ದುಃಖಕ್ಕೆ ಮೂಲ ಕಾರಣವೇನು? ಆಸೆಯಿಲ್ಲದೆ ಕಾರ್ಯಮಾಡಿ ಯಾಕೆ ಗೊತ್ತಾ?

ಆತ್ಮೀಯರೆ ಜೀವನವೂ ಅಂತೆಯೇ ನಮ್ಮವರು ಅಂತ ಯೋಚಿಸಿ ಕೆಲಸ ಮಾಡಬೇಡಿ ಕರ್ತವ್ಯವನ್ನು ಪ್ರೀತಿಸಿ ಕೆಲಸ ಮಾಡಿ ಆಗ ಒಂಟಿ ಅನಿಸುವುದಿಲ್ಲ. ನನ್ನದು ನನಗೇ ಬೇಕಾದದ್ದು ಅವನಿಗೆ ಸಿಕ್ಕಿತು ನನಗೆ ಸಿಕ್ಕಿಲ್ಲ ಈ ರೀತಿಯ ಹಲವು ಸ್ವಾರ್ಥ ಯೋಚನೆಗಳು ನಮ್ಮ ಮನಸ್ಸಿಗೆ ದುಗುಡ ಉಂಟುಮಾಡುತ್ತವೆ.

ದುಃಖಕ್ಕೆ ಮೂಲ ಕಾರಣವೇನು? ಆಸೆಯಿಲ್ಲದೆ ಕಾರ್ಯಮಾಡಿ ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 23, 2023 | 11:44 AM

ಪ್ರತೀ ಜೀವಿಯೂ ಜಗತ್ತಿನಲ್ಲಿ ತನ್ನ ಆನಂದಕ್ಕೋಸ್ಕರ ಕಾರ್ಯಗಳನ್ನು ಮಾಡುತ್ತಿರುತ್ತದೆ. ಅದರಲ್ಲೂ ಮನುಷ್ಯನಂತೂ ಯೋಚಿಸಿ ಚಿಂತನೆ ನಡೆಸಿ ಕಾರ್ಯ ಮಾಡುವುದರಲ್ಲಿ ನಿಪುಣ. ಆದರೂ ಅವನಿಗೇ ಅತೀ ಕಷ್ಟ ದುಃಖವೆಂಬಂತೆ ವ್ಯವಹರಿಸುತ್ತಾನೆ ಅಲ್ಲವೇ? ಇದಕ್ಕೇನು ಕಾರಣ? ಪ್ರತಿ ಜೀವಿಗೂ ತನ್ನದ್ದೇ ಆದ ಕರ್ತವ್ಯವೆಂಬುದು ಇದ್ದೇ ಇದೆ. ಅದು ನಮ್ಮ ಜನನ ಕಾರ್ಯದಲ್ಲಿಯೇ ಭಗವಂತ ನಿರ್ಣಯಿಸಿ ಕಳುಹಿಸಿರುತ್ತಾನೆ. ಆದರೆ ಕೆಲವು ಸಲ ವಿಶೇಷವೋ ಎಂಬಂತೆ ಮಾನವನು ತನ್ನ ಸಾತ್ವಿಕ ಧರ್ಮದ ವ್ಯವಹಾರದಿಂದ ಭಗವದನುಗ್ರಹ ಪಡೆದು ತನ್ನ ಜೀವನ ಚಕ್ರದ ಸ್ಥಿತಿಯನ್ನು ಬದಲಿಸಿಕೊಳ್ಳುತ್ತಾನೆ ಮತ್ತು ಉತ್ತಮನಾಗುತ್ತಾನೆ. ಹಾಗೆಯೇ ತಾನು ಮಾಡಬೇಕಾದ ಕರ್ತವ್ಯವನ್ನು ಮಾಡದೇ ಕೆಲವರು ಪಾಪ ಕಾರ್ಯವನ್ನು ಮಾಡಿ ದರಿದ್ರರಾಗುವವರೂ ಇದ್ದಾರೆ. ಇದರಲ್ಲಿ ಮೊದಲನೇಯದ್ದಾದ ಉತ್ತಮ ಸ್ಥಿತಿಗೆ ಅಧ್ಯಯನ ಅನುಸಂಧಾನ ಸತ್ಸಂಗ ನಾಮಜಪ ದೇವತಾ ಕಾರ್ಯಗಳು ಕಾರಣ. ಎರಡನೇಯದ್ದಕ್ಕೆ ಉಚಿತವಾದ ಕರ್ಮಗಳನ್ನು ಮಾಡದಿರುವುದೇ ಕಾರಣ. ಇವೆರಡರ ದ್ವಂದ್ವವೇ ಜೀವನ ಎಂದರೆ ತಪ್ಪಾಗಲಾರದು. ಕೆಲವು ಸಲ ನಾವು ಒಂಟಿ ಅನಿಸಿಬಿಡುತ್ತೇವೆ ಇನ್ನು ಕೆಲವು ಸಲ ಏನೋ ದುಗುಡ ಮನಸ್ಸನ್ನು ಆವರಿಸಿ ಬಿಡುತ್ತದೆ ಮತ್ತೆ ಕೆಲವು ಸಲ ಕಾರಣವಿಲ್ಲದೇ ವಿನಾ ಕೋಪ ಬರುತ್ತದೆ ಹೀಗೇಕೆ ಆಯಿತು ಎಂದು ಯೋಚಿಸಿದರೆ ಉತ್ತರ ಸಿಗುವುದಿಲ್ಲ ಅಲ್ಲವೇ?

ಈಗ ಒಂದು ಸಲ ಯೋಚಿಸಿ ಇವರು ನಮ್ಮವರು ಇವರು ನನ್ನ ಮಾತನ್ನು ಕೇಳಲಿಲ್ಲ ಇವರು ಬಿಟ್ಟು ಹೋದರು ಎನ್ನುವ ಕಾರಣಕ್ಕೆ ನಾವು ಒಂಟಿ ಅನಿಸುತ್ತೇವೆ ಅಲ್ಲವೇ? ನಾವು ರೈಲಿನಲ್ಲಿ ಸಾಗುತ್ತಿರುತ್ತೇವೆ ಎಂದು ಊಹಿಸಿ ಅದು ಎಷ್ಟೋ ನಿಲ್ದಾಣಗಳನ್ನು ದಾಟಿ ನಮ್ಮ ಊರಿಗೆ ಬರುತ್ತದೆ. ದಾರಿಯಲ್ಲಿ ಅದೆಷ್ಟೋ ಜನ ಇಳಿದಿರುತ್ತಾರೆ ಕೆಲವರು ಇಳಿಯುವಾಗ ತಿಳಿದಿತ್ತು ಇನ್ನು ಕೆಲವರು ಇಳಿಯುವಾಗ ಗಮನಕ್ಕೂ ಬಂದಿರುವುದಿಲ್ಲ ಹಾಗಂತ ಒಂದು ಸಲವೂ ಅವರಿಳಿಯುವಾಗ ಬೇಜಾರು ಅನಿಸಿರುವುದಿಲ್ಲ ಕಾರಣ ಇಷ್ಟೇ ಅವರು ನಮ್ಮವರಲ್ಲ ಎನ್ನುವ ಮನೋಭಾವ. ನಾವು ಪ್ರಯಾಣದಲ್ಲಿ ಅವರೊಂದಿಗೆ ಹರಟಿದ್ದರೂ ನಮಗೆ ಅವರಿಳಿಯುವಾಗ ಒಂಟಿ ಆದೆ ಅಂತ ಅನಿಸುವುದೇ ಇಲ್ಲ ಅಲ್ಲವೇ?

ಆತ್ಮೀಯರೆ ಜೀವನವೂ ಅಂತೆಯೇ ನಮ್ಮವರು ಅಂತ ಯೋಚಿಸಿ ಕೆಲಸ ಮಾಡಬೇಡಿ ಕರ್ತವ್ಯವನ್ನು ಪ್ರೀತಿಸಿ ಕೆಲಸ ಮಾಡಿ ಆಗ ಒಂಟಿ ಅನಿಸುವುದಿಲ್ಲ. ನನ್ನದು ನನಗೇ ಬೇಕಾದದ್ದು ಅವನಿಗೆ ಸಿಕ್ಕಿತು ನನಗೆ ಸಿಕ್ಕಿಲ್ಲ ಈ ರೀತಿಯ ಹಲವು ಸ್ವಾರ್ಥ ಯೋಚನೆಗಳು ನಮ್ಮ ಮನಸ್ಸಿಗೆ ದುಗುಡ ಉಂಟುಮಾಡುತ್ತವೆ. ಆಸೆಯ ತ್ಯಾಗ ಮಾಡಿದಾಗ ಮನಸ್ಸು ಹಗುರವಾಗುತ್ತದೆ. ಅವನು ಮಾಡಿಲ್ಲ ನನಗೆ ಕೊಟ್ಟಿಲ್ಲ ಅವನಿಗೆ ಬುದ್ಧಿ ಕಲಿಸುವೆ ಇತ್ಯಾದಿ ದ್ವೇಷ ಮನೋಭಾವ ಕೋಪದ ಉದಯಕ್ಕೆ ಸೂಕ್ಷ್ಮವಾಗಿ ಕಾರಣವಾಗುತ್ತದೆ. ನಮ್ಮ ಪ್ರಾಮಾಣಿಕ ಕಾರ್ಯವೆನ್ನುವುದು ನಮ್ಮನ್ನು ಸದಾ ಕಾಯುತ್ತದೆ ಎಂಬ ಭಾವವಿದ್ದರೆ ಕೋಪ ಬರುವುದಿಲ್ಲ ಅಲ್ಲವೇ?

ಇದನ್ನೂ ಓದಿ: Spirituality: ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಆಧ್ಯಾತ್ಮಿಕತೆ ಉತ್ತಮ

ಸಣ್ಣದಾದ ಮಾವಿನ ಗೊರಟು ಮೊಳೆಕೆಯೊಡೆದು ಗಿಡವಾಗಿ ಪ್ರಾಣಿಗಳಿಂದ ತನ್ನನ್ನು ಕಾಪಾಡಿಕೊಂಡು ಮರವಾಗಿ ಬೆಳೆದು ಹಲವಾರು ವರುಷ ಗಾಳಿ ಬಿಸಿಲು ಮಳೆ ಛಳಿಗಳನ್ನು ಅನುಭವಿಸಿ ಹೂ ಬಿಟ್ಟು ಆ ಹೂವಲ್ಲಿ ಕೆಲವು ಮಿಡಿಯಾಗಿ ಅವು ಕಾಲಕ್ರಮೇಣ ಕಾಯಿಯಾಗಿ ಎಸೆಯುವ ಕಲ್ಲಿನ ನೋವನ್ನು ಸಹಿಸಿ ಹಣ್ಣಾಗಿ ತನ್ನ ಸಣ್ಣದಾದ ತೊಟ್ಟನ್ನು ಕಳಚಿ ಭೂಮಿಗೆ ಬಿದ್ದು ಸದ್ದಿಲ್ಲದೇ ಯಾರದ್ದೋ ಹೊಟ್ಟೆ ಸೇರುತ್ತದೆ ಆದರೆ ಈ ಯಾವ ಪ್ರಕ್ರಿಯೆಯಲ್ಲೂ ಅದು ಸ್ವಲ್ಪವೂ ಶಬ್ದ ಮಾಡಿಲ್ಲ ಸ್ವಲ್ಪವೂ ಕೋಪ ಮಾಡಿದ್ದು ಕಾಣಲಿಲ್ಲ ಸನ್ಮಾನವೂ ಆಗಿಲ್ಲ ಆದರೂ ಅದು ನೆಮ್ಮದಿಯಿಂದ ಹಣ್ಣು ಕೊಟ್ಟದ್ದರ ಫಲವೇ ಇಂದು ಅದು ಹಣ್ಣುಗಳ ರಾಜ ಅನಿಸಲ್ಪಟ್ಟಿದೆ ಅಂದರೆ ತಪ್ಪಲ್ಲ.

ನದಿಯು ಪರೋಪಕಾರಕ್ಕಾಗಿ ಹರಿಯುತ್ತದೆ. ಹೂವು ಸುಗಂಧ ನೀಡುವುದಕ್ಕಾಗಿ ಬದುಕುತ್ತದೆ. ಸೂರ್ಯ ಜೀವಗಳ ಕ್ಷೇಮಕ್ಕಾಗಿ ಹೊಳೆಯುತ್ತಾನೆ ಅವರುಗಳಿಗೆ ಕಷ್ಟ ಬಂದರೂ ಸುಖ ಬಂದರೂ ನಮಗೆ ಅನುಭವಕ್ಕೆ ಬರುವುದೇ ಇಲ್ಲ. ಆದರೆ ಅವುಗಳು ಸಹಕರಿಸದಿದ್ದರೆ ನಮಗೆ ಬದುಕಲೂ ಸಾಧ್ಯವಿಲ್ಲ ಅಲ್ಲವೇ?

ನಮ್ಮ ಪೂರ್ವಿಕರು ಧ್ಯಾನ ಮಾಡಿ ಅನ್ನುತ್ತಾರೆ ಆದರೆ ಮಾಡಲು ಮನಸ್ಸು ಇರುವುದಿಲ್ಲ. ಯೋಗ ಮಾಡಿ ಅನ್ನುತ್ತಾರೆ ಮಾಡುವುದಿಲ್ಲ. ಆಹಾರ ನಿಯಮ ಪಾಲಿಸಿ ಅನ್ನುತ್ತಾರೆ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇವೆ. ಇವೆಲ್ಲದರ ಪರಿಣಾಮ ಮಾನಸಿಕ ಮತ್ತು ದೈಹಿಕ ದುಃಖ ನೆಮ್ಮದಿಯ ನಾಶ. ಅದಕ್ಕಿಂತಲೂ ಹೆಚ್ಚಿನದು ನಮ್ಮ ಸ್ವಾರ್ಥವೆಂಬ ದುರಾಸೆ. ಒಂದು ಕ್ಷಣ ನಿಷ್ಕಲ್ಮಷ ಮನಸ್ಸಿಂದ ಒಬ್ಬರಿಗೆ ಯಾವುದೇ ಲಾಭ ಬಯಸದೇ ಸಹಕರಿಸಿ ಆಗ ಮನಸ್ಸು ಹೇಗಿರುತ್ತದೆ ಎಂದು ಗಮನಿಸಿ. ಆಸೆಯಿಲ್ಲದೆ ಕಾರ್ಯಮಾಡಿ ನಿಶ್ಚಯವಾಗಿ ದುಃಖ ನಿಮ್ಮ ಬಳಿಯೂ ಬರುವಿದಿಲ್ಲ.

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ