AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ‘T’ ಅಕ್ಷರದಿಂದ ಹೆಸರು ಶುರುವಾಗುವವರ ವ್ಯಕ್ತಿತ್ವ ಹೇಗಿರುತ್ತೆ? ಭವಿಷ್ಯದ ರಹಸ್ಯ ಇಲ್ಲಿದೆ

ಜ್ಯೋತಿಷಿ ರಾಶಿ ಗೌರ್ ಅವರ ಪ್ರಕಾರ, 'T' ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ಸಂಖ್ಯಾಶಾಸ್ತ್ರದಂತೆ ರಾಹುವಿನ ಪ್ರಭಾವಕ್ಕೊಳಗಾಗುತ್ತಾರೆ. ಇವರು ಧೈರ್ಯಶಾಲಿಗಳು, ತಾಳ್ಮೆಯುಳ್ಳವರು ಹಾಗೂ ವೃತ್ತಿಜೀವನದಲ್ಲಿ ಅತಿ ಬೇಗ ಯಶಸ್ಸು ಕಾಣುತ್ತಾರೆ. ಕಷ್ಟಗಳನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯವಿರುತ್ತದೆ. ಕುಟುಂಬ ಮತ್ತು ಸ್ನೇಹಿತರಿಗೆ ಪ್ರಮುಖ ಸ್ಥಾನ ನೀಡುತ್ತಾರೆ. ವಿಶಾಖ ನಕ್ಷತ್ರದ ಪ್ರಭಾವದಿಂದ ಮಹತ್ವಾಕಾಂಕ್ಷೆಗಳಿದ್ದರೂ, ಗುರುವು ಸರಿ ದಾರಿಯನ್ನು ತೋರಿಸುತ್ತಾನೆ.

Personality Test: 'T' ಅಕ್ಷರದಿಂದ ಹೆಸರು ಶುರುವಾಗುವವರ ವ್ಯಕ್ತಿತ್ವ ಹೇಗಿರುತ್ತೆ? ಭವಿಷ್ಯದ ರಹಸ್ಯ ಇಲ್ಲಿದೆ
ಹೆಸರಿನ ಮೊದಲ ಅಕ್ಷರ 'T' Image Credit source: Pinterest
ಅಕ್ಷತಾ ವರ್ಕಾಡಿ
|

Updated on:May 07, 2026 | 12:49 PM

Share

ಪ್ರಸಿದ್ಧ ಜ್ಯೋತಿಷಿ, ವಾಸ್ತು ತಜ್ಞೆ ರಾಶಿ ಗೌರ್ ಅವರ ಪ್ರಕಾರ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಅವರ ಭವಿಷ್ಯದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಪ್ರತಿಯೊಂದು ಅಕ್ಷರವು ತನ್ನದೇ ಆದ ವಿಶಿಷ್ಟ ಶಕ್ತಿ ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತದೆ. ಅದರಂತೆ, ‘T’ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರ ವ್ಯಕ್ತಿತ್ವ ಮತ್ತು ವೃತ್ತಿಜೀವನದ ಕುರಿತು ಆಸಕ್ತಿದಾಯಕ ಭವಿಷ್ಯವಾಣಿ ಇಲ್ಲಿದೆ.

ಚಾಲ್ಡಿಯನ್ ಸಂಖ್ಯಾಶಾಸ್ತ್ರದ ಪ್ರಕಾರ, ‘T’ ಅಕ್ಷರದಿಂದ ಹೆಸರು ಶುರುವಾಗುವವರು ಉತ್ತಮ ಗುಣಗಳನ್ನು ಹೊಂದಿರುತ್ತಾರೆ. ಈ ಅಕ್ಷರವು ಸಂಖ್ಯೆ 4ಕ್ಕೆ ಸಂಬಂಧಿಸಿದ್ದು, ಇದನ್ನು ನೆರಳು ಗ್ರಹ ಎಂದೇ ಕರೆಯಲ್ಪಡುವ ‘ರಾಹು’ ಆಳುತ್ತಾನೆ. ರಾಹುವಿನ ಪ್ರಭಾವವು ಇವರಲ್ಲಿ ಒಂದು ಅದ್ಭುತವಾದ ಕಾಲ್ಪನಿಕ ಜಗತ್ತನ್ನು ಸೃಷ್ಟಿಸುತ್ತದೆ. ಇದು ಕೇವಲ ಕಲ್ಪನೆಗೆ ಸೀಮಿತವಾಗದೆ, ಇವರ ವೃತ್ತಿಜೀವನಕ್ಕೆ ಒಂದು ದೊಡ್ಡ ತಿರುವು ನೀಡುವ ಶಕ್ತಿಯನ್ನೂ ಹೊಂದಿದೆ ಎಂದು ಹೇಳಲಾಗುತ್ತದೆ.

‘T’ ಅಕ್ಷರದವರ ಮೇಲೆ ರಾಹುವಿನ ಪ್ರಭಾವ:

‘T’ ಅಕ್ಷರದವರು ರಾಹುವಿನ ಪ್ರಭಾವಕ್ಕೆ ಹೆಚ್ಚು ಒಳಗಾಗುವುದರಿಂದ ಸ್ವಾಭಾವಿಕವಾಗಿಯೇ ಧೈರ್ಯಶಾಲಿಗಳಾಗಿರುತ್ತಾರೆ. ಎಂತಹ ಕಷ್ಟದ ಸನ್ನಿವೇಶ ಎದುರಾದರೂ ಇವರು ಬಹಳ ತಾಳ್ಮೆಯಿಂದ ವರ್ತಿಸುತ್ತಾರೆ. ಯಾವುದೇ ಜಟಿಲವಾದ ಕೆಲಸವನ್ನು ಬಹಳ ಸುಲಭವಾಗಿ ಮತ್ತು ಚಾಕಚಕ್ಯತೆಯಿಂದ ಪೂರ್ಣಗೊಳಿಸುವ ಸಾಮರ್ಥ್ಯ ಇವರಿಗಿರುತ್ತದೆ. ಶಾಂತವಾಗಿರುವ ಸಮಯದಲ್ಲಿ ಇವರು ಜೀವನದಲ್ಲಿ ಅತಿ ವೇಗವಾಗಿ ಯಶಸ್ಸನ್ನು ಸಾಧಿಸುತ್ತಾರೆ. ಆದರೆ, ಇವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಅಥವಾ ಸವಾಲುಗಳನ್ನು ಇತರರೊಂದಿಗೆ ಚರ್ಚಿಸಲು ಇಷ್ಟಪಡುವುದಿಲ್ಲ ಮತ್ತು ಸ್ವಭಾವತಃ ಸ್ವಲ್ಪ ಹಠಮಾರಿಗಳಾಗಿರುತ್ತಾರೆ.

ವೃತ್ತಿಜೀವನ:

ವೃತ್ತಿಜೀವನದ ವಿಷಯಕ್ಕೆ ಬಂದರೆ, ಇವರು ಜೀವನದಲ್ಲಿ ಬಹಳ ಬೇಗನೆ ನೆಲೆಗೊಳ್ಳುತ್ತಾರೆ. ಯಾವುದೇ ಸವಾಲಿನ ಕೆಲಸವನ್ನು ಸಮರ್ಪಣಾಭಾವ ಮತ್ತು ತಮ್ಮಲ್ಲಿರುವ ಅತ್ಯುತ್ತಮ ಪ್ರತಿಭೆಯ ಮೂಲಕ ಪೂರ್ಣಗೊಳಿಸುವ ಸ್ವಭಾವ ಇವರದ್ದು. ಇವರ ಕಾರ್ಯದಕ್ಷತೆಯಿಂದಾಗಿ ಕೆಲಸದ ಸ್ಥಳದಲ್ಲಿ ಎಲ್ಲರಿಂದಲೂ ಒಳ್ಳೆಯ ಹೆಸರು ಮತ್ತು ಗೌರವವನ್ನು ಗಳಿಸುತ್ತಾರೆ. ಇವರ ಬುದ್ಧಿವಂತಿಕೆ ಮತ್ತು ಆಲೋಚನೆಗಳಲ್ಲಿ ಸ್ಪಷ್ಟತೆ ಇರುವುದರಿಂದ ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ. ಅಲ್ಲದೆ, ಇವರ ಆಕರ್ಷಕ ವ್ಯಕ್ತಿತ್ವವು ಎಲ್ಲರನ್ನೂ ಸೆಳೆಯುವಂತಿರುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸಾಮಾಜಿಕ ಮತ್ತು ಕೌಟುಂಬಿಕ ಜೀವನ:

ಇನ್ನು ಸಾಮಾಜಿಕ ಮತ್ತು ಕೌಟುಂಬಿಕ ಜೀವನದಲ್ಲಿ ‘T’ ಅಕ್ಷರದವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯಲು ಬಯಸುತ್ತಾರೆ. ಇವರಿಗೆ ಸ್ನೇಹಿತರೆಂದರೆ ಪ್ರಾಣ ಮತ್ತು ಸ್ನೇಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ವಿಶೇಷವಾಗಿ ಇವರು ವಿಶಾಖ ನಕ್ಷತ್ರಕ್ಕೆ ಸೇರಿದವರಾಗಿರುವುದರಿಂದ, ಇವರ ಮನಸ್ಸು ಮತ್ತು ಆಲೋಚನೆಗಳು ಉನ್ನತ ಮಟ್ಟದಲ್ಲಿರುತ್ತವೆ. ದಯಾಳು ಸ್ವಭಾವದವರಾದ ಇವರು ಇತರರಿಗೆ ಸಹಾಯ ಮಾಡುವ ಕೆಲಸದಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.

ಇವರ ಮಹತ್ವಾಕಾಂಕ್ಷೆಗಳು ಬಹಳ ದೊಡ್ಡದಾಗಿರುತ್ತವೆ ಮತ್ತು ಸಾಧಿಸುವ ಹಸಿವು ಇವರಲ್ಲಿ ಹೆಚ್ಚಾಗಿರುತ್ತದೆ. ಆದರೆ, ಈ ದೊಡ್ಡ ಕನಸುಗಳನ್ನು ಬೇಗನೆ ನನಸಾಗಿಸಿಕೊಳ್ಳುವ ಹಂಬಲದಲ್ಲಿ ಕೆಲವೊಮ್ಮೆ ತಪ್ಪು ಮಾರ್ಗಗಳನ್ನು ಅನುಸರಿಸುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಇವರ ನಕ್ಷತ್ರದ ಅಧಿಪತಿಯಾದ ‘ಗುರು’ವು ಇವರ ನೆರವಿಗೆ ಬರುತ್ತಾನೆ. ಗುರುವು ಇವರಿಗೆ ಸರಿಯಾದ ಜ್ಞಾನವನ್ನು ನೀಡಿ, ಕನಸುಗಳನ್ನು ಧರ್ಮದ ಹಾದಿಯಲ್ಲಿಯೇ ನನಸಾಗಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Thu, 7 May 26

Follow Us
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!