AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮನೆಯ ಹೊಸ್ತಿಲಿನ ಮೇಲೆ ಏಕೆ ಕೂರಬಾರದು; ವಾಸ್ತು ತಜ್ಞರು ಹೇಳುವುದೇನು?

ಮನೆಯ ಹೊಸ್ತಿಲು ಧನಾತ್ಮಕ ಶಕ್ತಿಯ ಆಗರ. ಇದು ಮಹಾಲಕ್ಷ್ಮಿ ನೆಲೆಸುವ ಸ್ಥಳವಾಗಿದೆ. ಮನೆಯ ಮುಖ್ಯ ದ್ವಾರ ಮತ್ತು ದೇವರ ಕೋಣೆಗೆ ಹೊಸ್ತಿಲು ಇರಲೇಬೇಕು. ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು, ತುಳಿಯುವುದು, ಪ್ಲಾಸ್ಟಿಕ್ ಹೂವುಗಳಿಂದ ಅಲಂಕಾರ ಮಾಡುವುದು ಅಶುಭ. ಅರಿಶಿನ, ನೈಸರ್ಗಿಕ ಎಲೆಗಳಿಂದ ಅಲಂಕರಿಸಿ ಶುಚಿತ್ವ ಕಾಪಾಡುವುದರಿಂದ ಲಕ್ಷ್ಮಿ ಕೃಪೆ ಲಭಿಸುತ್ತದೆ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

Daily Devotional: ಮನೆಯ ಹೊಸ್ತಿಲಿನ ಮೇಲೆ ಏಕೆ ಕೂರಬಾರದು; ವಾಸ್ತು ತಜ್ಞರು ಹೇಳುವುದೇನು?
ಮನೆಯ ಹೊಸ್ತಿಲು
ಅಕ್ಷತಾ ವರ್ಕಾಡಿ
|

Updated on: Oct 26, 2025 | 8:12 AM

Share

ಮನೆಯ ಹೊಸ್ತಿಲಿನ ಮೇಲೆ ಏಕೆ ಕೂರಬಾರದು ಎಂಬುದಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಭಾರತೀಯ ಸಂಪ್ರದಾಯದಲ್ಲಿ ಮನೆ ಕೇವಲ ವಾಸಸ್ಥಳವಲ್ಲ, ಅದೊಂದು ಮಂತ್ರಾಲಯ ಮತ್ತು ದೇವಾಲಯಕ್ಕೆ ಸಮಾನವಾಗಿದೆ. ಮನೆಯ ವಿವಿಧ ಭಾಗಗಳಲ್ಲಿ ಹೊಸ್ತಿಲು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹೊಸ್ತಿಲನ್ನು ಮನೆಯ ಧನಾತ್ಮಕ ಶಕ್ತಿಯ ಪ್ರಮುಖ ಕೇಂದ್ರಬಿಂದು ಎಂದು ಪರಿಗಣಿಸಲಾಗುತ್ತದೆ. ಇದು ಮನೆಯೊಳಗೆ ಸಕಾರಾತ್ಮಕ ಶಕ್ತಿಯನ್ನು ಪ್ರವೇಶಿಸಲು ಸಹಕರಿಸುತ್ತದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಮನೆಯ ಸಿಂಹದ್ವಾರ (ಮುಖ್ಯ ದ್ವಾರ) ಮತ್ತು ದೇವರ ಮನೆಗೆ ಹೊಸ್ತಿಲು ಇರುವುದು ಅತಿ ಅವಶ್ಯಕ. ಆಧುನಿಕ ಅಪಾರ್ಟ್‌ಮೆಂಟ್‌ಗಳು ಅಥವಾ ಓಪನ್ ಕಿಚನ್ ವಿನ್ಯಾಸಗಳಲ್ಲಿ ಹೊಸ್ತಿಲು ಇಲ್ಲದಿರುವುದು ಕಂಡುಬರುತ್ತದೆ. ಆದರೆ, ಸಂಪ್ರದಾಯದ ಪ್ರಕಾರ, ಈ ಎರಡು ಸ್ಥಳಗಳಲ್ಲಿ ಹೊಸ್ತಿಲು ಇರದಿದ್ದರೆ ಅದನ್ನು ಪರಿಪೂರ್ಣ ಮನೆಯೆಂದು ಪರಿಗಣಿಸಲಾಗುವುದಿಲ್ಲ. ಹೊಸ್ತಿಲನ್ನು ಮನೆಯ ಸ್ಕ್ಯಾನರ್ ಎಂದೂ ಕರೆಯಲಾಗುತ್ತದೆ.

ವಿಡಿಯೋ ಇಲ್ಲಿದೆ ನೋಡಿ:

ಹೊಸ್ತಿಲು ಮಹಾಲಕ್ಷ್ಮಿಯ ಆವಾಸ ಸ್ಥಾನವೆಂದು ನಂಬಲಾಗಿದೆ. ಮನೆಯನ್ನು ಶುಚಿಗೊಳಿಸಿದ ತಕ್ಷಣ ಮಹಾಲಕ್ಷ್ಮಿಯ ಅನುಗ್ರಹ ದೊರೆಯುತ್ತದೆ. ಪ್ರಧಾನ ದ್ವಾರ ಲಕ್ಷ್ಮಿಗೆ ಸಮಾನ. ಆದ್ದರಿಂದ, ಹೊಸ್ತಿಲನ್ನು ಗೌರವದಿಂದ ಕಾಣುವುದು ಅತ್ಯಂತ ಮುಖ್ಯ. ಹೊಸ್ತಿಲಿಗೆ ಪ್ಲಾಸ್ಟಿಕ್ ರಂಗೋಲಿ ಅಥವಾ ಸ್ಟಿಕ್ಕರ್‌ಗಳನ್ನು ಅಂಟಿಸಬಾರದು. ಶುದ್ಧ ಅರಿಶಿನವನ್ನು ಕೈಯಲ್ಲಿ ಬೆರೆಸಿ (ಪಾತ್ರೆ ಅಥವಾ ಪ್ಲಾಸ್ಟಿಕ್‌ನಲ್ಲಿ ಬೆರೆಸಿದ ಅರಿಶಿನವಲ್ಲ) ಹೊಸ್ತಿಲಿನ ಎರಡೂ ಬದಿಯಲ್ಲಿ ಇಡುವುದರಿಂದ ಮಹಾಲಕ್ಷ್ಮಿಯ ಕೃಪೆ ದೊರೆಯುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

ಹೊಸ್ತಿಲಿಗೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ಸಂಪ್ರದಾಯ ಮತ್ತು ನಿರ್ಬಂಧಗಳು:

  • ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದರಿಂದ ದುಷ್ಟ ಶಕ್ತಿಗಳ ಪ್ರಭಾವ, ಸಾಲ ಹೆಚ್ಚಳ, ಹಣದ ಅನಿರೀಕ್ಷಿತ ಖರ್ಚು ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ.
  • ಹೊಸ್ತಿಲನ್ನು ತುಳಿಯುವುದರಿಂದ ಮಹಾಲಕ್ಷ್ಮಿಗೆ ಅಪಮಾನ ಮಾಡಿದಂತಾಗುತ್ತದೆ.
  • ಹೊಸ್ತಿಲಿನ ಮೇಲೆ ಕೂದಲು ಬಾಚುವುದು, ಹಲ್ಲುಜ್ಜುವುದು, ಅಥವಾ ಬಾಗಿಲಿಗೆ ವಾಲಿಕೊಂಡು ಮಾತನಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
  • ಒಂದು ಕಾಲು ಒಳಗೆ, ಮತ್ತೊಂದು ಕಾಲು ಹೊರಗೆ ಇಟ್ಟುಕೊಂಡು ಬಾಗಿಲ ಬಳಿ ನಿಂತು ಫೋನ್‌ನಲ್ಲಿ ಮಾತನಾಡುವುದು ಮನೆಯ ದಾರಿದ್ರ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
  • ಹೊಸ್ತಿಲು ಅಥವಾ ಮುಖ್ಯ ದ್ವಾರಕ್ಕೆ ಗೆದ್ದಲು ಹಿಡಿದರೆ ತಕ್ಷಣ ಅದನ್ನು ಬದಲಾಯಿಸುವುದು ಒಳಿತು.

ಇದನ್ನೂ ಓದಿ: ಮನೆಯಲ್ಲಿ ಮೆಟ್ಟಿಲು ನಿರ್ಮಿಸುವಾಗ ಈ ವಾಸ್ತು ನಿಯಮ ನಿರ್ಲಕ್ಷ್ಯಿಸದಿರಿ

ಹೊಸ್ತಿಲನ್ನು ಶುಚಿಯಾಗಿ ಮತ್ತು ಪವಿತ್ರವಾಗಿ ಇರಿಸಿಕೊಳ್ಳಲು ಕೆಲವು ಕ್ರಮಗಳು:

  • ನಿಯಮಿತವಾಗಿ ಒದ್ದೆ ಬಟ್ಟೆಯಿಂದ ಒರೆಸುವುದು. ಅರಿಶಿನ ಮಿಶ್ರಿತ ನೀರಿನಿಂದ ಒರೆಸುವುದು ಹೆಚ್ಚು ಶುಭಕರ.
  • ಮಾವಿನ ಎಲೆ, ತೆಂಗಿನ ಗರಿ, ಬಾಳೆ ಎಲೆಗಳಂತಹ ನೈಸರ್ಗಿಕ, ಹಸಿರು ವಸ್ತುಗಳಿಂದ ಅಲಂಕರಿಸುವುದು. ಪ್ಲಾಸ್ಟಿಕ್‌ನಿಂದ ಮಾಡಿದ ಹಸಿರು ಅಲಂಕಾರಗಳನ್ನು ಬಳಸಬಾರದು.
  • ಕೆಲವು ಮನೆಗಳಲ್ಲಿ ಮುಖ್ಯ ದ್ವಾರಕ್ಕೆ ಬತ್ತವನ್ನು ಕಟ್ಟುವ ಸಂಪ್ರದಾಯವೂ ಇದೆ, ಇದು ಶುಭಕರವೆಂದು ನಂಬಲಾಗುತ್ತದೆ.

ಹಾಲು, ಮೊಸರು, ತುಪ್ಪ, ಹಣ ಇವೆಲ್ಲವೂ ಮನೆಯಲ್ಲಿ ಸಮೃದ್ಧಿಯಾಗಿರಲು ಹೊಸ್ತಿಲಿನ ಶುಚಿತ್ವ ಮತ್ತು ಗೌರವವೇ ಪ್ರಮುಖ ಕಾರಣ. ದಾರಿದ್ರ್ಯವನ್ನು ಹೋಗಲಾಡಿಸಲು, ಹೊಸ್ತಿಲನ್ನು ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ನೋಡಿಕೊಳ್ಳುವುದು ಅತ್ಯಗತ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ