AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Shastra: ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳನ್ನು ಇಡಬಾರದು

ಮನೆ ಕಟ್ಟುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದರಲ್ಲಿಯೂ ವಾಸ್ತು ಪ್ರಕಾರ ಕಟ್ಟಿ ಮನೆಯನ್ನು ನಕಾರತ್ಮಕ ಶಕ್ತಿಗಳಿಂದ ರಕ್ಷಿಸಲು ನಾವು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ನಾವು ಇಷ್ಟ ಪಟ್ಟು ತರುವ ಕೆಲವು ವಸ್ತುಗಳು ಅಥವಾ ನಾವು ಅರಿಯದೆಯೇ ಮಾಡುವ ಕೆಲಸಗಳು ನಮಗೆ ತೊಂದರೆ ತರುವ ಸಾಧ್ಯತೆ ಇರುತ್ತದೆ. ಇಂತಹ ವಿಷಯಗಳನ್ನು ಕೆಲವರು ನಂಬುವುದಿಲ್ಲ ಆದರೆ ಇದು ನಿರ್ಲಕ್ಷಿಸುವಂತಹ ವಿಷಯವಲ್ಲ. ಹಾಗಾದರೆ ಮನೆಯಲ್ಲಿ ಇರಬಾರದ ವಸ್ತುಗಳು ಯಾವವು? ಇದ್ದರೂ ಅವುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

Vastu Shastra: ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳನ್ನು ಇಡಬಾರದು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 03, 2025 | 11:58 AM

ಮನೆ ಕಟ್ಟುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದರಲ್ಲಿಯೂ ವಾಸ್ತು ಪ್ರಕಾರ ಕಟ್ಟಿ ಅದನ್ನು ನಕಾರತ್ಮಕ ಶಕ್ತಿಗಳಿಂದ ರಕ್ಷಿಸಲು ನಾವು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಇದೆಲ್ಲದರ ಹೊರತಾಗಿ ನಾವು ಇಷ್ಟ ಪಟ್ಟು ತರುವ ಕೆಲವು ವಸ್ತುಗಳು ಅಥವಾ ಅರಿಯದೆಯೇ ಮಾಡುವ ಕೆಲಸಗಳು ನಮಗೆ ತೊಂದರೆ ತರುವ ಸಾಧ್ಯತೆ ಇರುತ್ತದೆ. ಅದರಲ್ಲಿಯೂ ನಾವು ವಿಶೇಷವಾಗಿ ಮನೆಗೆ ತರುವ ವಸ್ತುಗಳು ಅಥವಾ ಅದನ್ನು ಇಟ್ಟಿರುವಂತಹ ಜಾಗಗಳಿಂದ ಮನೆಯಲ್ಲಿ ವಾಸಿಸುವವರ ಆರೋಗ್ಯ ಹದಗೆಡಬಹುದು, ನಾನಾ ರೀತಿಯ ತೊಂದರೆಗಳಿಗೆ ಕಾರಣವಾಗಬಹುದು ಕೆಲವೊಮ್ಮೆ ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಬಹುದು. ಇಂತಹ ವಿಷಯಗಳನ್ನು ಕೆಲವರು ನಂಬುವುದಿಲ್ಲ ಆದರೆ ಇದು ನಿರ್ಲಕ್ಷಿಸುವಂತಹ ವಿಷಯವಲ್ಲ. ಹಾಗಾದರೆ ಮನೆಯಲ್ಲಿ ಇರಬಾರದ ವಸ್ತುಗಳು ಯಾವವು? ಇದ್ದರೂ ಅವುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಗಡಿಯಾರಗಳು

ಮನೆಯಲ್ಲಿ ಕೆಲಸ ಮಾಡದ ಅಂದರೆ ಸರಿಯಾಗಿ ಸಮಯ ತೋರಿಸದ ಗಡಿಯಾರಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಕುಟುಂಬ ಸದಸ್ಯರಲ್ಲಿ ಜಗಳಕ್ಕೂ ಕಾರಣವಾಗಬಹುದು.

ಯುದ್ಧದ ಚಿತ್ರಗಳು

ನಿಮ್ಮ ಮನೆಯ ಯಾವುದಾದರೂ ಕೋಣೆಯಲ್ಲಿ ಮಹಾಭಾರತ ಅಥವಾ ರಾಮಾಯಣದ ಯುದ್ಧದ ದೃಶ್ಯಗಳಿರುವಂತಹ ಫೋಟೋ ಇದ್ದರೆ, ಅದನ್ನು ಮೊದಲು ತೆಗೆಯಿರಿ ಇದರಿಂದ ಮನೆಯಲ್ಲಿ ಜಗಳಗಳು ಹೆಚ್ಚಾಗುತ್ತವೆ. ಸಂಬಂಧಗಳು ಸಣ್ಣ ಸಣ್ಣ ವಿಷಯಕ್ಕೆ ಮುರಿದು ಬೀಳುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ
Image
ಅಡುಗೆ ಮನೆಯಲ್ಲಿ ಈ ವಸ್ತು ಖಾಲಿಯಾಗುವುದು ದಾರಿದ್ರ್ಯ ಸಂಕೇತ!
Image
ಮನೆಯಲ್ಲಿ ಗೂಬೆಯ ಪ್ರತಿಮೆ ಇಡಬಹುದೇ? ಇಡುವುದಾದರೆ ಈ ವಿಚಾರ ಗಮನಿಸಿ
Image
ವಾಸ್ತು ಪ್ರಕಾರ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳಿವು
Image
ಮನೆಯಲ್ಲಿ 'ಕಾಮಧೇನು ವಿಗ್ರಹ' ಇಡುವುದು ಉತ್ತಮವೇ?

ಅಕ್ವೇರಿಯಂ

ಮನೆಯಲ್ಲಿ ಅಕ್ವೇರಿಯಂ ಇರುವುದು ಒಳ್ಳೆಯದು. ಆದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ನಕಾರಾತ್ಮಕ ಫಲಿತಾಂಶಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಅಕ್ವೇರಿಯಂ ಅನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಇಡಬಾರದು. ಅದನ್ನು ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಇರಿಸುವುದರಿಂದ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಬಹುದು.

ದೇವತೆಗಳ ವಿಗ್ರಹಗಳು

ದೊಡ್ಡ ದೊಡ್ಡ ದೇವತೆಗಳ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು. ಇವು ನಕಾರಾತ್ಮಕ ಶಕ್ತಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಶತ್ರುಗಳಿಂದ ಮುಕ್ತಿ ಪಡೆಯಲು ಸ್ಕಂದ ಷಷ್ಠಿಯಂದು ಕಾರ್ತಿಕೇಯನನ್ನು ಈ ರೀತಿ ಪೂಜಿಸಿ

ಮನಿ ಪ್ಲಾಂಟ್

ಮನಿ ಪ್ಲಾಂಟ್ ಮನೆಯ ಮುಂದೆ ಇದ್ದರೆ ಒಳ್ಳೆಯದು ಇದನ್ನು ಮನೆಯ ಬೇರೆ ಭಾಗದಲ್ಲಿ ಇಡಬಾರದು. ಇದನ್ನು ಬಳ್ಳಿಯ ರೂಪದಲ್ಲಿ ಮನೆಯ ಮುಂದೆ ಬೆಳೆಯಲು ಬಿಡುವುದರಿಂದ ದುಷ್ಟ ಶಕ್ತಿಗಳ ಪ್ರಭಾವ ಇರುವುದಿಲ್ಲ ಎಂಬ ನಂಬಿಕೆ ಇದೆ. ಅದಲ್ಲದೆ ಇದು ಆರ್ಥಿಕ ಸ್ಥಿರತೆಯನ್ನು ತರುತ್ತದೆ ಎಂದು ನಂಬಲಾಗಿದೆ.

ಕತ್ತಲೆ

ಮನೆಯಲ್ಲಿ ಬೆಳಕು ಪ್ರಕಾಶಮಾನವಾಗಿರಬೇಕು. ಕತ್ತಲೆ ತುಂಬಾ ಹೆಚ್ಚಿದ್ದರೆ ಅದು ಅಶುಭ ಪರಿಣಾಮಗಳನ್ನು ಉಂಟುಮಾಡಬಹುದು.

ಸಾಮಾನ್ಯವಾಗಿ ಮನೆಯ ಮುಂದೆ ಆಸ್ಪತ್ರೆಗಳು, ಮಾಂಸಾಹಾರಿ ಅಂಗಡಿಗಳು ಮತ್ತು ಕಬ್ಬಿಣ ತಯಾರಿಸುವ ಅಂಗಡಿಗಳು ಇದ್ದರೆ, ಮನೆಯಲ್ಲಿ ಶಾಂತಿ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಇದನ್ನು ನಂಬುವುದು ಬಿಡುವುದು ಅವರವರ ನಂಬಿಕೆ ಬಿಟ್ಟದ್ದು.

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?