AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tuesday Remedies: ದುಷ್ಟ ದೃಷ್ಟಿಯಿಂದ ತಪ್ಪಿಸಲು ಮಂಗಳವಾರ ಈ 4 ಸರಳ ಪರಿಹಾರಗಳನ್ನು ಮಾಡಿ!

ಮಂಗಳವಾರವು ಆಂಜನೇಯ ಸ್ವಾಮಿಗೆ ಸಮರ್ಪಿತವಾದ ದಿನ. ಆ ದಿನ ದುಷ್ಟ ದೃಷ್ಟಿ ನಿವಾರಣೆಗಾಗಿ ಕರ್ಪೂರ, ಉಪ್ಪು-ಸಾಸಿವೆ, ಲವಂಗದಿಂದ ಕೆಲವು ಪರಿಹಾರಗಳನ್ನು ಮಾಡಬಹುದು. ಹನುಮಂತನ ಪೂಜೆ, ಸಿಂಧೂರ ಅರ್ಪಣೆ, ಹನುಮಾನ್ ಚಾಲೀಸಾ ಪಾರಾಯಣ ಮುಂತಾದವು ದುಷ್ಟ ಶಕ್ತಿಯಿಂದ ರಕ್ಷಣೆ ನೀಡುತ್ತವೆ ಎಂದು ನಂಬಲಾಗಿದೆ. ಇಲ್ಲಿ ಮಂಗಳವಾರದಂದು ಮಾಡಬಹುದಾದ ಪರಿಹಾರಗಳ ಬಗ್ಗೆ ವಿವರಿಸಲಾಗಿದೆ

Tuesday Remedies: ದುಷ್ಟ ದೃಷ್ಟಿಯಿಂದ ತಪ್ಪಿಸಲು ಮಂಗಳವಾರ ಈ 4 ಸರಳ ಪರಿಹಾರಗಳನ್ನು ಮಾಡಿ!
Hanuman Puja
ಅಕ್ಷತಾ ವರ್ಕಾಡಿ
|

Updated on:Jul 01, 2025 | 10:28 AM

Share

ಮಂಗಳವಾರವು ಸಂಕಟಮೋಚಕ ಆಂಜನೇಯ ಸ್ವಾಮಿಗೆ ಸಮರ್ಪಿತವಾದ ದಿನ. ಸಂಕಟಮೋಚಕ ಅಂದರೆ ಸಂಕಷ್ಟಗಳನ್ನು ಪರಿಹರಿಸುವವನು ಅಥವಾ ಕಷ್ಟಗಳನ್ನು ನಿವಾರಿಸುವವನು ಎಂದರ್ಥ. ದುಷ್ಟ ಕಣ್ಣಿನಿಂದ ದೂರವಿರಲು ಮಂಗಳವಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಶಾಸ್ತ್ರಗಳಲ್ಲಿ ಹೇಳುವಂತೆ ಒಬ್ಬ ವ್ಯಕ್ತಿಯ ಮೇಲೆ ದುಷ್ಟ ಶಕ್ತಿ ಬಿದ್ದಾಗ ಅದರ ಹಲವು ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ, ಉದಾಹರಣೆಗೆ ವ್ಯಕ್ತಿಯು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸುತ್ತಾನೆ. ಅಥವಾ ಹೆಚ್ಚು ಮಾನಸಿಕ ಒತ್ತಡವನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಆದ್ದರಿಂದ ದುಷ್ಟ ಶಕ್ತಿಯಿಂದ ನೀವು ಮುಕ್ತಿ ಪಡೆಯಬೇಕೆಂದರೆ ಮಂಗಳವಾರದಂದು ಈ ಕೆಲವು ಪರಿಹಾರಗಳನ್ನು ಮಾಡುವುದು ಅಗತ್ಯ.

ಕರ್ಪೂರದಿಂದ ಪರಿಹಾರ:

ಮಂಗಳವಾರದಂದು ನಿಮ್ಮ ಮನೆಯಲ್ಲಿ ಕರ್ಪೂರವನ್ನು ಉರಿಸುವುದದು ತುಂಬಾ ಶುಭ. ಕರ್ಪೂರವನ್ನು ಉರಿಸುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಲ್ಲದೆ, ದುಷ್ಟ ಕಣ್ಣಿನಿಂದ ಬಳಲುತ್ತಿರುವ ವ್ಯಕ್ತಿಯ ತಲೆಯ ಸುತ್ತ 5 ಕರ್ಪೂರದ ತುಂಡುಗಳನ್ನು ವಿರುದ್ಧ ದಿಕ್ಕಿನಲ್ಲಿ 7 ಬಾರಿ ತಿರುಗಿಸಿ ನಂತರ ಅವುಗಳನ್ನು ಮಣ್ಣಿನ ಪಾತ್ರೆಯಲ್ಲಿ ಸುಟ್ಟುಹಾಕಿ.

ಹನುಮಂತನ ಪೂಜೆ:

ಮಂಗಳವಾರ ಸಂಕಟ ಮೋಚನ ಹನುಮಂತನನ್ನು ಪೂಜಿಸಿ. ಆಂಜನೇಯನಿಗೆ ಸಿಂಧೂರ ಅರ್ಪಿಸಿ ಮತ್ತು ಹನುಮಾನ್ ಚಾಲೀಸಾ ಪಠಿಸಿ. ಹೀಗೆ ಮಾಡುವುದರಿಂದ ದುಷ್ಟ ಕಣ್ಣಿನಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿನ, ದೇವಾಲಯದ ಹನುಮಂತನ ಪಾದದ ಹೆಬ್ಬೆರಳಿನಿಂದ ಸಿಂಧೂರವನ್ನು ತೆಗೆದುಕೊಂಡು ದುಷ್ಟ ಕಣ್ಣಿನಿಂದ ಬಳಲುತ್ತಿರುವ ವ್ಯಕ್ತಿಯ ಹಣೆಯ ಮೇಲೆ ಹಚ್ಚಿ. ಹೀಗೆ ಮಾಡುವುದರಿಂದ, ಹನುಮಾಂತನ ಆಶೀರ್ವಾದ ಸದಾ ವ್ಯಕ್ತಿಯ ಮೇಲೆ ಇರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ
Image
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
Image
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
Image
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
Image
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಇದನ್ನೂ ಓದಿ: ಮನೆಯಲ್ಲಿ ಮನಿ ಪ್ಲಾಂಟ್ ಈ ದಿಕ್ಕಿನಲ್ಲಿಡಿ; ಕೆಲವೇ ದಿನಗಳಲ್ಲಿ ಬದಲಾವಣೆ ಕಾಣುವಿರಿ

ಉಪ್ಪು ಮತ್ತು ಸಾಸಿವೆಯಿಂದ ಪರಿಹಾರ:

ಒಂದು ಹಿಡಿ ಉಪ್ಪು ಮತ್ತು ಸ್ವಲ್ಪ ಸಾಸಿವೆ ಕಾಳುಗಳನ್ನು ತೆಗೆದುಕೊಂಡು, ಯಾರ ಮೇಲೆ ದೃಷ್ಟಿ ಬಿದ್ದಿದೆಯೋ ಅವರ ಮೇಲೆ 7 ಬಾರಿ ಸುತ್ತಿಸಿ, ಮನೆಯಿಂದ ದೂರ ಎಸೆಯಿರಿ. ಮಂಗಳವಾರ ಈ ಪರಿಹಾರವನ್ನು ಮಾಡುವುದರಿಂದ, ದುಷ್ಟ ಕಣ್ಣಿನಿಂದ ರಕ್ಷಿಸಿಕೊಳ್ಳಬಹುದು.

ಲವಂಗದಿಂದ ಪರಿಹಾರ:

ಮಂಗಳವಾರ ಹನುಮಂತನನ್ನು ಪೂಜಿಸುವಾಗ, ದೀಪದಲ್ಲಿ ಎರಡು ಲವಂಗವನ್ನು ಇಟ್ಟು ಬೆಳಗಿಸಿ. ಹೀಗೆ ಮಾಡುವುದರಿಂದ, ಮನೆಯಲ್ಲಿ ಹರಡಿರುವ ನಕಾರಾತ್ಮಕತೆಯು ನಾಶವಾಗುತ್ತದೆ ಮತ್ತು ಮನೆಯಲ್ಲಿ ಸದಾ ಸಂತೋಷದ ವಾತಾವರಣ ನೆಲೆಸಿರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Tue, 1 July 25