AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zodiac sign: ಈ ಮೂರು ರಾಶಿಯ ಜನ ಭಾವನಾತ್ಮಕ ಜೀವಿಗಳು! ಯಾರವರು ತಿಳಿಯಿರಿ

ಸಿಂಹ ರಾಶಿಯವರು ಹೆಮ್ಮೆಯ, ಕಟ್ಟುನಿಟ್ಟಾದ, ಪರಿಪೂರ್ಣತಾವಾದಿಗಳಂತೆ ಕಾಣುತ್ತಾರೆ. ಆದರೆ ಅವರಲ್ಲಿ ಮತ್ತೊಂದು ಸ್ವಭಾವವೂ ಇರುತ್ತದೆ. ಅವರು ಜಗತ್ತಿನಲ್ಲೇ ಅತ್ಯಂತ ಭಾವುಕರಾಗಿರುತ್ತಾರೆ. ಆದರೆ ಅವರ ಭಾವನೆಗಳಿಗೆ ಸ್ಪಂದಿಸುವುದು ಹಾಗಿರಲಿ, ಅದರ ಬದಲಿಗೆ ವ್ಯಂಗ್ಯವಾಡುವುದಾಗಲಿ, ಕಟಕಿಯಾಡುವುದಾಗಲಿ ಮಾಡಿದಾಗ ಅವರು ನಿಜಕ್ಕೂ ಘಾಸಿಗೊಳ್ಳುತ್ತಾರೆ.

Zodiac sign: ಈ ಮೂರು ರಾಶಿಯ ಜನ ಭಾವನಾತ್ಮಕ ಜೀವಿಗಳು! ಯಾರವರು ತಿಳಿಯಿರಿ
ಈ 3 ರಾಶಿಯ ಜನ ಭಾವನಾತ್ಮಕ ಜೀವಿಗಳು! ಯಾರವರು ತಿಳಿಯಿರಿ
TV9 Web
| Updated By: ಸಾಧು ಶ್ರೀನಾಥ್​|

Updated on: Nov 10, 2021 | 7:36 AM

Share

ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ 12 ರಾಶಿಗಳಲ್ಲಿಯೂ ಒಂದು ಮತ್ತೊಂದಕ್ಕಿಂತ ಭಿನ್ನವಾಗಿರುತ್ತದೆ. ತನ್ನದೇ ಆದ ವೈಶಿಷ್ಯತೆ ಹೊಂದಿರುತ್ತದೆ. ಜಾತಕದ ಪ್ರಕಾರ ಬಂದಿರುವ ರಾಶಿಗೆ ಅನುಗುಣವಾಗಿ ಅವರವರ ಗುಣ ಸ್ವಭಾವಗಳು ರೂಪುಗೊಂಡಿರುತ್ತವೆ. ಭಾವನಾ ಜೀವಿಗಳು ದುರ್ಬಲರು ಅಥವಾ ನ್ಯೂನತೆಯುಳ್ಳವರು ಅಲ್ಲ. ಅವರ ಹೃದಯ ಸ್ವಚ್ಛವಾಗಿರುತ್ತದೆ. ಭಾನವಾತ್ಮಕವಾಗಿ ಅಳುವುದು ಅವರು ಅನುಸರಿಸುವ ಒಂದು ವಿಧಾನ. ಅದರಿಂದ ಎದುರಿಗಿರುವ ವ್ಯಕ್ತಿಗೆ ಬಾಧೆ ಕಲ್ಪಿಸುವುದಲ್ಲ.

ನೀವು ಯಾವಾಗಲಾದರೂ ಕೋಪದಿಂದ ಕಣ್ಣೀರು ಹಾಕಿದ್ದೀರಾ? ಬಳಿಕ ಆ ಅಳುವಿನ ಬಗ್ಗೆ ನಿಮ್ಮಲ್ಲಿ ತಪ್ಪು ಭಾವನೆ ಮೂಡಿತಾ? ಜನರಿಂದ ನೀವು ಸಹಾನುಭೂತಿ ಗಿಟ್ಟಿಸಲು ಹಾಗೆ ಕಣ್ಣೀರು ಹಾಕಿದಿರೀ ಅಂತ ಅನ್ನಿಸಿತಾ? ಇದಕ್ಕೆಲ್ಲ ಉತ್ತರ ಹೌದು ಅಂತಾದರೆ ನೀವು ಭಾವುಕ ಜೀವಿಯೇ ಸರಿ. ವಾಸ್ತವವಾಗಿ ಭಾವನಾಜೀವಿಯೂ ಧೈರ್ಯಶಾಲಿಯೇ. ಆದರೆ ತಮ್ಮ ಧೈರ್ಯಶಾಲಿ ಅಂತಾ ತೋರಿಸಿಕೊಳ್ಳುವುದಕ್ಕಾಗಿ ತಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಯವರು (zodiac sign) ತುಂಬಾ ಭಾವುಕ ಜೀವಿಗಳು. ಅವರು ಯಾರು, ತಿಳಿಯೋಣ ಬನ್ನೀ

ಸಿಂಹ ರಾಶಿ (Leo): ಸಿಂಹ ರಾಶಿಯವರು ಹೆಮ್ಮೆಯ, ಕಟ್ಟುನಿಟ್ಟಾದ, ಪರಿಪೂರ್ಣತಾವಾದಿಗಳಂತೆ ಕಾಣುತ್ತಾರೆ. ಆದರೆ ಅವರಲ್ಲಿ ಮತ್ತೊಂದು ಸ್ವಭಾವವೂ ಇರುತ್ತದೆ. ಅವರು ಜಗತ್ತಿನಲ್ಲೇ ಅತ್ಯಂತ ಭಾವುಕರಾಗಿರುತ್ತಾರೆ. ಅವರು ಬೇರೊಬ್ಬರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದಿಲ್ಲ. ಆದರೆ ಅವರ ಭಾವನೆಗಳಿಗೆ ಸ್ಪಂದಿಸುವುದು ಹಾಗಿರಲಿ, ಅದರ ಬದಲಿಗೆ ವ್ಯಂಗ್ಯವಾಡುವುದಾಗಲಿ, ಕಟಕಿಯಾಡುವುದಾಗಲಿ ಮಾಡಿದಾಗ ಅವರು ನಿಜಕ್ಕೂ ಘಾಸಿಗೊಳ್ಳುತ್ತಾರೆ.

ಕುಂಭ ರಾಶಿ (Aquarius): ಕುಂಭ ರಾಶಿಯ ಜನ ಕೋಮಲ ಮನಸಿನವರು. ಭಾವನಾಜೀವಿಗಳು. ಹಾಗಾಗಿ ಸ್ವಲ್ಪಮಟ್ಟಿಗೆ ದುರ್ಬಲರಾಗಿರುತ್ತಾರೆ. ಆದರೆ ಇವರನ್ನು ಮಧುರ ಮಾತುಗಳಿಂದ ಮತ್ತು ಮಧುರ ಕೆಲಸಗಳಿಂದ ಗೆಲ್ಲಬಹುದು. ಇವರು ಸುಲಭವಾಗಿ ಜನರನ್ನುನಂಬಿ ಬಿಡುತ್ತಾರೆ. ಇದೆಲ್ಲದರ ಪರಿಣಾಮ ನಿರಾಶೆಗೊಳಗಾಗುತ್ತಾರೆ. ಈ ರಾಶಿಯವರು ಮನಃಪೂರ್ಣವಾಗಿ, ಏಕಾಂತದಲ್ಲಿ ಅಳುತ್ತಾರೆ. ಇವರ ಆಕರ್ಷಕ ವ್ಯಕ್ತಿತ್ವ ಮತ್ತು ಸೂಜಿಗಲ್ಲಿನಂತಹ ಸೆಳವನ್ನು ಹೊಂದಿರುತ್ತಾರೆ.

ಮೀನ ರಾಶಿ (Pisces): ಮೀನ ರಾಶಿಯವರು ಬಾಹ್ಯವಾಗಿ ತುಂಬಾ ಬಲಾಢ್ಯರು ಎಂಬಂತೆ ತೋರ್ಪಡಿಸಿಕೊಳ್ಳುತ್ತಾರೆ. ಇವರು ತಮ್ಮ ಸುತ್ತಮುತ್ತಲ ಆಗುಹೋಗುಗಳ ಬಗ್ಗೆ ಅಸಡ್ಡೆ ಹೊಂದಿರುತ್ತಾರೆ. ಆದರೆ ಆಳದಲ್ಲಿ ಭಾವುಕ ಲೋಕದಲ್ಲಿ ಎಚ್ಚರವಾಗಿರುತ್ತಾರೆ. ಇವರು ಚಿಕ್ಕ ಚಿಕ್ಕ ವಿಷಯಗಳಿಂದ ಪ್ರಭಾವಿತರಾಗುತ್ತಾರೆ. ಆದರೆ ಆಳದಲ್ಲಿ ಅವರು ತಮಗಾಗಿರುವ ಯಾವುದೇ ಗಾಯವನ್ನು ಹೊರಹಾಕುವುದಿಲ್ಲ. ಅವರ ಬುದ್ಧಿಶಕ್ತಿಯೇ ಅವರ ಬಲಾಢ್ಯ ಶಸ್ತ್ರ. ತಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವುದರಲ್ಲಿ ನಿಷ್ಣಾತರು. ಒಂದು ವೇಳೆ ಮೀನ ರಾಶಿಯ ಜಾತಕದವರ ಭಾವನಾತ್ಮಕತೆಯನ್ನು ನೋಡಬೇಕು ಅಂತಾದರೆ ಮೊದಲು ನೀವು ಅದಕ್ಕಾಗಿ ಸಾಕಷ್ಟು ಶ್ರಮಪಡಬೇಕಾಗುತ್ತದೆ. ಏಕೆಂದರೆ ಅವರು ಅಷ್ಟು ಸುಲಭವಾಗಿ ಯಾರ ಬಳಿಯೂ ತಮ್ಮ ಭಾವನೆಗಳನ್ನು ಹೊರಹಾಕುವುದಿಲ್ಲ.

(these three zodiac signs people are emotional know how in kannada)

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು