Daily Devotional: ಮನೆಯ ಮುಂದೆ ಬೂದುಗುಂಬಳ ಕಾಯಿ ಕಟ್ಟುವ ಮುನ್ನ ಈವಿಷಯ ತಿಳಿದಿರಲಿ
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಇದರ ಉಪಯೋಗದ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಡಾ. ಬಸವರಾಜ್ ಗುರೂಜಿಯವರು ಮಾಹಿತಿ ನೀಡಿದ್ದಾರೆ. ಈ ಲೇಖನದಲ್ಲಿ ಅಮಾವಾಸ್ಯೆ, ಬುಧವಾರ ಅಥವಾ ಶನಿವಾರ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಬೂದಾಕುಂಬಳಕಾಯಿಯನ್ನು ಅರಿಶಿಣ, ಕುಂಕುಮ ಮತ್ತು ಬಿಳಿ ದಾರದಿಂದ ಅಲಂಕರಿಸಿ ಮನೆಯ ಸಿಂಹದ್ವಾರದ ಬಳಿ ಕಟ್ಟುವ ವಿಧಾನವನ್ನು ವಿವರಿಸಲಾಗಿದೆ.

ಪೂಜೆ ಮುಂತಾದ ಕಾರ್ಯಕ್ರಮಗಳಲ್ಲಿ ಬೂದುಗುಂಬಳ ಕಾಯಿಯನ್ನು ಬಳಸುವುದು ಪ್ರಾಚೀನ ಕಾಲದಿಂದಲೂ ನಡೆದುಬರುತ್ತಿರುವ ಪದ್ಧತಿಯಾಗಿದೆ. ವಿಶೇಷವಾಗಿ ಗೃಹಪ್ರವೇಶದ ಸಮಯದಲ್ಲಿ ಬೂದಾಕುಂಬಳಕಾಯಿಯನ್ನು ಮನೆಗೆ ಕಟ್ಟುವುದನ್ನು ನಾವು ಕಂಡಿದ್ದೇವೆ. ಆದ್ದರಿಂದ ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಇದರ ಉಪಯೋಗದ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಡಾ. ಬಸವರಾಜ್ ಗುರೂಜಿಯವರು ಮಾಹಿತಿ ನೀಡಿದ್ದಾರೆ.
ಗುರೂಜಿ ಅವರು ಹೇಳುವಂತೆ, ಕೇವಲ ಗೃಹಪ್ರವೇಶದ ಸಮಯದಲ್ಲಿ ಮಾತ್ರವಲ್ಲದೇ, ಯಾವುದೇ ಸಮಯದಲ್ಲಿಯೂ ಬೂದುಗುಂಬಳ ಕಾಯಿಯನ್ನು ಕಟ್ಟಬಹುದು. ಇದರಿಂದ ಮನೆಗೆ ಶುಭವಾಗುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೇ ಬೂದುಗುಂಬಳ ಕಾಯಿಯನ್ನು ಮನೆಯ ಯಾವ ಭಾಗದಲ್ಲಿ ಕಟ್ಟಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳಿವೆ. ಮನೆಯ ಈಶಾನ್ಯ ಅಥವಾ ನೈರುತ್ಯ ಭಾಗದಲ್ಲಿ ಅಥವಾ ಸಿಂಹದ್ವಾರದ ಬಳಿ ಕಟ್ಟಬಹುದು. ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವವರು ಸಿಂಹದ್ವಾರದ ಹೊರಭಾಗದಲ್ಲಿ, ಮೇಲ್ಭಾಗದಲ್ಲಿ ಕಟ್ಟಬಹುದು. ಯಾವುದೇ ಗಾತ್ರದ ಬೂದುಗುಂಬಳ ಕಾಯಿಯನ್ನು ಬಳಸಬಹುದು. ಆದರೆ, ಯಾವ ದಿನ ಕಟ್ಟಬೇಕು ಎಂಬುದು ಮುಖ್ಯ. ಅಮಾವಾಸ್ಯೆ, ಬುಧವಾರ ಅಥವಾ ಶನಿವಾರದ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಕಟ್ಟುವುದು ಶುಭ ಎಂದು ಹೇಳಲಾಗುತ್ತದೆ. ಸೂರ್ಯೋದಯಕ್ಕೂ ಮುನ್ನ ಕಟ್ಟುವುದರಿಂದ ಧನಾತ್ಮಕ ಶಕ್ತಿಗಳು ಹೆಚ್ಚು ಇರುತ್ತವೆ ಎಂಬ ನಂಬಿಕೆ ಇದೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಈ ಪುರಾತನ ದೇವಾಲಯದಲ್ಲಿದೆ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ!
ಕಟ್ಟುವ ಮೊದಲು, ಬೂದುಗುಂಬಳ ಕಾಯಿಯನ್ನು ಶುದ್ಧ ನೀರಿನಿಂದ ತೊಳೆದು, ಅರಿಶಿನದಿಂದ ಸಂಪೂರ್ಣವಾಗಿ ಪ್ರೋಕ್ಷಿಸಬೇಕು. ನಂತರ 21 ಕುಂಕುಮದ ಬೊಟ್ಟುಗಳನ್ನು ಇಡಬೇಕು. ಬಿಳಿ ನೂಲು ಅಥವಾ ಗಟ್ಟಿ ದಾರದಿಂದ ಮೂರು ಬಾರಿ ಸುತ್ತಿ ಕಟ್ಟಬೇಕು. ಸಾಂಬ್ರಾಣಿ ಧೂಪವನ್ನು ಹಚ್ಚುವುದು ಉತ್ತಮ. ಈ ಕ್ರಿಯೆಯಿಂದ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ದೂರವಾಗಿ, ಶಾಂತಿ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ಬೂದುಗುಂಬಳ ಕಾಯಿ ಒಣಗಿದಾಗ ಅಥವಾ ಹಾಳಾದಾಗ, ಅದನ್ನು ದಾರ ಸಮೇತ ಶುದ್ಧ ನೀರಿನಲ್ಲಿ ಹರಿಯುವ ಜಲಮೂಲದ ಬಳಿ ಅಥವಾ ಗಿಡದ ಬುಡದಲ್ಲಿ ಹಾಕಬೇಕು. ಇದು ಒಂದು ನಂಬಿಕೆಯ ಆಧಾರದ ಮೇಲಿನ ಪದ್ಧತಿಯಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:26 am, Fri, 6 June 25