Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಮುಡಿ ದೇವರಿಗೆ ಕೊಡುವಾಗ ಯಾವ ರೀತಿಯ ಎಚ್ಚರಿಕೆಯಿರಬೇಕು? ಇದಕ್ಕೆ ವೈಜ್ಞಾನಿಕ ಕಾರಣವಿದೆಯೇ? ಈ ಕುರಿತಾಗಿ ಶಾಸ್ತ್ರ ಏನು ಹೇಳುತ್ತದೆ?

ಶಾಸ್ತ್ರದಲ್ಲಿ ಒಂದು ಮಾತಿದೆ ಜನ್ಮನಾ ಜಾಯತೇ ಜಂತುಃ” ಎಂದು. ತಾತ್ಪರ್ಯವೇನೆಂದರೆ ಹುಟ್ಟಿದಾಕ್ಷಣದ ಮಗು ಒಂದು ಪ್ರಾಣಿ ಮಾತ್ರ. ಕರ್ಮಣಾ ವರ್ಧತೇ ತಥಾ ನಂತರ ಮಾಡುವ ಜಾತಕರ್ಮ, ನಾಮಕರಣ ಇತ್ಯಾದಿ ಸಂಸ್ಕಾರಗಳಿಂದ ಅದು ಸುಸಂಸ್ಕೃತವಾಗಿ ಮನುಷ್ಯ ಎಂದೆನಿಸಲ್ಪಡುತ್ತದೆ. ಅಂತಹ ಶಾಸ್ತ್ರೀಯ ಸಂಸ್ಕಾರಗಳಲ್ಲಿ ಒಂದು ಚೂಡಾಕರ್ಮ.

ಮಕ್ಕಳ ಮುಡಿ ದೇವರಿಗೆ ಕೊಡುವಾಗ ಯಾವ ರೀತಿಯ ಎಚ್ಚರಿಕೆಯಿರಬೇಕು? ಇದಕ್ಕೆ ವೈಜ್ಞಾನಿಕ ಕಾರಣವಿದೆಯೇ? ಈ ಕುರಿತಾಗಿ ಶಾಸ್ತ್ರ ಏನು ಹೇಳುತ್ತದೆ?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 22, 2023 | 11:15 AM

ಶಾಸ್ತ್ರದಲ್ಲಿ ಒಂದು ಮಾತಿದೆ ಜನ್ಮನಾ ಜಾಯತೇ ಜಂತುಃ” ಎಂದು. ತಾತ್ಪರ್ಯವೇನೆಂದರೆ ಹುಟ್ಟಿದಾಕ್ಷಣದ ಮಗು ಒಂದು ಪ್ರಾಣಿ ಮಾತ್ರ. ಕರ್ಮಣಾ ವರ್ಧತೇ ತಥಾ ನಂತರ ಮಾಡುವ ಜಾತಕರ್ಮ, ನಾಮಕರಣ ಇತ್ಯಾದಿ ಸಂಸ್ಕಾರಗಳಿಂದ ಅದು ಸುಸಂಸ್ಕೃತವಾಗಿ ಮನುಷ್ಯ ಎಂದೆನಿಸಲ್ಪಡುತ್ತದೆ. ಅಂತಹ ಶಾಸ್ತ್ರೀಯ ಸಂಸ್ಕಾರಗಳಲ್ಲಿ ಒಂದು ಚೂಡಾಕರ್ಮ. ಚೂಡಾಕರ್ಮವೆಂದರೆ ಮುಡಿಕೊಡುವ ಸಂಸ್ಕಾರ. ಸ್ವಾಭಾವಿಕವಾಗಿ ಈ ಸಂಸ್ಕಾರ ಗಂಡುಮಕ್ಕಳಿಗೆ ಮಾತ್ರ ಹೇಳಲ್ಪಟ್ಟಿದೆ. ಸ್ತ್ರೀಯರಿಗೆ ಮುಡಿ ನೀಡಲು ನಿಷೇಧವಿದೆ. ಆದರೆ ವಿಶೇಷ ಹರಕೆ ಇತ್ಯಾದಿ ಸಂದರ್ಭದಲ್ಲಿ ಮುಡಿನೀಡುವ ರೂಢಿ ಇದೆ.

ಶಾಸ್ತ್ರಪ್ರಕಾರ ಮಗುವು ಹುಟ್ಟಿ ಎರಡು ವರ್ಷ ಸಂಪೂರ್ಣ ಆಗುವ ತನಕ ಯಾವುದೇ ಕಾರಣಕ್ಕೂ ಮುಡಿ ಅಥವಾ ಚೂಡಾಕರ್ಮ ಮಾಡಿಸಬಾರದು. ಎರಡು ವರ್ಷದ ಒಳಗೆ ಮಾಡುವುದರಿಂದ ಮಗುವಿನ ಆಯುಷ್ಯ ಕ್ಷೀಣವಾಗುತ್ತದೆ ಎಂದು ಶಾಸ್ತ್ರದ ಮಾತು. ಇದು ವೈಜ್ಞಾನಿಕವಾಗಿಯೂ ಸರಿ ಎನಿಸುತ್ತದೆ. ಯಾಕೆಂದರೆ ಎರಡು ವರ್ಷದೊಳಗೆ ಮಗುವಿನ ನೆತ್ತಿಯ ಭಾಗ ತುಂಬಾ ಮೆತ್ತಗೆ ಇರುತ್ತದೆ ಅಲ್ಲದೇ ಪೂರ್ಣ ಬೆಳವಣಿಗೆ ಆಗದೇ ಇರುವುದರಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದ ಕಾರಣ ಆ ಸಮಯದೊಳಗೆ ಮಾಡಲೇಬಾರದು.

ಮೊದಲ ಮುಡಿಸಮರ್ಪಣೆಯು (ಶಾಸ್ತ್ರೀಯವಾಗಿ ಚೂಡಾಕರ್ಮ ಒಂದೇಬಾರಿ ಮಾಡುವುದು ರೂಢಿ. ಇನ್ನುಳಿದಂತೆ ಅದು ಹರಕೆ ಸಮರ್ಪಣೆಯಾಗುತ್ತದೆ) ಹುಟ್ಟಿದ ಮೂರನೇ ವರ್ಷ ಮಾಡುವುದು ಉತ್ತಮ. ಮುಡಿ ಸಮರ್ಪಣೆಯನ್ನು ಉತ್ತರಾಯಣದಲ್ಲೇ ಮಾಡಬೇಕು. ಉತ್ತರಾಯಣ ಎನ್ನುವುದು ದೇವಭಾಗ. ದಕ್ಷಿಣಾಯನ ಎನ್ನುವುದು ಯಮನಭಾಗ. ಆದ ಕಾರಣ ನಾವು ಹರಕೆ ಸಲ್ಲಿಸುವುದು ದೈವಾನುಗ್ರಹಕ್ಕಾದರಿಂದ ಉತ್ತರಾಯಣವೇ ಮುಡಿ ಸಮರ್ಪಣೆ ಅತ್ಯಂತ ಶ್ರೇಷ್ಠ.

ಈ ಸಮಯದಲ್ಲಿ ಮುಡಿಕೊಡುವವರಿಗೆ

1.ಮಕರ – ಸಂಪತ್ತು

2.ಕುಂಭ- ಸಂತಾನ

3.ಮೀನ – ಸೌಖ್ಯ

4.ಮೇಷ – ಸರ್ವಾಥಸಿದ್ಧಿ

5.ವೃಷಭ – ಕಾರ್ಯಜಯ

6.ಮಿಥುನ- ವಿದ್ಯಾಪ್ರಾಪ್ತಿ

ಈ ರೀತಿಯಾದ ಫಲವನ್ನು ಮಾಸಗಳು ನೀಡುತ್ತವೆ. ಉಳಿದ ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು ಮಾಸಗಳು ಸರ್ವಥಾ ವ್ರರ್ಜ್ಯ.

ಇಷ್ಟೇ ಅಲ್ಲದೇ ಬಿದಿಗೆ ತದಿಗೆ ಪಂಚಮಿ ದಶಮಿ ಏಕಾದಶಿ ತ್ರಯೋದಶಿ ಶುಭಕರವು. ಬುಧವಾರ, ಗುರುವಾರ, ಶುಕ್ರವಾರ ಶ್ರೇಷ್ಠವಾಗಿದೆ. ಅದರಲ್ಲೂ ಸೋಮವಾರ ಅತ್ಯಂತ ಶ್ರೇಷ್ಠವಾಗಿದೆ. ಇದರಲ್ಲೂ ಹುಟ್ಟಿದ ವಾರ ಮುಡಿ ಸಮರ್ಪಣೆ ಮಾಡಲೇ ಬಾರದು.

ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದರೆ ಪತಿ ಮುಡಿ ನೀಡಬಾರದು

ಮುಡಿ ಕೊಡುವ ಮಗುವಿನ ತಾಯಿ ಗರ್ಭವತಿಯಾಗಿ ಐದು ತಿಂಗಳಿಗಿಂತ ಹೆಚ್ಚಾಗಿದ್ದಲ್ಲಿ ಮುಡಿ ನೀಡಬಾರದು. ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದರೆ ಪತಿ ಮುಡಿ ನೀಡಬಾರದು. ಸ್ವತಃ ಗರ್ಭಿಣಿ ಎಂದಿಗೂ ಮುಡಿ ನೀಡಲೇಬಾರದು. ಹುಡುಗಿ ಯಾ ವಿವಾಹಿತಳು ರಜಸ್ವಲೆಯಾಗಿ ಏಳನೇ ದಿನದ ತನಕ ಮುಡಿ ನೀಡುವಂತಿಲ್ಲ.

ಇದನ್ನೂ ಓದಿ: Spiritual; ಕೃಷ್ಣ ಅಭಿನಂದಿಸಿದ ಕರ್ಣನ ಗುಣ ಪರಾಕ್ರಮ ಯಾವುದು? ಕರ್ಣನ ರಥದ ಮಹತ್ವ ಇಲ್ಲಿದೆ

ಯಾವ ರೀತಿಯ ಹರಕೆಯಾದರೂ ಸರಿ ಅದನ್ನು ಸಮರ್ಪಿಸುವಾಗ ಅತ್ಯಂತ ಶ್ರದ್ಧೆಯಿಂದ ಸಮರ್ಪಿಸಿ. ಮುಡಿ ಸಮರ್ಪಣೆಯೆನ್ನುವುದು ಮನುಷ್ಯನ ಅಹಂಕಾರದ ಸಮರ್ಪಣೆ ಎಂಬ ಪ್ರತೀತಿಯೂ ಇದೆ. ಇನ್ನೂ ಕೆಲವರಲ್ಲಿ ತಾನು ಮಾಡಿದ ಪಾಪದ ಸಮರ್ಪಣೆ ಅಥವಾ ಅದರ ಪರಿಹಾರ ಮುಡಿಸಮರ್ಪಣೆಯಿಂದಾಗುತ್ತದೆ ಎಂಬ ಭಾವನೆಯೂ ಇದೆ. ಭಗವಂತ ಭಕ್ತವತ್ಸಲನಾದ್ದರಿಂದ ಅವರವರ ಭಾವಕ್ಕನುಗುಣವಾಗಿ ಫಲ ನೀಡುತ್ತಾನೆ.

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು

Published On - 11:15 am, Wed, 22 February 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!