Success Mantra: ಭಯ ನಿಮ್ಮನ್ನು ತಡೆಯುತ್ತಿದ್ದೇಯಾ? ಹಾಗಾದರೆ ಈ 5 ಟಿಪ್ಸ್ಗಳನ್ನು ಪೋಲೊ ಮಾಡಿ!
ಭಯವು ಮಾನವ ಜೀವನದ ಒಂದು ಭಾಗವಾಗಿದೆ. ಆದರೆ ಈ ಭಯವು ಅಭ್ಯಾಸವಾದಾಗ ಅಥವಾ ರೂಢಿಯಾದಾಗ ಅದು ವ್ಯಕ್ತಿಯ ದೌರ್ಬಲ್ಯವಾಗಿ ಬದಲಾಗುತ್ತದೆ.

ಪ್ರಾತಿನಿಧಿಕ ಚಿತ್ರ
ಜೀವನದ ಯಾವುದೇ ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ಭಯ (fear) ಇದ್ದೇ ಇರುತ್ತದೆ. ಕೆಲವರಿಗೆ ಕತ್ತಲೆಯ ಭಯ, ಕೆಲವರಿಗೆ ಸೋಲಿನ ಭಯ, ಇನ್ನೂ ಕೆಲವರಿಗೆ ಪರೀಕ್ಷೆಯ ಭಯ. ಸಹಜವಾಗಿ, ಭಯವು ಮಾನವ ಜೀವನದ ಒಂದು ಭಾಗವಾಗಿದೆ. ಆದರೆ ಈ ಭಯವು ಅಭ್ಯಾಸವಾದಾಗ ಅಥವಾ ರೂಢಿಯಾದಾಗ ಅದು ವ್ಯಕ್ತಿಯ ದೌರ್ಬಲ್ಯವಾಗಿ ಬದಲಾಗುತ್ತದೆ. ಇದು ವ್ಯಕ್ತಿಯ ಜೀವನದಲ್ಲಿ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ನಿಮ್ಮ ಜೀವನದಲ್ಲಿ ಭಯವು ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತಿದ್ದರೆ. ಅದನ್ನು ಹೋಗಲಾಡಿಸಲು, ಕೆಳಗಿನ ಐದು ಯಶಸ್ಸಿನ ತತ್ವಗಳನ್ನು ಅನುಸರಿಬಹುದು.
- ಜೀವನದಲ್ಲಿ ಭಯವು ಹೆಚ್ಚಾಗಿ ಮನುಷ್ಯನ ಆಲೋಚನೆಗಳಿಂದ ಉಂಟಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ನಾವು ಏನನ್ನಾದರೂ ಮಾಡಲು ಬಯಸಿದರೆ, ಅದರ ಬಗ್ಗೆ ನಮಗೆ ಭಯವಿದ್ದರೆ ನಾವು ಅದನ್ನು ಮಾಡಲು ಸಾಧ್ಯವಿಲ್ಲ.
- ಮನುಷ್ಯ ತನ್ನ ಭಯವನ್ನು ಜಯಿಸಬೇಕೆಂದರೆ ಯಾವತ್ತೂ ಮನೆಯಲ್ಲಿ ಕುಳಿತು ಭಯದ ಬಗ್ಗೆ ಯೋಚಿಸಬಾರದು. ಅದರ ಬದಲಾಗಿ ಭಯ ಹೋಗಲಾಡಿಸಲು ಆಲೋಚನೆಗಳನ್ನು ಬೇರೆ ವಿಷಯಗಳತ್ತ ಕ್ರೇಂದ್ರಿಸುದಾಗಿರಬಹುದು, ಅಥವಾ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು.
- ಇಂದು ನೀವು ನಿಮ್ಮ ಭಯವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅದು ನಾಳೆ ನಿಮ್ಮನ್ನು ನಿಯಂತ್ರಿಸುತ್ತದೆ.
- ಜೀವನದಲ್ಲಿ ಭಯ ನಿಮ್ಮ ಹತ್ತಿರ ಬರಲು ಬಿಡಬಾರದು. ಅದು ನಿಮ್ಮ ಹತ್ತಿರ ಬಂದರೂ ಭಯವನ್ನು ಬದಿಗಿಟ್ಟು ನಿಮ್ಮ ಕೆಲಸದಲ್ಲಿ ಮುನ್ನಡೆಯಲು ಪ್ರಯತ್ನಿಸಿ. ಜೀವನದಲ್ಲಿ ಭಯದಿಂದ ಮರೆಯಾಗುವ ಪ್ರಯತ್ನ ಮಾಡಬೇಡಿ. ದೃಢವಾಗಿ ಎದುರಿಸಿ.
- ಯಾವುದೇ ರೀತಿಯ ಬಿಕ್ಕಟ್ಟು ಅಥವಾ ವಿಪತ್ತು ನಿಮ್ಮ ಕೈಗೆ ಬರುವವರೆಗೆ ಮಾತ್ರ ಭಯಪಡಬೇಕು. ಅದೇ ನಿಮಗೂ ಬಂದರೆ ಯಾವುದೇ ಭಯ ಅನುಮಾನವಿಲ್ಲದೆ ಎದುರಿಸಲು ಯೋಚಿಸಬೇಕು.
(ಗಮನಿಸಿ: ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
ಮತ್ತಷ್ಟು ಆದ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




