Vasthu Shastra: ಮನೆಯಲ್ಲಿ ಜೋಡಿ ಹಂಸಗಳ ಫೋಟೋ ಇಡುವ ಮುನ್ನ ಈ ವಾಸ್ತು ನಿಯಮ ತಿಳಿಯಿರಿ
ಮನೆಯಲ್ಲಿ ಶಾಂತಿ, ಸಕಾರಾತ್ಮಕ ಶಕ್ತಿ ಹಾಗೂ ಸಮೃದ್ಧಿಯನ್ನು ತರಲು ಜೋಡಿ ಹಂಸಗಳ ಚಿತ್ರವನ್ನು ಇಡುವುದು ಒಂದು ವಿಶೇಷ ವಿಧಾನ. ವಾಸ್ತು ಶಾಸ್ತ್ರದ ಪ್ರಕಾರ, ಇದು ಲಕ್ಷ್ಮಿಯ ಸ್ವರೂಪವಾಗಿದ್ದು, ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳ ಏಕಾಗ್ರತೆ, ಕುಟುಂಬದ ನೆಮ್ಮದಿ, ಉದ್ಯೋಗದಲ್ಲಿ ಪ್ರಗತಿ ಮತ್ತು ಆರ್ಥಿಕ ಲಾಭಕ್ಕೆ ಇದು ಸಹಕಾರಿ. ಇದು ನಂಬಿಕೆಯ ಆಧಾರದಲ್ಲಿ ಮಾನಸಿಕ ಧೈರ್ಯವನ್ನು ಹೆಚ್ಚಿಸುತ್ತದೆ.

ಜೋಡಿ ಹಂಸಗಳ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಉಂಟಾಗುವ ಶುಭ ಪರಿಣಾಮಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ವಾಸ್ತು ಪ್ರಕಾರ, ಹಂಸಗಳಿಗೆ ವಿಶೇಷ ಮಹತ್ವವಿದೆ. ಹಂಸಕ್ಷೀರ ನ್ಯಾಯದಂತೆ, ಹಂಸವು ಹಾಲು ಮತ್ತು ನೀರನ್ನು ಬೇರ್ಪಡಿಸಿ ಹಾಲನ್ನು ಮಾತ್ರ ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿವೇಚನೆ ಮತ್ತು ಶುದ್ಧತೆಯ ಸಂಕೇತವಾಗಿದೆ.
ಹಂಸವನ್ನು ಲಕ್ಷ್ಮಿಯ ಸ್ವರೂಪವೆಂದು, ದೇವಿಯ ಸ್ವರೂಪವೆಂದು ಮತ್ತು ಧನಾತ್ಮಕ ಶಕ್ತಿಯನ್ನು ವೃದ್ಧಿಸುವ ದೈವಾಂಶದ ಸ್ವರೂಪವೆಂದು ಹೇಳಲಾಗುತ್ತದೆ. ಮನೆಯ ಹಾಲ್‌ನಲ್ಲಿ ಅಥವಾ ಜನರು ಹೆಚ್ಚು ಓಡಾಡುವ ಜಾಗದಲ್ಲಿ ಜೋಡಿ ಹಂಸಗಳ ಚಿತ್ರವನ್ನು ಇಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ವಿಶೇಷವಾಗಿ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಈ ಚಿತ್ರವನ್ನು ಇಟ್ಟರೆ, ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳುತ್ತವೆ, ಮನೆಯಲ್ಲಿನ ರೋಧನೆ ಕಡಿಮೆಯಾಗಿ ಆರ್ಥಿಕ ಲಾಭ ಪ್ರಾಪ್ತಿಯಾಗುತ್ತದೆ.
ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!
ಮಕ್ಕಳು ಓದುವ ಸ್ಥಳದಲ್ಲಿ ಅಥವಾ ಅವರ ಸ್ಟಡಿ ಟೇಬಲ್ ಬಳಿ ಜೋಡಿ ಹಂಸಗಳ ಫೋಟೋ ಇಡುವುದರಿಂದ ಅವರ ಮನಸ್ಸು ಸ್ಥಿರವಾಗಿ, ಗಾಂಭೀರ್ಯದಿಂದ ಕೂಡಿ ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ. ಇದು ನಕಾರಾತ್ಮಕ ಶಕ್ತಿಗಳನ್ನು ನಿರ್ಮೂಲನೆ ಮಾಡಿ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಮನೆ ಯಜಮಾನನಿಗೆ ಉದ್ಯೋಗದಲ್ಲಿ ನೆಮ್ಮದಿ ದೊರೆಯುತ್ತದೆ ಮತ್ತು ಮನೆಯ ಮಹಿಳೆಗೆ ಆತ್ಮಶಕ್ತಿ ವೃದ್ಧಿಯಾಗುತ್ತದೆ. ಇದರಿಂದ ಕುಟುಂಬದಲ್ಲಿ ತಾಳ್ಮೆ, ನೆಮ್ಮದಿ ಹಾಗೂ ಉತ್ತಮ ಯೋಜನಾ ಲಹರಿಗಳು ಮೂಡುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
