Ganga Mata: ಲೋಕಪಾವನೀ ಗಂಗಾಮಾತೆ ಭೂಮಿಗಿಳಿದ ದಿನ…

ಆ ದಿನದಂದು ಗಂಗೆಯನ್ನು ಪೂಜಿಸುವುದು ಅಥವಾ ಬಳಸುವ ಕೆರೆ, ಬಾಯಿಯಲ್ಲಿ ಗಂಗೆಯನ್ನು ಆವಾಹಿಸಿ ಪೂಜಿಸುವ ಸಂಪ್ರದಾಯವು ಅನೇಕ ವರ್ಷಗಳಿಂದ ಬಂದಿದೆ. ಎಲ್ಲ ನೀರುಗಳೂ ಗಂಗೆಗೆ ಸಮಾನವಾದ ನೀರೆಂದು ಭಾವಿಸಬೇಕು. ಆಕೆಯಿಂದಲೇ ಕುಡಿಯುವ ಬಳಸುವ ನೀರನ‌ ಮೂಲ ಎಂಬ ಭಾವವಿದೆ. ಒಂದು ಕಲಶದಲ್ಲಿ ನೀರನ್ನು ತಂದು ಗಂಗೆಯನ್ನು ಆವಾಹಿಸುವ ಕ್ರಮವೂ ಇದೆ.

Ganga Mata: ಲೋಕಪಾವನೀ ಗಂಗಾಮಾತೆ ಭೂಮಿಗಿಳಿದ ದಿನ...
ಗಂಗಾಮಾತೆ ಭೂಮಿಗಿಳಿದ ದಿನ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 21, 2024 | 10:21 AM

ಭಾರತೀಯರು ಪೃಥ್ವಿ, ಅಪ್, ತೇಜಸ್, ವಾಯು, ಆಕಾಶ ಈ ಪಂಚಭೂತಗಳನ್ನು ಅನಾದಿಕಾಲದಿಂದ ಪೂಜಿಸುತ್ತ ಬಂದಿದ್ದಾರೆ. ಅದಕ್ಕೆ ಕಾರಣ ಇವುಗಳ ಅಸ್ತಿತ್ವ ಇಲ್ಲದೇ ಮನುಷ್ಯ ಜೀವನ ಮಾತ್ರವಲ್ಲ, ಸೃಷ್ಟಿಯೇ ಇಲ್ಲ. ಹಾಗಾಗಿ ಪಂಚಭೂತಗಳನ್ನು ದೈವವೆಂದು ತಿಳಿದಿದ್ದಾರೆ. ಅಂತಹ ದೈವವನ್ನು ಮಲಿನ ಮಾಡಬಾರದು. ಜಲಮಾಲಿನ್ಯ, ವಾಯುಮಾಲಿನ್ಯ, ಭೂಮಾಲಿನ್ಯದಿಂದ, ಆಕಾಶವನ್ನು ಮಲಿನ‌ಮಾಡಿದ್ದರಿಂದ ಮನುಷ್ಯ, ಪ್ರಕೃತಿಯ ನಾಶವೂ ಆಗುತ್ತದೆ. ಇವುಗಳು ಸದಾ ಪೂಜ್ಯ.

ಗಂಗಾಷ್ಟಮೀ‌ ಕೂಡ ಇಂತಹ ಒಂದು ಶುಭ ಕಾಲ. ಅಕ್ಟೋಬರ್ ೨೪ ರಂದು ಗಂಗಾಷ್ಟಮಿಯ ದಿನ. ಆಶ್ವಯುಜ ಮಾಸ ಶುಕ್ಲಪಕ್ಷದ ಅಷ್ಟಮಿಯಂದು ಗಂಗಾಷ್ಟಮೀ.

ಕೃತಯುಗದಲ್ಲಿ ಸಗರನು ಇಂದ್ರನಾಗುವ ಉದ್ದೇಶದಿಂದ ನೂರನೇ ಅಶ್ವಮೇಧಯಾಗವನ್ನು ಮಾಡುವ ಸಂದರ್ಭದಲ್ಲಿ ಇಂದ್ರನು‌ ಅಶ್ವಮೇಧದ ಕುದುರೆಯನ್ನು ಅಪಹರಿಸಿ ಪಾತಾಳಲೋಕಕ್ಕೆ ಒಯ್ದು, ವಿಷ್ಣುವಿನ ಅವತಾರವಾದ ಕಪಿಲ ಮಹರ್ಷಿ ಬಳಿ ಇರಿಸಿದನು.‌

ರಾಜ್ಯದಲ್ಲಿ ಕುದುರೆಯನ್ನು ಕಾಣದೇ ಸಗರನ್ನು ತನ್ನ ಅರವತ್ತು ಸಾವಿರ ಮಕ್ಕಳ ಬಳಿ ಎಲ್ಲಿದ್ದರೂ ಹುಡುಕಿ ಕುದುರೆಯನ್ನು ಕರೆದು ತನ್ನಿ ಎಂದನು. ಅವರ ಇಡೀ ಭೂಮಂಡಲವನ್ನು ಹುಡುಕಿದರು. ಎಲ್ಲಿಯೂ ಕುದುರೆ ಕಾಣದೇ ಅನಂತರ ಪಾತಳವನ್ನು ಭೇದಿಸಿದರು. ಅಲ್ಲಿ ಕರೆಯನ್ನು ಕಂಡರು. ಕಪಿಲ ಮಹರ್ಷಿಯೇ ಇದನ್ನು ಅಪಹರಿಸಿದ್ದೆಂದು ತಿಳಿದು ಅವರನ್ನು ಸಾಯಿಸಲು ಹೋದರು. ಅವರ ಹುಂಕಾರಕ್ಕೆ ಅರವತ್ತು ಸಾವಿರ ಜನರೂ ಭಸ್ಮವಾದರು.

ತುಂಬ ದಿನವಾದರೂ ಬರದ ಮಕ್ಕಳನ್ನು‌ ಕಂಡು ಅಂಶುಮಾನನ್ನು ಸಗರನು ಕಳುಹಿಸಿದನು. ಕುದುರೆಯು ಅವನಿಗೆ ಸಿಕ್ಕಿತು. ಆದರೆ ಗರುಡನು ಅವನಿಗೆ ಗಂಗೆಯನ್ನು ದಿವಿಯಿಂದ ಕರೆತಂದು ಈ ಎಲ್ಲರಿಗೂ ಮೋಕ್ಷವನ್ನು ಕರುಣಿಸು ಎಂದನು. ಅದೇ ಪ್ರಕಾರವಾಗಿ ಅಂಶುಮಾನ್ ತಪಸ್ಸನ್ನು ಮಾಡಿದನು. ಅನಂತರ ಅವನ‌ ಮಗ ದಿಲೀಪ, ಅನಂತರ ಭಗೀರಥನು ಬ್ರಹ್ಮನ ಕುರಿತು ತಪಸ್ಸನ್ನು ಮಾಡಿದನು. ಬ್ರಹ್ಮನಿಂದ ವರ ಪಡೆದ ಭಗೀರಥನು ಗಂಗೆಯನ್ನು ಭೂಮಿಗೆ ಬಿಡುವಾಗ ಆಕೆಯ ರಭಸವನ್ನು ತಡೆಯುವ ಶಕ್ತಿ ಯಾರಿಗಿದೆ ಎಂದಾಗ ಶಿವನ ಕುರಿತು ತಪಸ್ಸನ್ನು ಮಾಡಿದನು. ಅದರ ಫಲವಾಗಿ ಭೂಮಿಗೆ ಬರುವ ಗಂಗೆಯನ್ನು ಶಿವನು ತನ್ನ ಶಿರದಲ್ಲಿ ಧರಿಸಿ, ಭೂಮಿಗೆ ಬಿಟ್ಟನು. ಆಕೆ ಭೂಮಿಯನ್ನು ಸ್ಪರ್ಶಿಸಿದ ದಿನವೇ ಗಂಗಾಷ್ಟಮೀ.

ಅನಂತರ ಆಕೆ ಏಳು ಕವಲಾಗಿ ಹೊಡದು ಬೇರೆ ಬೇರೆ ದಿಕ್ಕುಗಳಿಗೆ ಹೋಗುತ್ತಾಳೆ.‌ ಅಲಕಾನಂದ ಎನ್ನುವ ಕವಲು ಭಗೀರಥನ ಹಿಂದೆ ಹೋಗಿ ಸತ್ತ ಎಲ್ಲರನ್ನೂ ಉದ್ಧರಿಸಿದಳು.

ಆ ದಿನದಂದು ಗಂಗೆಯನ್ನು ಪೂಜಿಸುವುದು ಅಥವಾ ಬಳಸುವ ಕೆರೆ, ಬಾಯಿಯಲ್ಲಿ ಗಂಗೆಯನ್ನು ಆವಾಹಿಸಿ ಪೂಜಿಸುವ ಸಂಪ್ರದಾಯವು ಅನೇಕ ವರ್ಷಗಳಿಂದ ಬಂದಿದೆ. ಎಲ್ಲ ನೀರುಗಳೂ ಗಂಗೆಗೆ ಸಮಾನವಾದ ನೀರೆಂದು ಭಾವಿಸಬೇಕು. ಆಕೆಯಿಂದಲೇ ಕುಡಿಯುವ ಬಳಸುವ ನೀರನ‌ ಮೂಲ ಎಂಬ ಭಾವವಿದೆ. ಒಂದು ಕಲಶದಲ್ಲಿ ನೀರನ್ನು ತಂದು ಗಂಗೆಯನ್ನು ಆವಾಹಿಸುವ ಕ್ರಮವೂ ಇದೆ.

ಆಕೆಯ ಸ್ವರೂಪ :

ಬಿಳಿಯ ಮೊಸಳೆಯ ಮೇಲೆ ಕುಳಿತ ಗಂಗೆಯು ಶುಭ್ರವರ್ಣದಿಂದ ಕೂಡಿ ಮೂರು ಕಣ್ಣುಳ್ಳವಳು. ಕೈಯಲ್ಲಿ ಕಮಲ, ಹರಿ ಹರ ಬ್ರಹ್ಮಾದಿಗಳಿಂದ ಪೂಜೆಗೊಳ್ಳುವ ಬಿಳಿಯ ವರ್ಣದ ವಸ್ತ್ರವನ್ನು ಧರಿಸಿದವಳು.

ಸಿತಮಕರನಿಷಣ್ಣಾ ಶುಭ್ರವರ್ಣಾಂ ತ್ರಿನೇತ್ರಾಂ

ಕರದೃತಕಲಶೋದ್ಯತ್ಸೋತ್ಪಲಾಭೀತ್ಯಭೀಷ್ಟಾಮ್ |

ವಿಧಿ ಹರಿ ಹರರೂಪಾಂ ಸೇಂದುಕೋಟೀರಚೂಡಾಂ

ಭಸಿತ ಸಿತದುಕೂಲಾಂ‌ ಜಾಹ್ನವೀಂ ತಾಂ ನಮಾಮಿ ||

ಇಂತಹ ಭವ್ಯವೂ ದಿವ್ಯವೂ ಆದ ಗಂಗಾಮಾತೆಯನ್ನು ಆರಾಧಿಸಿ, ಆಕೆಯ ಅನುಗ್ರಹವನ್ನು ಪಡೆಯಬೇಕು.

– ಲೋಹಿತ ಹೆಬ್ಬಾರ್ – 8762924271

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ