Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಿಕ್ಷುಪಾದ ನ್ಯಾಯದಂತಾಗಬಾರದು ಜೀವನ, ನಮ್ಮ ಬದುಕನ್ನೇ ಸರ್ವನಾಶ ಮಾಡುವ ಈ ಅಭ್ಯಾಸ ಇರಬಾರದು

ಒಂದು ಊರಿನಲ್ಲಿ ಒಬ್ಬಳು ಮಹಿಳೆ ವಾಸವಾಗಿರುತ್ತಾಳೆ. ಅವಳು ತುಂಬಾ ದೈವ ಭಕ್ತೆ. ಅತ್ಯಂತ ಸಾತ್ವಿಕಳು. ಊರಿಗೆ ಬರುವ ಪರ ಊರ ಜನರಿಗೆ ಊಟ ಇತ್ಯಾದಿಗಳನ್ನು ನೀಡಿ ಅವರ ಸತ್ಕಾರ ಮಾಡಿ ಉಪಚರಿಸುವುದು ಅವಳ ರೂಢಿ. ಅವಳದ್ದೊಂದು ಪುಟ್ಟ ಸುಂದರವಾದ ಮನೆ.

ಭಿಕ್ಷುಪಾದ ನ್ಯಾಯದಂತಾಗಬಾರದು ಜೀವನ, ನಮ್ಮ ಬದುಕನ್ನೇ ಸರ್ವನಾಶ ಮಾಡುವ ಈ ಅಭ್ಯಾಸ ಇರಬಾರದು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Feb 22, 2023 | 8:23 AM

ಒಂದು ಊರಿನಲ್ಲಿ ಒಬ್ಬಳು ಮಹಿಳೆ ವಾಸವಾಗಿರುತ್ತಾಳೆ. ಅವಳು ತುಂಬಾ ದೈವ ಭಕ್ತೆ. ಅತ್ಯಂತ ಸಾತ್ವಿಕಳು. ಊರಿಗೆ ಬರುವ ಪರ ಊರ ಜನರಿಗೆ ಊಟ ಇತ್ಯಾದಿಗಳನ್ನು ನೀಡಿ ಅವರ ಸತ್ಕಾರ ಮಾಡಿ ಉಪಚರಿಸುವುದು ಅವಳ ರೂಢಿ. ಅವಳದ್ದೊಂದು ಪುಟ್ಟ ಸುಂದರವಾದ ಮನೆ. ಜೀವನಕ್ಕಾಗುವಷ್ಟು ಬೆಳೆ. ಸಂತೋಷವಾಗಿ ಇರುತ್ತಿದ್ದಳು ಆ ಮಹಿಳೆ. ಅದೊಂದು ದಿನ ಆ ದಾರಿಯಲ್ಲಿ ಭಿಕ್ಷುವೊಬ್ಬ ಬರುತ್ತಾನೆ. ರಾತ್ರಿಯಾಗಿತ್ತು. ಅವನ ದಣಿವನ್ನ ಗಮನಿಸಿದ ಆ ಮಹಿಳೆ ಅವನಿಗೆ ಬಾಯಾರಿಕೆಗೆ ಪಾನೀಯವನ್ನಿತ್ತು . ಊಟ ಬಡಿಸುವುದಾಗಿ ಹೇಳಿ ಅಡುಗೆ ಮಾಡುತ್ತಾಳೆ. ಅತ್ಯಂತ ಶ್ರದ್ಧೆಯಿಂದ ಅಡುಗೆ ಮಾಡಿ ಊಟ ನೀಡುತ್ತಾಳೆ. ಉಂಡ ಭಿಕ್ಷುವು ಹೇಳುತ್ತಾನೆ ನಿನ್ನ ಆತಿಥ್ಯ ನನ್ನ ಮನಸ್ಸಿಗೆ ಅತ್ಯಂತ ಸಂತೋಷ ನೀಡಿದೆ. ನಿನಗೆ ಅಭ್ಯಂತರವಿಲ್ಲ ಎಂದಾದರೆ ರಾತ್ರೆ ಈ ಜಗಿಲಿಯಲ್ಲಿ ಮಲಗಿ ಬೆಳಗ್ಗೆ ಹೋಗುವೆ ಎಂದನಂತೆ.

ಅಂತರಂಗದಲ್ಲಿ ಕಸಿವಿಸಿ ಅನಿಸಿದರೂ ಸಾಧು ಭಿಕ್ಷು ಎಂಬ ಭಾವದಿಂದ ಆಗಬಹುದು ಎನ್ನುತ್ತಾಳೆ ಮಹಿಳೆ. ತಡ ರಾತ್ರಿ ಯಾರೋ ಬಾಗಿಲು ಬಡಿದ ಸದ್ದಾಯಿತು ಎದ್ದು ನೋಡಿದರೆ ಭಿಕ್ಷು ಛಳಿಯಿಂದ ನಡುಗುತ್ತಿದ್ದ. ಹಾಗೇ ಅವನು ಒಂದು ಕಂಬಳಿ ನೀಡುವಿರಾ ಎಂದು ಕೇಳಿದ. ಕನಿಕರದಿಂದ ಕಂಬಳಿಯನ್ನು ನೀಡಿದಳು. ಪುನಃ ಸುಮಾರು ಬೆಳಗ್ಗಿನ ಜಾವಕ್ಕೆ ಮತ್ತೆ ಸದ್ದಾಯಿತು. ಎದ್ದು ನೋಡಿದರೆ ಅದೇ ಸಾಧು ಬಾಗಿಲು ಬಡಿಯುತ್ತಿದ್ದಾನೆ. ಏನೆಂದು ಕೇಳಿದರೆ ಹೊರಗಡೆ ಮಗಲು ಸಾಧ್ಯವಿಲ್ಲ. ನೀವು ಸ್ವಲ್ಪ ಉದಾರ ಭಾವ ತೋರಿ ಎಂದು ದೀನನಾಗಿ ಕೇಳಿದ.

ಆದರೂ ಅವಳು ತಾಳ್ಮೆಯಿಂದಲೇ ಕೇಳಿದಳು ಏನು ಎಂದು. ನೀವು ಒಪ್ಪುವುದಾದರೆ ನಾನು ಒಳಗೆ ಮಲಗಬಹುದೇ ಎಂದ. ಆಗಲಿ ನೀವು ಒಳಗೆ ಮಲಗಿ ನಾವು ಹೊರಗಡೆ ಮಲಗುವೆ ಎಂದು ಅವನನ್ನು ಒಳಗೆ ಕಳುಹಿಸುತ್ತಾಳೆ. ಬೆಳಗ್ಗಾದರೂ ಅವನು ಬಾಗಿಲು ತೆಗಯದಿದ್ದನ್ನು ಕಂಡು ಮಹಿಳೆ ಬಾಗಿಲು ಬಡಿದಾಗ ಸವಕಾಶ ಎದ್ದು ಬಂದ ಭಿಕ್ಷು ನಡುಗುತ್ತಾ ನನಗೆ ಜ್ವರ ಬಾಧಿಸುತ್ತಿದೆ. ವೈದ್ಯರಿಂದ ಔಷಧೋಪಚಾರ ಮಾಡಿಸಿ ಎಂದ. ಅದೂ ಮಾಡಿಸಿದಳು. ಕೆಲವು ದಿನಗಳಾದರೂ ಹೊರಡದ ಭಿಕ್ಷುವನ್ನು ಕಂಡು ಧೈರ್ಯ ಮಾಡಿ ಪ್ರಶ್ನಿಸಿದಳು ಯಾವಾಗ ನಿಮ್ಮ ಪ್ರಯಾಣದ ಆರಂಭ ಎಂದು.

ಇದನ್ನೂ ಓದಿ: Spiritual: ಮನುಷ್ಯನ ಅವನತಿಗೆ ಕಾರಣಗಳಾಗುವ ಐದು ಕಲಿಸ್ಥಾನಗಳು ಯಾವುವು?

ಅಷ್ಟು ದಿನ ಸುಖದಿಂದ ಉಣ್ಣುತ್ತಾ ತಿನ್ನುತಾ ವಿಶ್ರಮಿಸುತ್ತಾ ಇದ್ದ ಭಿಕ್ಷುವಿಗೆ ಅಲ್ಲಿಂದ ಹೊರಗೆ ಹೋಗಲು ಮನಸ್ಸಾಗದೆ ಆ ಮಹಿಳೆಯನ್ನೇ ಆ ಮನೆಯಿಂದ ಹೊರಗೆ ಹಾಕಿದನಂತೆ. ಇದಕ್ಕೆ ಭಿಕ್ಷುಪಾದ ನ್ಯಾಯ ಎನ್ನುವರು. ನಮ್ಮ ಜೀವನದಲ್ಲೂ ಇಂತಹ ಅಥವಾ ಇದಕ್ಕೆ ಸಮನಾದ ಘಟನೆಗಳು ಕೆಲವು ಸಲ ಬರುತ್ತದೆ. ಇಂತಹ ಸಂದರ್ಭಗಳನ್ನು ಜಾಗ್ರತೆಯಿಂದ ಗ್ರಹಿಸಬೇಕು. ಅತಿಯಾದ ನಂಬಿಕೆ ಅಥವಾ ಸಲುಗೆ ಯಾವುತ್ತೂ ಒಳ್ಳೆಯದಲ್ಲ. ಇದೇ ರೀತಿ ಕೆಟ್ಟ ಅಭ್ಯಾಸಗಳೂ ಹಾಗೆ. ಆರಂಭದಲ್ಲಿ ಸ್ವಲ್ಪವಾಗಿ ಆರಂಭವಾಗಿ ಆಮೇಲೆ ನಮ್ಮ ಜೀವನವನ್ನೇ ಸರ್ವನಾಶ ಮಾಡುತ್ತದೆ. ಯಾವುದಕ್ಕೂ ಯೋಚಿಸಿ ಚಿಂತನೆ ಮಾಡಿ ವ್ಯವಹರಿಸಿ .

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ