ಉತ್ತಮ ಹೆಸರು ಬರಬೇಕಾದರೆ ಏನು ಮಾಡಬೇಕು? ಪುರಾಣ ಕಥೆ ಹೇಳುತ್ತದೆ ನಮ್ಮ ಅಸ್ತಿತ್ವ ಹೇಗೆ?

ನಮ್ಮ ಜೀವನದಲ್ಲಿ ಅದೆಷ್ಟೋ ಸಲ ನಮಗೊದಗಿ ಬಂದ ಉತ್ತಮ ಅವಕಾಶಗಳನ್ನು ಬೇರೆಯವರು ಅನಾಯಾಸವಾಗಿ ತಮ್ಮದಾಗಿಸಿಕೊಳ್ಳುತ್ತಾರೆ ಮತ್ತು ನಮ್ಮ ಸುತ್ತಲೂ ಸಮಸ್ಯೆಗಳನ್ನು ನಿರ್ಮಿಸಿ ಅದರಲ್ಲಿ ಸಿಲುಕಿ ಒದ್ದಾಡುವಂತೆ ಮಾಡಿಬಿಡುತ್ತಾರೆ ಆಗ ನಾವೇನು ಮಾಡಬೇಕು? ಇಲ್ಲಿದೆ ಮಾಹಿತಿ

ಉತ್ತಮ ಹೆಸರು ಬರಬೇಕಾದರೆ ಏನು ಮಾಡಬೇಕು? ಪುರಾಣ ಕಥೆ ಹೇಳುತ್ತದೆ ನಮ್ಮ ಅಸ್ತಿತ್ವ ಹೇಗೆ?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
| Updated By: ಡಾ. ಭಾಸ್ಕರ ಹೆಗಡೆ

Updated on:May 06, 2023 | 12:00 PM

ನಮ್ಮ ಜೀವನದಲ್ಲಿ ಅದೆಷ್ಟೋ ಸಲ ನಮಗೊದಗಿ ಬಂದ ಉತ್ತಮ ಅವಕಾಶಗಳನ್ನು ಬೇರೆಯವರು ಅನಾಯಾಸವಾಗಿ ತಮ್ಮದಾಗಿಸಿಕೊಳ್ಳುತ್ತಾರೆ ಮತ್ತು ನಮ್ಮ ಸುತ್ತಲೂ ಸಮಸ್ಯೆಗಳನ್ನು ನಿರ್ಮಿಸಿ ಅದರಲ್ಲಿ ಸಿಲುಕಿ ಒದ್ದಾಡುವಂತೆ ಮಾಡಿಬಿಡುತ್ತಾರೆ ಆಗ ನಾವೇನು ಮಾಡಬೇಕು? ಹಾಗೆಯೇ ಹಲವು ಬಾರಿ ನಮಗೆ ಯೋಗ್ಯತೆ ಇದ್ದರೂ ಬೇರೆಯವರ ಕುತಂತ್ರಕ್ಕೆ ಬಲಿಯಾಗಿರುತ್ತೇವೆ ಆಗ ನಮ್ಮನ್ನು ಯಾರೂ ಗಮನಿಸುತ್ತಿಲ್ಲ ಎನ್ನುವ ಆಂತರಂಗಿಕ ದುಃಖ ಕಾಡುತ್ತದೆ ಅಲ್ಲವೇ? ಇದಕ್ಕೆಲ್ಲಾ ಸಮಾಧಾನ ಈ ಪುರಾಣದ ಘಟನೆಯಿಂದ ಸಿಗುವುದು ನೋಡಿ. ಮನುಷ್ಯ ತನ್ನ ಇರುವಿಕೆಯನ್ನು ತಿಳಿಸಲು ಪ್ರಚಾರ ಮಾಡಬೇಕಿಲ್ಲ ಅವನ ಕಾರ್ಯಗಳೇ ತನ್ನ ಅಸ್ತ್ವಿತ್ವವನ್ನು ತಿಳಿಸುತ್ತದೆ. ಮಹಾಭಾರತದ ಒಂದು ಸಂದರ್ಭ ಹೀಗಿದೆ ಪಾಂಡವರನ್ನು ವಂಚಿಸಬೇಕು ಎಂಬ ಯೋಚನೆಯಿಂದ ಶಕುನಿಯ ತಂತ್ರದ ಪ್ರಕಾರ ದುರ್ಯೋಧನ ಯಾತ್ರೆಗೆ ಹೊರಟ ಪಾಂಡವರನ್ನು ಅರಗಿನ ಮನೆಯಲ್ಲಿ ಉಳಿಯುವಂತೆ ಮಾಡುತ್ತಾನೆ.

ಪೂರ್ವ ನಿಯೋಜಿತದಂತೆ ಅಲ್ಲಿನ ದಾಸ ದಾಸಿಯರು ಮತ್ತು ಪಾಕಜ್ಞರು (ಅಡುಗೆ ಮಾಡುವವರು) ಪಾಂಡವರಿಗೆ ಆಹಾರದಲ್ಲಿ ಅಮಲು ಬರುವ ಮದ್ದನ್ನು ಹಾಕಿ ಉಣಬಡಿಸುತ್ತಾರೆ. ಕಾರಣಾಂತರಗಳಿಂದ ಅವರಿಗೆ ಸಂಶಯ ಬಂದು ಆಹಾರ ಸ್ವೀಕರಿಸುವಂತೆ ನಾಟಕವಾಡುತ್ತಾರೆ. ಅಷ್ಟೊತ್ತಿಗಾಗಲೇ ಅವರುಗಳು ಆ ಅರಗಿನ ಮನೆಗೆ ಬೆಂಕಿಯನ್ನಿಟ್ಟು ಮರೆಯಾಗಿರುತ್ತಾರೆ ದಾಸ ದಾಸಿಯರು. ವಾಸ್ತವದ ಅರಿವಾದ ತಕ್ಷಣ ಪಾಂಡವರು ಕುಂತಿಯೊಂದಿಗೆ ಅಲ್ಲಿಂದ ಪಾರಾಗಿ ಹಿಡಿಂಬ ವನವನ್ನು ಸೇರುತ್ತಾರೆ.

ಪಾಂಡವರು ವಾಸ ಮಾಡಿದ ಭವನ ಹತ್ತಿ ಉರಿಯಿತು ಮತ್ತು ಅವರು ಅಲ್ಲೇ ದಹಿಸಿರಬೇಕು ಎಂಬ ವಿಷಯ ಹಸ್ತಿನಾಪುರ ಮಾತ್ರವಲ್ಲದೆ ಇಡಿಯ ಆರ್ಯಾವರ್ತದಲ್ಲೆಲ್ಲಾ ಹರಡಿತು ಹಾಗೆಯೇ ಸಾತ್ವಿಕರಿಗೆಲ್ಲಾ ಅವರ ಮರಣದ ವಾರ್ತೆಯನ್ನು ಅರಗಿಸಿಕೊಳ್ಳಲಾಗಲಿಲ್ಲ. ಈ ಕಡೆ ದುರ್ಯೋಧನಾದಿಗಳು ಸಂಭ್ರಮ ಪಟ್ಟರು ಮತ್ತು ಯುವರಾಜ ಪಟ್ಟಾಭಿಷೇಕದ ವ್ಯವಸ್ಥೆಯೂ ಆರಂಭವಾಯಿತು. ಭೀಷ್ಮ ಮತ್ತು ವಿದುರರು ತಮ್ಮ ದೂತರನ್ನು ಇಡಿಯ ಆರ್ಯಾವರ್ತದಲ್ಲೆಲ್ಲಾ ಪಾಂಡವರನ್ನು ಹುಡುಕಲು ಕಳುಹಿಸಿದರು. ಆದರೆ ಪಾಂಡವರ ಇರುವಿಕೆಯ ಸಣ್ಣ ಕುರುಹೂ ಸಿಗದೆ ವಾಪಾಸು ಬಂದಾಗ ವಿದುರನ ದುಃಖದ ಕಟ್ಟೆಯೊಡೆಯುತ್ತದೆ.

ಇಷ್ಟೊತ್ತಿಗಾಗಲೇ ಪಾಂಡವರು ಹಿಡಿಂಬವನವನ್ನು ಸೇರಿ ಅಲ್ಲಿ ಹಿಡಿಂಬಿಯ ಸಖ್ಯವಾಗಿತ್ತು. ಆದರೆ ಈ ವಿಚಾರ ಒಪ್ಪದ ಹಿಡಿಂಬಿಯ ಅಣ್ಣ ಹಿಡಿಂಬ ಎಂಬ ಅಸುರನು ಪಾಂಡವರ ಮೇಲೆ ದಾಳಿ ಮಾಡುತ್ತಾನೆ. ಮಲ್ಲಯುದ್ಧ ನಿಪುಣನಾದ ಭೀಮನು ಹಿಡಿಂಬನನ್ನು ಮಣಿಸುತ್ತಾನೆ ಯುದ್ಧದಲ್ಲಿ.

ಹಿಡಿಂಬನ ಮರಣದ ವಾರ್ತೆ ಇಡಿಯ ಆರ್ಯಾವರ್ತದಲ್ಲಿ ದೊಡ್ಡ ಸದ್ದನ್ನೇ ಮಾಡಿಬಿಡುತ್ತದೆ. ಯಾರಿಗೆ ಈ ಕಾರ್ಯ ಸಾಧ್ಯವೆಂಬ ಸಂಶಯ ಎಲ್ಲರಿಗೂ ಇತ್ತಾದರೂ ಆ ಪರಾಕ್ರಮಿ ಭೀಮ ಇರಬಹುದು ಎಂಬ ಸಂದೇಹ ಯಾರಿಗೂ ಬಂದಿರುವುದಿಲ್ಲ. ಈ ಹೊತ್ತಿಗೆ ಸರಿಯಾಗಿ ವಿದುರ ಪಾಂಡರವ ಸುಳಿವು ಸಿಕ್ಕಿಲ್ಲ ಅವರಿಗೆ ಅನ್ಯಾಯವಾಯಿತು ಎಂದು ದುಃಖಿತನಾಗಿ ಭೀಷ್ಮನ ಬಳಿ ಬಂದು ಹೇಳತೊಡಗಿದಾಗ ಭೀಷ್ಮ ಹೇಳುತ್ತಾನೆ .

ಇದನ್ನೂ ಓದಿ; Spiritual Practices Before Bed: ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಜೀವನದಲ್ಲೂ ಸಫಲತೆ ಕಾಣುವಿರಿ

ಇಡಿಯ ಆರ್ಯಾವರ್ತದಲ್ಲಿ ಹಿಡಿಂಬನನ್ನು ಕೊಲ್ಲಬಲ್ಲ ವ್ಯಕ್ತಿ ಯಾರಿರುವರು ಎಂದು ಯೋಚಿಸು. ಆಮೇಲೆ ದುಃಖಿಸು ಎಂದು. ಆಗ ವಿದುರನಿಗೆ ತಿಳಿಯುತ್ತದೆ ಮಾಯಾ ವಿದ್ಯೆ ಮತ್ತು ಮಲ್ಲವಿದ್ಯೆಯನ್ನು ಚೆನ್ನಾಗಿ ತಿಳಿದ ಭೀಮ ಬಿಟ್ಟರೆ ಬೇರೆ ಯಾರಿಗೂ ಹಿಡಿಂಬನನ್ನು ಕೊಲ್ಲುವ ನೈಪುಣ್ಯತೆ ಇಲ್ಲ ಎಂದು.

ಯಾಕೆಂದರೆ ರಾಜಾ ಶಂತನುವಿನ ಕಾಲದಲ್ಲಿ ಅವನನ್ನು ಭೀಷ್ಮ ಯುದ್ಧದಲ್ಲಿ ಸೋಲಿಸಿ ಅಭಯ ನೀಡಿದ್ದ. ಆ ನಂತರ ಹಿಡಿಂಬನು ಯಾರಲ್ಲೂ ಸೋಲು ಕಂಡಿಲ್ಲ. ಅಂತಹ ಹಿಡಿಂಬ ಮರಣವಾದನೆಂದರೆ ಅದು ಭೀಮನಿಂದ ಮಾತ್ರ ಸಾಧ್ಯ ಎಂಬುದು ಇಲ್ಲಿ ಸ್ಪಷ್ಟವಾಯಿತು ವಿದುರನಿಗೆ.

ಹಾಗೆಯೇ ನಾವು ನಮ್ಮ ಜೀವನದಲ್ಲಿ ಬೇರೆ ಬೇರೆ ರೀತಿಯ ಮೋಸಕ್ಕೋ ಸೊಲಿಗೋ ಬಲಿಯಾದರೂ ಹೆದರಬೇಕಿಲ್ಲ . ನಮ್ಮ ಪ್ರಾಮಾಣಿಕ ಕಾರ್ಯ ನೈಪುಣ್ಯತೆಯಿಂದ ನಮ್ಮ ಅಸ್ತಿತ್ವ ತೋರುವಂತೆ ಮಾಡಬೇಕು. ಪರಿಮಳವೆಂಬುದು ಎಷ್ಟೇ ಮುಚ್ಚಿಟ್ಟರೂ ದುಂಬಿಯನ್ನು ಆಕರ್ಷಿಸುತ್ತದೆ ಹಾಗೆಯೇ ನಮ್ಮಲ್ಲಿ ಉತ್ತಮ ಕಾರ್ಯ ನೈಪುಣ್ಯತೆ ಇದ್ದರೆ ಅದು ಬೆಳಕಿಗೆ ಬಂದೇ ಬರುತ್ತದೆ ಯೋಚಿಸಿ.

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:57 am, Sat, 6 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್