Divine cleanliness: ತಾನು ಪ್ರಗತಿಪರ, ವಿಜ್ಞಾನವಾದಿ ಎಂದು ನಿರೂಪಿಸಲು ‘ಮಡಿ’ ಆಚರಣೆ ಬಿಡಬೇಕೇ, ಹೀಗೇಕೆ?
Holy launder: ಕಷ್ಟಪಟ್ಟು ದುಡಿದು ಗಳಿಸಿದ ಹಣದಿಂದ ಅನ್ನ-ತೊವ್ವೆಯ ನೈವೇದ್ಯವನ್ನು, ರೊಟ್ಟಿ-ಪಲ್ಯದ ನೈವೇದ್ಯವನ್ನೂ ಭಗವಂತನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ಅಯೋಗ್ಯ ಮಾರ್ಗದಿಂದ ಗಳಿಸಿದ ಸಂಪತ್ತಿನಿಂದ ಅನೇಕ ಕುಟುಂಬಗಳು ನಾಶಗೊಂಡಿವೆ. ಮುಂದಿನ ಪೀಳಿಗೆ ವಿಕೃತ ಅಥವಾ ಅಂಗವಿಕಲ ರೂಪದಲ್ಲಿ ಜನಿಸಿದ ಅನೇಕ ಉದಾಹರಣೆಗಳು ನಮ್ಮೆದುರಿಗೇ ಇವೆಯಲ್ಲವಾ!
ಸಮಾಜದಲ್ಲಿ ಬಹಳಷ್ಟು ಸಲ ‘ಮಡಿ’ ಎಂಬ ದೈವತ್ವದ ಆಚರಣೆ ಬಗ್ಗೆ ತೀವ್ರ ಚರ್ಚೆಗಳನ್ನು ಮಾಡಲಾಗುತ್ತದೆ. ಪ್ರತಿಯೊಬ್ಬರೂ ನಾನು ಹೇಳಿದ್ದೇ ಯೋಗ್ಯ ಎಂಬ ಆವಿರ್ಭಾವದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ (Spiritual). ಮಡಿ ಪಾಲಿಸುವವರಿಗೆ (holy launder) ಕೆಲವೊಮ್ಮೆ ‘ಮಲಿನ ಮಾನಸಿಕತೆ’ಯವರು ಎಂದು ಟೀಕಿಸುವ ಪ್ರಯತ್ನವನ್ನೂ ಕೆಲವು ಜನ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ‘ಮಡಿ’ಯ ಬಗ್ಗೆ ಇಲ್ಲೊಂದು ವಿಚಾರಧಾರೆ ಇದೆ ನೋಡಿ (Cleanliness is next to Godliness).
ಮಡಿಯ ನಿಯಮಗಳನ್ನು ಏಕೆ ಪಾಲಿಸಬೇಕು ? ಪ್ರಸ್ತುತ ಕಾಲದಲ್ಲಿ ನಿತ್ಯದ ವ್ಯವಹಾರದಲ್ಲಿ ಮತ್ತು ಧಾರ್ಮಿಕ ಕೃತಿಗಳಲ್ಲಿ ‘ಶೌಚ’, ಅಂದರೆ ಶುದ್ಧತೆಯು ಹೇಗಿರಬೇಕು? ಇದರ ಬಗ್ಗೆ ಶಾಸ್ತ್ರಕಾರರು ಏನು ಹೇಳಿದ್ದಾರೆ, ಅದನ್ನು ಮೊದಲು ತಿಳಿದುಕೊಳ್ಳೋಣ. ಬಹಳಷ್ಟು ಬಾರಿ ‘ಮನಸ್ಸು ಶುದ್ಧವಾಗಿದ್ದರೆ ಅಥವಾ ಭಾವನೆ ಶುದ್ಧವಾಗಿದ್ದರೆ ಮಡಿಯನ್ನು ಏಕೆ ಮಾಡಬೇಕು?’ ಎಂಬ ಹೇಳಿಕೆಯನ್ನು ನೀಡಲಾಗುತ್ತದೆ. ‘ನಾನು ಶುದ್ಧ ಮನಸ್ಸಿನಿಂದ ಎಲ್ಲವನ್ನೂ ಮಾಡುತ್ತೇನೆ, ಹಾಗಾದರೆ ಮಡಿಯ ನಿಯಮಗಳನ್ನು ನಾನೇಕೆ ಪಾಲಿಸಬೇಕು?’ ಎಂಬ ಪ್ರಶ್ನೆಯನ್ನೂ ಕೇಳುತ್ತಾರೆ. ಇದರ ಉತ್ತರವನ್ನು ಮುಂದೆ ನೀಡಲಾಗಿದೆ. ಅದರ ನಂತರ ‘ಮಡಿಯನ್ನು ಪಾಲಿಸಬೇಕೋ ಅಥವಾ ಪಾಲಿಸಬಾರದೋ’ ಎಂಬುದನ್ನು ನೀವೇ ನಿರ್ಧರಿಸಿ.
1 ಅ. ಅಸ್ವಚ್ಛ ಕೈಗಳಿಂದ ಬಡಿಸಿದ ಆಹಾರವನ್ನು ಸೇವಿಸುವಿರೇನು?: ನಾವು ಸಂಬಂಧಿಕರ ಮನೆಗೆ ಹುಟ್ಟುಹಬ್ಬದ ನಿಮಿತ್ತ ಭೋಜನಕ್ಕಾಗಿ ಹೋದಾಗ ಅಲ್ಲಿ… ಊಟದ ಎಲೆಗಳನ್ನು ಇಟ್ಟಿರುವಾಗ, ಯಜಮಾನರಿಗೆ (ಯಾರ ಮನೆಯಲ್ಲಿ ಕಾರ್ಯವಿದೆಯೋ ಅವರು) ಮೂತ್ರವಿಸರ್ಜನೆ ಅಥವಾ ಶೌಚಕ್ಕಾಗಿ ಹೋಗಬೇಕಾಯಿತು ಮತ್ತು ಅವರು ಕೈಕಾಲುಗಳನ್ನು ತೊಳೆದುಕೊಳ್ಳದೇ ಭೋಜನದ ಸ್ಥಳಕ್ಕೆ ಬಂದು ನಮಗೆ ಊಟವನ್ನು ಬಡಿಸತೊಡಗಿದರೆ ನಡೆಯಬಹುದೇ? ಅದು ನಿಮಗೆ ಸಮ್ಮತವೇ!? (ತಿಳಿದುಕೊಳ್ಳಿ – ಇಲ್ಲಿ ಯಜಮಾನನ ಮನಸ್ಸು ಮತ್ತು ಭಾವನೆ ಇವೆರಡೂ ಶುದ್ಧವಾಗಿವೆ.) ತಾವು ಆ ಆಹಾರವನ್ನು ಆನಂದದಿಂದ ಸೇವಿಸುವಿರೇ? ‘ನೈಸರ್ಗಿಕ ವಿಧಿ ಮಾಡಿದ ನಂತರ ಕೈಕಾಲುಗಳನ್ನು ತೊಳೆಯುವುದು’, ಇದಕ್ಕೆ ಆ ಪ್ರಸಂಗದಲ್ಲಿ ‘ಮಡಿ’ ಎಂದರೆ ಅದು ಅಯೋಗ್ಯವಾದೀತೆ?, ‘ಅದು ಒಪ್ಪಿಗೆ ಇಲ್ಲದಿದ್ದರೆ ನೀವು ಅದನ್ನು ಮಾಡದಿರಬಹುದು?’, ಎಂಬುದರ ವಿಚಾರ ಮಾಡಿ ನಿರ್ಧರಿಸಬೇಕು.
1 ಆ. ಆಧುನಿಕ ವೈದ್ಯರು (ಡಾಕ್ಟರರು) ಮಾಡಬೇಕಾದ ಯೋಗ್ಯ ಸ್ವಚ್ಛತೆಯನ್ನು ಮಾಡದೇ ಶಸ್ತ್ರಚಿಕಿತ್ಸೆಯನ್ನು ಮಾಡಿದರೆ ನಿಮಗೆ ಆಗಬಹುದೇ?: ನಿಮ್ಮ ಕಣ್ಣಿನ ಪೊರೆಯ ಅಥವಾ ಇತರ ಯಾವುದಾದರೊಂದು ಚಿಕ್ಕ ಅಥವಾ ದೊಡ್ಡ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಊಹಿಸಿಕೊಳ್ಳಿ. ಶಸ್ತ್ರಚಿಕಿತ್ಸೆ ಮಾಡುವ ಆಧುನಿಕ ವೈದ್ಯರು ಹೊರಗಡೆಯಿಂದ ಬಂದು, ಹಾಗೆಯೇ ತಮಗೆ ಶಸ್ತ್ರಚಿಕಿತ್ಸೆ ಮಾಡಿದರೆ (ಸೋಂಕು ನಿರೋಧಕ ಬಟ್ಟೆ ಮತ್ತು ಉಪಕರಣಗಳನ್ನು ಬಳಸದೇ), ಅದು ನಿಮಗೆ ಒಪ್ಪಿಗೆಯೇ? (ಇಲ್ಲಿಯೂ ಆಧುನಿಕ ವೈದ್ಯರ ಭಾವನೆ ಒಳ್ಳೆಯದೇ ಇದೆ ಮತ್ತು ಮನಸ್ಸೂ ಶುದ್ಧವಿದೆ.) ಹಾಗಾದರೆ ತಾವು ವಿರೋಧ ಮಾಡದೇ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಿರೇ? ಆಧುನಿಕ ವೈದ್ಯರು ಯೋಗ್ಯ ಸ್ವಚ್ಛತೆಯನ್ನು ಪಾಲಿಸಿ ಮತ್ತು ಎಚ್ಚರಿಕೆಯನ್ನು ವಹಿಸಿ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಈ ಪ್ರಸಂಗದಲ್ಲಿ ‘ಮಡಿ’ ಎಂದರೆ ಅಯೋಗ್ಯವಾಗುವುದೇ? ಮತ್ತು ಅದು ಒಪ್ಪಿಗೆಯಿಲ್ಲವೆಂದು; ನೀವು ಆಧುನಿಕ ವೈದ್ಯರಿಗೆ ಹಾಗೆಯೇ ಚಿಕಿತ್ಸೆ ಮಾಡುವ ಅನುಮತಿ ನೀಡುವಿರೇ? ಎಂಬುದನ್ನು ವಿಚಾರಮಾಡಿ ನಿರ್ಧರಿಸಬೇಕು.
1 ಇ. ಅಡುಗೆಯನ್ನು ಮಾಡುವಾಗ ಯೋಗ್ಯ ಸ್ವಚ್ಛತೆಯನ್ನು ಪಾಲಿಸದಿದ್ದರೆ ಅದು ನಿಮಗೆ ಸಮ್ಮತವೇ?: ಅಡುಗೆ ಉತ್ತಮವಾಗಿ ಆಗಿದೆ ಮತ್ತು ಅಡುಗೆ ಮಾಡುವವರ ಉದ್ದೇಶ ‘ನೀವು ಹೊಟ್ಟೆತುಂಬ ಊಟ ಮಾಡಬೇಕು’ ಎಂಬುದಾಗಿದೆ. ಒಳ್ಳೆಯ ಮನಸ್ಸಿನಿಂದ ಅಡುಗೆಯನ್ನು ಮಾಡಿದ್ದಾರೆ. ಆದರೆ ಅದರಲ್ಲಿ ಮೇಲಿಂದ ಮೇಲೆ ಕೂದಲುಗಳು ಬರತೊಡಗಿದರೆ ತಾವೇನು ಮಾಡುವಿರಿ ? ‘ಅಡುಗೆ ಮಾಡುವವರು ಯೋಗ್ಯ ಸ್ವಚ್ಛತೆಯನ್ನು ಪಾಲಿಸಿ ಮತ್ತು ಎಚ್ಚರ ವಹಿಸಿ ಅಡುಗೆಯನ್ನು ಮಾಡುವುದು’ ಇದಕ್ಕೆ ಆ ಪ್ರಸಂಗದಲ್ಲಿನ ‘ಮಡಿ’ ಎಂದು ಹೇಳಿದರೆ ಅಯೋಗ್ಯವೆನಿಸುವುದೇ? ಮತ್ತು ಅದು ಒಪ್ಪಿಗೆಯಿಲ್ಲವೆಂದು ನೀವು ಅಡುಗೆಯಲ್ಲಿ ಕೂದಲು ಸಿಕ್ಕರೂ, ಶಾಂತ ರೀತಿಯಲ್ಲಿ ಅದನ್ನು ಸೇವಿಸುವಿರೇನು?
2. ಶಾಸ್ತ್ರಕಾರರು ಹೇಳಿದ ತ್ರಿ ವಿಧ ಶುದ್ಧಿಗಳು ಇವೇ- ಅನ್ನಶುದ್ಧಿ, ದ್ರವ್ಯಶುದ್ಧಿ ಮತ್ತು ಚಿತ್ತಶುದ್ಧಿ! ಈ ಮೂರೂ ಶುದ್ಧಿಗಳು ತುಂಬಾ ಮಹತ್ವದ್ದಾಗಿವೆ. ಇದಕ್ಕೇ ‘ಶುದ್ಧಿ’ಎಂದು ಹೇಳಲಾಗಿದೆ. ಶಾಸ್ತ್ರಕಾರರು ಮೇಲಿನ ಈ 3 ಶುದ್ಧಿಗಳನ್ನು ಜೀವಮಾನಪರ್ಯಂತ ಆಚರಣೆ ಮಾಡಿರಿ ಎಂದು ಹೇಳಿದ್ದಾರೆ.
2 ಅ. ಅನ್ನಶುದ್ಧಿ: ಅನ್ನಶುದ್ಧಿಯು ಸುಲಭವಾಗಿದೆ. ಸ್ನಾನ ಮಾಡಿ, ತಾಜಾ ನೀರನ್ನು ಉಪಯೋಗಿಸಿ, ಕೂದಲುಗಳನ್ನು ಕಟ್ಟಿಕೊಂಡು (ಬಿಟ್ಟಿರುವ ಕೂದಲು ವರ್ಜ್ಯ) ಅನ್ನಪೂರ್ಣಾ ದೇವಿಯ ಸ್ಮರಣೆ ಮಾಡಿ, ಸಿಡಿಮಿಡಿಗೊಳ್ಳದೇ (ಏನಿದು ಕಿರಿಕಿರಿ ಮುಂತಾದ ಶಬ್ದಗಳನ್ನು ಉಚ್ಚರಿಸದೇ) ನಾನು ತಯಾರಿಸಿದ ಅನ್ನದ ರುಚಿಯನ್ನು ಪ್ರತ್ಯಕ್ಷ ಭಗವಂತನು ವಾಯುರೂಪದಲ್ಲಿ ಗ್ರಹಿಸುವವನಿದ್ದಾನೆ, ನನ್ನ ಮನೆಯಲ್ಲಿನ ವ್ಯಕ್ತಿಗಳು ಈ ಆಹಾರವನ್ನು ಸೇವಿಸಲಿದ್ದಾರೆ, ಪಶುಪಕ್ಷಿಗಳಿಗೂ (ಗೋಗ್ರಾಸ, ಕಾಕಪಿಂಡ) ಇದರಲ್ಲಿನ ಒಂದು ಭಾಗವನ್ನು ನೀಡಲಿದ್ದೇನೆ ಎಂಬೆಲ್ಲಾ ಭಾವವನ್ನಿಟ್ಟುಕೊಂಡು ಶುಚಿ ವಸ್ತ್ರಗಳನ್ನು ತೊಟ್ಟುಕೊಂಡು ನಾವು ಯಾವ ಅಡುಗೆಯನ್ನು ಮಾಡುತ್ತೇವೆಯೋ ಅದು ‘ಸಾತ್ತ್ವಿಕ’ ಮತ್ತು ‘ಶುದ್ಧ’ ಎಂಬುದು ಈ ಸಂಜ್ಞೆಯಲ್ಲಿ ಬರುತ್ತದೆ.
ನಾವು ಯಾವ ಆಹಾರವನ್ನು ಸೇವಿಸುತ್ತೇವೆಯೋ, ಅದೇ ಆಹಾರದಿಂದ ಶರೀರದಲ್ಲಿ ರಕ್ತ ಉತ್ಪತ್ತಿ ಆಗುತ್ತದೆ ಮತ್ತು ಶರೀರದ ಪೋಷಣೆಯಾಗುತ್ತದೆ. ಬುದ್ಧಿ ಮತ್ತು ಚಿತ್ತದ ಮೇಲೆ ಆಹಾರದ ಪರಿಣಾಮವಾಗುತ್ತದೆ. ಸತತ ಎಣ್ಣೆ, ಖಾರಯುಕ್ತ ಆಹಾರವನ್ನು ಸೇವಿಸುವವರು ಸಿಡಿಮಿಡಿ ಸ್ವಭಾವದವರಾಗುತ್ತಾರೆ ಹಾಗೂ ಅವರ ಆರೋಗ್ಯವೂ ಕೆಡುತ್ತದೆ.
2 ಆ. ದ್ರವ್ಯಶುದ್ಧಿ: ನಾವು ಹಣವನ್ನು ಯಾವ ಮಾರ್ಗದಿಂದ ಗಳಿಸುತ್ತಿದ್ದೇವೆ, ಇದು ಸಹ ಬಹಳ ಮಹತ್ವದ್ದಾಗಿದೆ. ಲಂಚ ಪಡೆದು, ಕಳ್ಳತನ, ಲೂಟಿ ಮುಂತಾದ ಅಯೋಗ್ಯ ಮಾರ್ಗಗಳಿಂದ ಗಳಿಸಿದ ಹಣವು ಮನೆತನವನ್ನು ನಾಶ ಮಾಡುತ್ತದೆ. ಕಳ್ಳತನ ಮಾಡಿದ ಹಣದಿಂದ ದೇವರಿಗೆ ಪಂಚಪಕ್ವಾನ್ನವನ್ನು ಬಡಿಸಿದರೂ, ಭಗವಂತನು ಅದನ್ನು ಸ್ವೀಕರಿಸುವುದಿಲ್ಲ. ಇದಕ್ಕೆ ತದ್ವಿರುದ್ಧ ರೀತಿಯಲ್ಲಿ ಕಷ್ಟಪಟ್ಟು ಮತ್ತು ಪರಿಶ್ರಮವಹಿಸಿ ಗಳಿಸಿದ ಹಣದಿಂದ ಅನ್ನ-ತೊವ್ವೆಯ ನೈವೇದ್ಯವನ್ನು, ರೊಟ್ಟಿ-ಪಲ್ಯದ ನೈವೇದ್ಯವನ್ನೂ ಭಗವಂತನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ಅಯೋಗ್ಯ ಮಾರ್ಗದಿಂದ ಗಳಿಸಿದ ಸಂಪತ್ತಿನಿಂದ ಅನೇಕ ಕುಟುಂಬಗಳು ನಾಶಗೊಂಡಿವೆ. ಮುಂದಿನ ಪೀಳಿಗೆ ವಿಕೃತ, ಅಂಗವಿಕಲ ಅಥವಾ ರೋಗಿಯಾಗಿ ಜನಿಸಿದ ಅನೇಕ ಉದಾಹರಣೆಗಳು ನಮ್ಮೆದುರಿಗಿವೆ.
2 ಆ 1. ಮನುಸ್ಮೃತಿಯಲ್ಲಿ ಹೇಳಿರುವ ಶುದ್ಧಿಯ ಸಾಧನಗಳು: ಮನುಸ್ಮೃತಿಯ 5 ನೇ ಅಧ್ಯಾಯದಲ್ಲಿ ಜ್ಞಾನ, ತಪ, ಅಗ್ನಿ, ಆಹಾರ, ಮಣ್ಣು, ಮನಸ್ಸು, ಜಲ, ಸಾರಿಸುವುದು (ಗೋಮಯದಿಂದ ನೆಲವನ್ನು ಸಾರಿಸುವುದು), ವಾಯು, ಕರ್ಮ, ಸೂರ್ಯ ಮತ್ತು ಕಾಲ ಇವೆಲ್ಲವೂ ಪ್ರತಿಯೊಂದು ಪ್ರಾಣಿಯ ಶುದ್ಧಿಯ ಸಾಧನಗಳಾಗಿವೆ ಎಂದು ಹೇಳಲಾಗಿದೆ. ಇದು ಹೇಗೆ ಎಂಬುದನ್ನು ಕೆಳಗೆ ಸ್ಪಷ್ಟಪಡಿಸಲಾಗಿದೆ, ಇದರಿಂದ ಯಾವುದೇ ಸಂದೇಹ ಉಳಿಯದು.
ಅ. ಧಾನ್ಯಗಳು ಸೂರ್ಯಪ್ರಕಾಶದಿಂದ ಶುದ್ಧವಾಗುತ್ತವೆ. (ಈಗಲೂ ನಾವು ಧಾನ್ಯಗಳನ್ನು ಬಿಸಿಲಿಗೆ ಇಡುತ್ತೇವೆ. ಇದರಿಂದ ಧಾನ್ಯಗಳಿಗೆ ಹುಳ ಹಿಡಿಯುವುದಿಲ್ಲ.) ಆ. ಬೆವರಿನಿಂದ ಮಲಿನವಾದ ಅವಯವಗಳು ನೀರಿನಿಂದ ಶುದ್ಧವಾಗುತ್ತವೆ. (ಕೈಕಾಲುಗಳನ್ನು ತೊಳೆದರೆ, ಸ್ನಾನ ಮಾಡಿದರೆ, ಉತ್ಸಾಹವರ್ಧಕ(ಫ್ರೆಶ್) ಅನಿಸುತ್ತದೆ. ಅದಕ್ಕೆ ‘ಶುದ್ಧಿ’ ಎನ್ನಲಾಗಿದೆ.) ಇ. ಬಂಗಾರ, ಬೆಳ್ಳಿ ಈ ಧಾತುಗಳು ಅಗ್ನಿ ಮತ್ತು ನೀರಿನಿಂದ ಶುದ್ಧವಾಗುತ್ತವೆ. (ಬಂಗಾರದ ಆಭರಣಗಳನ್ನು ತಯಾರಿಸುವಾಗ ಬಂಗಾರವನ್ನು ಮೊದಲಿಗೆ ಅಗ್ನಿಯಲ್ಲಿ ಹಾಕುತ್ತಾರೆ. ನಂತರ ನೀರನ್ನು ಉಪಯೋಗಿಸುತ್ತಾರೆ, ಇದರಿಂದ ಧಾತು ಶುದ್ಧವಾಗುತ್ತದೆ.) ಈ. ತಾಮ್ರ, ಕಂಚು ಮುಂತಾದ ಧಾತುಗಳು ಪಾತ್ರಕ್ಷಾರ (ಹುಳಿ ಅಂಶವಿರುವ) ಅಥವಾ ನಿಂಬೆಹಣ್ಣು, ಹುಣಸೆ ಈ ಹುಳಿ ಪದಾರ್ಥಗಳಿಂದ ಶುದ್ಧವಾಗುತ್ತವೆ. ಸಾಬೂನು ತಯಾರಿಸುವ ಅನೇಕ ಕಂಪನಿಗಳು ‘ನಿಂಬೆಹಣ್ಣಿನ ಶಕ್ತಿ’ ಎಂದು ಜಾಹೀರಾತು ಮಾಡುತ್ತವೆ. ಉ. ಸತ್ಯ ಮಾತುಗಳಿಂದ ಮನಸ್ಸು ಶುದ್ಧವಾಗುತ್ತದೆ. ಊ. ಬ್ರಹ್ಮಜ್ಞಾನವು ಬುದ್ಧಿಯನ್ನು ಶುದ್ಧಮಾಡುತ್ತದೆ. ಎ. ತಾಯಿ- ಸಹೋದರಿಯರು ಪ್ರತಿ ತಿಂಗಳು ರಜಸ್ವಲೆಯಾದ ನಂತರ ನೀರಿನಿಂದ ಶುದ್ಧವಾಗುತ್ತಾರೆ. ಏ. ಇತರರು ನೀಡಿದ ಪೀಡೆಯನ್ನು ಆನಂದದಿಂದ ಸಹಿಸುವುದರಿಂದ ಯಾವ ಶಾಂತಿ ಸಿಗುತ್ತದೆಯೋ, ಅದರಿಂದ ವಿದ್ವಾಂಸರರು ‘ಶುದ್ಧ’ವಾಗುತ್ತಾರೆ. ಓ. ಮಲಿನವಾದ ಬಟ್ಟೆಗಳನ್ನು ನೀರಿನಿಂದ ತೊಳೆದಾಗ ಶುದ್ಧವಾಗುತ್ತವೆ.
2 ಆ 2. ದೈನಂದಿನ ಧರ್ಮ ಆಚರಣೆಯ ವಿಷಯಗಳು ಮತ್ತು ವಿಜ್ಞಾನ ಅ. ನಾವು ಸಾಬೂನು ತಯಾರಿಸುವ ಕಂಪನಿಗಳ ಜಾಹಿರಾತುಗಳಲ್ಲಿ ಅಥವಾ ಆಧುನಿಕ ವೈದ್ಯರು ‘ಕೈಕಾಲುಗಳನ್ನು ಸ್ವಚ್ಛ ತೊಳೆದುಕೊಳ್ಳಿರಿ’, ಎಂದು ಹೇಳಿದರೆ ಕೇಳುತ್ತೇವೆ; ಆದರೆ ತಾಯಿ-ತಂದೆ ‘ಕೈಕಾಲುಗಳನ್ನು ತೊಳೆದುಕೊಂಡು ದೇವಸ್ಥಾನಕ್ಕೆ ಹೋಗು’ ಎಂದು ಹೇಳಿದರೆ ನಮ್ಮಲ್ಲಿನ ‘ವಿಜ್ಞಾನವಾದ’ ಜಾಗೃತವಾಗುತ್ತದೆ!
ಆ. ತಾಮ್ರದ ಪಾತ್ರೆಗಳಿಗೆ ‘ಹುಣಸೆ, ನಿಂಬೆ ಹಚ್ಚಿ ಸ್ವಚ್ಛ ಮಾಡಿರಿ’ ಎನ್ನುವವರಿಗೆ ‘ಹುಚ್ಚರು’ ಎಂದು ಹೇಳುತ್ತೇವೆ ಮತ್ತು ‘ನಿಂಬೆಯ ಶಕ್ತಿಯಿರುವ’ ಸಾಬೂನನ್ನು ಮಾತ್ರ ನಾವು ಅಭಿಮಾನದಿಂದ ಉಪಯೋಗಿಸುತ್ತೇವೆ!
ಇ. ‘ಕೂದಲುಗಳನ್ನು ಕಟ್ಟಿಕೊಂಡು ಅಡುಗೆ ಮಾಡಿರಿ’ ಎಂದು ಶಾಸ್ತ್ರಕಾರರು ಹೇಳುತ್ತಾರೆ ಅವರು ನಮ್ಮ ದೃಷ್ಟಿಯಲ್ಲಿ ಹುಚ್ಚರಾಗಿದ್ದಾರೆ; ಆದರೆ ‘ಕುಕ್’ ಅಥವಾ ‘ಶೆಫ್’ (ಆಚಾರಿ) ಇವರಿಗೆ ಅಡುಗೆ ಮಾಡುವಾಗ ‘ತಲೆಯ ಮೇಲೆ ಟೊಪ್ಪಿಯನ್ನು ಧರಿಸಿರಿ’ ಎಂದು ಹೇಳುತ್ತಾರೆ, ಅದು ಮಾತ್ರ ತಕ್ಷಣ ಮನವರಿಕೆಯಾಗುತ್ತದೆ. (ಉದ್ದೇಶ ಅಡುಗೆಯಲ್ಲಿ ಕೂದಲು ಬೀಳಬಾರದು -ಎಂದೇ ಆಗಿದೆ.)
2 ಆ 3. ಪ್ರತಿದಿನ ಸ್ನಾನ ಮಾಡುವುದರ ಮಹತ್ವ, ಪೂಜೆಯ ಸಮಯದಲ್ಲಿ ಮತ್ತು ದೈನಂದಿನ ಉಪಯೋಗಿಸುವ ವಸ್ತ್ರಗಳು: ಪೂಜೆಗೆ ಕುಳಿತುಕೊಳ್ಳುವಾಗ ಸ್ವಚ್ಛ (ಮಡಿ ಅಥವಾ ಧೋತರ, ಉತ್ತರೀಯ) ವಸ್ತ್ರಗಳನ್ನು ಹೇಳಲಾಗಿದೆ. ಧೂತ ಅಂದರೆ ತೊಳೆದ, ಸ್ವಚ್ಛ ಮತ್ತು ಶುಭ್ರ ವಸ್ತ್ರಗಳನ್ನು ಧರಿಸಬೇಕು. (‘ರೆಡಿಮೆಡ್ ಮಡಿಯ ಪ್ಯಾಂಟ್’ ನಡೆಯುವುದಿಲ್ಲ) ರೇಶಿಮೆ ವಸ್ತ್ರಗಳಿಂದಾಗಿ ಸೋಂಕು ತಗಲುವುದಿಲ್ಲ, ಇದೊಂದು ಭಾಗವಾಯಿತು, ಹಾಗೆಯೇ ಭಾರತವು ಉಷ್ಣ ದೇಶವಾಗಿರುವುದರಿಂದ ಇಲ್ಲಿ ಬೆವರು ಹೆಚ್ಚು ಬರುತ್ತದೆ. ಆದುದರಿಂದ ಕೋಟ್, ಪ್ಯಾಂಟ್, ಸೂಟ್ ಮುಂತಾದವುಗಳ ಬಳಕೆಯನ್ನು ಮಾಡಿದರೆ ‘ತ್ವಚೆಯ ರೋಗ’ಗಳು ನಿರ್ಮಾಣವಾಗುತ್ತವೆ. ಹತ್ತಿ ಬಟ್ಟೆಗಳಲ್ಲಿ ಬೆವರು ವ್ಯವಸ್ಥಿತವಾಗಿ ಇಂಗುತ್ತದೆ.
ಅ. ಯುರೋಪನಲ್ಲಿ ತುಂಬಾ ಚಳಿ ಇರುತ್ತದೆ. ಬಹುತೇಕ ಬಾರಿ ನೀರು ಮಂಜುಗಡ್ಡೆಯಾಗಿರುತ್ತದೆ, ಆದುದರಿಂದ ಅವರು ಶೌಚಾಲಯದಲ್ಲಿ ಕಾಗದವನ್ನು ಉಪಯೋಗಿಸುತ್ತಾರೆ. ನಮ್ಮಲ್ಲಿ ಹಾಗಿರದಿದ್ದರೂ ನಾವು ಕಾಗದವನ್ನು ಏಕೆ ಉಪಯೋಗಿಸುತ್ತೇವೆ ? ಆ. ಯುರೋಪನಲ್ಲಿ ಪ್ರತಿದಿನ ಸ್ನಾನ ಮಾಡುವುದು ವಾತಾವರಣಕ್ಕನುಸಾರ ಕಠಿಣವಾಗಿದೆ. ಆದುದರಿಂದ ಶರೀರಕ್ಕೆ ದುರ್ಗಂಧ ಬರಬಾರದೆಂದು, ಅವರು ಸುಗಂಧ ದ್ರವ್ಯಗಳನ್ನು (ಪರಫ್ಯುಮ್) ಉಪಯೋಗಿಸುತ್ತಾರೆ. ಹೀಗಿರುವಾಗ ನಾವು ಯಾವ ಉದ್ದೇಶದಿಂದ ಸುಗಂಧ ದ್ರವ್ಯಗಳನ್ನು ಉಪಯೋಗಿಸುತ್ತೇವೆ ? ಇ. ಮರುಭೂಮಿಯಲ್ಲಿ ನೀರಿಗೆ ಬರ ಇರುತ್ತದೆ; ಆದುದರಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಅಲ್ಲಿನ ಪ್ರತಿ ಶುಕ್ರವಾರ ಸ್ನಾನ ಮಾಡುತ್ತಾರೆ.
ನಾವು ಯಾವುದೇ ವಿಚಾರ ಮಾಡದೇ ಕೇವಲ ‘ನಾನು ಪ್ರಗತಿಪರನಾಗಿದ್ದೇನೆ, ವಿಜ್ಞಾನವಾದಿ ಆಗಿದ್ದೇನೆ’ ಎಂದು ಸಿದ್ಧಪಡಿಸಲು ಮೇಲ್ಕಂಡ ಅನೇಕ ವಿಷಯಗಳನ್ನು ಅಂಗೀಕರಿಸುತ್ತೇವೆ. ಈ ಎಲ್ಲ ವಿಷಯಗಳು ಶರೀರ ಶುದ್ಧತೆಯಲ್ಲಿ (ಮಡಿಯಲ್ಲಿ) ಬರುತ್ತವೆ; ಆದರೆ ಅವುಗಳಿಗೆ ‘ಮಡಿ’ ಎಂದರೆ ತಥಾಕಥಿತ ಪ್ರಗತಿಪರರು ಮೂಗು ಮುರಿಯುತ್ತಾರೆ.
2 ಇ. ಚಿತ್ತಶುದ್ಧಿ: ಬ್ರಹ್ಮಜ್ಞಾನ ಪ್ರಾಪ್ತಮಾಡಿಕೊಳ್ಳಲು ಶುದ್ಧ ಅಂತಃಕರಣದಿಂದ ಯಮ-ನಿಯಮಗಳನ್ನು ಪಾಲಿಸಿ, ಸತ್ಯವನ್ನೇ ಮಾತನಾಡುವುದು, ಸದಾಚಾರ ಮತ್ತು ಸದ್ವರ್ತನೆ ಇವುಗಳ ಸಮನ್ವಯವನ್ನು ಸಾಧಿಸಿ ಯಾವ ತಪವನ್ನು ಮಾಡಲಾಗುತ್ತದೆಯೋ, ಅದರಿಂದ ಚಿತ್ತಶುದ್ಧಿಯಾಗುತ್ತದೆ. ಉದಾ. ‘ಅರಿಶಿಣ ಅಥವಾ ಚಂದನವನ್ನು ಹಚ್ಚಿಕೊಳ್ಳಿರಿ, ಅದರಿಂದ ತ್ವಚೆ ಶುದ್ಧವಾಗುತ್ತದೆ’, ಎಂದು ಹೇಳುವವರನ್ನು ಹುಚ್ಚರೆಂದು ಕರೆಯಲಾಯಿತು ಮತ್ತು ‘ಟರ್ಮರಿಕ್ ಕ್ರೀಮ್’ ಮತ್ತು ‘ಸ್ಯಾಂಡಲ್ ಸೋಪ್’ ಹಚ್ಚಿಕೊಳ್ಳಿರಿ, ಎಂದು ಹೇಳುವವರ ಪ್ರಶಂಸೆಯನ್ನು ಮಾಡಲಾಯಿತು. ಶುದ್ಧತೆಯು ಆಚರಣೆಯ ವಿಷಯವಾಗಿದೆ. ಯಾರಿಗೆ ಇದು ಮನದಟ್ಟಾಯಿತೋ ಅವರು ಇದನ್ನು ಆಚರಿಸಬೇಕು ಮತ್ತು ಯಾರಿಗೆ ಮನದಟ್ಟಾಗಿಲ್ಲವೋ, ಅವರು ಮೇಲಿನ ಮೂರು ಪ್ರಶ್ನೆಗಳಿಗೆ ಸಮರ್ಪಕ ಮತ್ತು ತಮ್ಮ ಮನಸ್ಸಿಗೆ ಒಪ್ಪಿಗೆಯಾಗುವಂತಹ ಉತ್ತರಗಳನ್ನು ಕಂಡು ಹಿಡಿಯುವುದು ಒಳಿತು, ಅಲ್ಲವೇ!? -ವೇದಮೂರ್ತಿ ಭೂಷಣ ಜೋಶಿ ವೆಂಗುರ್ಲೆ, ಸಿಂಧುದುರ್ಗ