರಿಸುವುದು ಮತ್ತು ರಂಗವಲ್ಲಿ ಹಾಕುವುದು ದೂರವೇ ಉಳಿದಿದೆ. ಅಲ್ಲಲ್ಲಿ ನಡೆಯುವ ರಂಗವಲ್ಲಿ ಸ್ಪರ್ಧೆಗಳಲ್ಲಿ ಮಾತ್ರ ರಂಗವಲ್ಲಿಗಳನ್ನು ನೋಡುವುದು ಅನಿವಾರ್ಯವಾಗಿದೆ.

ಮನೆಯ ಮುಂದೆ ತುಳಸಿ ಕಟ್ಟೆಯನ್ನೇಕೆ ಕಟ್ಟುತ್ತೇವೆ?

ತುಳಸಿಯ ಎಲೆಗಳಲ್ಲಿ ವಿಶೇಷ ಗುಣಗಳಿವೆ. ತುಳಸಿಯು ಔಷಧೀಯ ಸಸ್ಯವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣ ಪಡಿಸ ಬಹುದು. ಆಯುರ್ವೇದದಲ್ಲಿ ತುಳಸಿಗೆ ಬಹಳ ಪವಿತ್ರ ಸ್ಥಾನವನ್ನು ಕೊಟ್ಟಿದ್ದಾರೆ. ಕೆಮ್ಮು, ಕಫ ಮುಂತಾದ ಸಣ್ಣ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಷಯದ ವರೆಗೆ ನಿವಾರಿಸುವ ಶಕ್ತಿ ಈ ತುಳಸಿಗಿದೆ. ಅಂತಹ ತುಳಸಿ ಪ್ರತಿಯೊಂದು ಮನೆಯಲ್ಲೂ ಇಲ್ಲದೆ ಇದ್ದರೆ ಮುಂದಿನ ಪೀಳಿಗೆಯವರಿಗೆ ಕನ್ನಡಿಯೊಳಗಿನ ಗಂಟು ಆಗುವುದರಲ್ಲಿ ಸಂದೇಹವಿಲ್ಲ.

ಮತ್ತಷ್ಟು ಪ್ರೀಮಿಯಂ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:03 am, Sun, 22 September 24

ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!