ಕಾರ್ತಿಕ ಮಾಸದ ಅಧಿಪತಿ ಪರಮೇಶ್ವರ, ಹಾಗಾದ್ರೆ ಕಾರ್ತಿಕ ನಕ್ಷತ್ರದ ಮಹತ್ವವೇನು?

ಮಾಸಗಳಲ್ಲೇ ಕಾರ್ತಿಕ ಮಾಸ ಶ್ರೇಷ್ಠ ಮಾಸ. ಅಂಧಕಾರವನ್ನು ದೂರ ಮಾಡೋ ಮಾಸ.. ಕಾರ್ತಿಕ ಮಾಸದಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ. ಭಗವಂತನ ಪ್ರೀತ್ಯರ್ಥವಾಗಿ ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ದೀಪ ಬೆಳಗಬೇಕು.

ಕಾರ್ತಿಕ ಮಾಸದ ಅಧಿಪತಿ ಪರಮೇಶ್ವರ, ಹಾಗಾದ್ರೆ ಕಾರ್ತಿಕ ನಕ್ಷತ್ರದ ಮಹತ್ವವೇನು?

ಮಾಸಗಳಲ್ಲೇ ಕಾರ್ತಿಕ ಮಾಸ ಶ್ರೇಷ್ಠ ಮಾಸ. ಅಂಧಕಾರವನ್ನು ದೂರ ಮಾಡೋ ಮಾಸ.. ಕಾರ್ತಿಕ ಮಾಸದಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ. ಭಗವಂತನ ಪ್ರೀತ್ಯರ್ಥವಾಗಿ ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ದೀಪ ಬೆಳಗಬೇಕು. ಕಾರ್ತಿಕ ಮಾಸದಲ್ಲಿ ದೀಪಾರಾಧನೆಯಿಂದ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಕಾರ್ತಿಕ ಮಾಸದ ಹುಣ್ಣಿಮೆಯ ದಿನ ದೀಪಾರಾಧನೆ ಅತ್ಯಂತ ಶ್ರೇಷ್ಠ. ಹೀಗಾಗೇ ಪ್ರಸಿದ್ಧ ದೇಗುಲಗಳಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತೆ.

ಕಾರ್ತಿಕ ಮಾಸದ ಹಿನ್ನೆಲೆಯನ್ನು ನೋಡೋದಾದ್ರೆ, ಈ ಮಾಸದ ಹೆಸರು ಕಾರ್ತಿಕ್ ಎಂಬ ಪದದಿಂದ ಬಂದಿದೆ ಎನ್ನಲಾಗುತ್ತೆ. ಕಾರ್ತಿಕ್ ಅನ್ನೋದು ಒಂದು ನಕ್ಷತ್ರದ ಹೆಸರು. ಈ ತಿಂಗಳಲ್ಲಿ ಕಾರ್ತಿಕ್ ಎನ್ನುವ ನಕ್ಷತ್ರ ಚಂದ್ರನಿಗೆ ಬಹಳ ಸಮೀಪ ಬರುತ್ತೆ. ಪರಿಣಾಮ ಈ ಮಾಸದಲ್ಲಿ ಹುಣ್ಣಿಮೆ ಚಂದ್ರ ಕಾರ್ತಿಕ ನಕ್ಷತ್ರದಲ್ಲಿ ಸಂಚರಿಸ್ತಾನೆ. ಹೀಗಾಗೇ ಕಾರ್ತಿಕ್ ಅನ್ನೋ ನಕ್ಷತ್ರದ ಹೆಸರನ್ನು ಈ ಮಾಸಕ್ಕೆ ಇಡಲಾಗಿದೆ.

ಪ್ರತಿ ಮಾಸಕ್ಕೂ ಒಬ್ಬ ನಿಯಾಮಕ ದೇವರಿರ್ತಾನೆ. ಆ ದೇವತಾರಾಧನೆಯಿಂದ ಅತ್ಯಂತ ಒಳಿತಾಗುತ್ತೆ ಎನ್ನಲಾಗುತ್ತೆ. ಕಾರ್ತಿಕ ಮಾಸದ ಅಧಿಪತಿ ಪರಮೇಶ್ವರ. ಈ ಮಾಸದಲ್ಲಿ ಶಿವಾರಾಧನೆಗೆ ವಿಶೇಷ ಮಹತ್ವ ಇದೆ. ಇನ್ನು ಕಾರ್ತಿಕ ಮಾಸ ಅಂದ್ರೆ ಆಧ್ಯಾತ್ಮ ಸಾಧಕರ ಮಾಸ. ಈ ಮಾಸದಲ್ಲಿ ಕೈಗೊಳ್ಳೋ ಪೂಜೆ, ವ್ರತಗಳಿಂದ ಹೆಚ್ಚು ಫಲ ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ. ಅಲ್ಲದೇ ಕಾರ್ತಿಕ ಮಾಸದಲ್ಲಿ ಬರೋ ಕೆಲ ವಿಶೇಷ ದಿನಗಳನ್ನು ಆಚರಿಸೋದ್ರಿಂದ ನಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ.

ಕಾರ್ತಿಕ ಮಾಸದ ಆಚರಣೆಗಳು * ಕಾರ್ತಿಕ ಮಾಸದ ಬಿದಿಗೆ- ಭಗಿನಿ ಹಸ್ತ ಭೋಜನ * ಕಾರ್ತಿಕ ಶುಕ್ಲ ಪಂಚಮಿ- ಗರುಡ ಪಂಚಮಿ * ಕಾರ್ತಿಕ ಶುಕ್ಲ ಸಪ್ತಮಿ- ಯಜ್ಞಾವಲ್ಕ್ಯ ಜಯಂತಿ * ಕಾರ್ತಿಕ ಶುಕ್ಲ ಪಕ್ಷದ ದ್ವಾದಶಿ- ಉತ್ಥಾನ ದ್ವಾದಶಿ ಅಂದ್ರೆ ತುಳಸಿ ಹಬ್ಬ * ಕಾರ್ತಿಕ ಶುಕ್ಲ ಪಕ್ಷದ ಹುಣ್ಣಿಮೆ- ಚಂದ್ರ ಜಯಂತಿ * ಕಾರ್ತಿಕ ಮಾಸದ ಸೋಮವಾರಗಳು ಅತ್ಯಂತ ವಿಶೇಷ * ಕಾರ್ತಿಕ ಮಾಸದಲ್ಲಿ ನದಿ ಸ್ನಾನಕ್ಕೆ ವಿಶೇಷ ಪ್ರಾಮುಖ್ಯತೆ * ಕಾರ್ತಿಕ ಮಾಸದಲ್ಲಿ ಧಾತ್ರಿಹೋಮದಿಂದ ವಿಶೇಷ ಫಲಗಳು ಪ್ರಾಪ್ತಿ * ಬೆಂಗಳೂರಿನಲ್ಲಿರುವ ದೊಡ್ಡ ಬಸವನಿಗೆ ಕಡಲೆಕಾಯಿ ಪರಿಷೆ

ಕಾರ್ತಿಕ ಮಾಸವನ್ನು ಅರ್ಥಪೂರ್ಣವಾಗಿ ಕಳೀಬೇಕು ಅಂದ್ರೆ ಕೈಲಾಸವಾಸಿ ಭೋಲೇನಾಥನನ್ನು ಈ ಮಾಸದಲ್ಲಿ ಶ್ರದ್ಧಾ ಭಕ್ತಿಯಿಂದ ಆರಾಧಿಸಬೇಕು. ಈ ಮಾಸದಲ್ಲಿ ಶಿವ ಕ್ಷೇತ್ರಗಳಿಗೆ ಭೇಟಿ ನೀಡೋದ್ರಿಂದ ಪುಣ್ಯಪ್ರಾಪ್ತಿಯಾಗುತ್ತೆ ಅಂತಾ ಶಿವಪುರಾಣದಲ್ಲಿ ಉಲ್ಲೇಖವಿದೆ. ಕಾರ್ತಿಕ ಮಾಸದಲ್ಲಿ ಕೆಲವೊಂದು ಆಚರಣೆಗಳು ಮನುಷ್ಯ ಮತ್ತು ದೇವರ ನಡುವಿನ ಸೇತುವೆಯಷ್ಟೇ ಅಲ್ಲದೇ, ಅದರಲ್ಲಿ ಆರೋಗ್ಯಕ್ಕೆ ಪೂರಕವಾಗಿರೋ ವೈಜ್ಞಾನಿಕ ಅಂಶಗಳಿವೆ.

ಹೀಗಾಗೇ ನಮ್ಮ ಶಾಸ್ತ್ರಗಳು ಮತ್ತು ನಮ್ಮ ಪೂರ್ವಿಕರು ಋತುಗಳಿಗೆ, ಮಾಸಗಳಿಗೆ ಅನುಗುಣವಾಗಿ ಕೆಲವು ಪೂಜೆ-ವ್ರತಗಳನ್ನು ಪರಿಚಯಿಸಿದ್ದಾರೆ. ಅವುಗಳನ್ನು ಪಾಲಿಸೋದ್ರಿಂದ ಅನೇಕ ಫಲಗಳನ್ನು ಪಡೀಬಹುದು ಎಂಬ ನಂಬಿಕೆ ಇದೆ. ವಿಶೇಷ ಮಹತ್ವ ಇರುವ ಕಾರ್ತಿಕ ಮಾಸದ ಆಚರಣೆಗಳನ್ನು ನಾವೆಲ್ಲಾ ಅರ್ಥಪೂರ್ಣವಾಗಿ ಆಚರಿಸೋಣ.

Published On - 9:40 am, Mon, 30 November 20

Click on your DTH Provider to Add TV9 Kannada