Varalakshmivrath 2023 : ವರಮಹಾಲಕ್ಷ್ಮೀ ಹಬ್ಬ: ಮುತ್ತೈದೆಯರು ಯಾವ ರೀತಿಯ ಸೀರೆ, ಬಳೆ ಧರಿಸಿದರೆ ಸೂಕ್ತ? ಇಲ್ಲಿದೆ ಮಾಹಿತಿ

ಈ ವ್ರತವನ್ನು ಮುತ್ತೈದೆಯರೇ ಆಚರಿಸುವುದರಿಂದ ಅವರೇ ಪ್ರಧಾನ. ಹಾಗಾಗಿ ಪೂಜೆ ಕುಳಿತುಕೊಳ್ಳುವಾಗ ಸ್ವಚ್ಛತೆ ಮುಖ್ಯವಾಗುತ್ತದೆ. ಜೊತೆಗೆ ಸಿಂಗಾರವೂ ಅಷ್ಟೇ ಮುಖ್ಯವಾಗುತ್ತದೆ. ಏಕೆಂದರೆ ಕೆಲವು ಸೀರೆ ಬಳೆಗಳನ್ನು ಪೂಜಾ ಸಮಯದಲ್ಲಿ ತೊಡಬಾರದು. ಅದು ಶುಭವಲ್ಲ ಎಂದು ಬಲ್ಲವರು ಹೇಳುತ್ತಾರೆ. ಹಾಗಾದರೆ ಆ ದಿನ ಯಾವ ಸೀರೆ, ಬಳೆ ತೊಟ್ಟುಕೊಳ್ಳಬೇಕು? ಇಲ್ಲಿದೆ ಮಾಹಿತಿ.

Varalakshmivrath 2023 : ವರಮಹಾಲಕ್ಷ್ಮೀ ಹಬ್ಬ: ಮುತ್ತೈದೆಯರು ಯಾವ ರೀತಿಯ ಸೀರೆ, ಬಳೆ ಧರಿಸಿದರೆ ಸೂಕ್ತ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Edited By:

Updated on: Aug 24, 2023 | 9:47 AM

ಶ್ರಾವಣ ಪೌರ್ಣಮಿಗೆ ಅಥವಾ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರ, ಅಂದರೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ಹಬ್ಬವೇ ವರಮಹಾಲಕ್ಷ್ಮೀ ವ್ರತ (Varalakshmi Vratham). ಇದನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದೊಂದು ಪವಿತ್ರವಾದ ದಿನ. ಹಾಗಾಗಿ ಈ ಆಚರಣೆಯೂ ಕೂಡ ಶಾಸ್ತ್ರ ಬದ್ಧವಾಗಿರಬೇಕು. ಈ ವ್ರತವನ್ನು ಮುತ್ತೈದೆಯರೇ ಆಚರಿಸುವುದರಿಂದ ಅವರೇ ಪ್ರಧಾನ. ಹಾಗಾಗಿ ಪೂಜೆ ಕುಳಿತುಕೊಳ್ಳುವಾಗ ಸ್ವಚ್ಛತೆ ಮುಖ್ಯವಾಗುತ್ತದೆ. ಜೊತೆಗೆ ಸಿಂಗಾರವೂ ಅಷ್ಟೇ ಮುಖ್ಯವಾಗುತ್ತದೆ. ಏಕೆಂದರೆ ಕೆಲವು ಸೀರೆ ಬಳೆಗಳನ್ನು ಪೂಜಾ ಸಮಯದಲ್ಲಿ ತೊಡಬಾರದು. ಅದು ಶುಭವಲ್ಲ ಎಂದು ಬಲ್ಲವರು ಹೇಳುತ್ತಾರೆ. ಹಾಗಾದರೆ ಆ ದಿನ ಯಾವ ಸೀರೆ ತೊಟ್ಟುಕೊಳ್ಳಬೇಕು? ಯಾವ ಸೀರೆ ಶ್ರೇಷ್ಠ ಎಂದು ಕೇಳುವುದಾದರೆ, ರೇಷ್ಮೆ ಸೀರೆ ಉಡುವುದು ಅತ್ಯಂತ ಶ್ರೇಷ್ಠ. ಇನ್ನು ಅಶಕ್ತರು ಅಥವಾ ಅದನ್ನು ತೆಗೆದುಕೊಳ್ಳಲು ಆಗದಿದ್ದವರು ಮಾತ್ರ ಯಾವುದಾದರೂ ಹೊಸ ಸೀರೆ ಉಡುವುದು ಉತ್ತಮ.

ಯಾವ ಬಣ್ಣದ ಸೀರೆ ಉಡಬೇಕು?

ವರಮಹಾಲಕ್ಷ್ಮೀ ವ್ರತ ಮಾತ್ರವಲ್ಲ ಯಾವುದೇ ಶುಭ ಕಾರ್ಯಕ್ಕೆ ಆಗಲಿ ಕಪ್ಪು ಅಥವಾ ಕಡು ನೀಲಿ ಬಣ್ಣದ ಸೀರೆಯನ್ನು ಉಡಬಾರದು. ಹಾಗಾದರೆ ಯಾವ ಬಣ್ಣದ ಸೀರೆ ಅತ್ಯಂತ ಶ್ರೇಷ್ಠ? ಸಾಮಾನ್ಯವಾಗಿ ಶುಕ್ರವಾರ ಬಿಳಿ, ಕೆಂಪು ಬಣ್ಣದ ಉಡುಗೆಯನ್ನು ತೊಡುತ್ತಾರೆ. ಅಲ್ಲದೆ ಪೂಜೆಯಲ್ಲಿ ಕಪ್ಪು ಬಣ್ಣವನ್ನು ಹೊರತು ಪಡಿಸಿ ಯಾವ ಬಣ್ಣದ ಸೀರೆಯನ್ನಾದರೂ ಉಡಬಹುದು. ಆದರೆ ಋತುಚಕ್ರದ ಸಮಯದಲ್ಲಿ ಉಟ್ಟುಕೊಂಡ ಸೀರೆಯನ್ನು ಮಾತ್ರ ಉಡಬಾರದು. ಇನ್ನು ಪೂಜೆಗೆ ಕುಳಿತುಕೊಳ್ಳುವಾಗ ಕೂದಲು ಬಿಚ್ಚಿ ಹರಡಿಕೊಳ್ಳಬಾರದು. ಜೊತೆಗೆ ಕೂದಲು ಒದ್ದೆ ಇರಬಾರದು. ಜಡೆಯಲ್ಲಿ ಹೂವು, ಹಣೆಯಲ್ಲಿ ಕುಂಕುಮ ಇರಲೇಬೇಕು. ಇವೆಲ್ಲವೂ ಅವಳ ಮುತ್ತೈದೆ ತನವನ್ನು ಹೆಚ್ಚಿಸುತ್ತದೆ. ಮತ್ತು ಕಾಪಾಡುತ್ತದೆ ಎಂಬುದು ಹಿಂದಿನಿಂದಲೂ ಬಂದ ನಂಬಿಕೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದಂದು ದೇವಿಗೆ ಈ ವಿಶೇಷ ನೈವೇದ್ಯ ಮಾಡಿ

ಯಾವ ಬಣ್ಣದ ಬಳೆ ಶ್ರೇಷ್ಠ?

ಮಹಿಳೆಯರಿಗೆ ಸಾಮಾನ್ಯವಾಗಿ ಹಸಿರು, ಕೆಂಪು ಬಳೆ ಶ್ರೇಷ್ಠ ಎನ್ನಲಾಗುತ್ತದೆ. ಪೂಜೆಯ ಸಮಯದಲ್ಲಿ ಬರಿ ಕೈಯಲ್ಲಿ ಇರದೇ ಗಾಜಿನ ಬಳೆಗಳನ್ನು ತೊಟ್ಟಕೊಳ್ಳಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳೆ, ಲೆದರ್ ಬೆಲ್ಟ್, ವಾಚ್ ನಂತಹ ಸಾಮಗ್ರಿಗಳನ್ನು ಬಳಸುವುದನ್ನು ಕಡಿಮೆ ಮಾಡಿ. ಎಲ್ಲ ಬಳೆಗಳಿಗಿಂತ ಗಾಜಿನ ಬಳೆ ಮುತ್ತೈದೆಯರಿಗೆ ಶುಭ ತರುತ್ತದೆ ಎನ್ನಲಾಗುತ್ತದೆ. ಇನ್ನು ಹಬ್ಬ ಅಥವಾ ಇತರ ಸಮಯದಲ್ಲಿ ಎಂದಿಗೂ ಬಂಗಾರದ ಕಾಲ್ಗೆಜ್ಜೆ ತೊಡಬಾರದು. ಇದು ನಿಮ್ಮನ್ನು ಅವನತಿಯೆಡೆಗೆ ಕೊಂಡೊಯ್ಯುತ್ತದೆ. ಸೊಂಟಕ್ಕಿಂತ ಕೆಳಭಾಗದಲ್ಲಿ ಬಂಗಾರವನ್ನು ಎಂದಿಗೂ ಧರಿಸಬಾರದು. ಇದನ್ನು ಎಂದಿಗೂ ಮರೆಯದೆಯೇ ನೆನಪಿನಲ್ಲಿಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:56 am, Fri, 18 August 23

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us