Vaikunta Ekadasi: ವೈಕುಂಠ ಏಕಾದಶಿ ಏಕೆ ಆಚರಿಸಲಾಗುತ್ತೆ? ಇಂದು ಉಪವಾಸ ಮಾಡುವುದರಿಂದ ಸಿಗುವ ಫಲವೇನು?

ಮಹಾವಿಷ್ಣು ‘ಮುರಾ’ ಎಂಬ ರಾಕ್ಷಸನನ್ನು ‘ಏಕಾದಶ’ ಎಂಬ ತನ್ನ ಆಯುಧದಿಂದ ಸಂಹಾರ ಮಾಡಿದ ದಿನ, ಕ್ಷೀರಸಾಗರ ಮಂಥನ ಮಾಡಿ ಅಮೃತ ಉದ್ಭವವಾದ ದಿನ, ಹಾಗೆ ಪಿತಾಮಹ ಬೀಷ್ಮರು ವಿಷ್ಣುಸಹಸ್ರನಾಮವನ್ನು ಬೋಧಿಸಿದ ದಿನವೂ ವೈಕುಂಠ ಏಕಾದಶಿಯಾಗಿದೆ. ಏಕಾದಶಿ ವ್ರತ ಮಾಡುವುದರಿಂದ ಪಿತೃ ದೋಷ ಪರಿಹಾರವಾಗುತ್ತದೆ.

Vaikunta Ekadasi: ವೈಕುಂಠ ಏಕಾದಶಿ ಏಕೆ ಆಚರಿಸಲಾಗುತ್ತೆ? ಇಂದು ಉಪವಾಸ ಮಾಡುವುದರಿಂದ ಸಿಗುವ ಫಲವೇನು?
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:Dec 23, 2023 | 8:55 AM

ಇಂದು ಎಲ್ಲಾ ಕಡೆ ವೈಕುಂಠ ಏಕಾದಶಿ (Vaikunta Ekadasi) ಸಂಭ್ರಮ ಮನೆ ಮಾಡಿದೆ. ಇದು ಭಗವಾನ್ ಮಹಾವಿಷ್ಣು (Lord Vishnu) ನಿದ್ರೆಯಿಂದ ಎಚ್ಚರವಾಗಿ ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಟ್ಟ ಪುಣ್ಯ ದಿನ. ಆದ್ದರಿಂದ ‘ಮುಕ್ಕೋಟಿ ಏಕಾದಶಿ’ ಎಂದೂ ಕರೆಯುತ್ತಾರೆ. ಜೊತೆಗೆ ಇಂದು ಮಹಾವಿಷ್ಣು ‘ಮುರಾ’ ಎಂಬ ರಾಕ್ಷಸನನ್ನು ‘ಏಕಾದಶ’ ಎಂಬ ತನ್ನ ಆಯುಧದಿಂದ ಸಂಹಾರ ಮಾಡಿದ ದಿನ, ಕ್ಷೀರಸಾಗರ ಮಂಥನ ಮಾಡಿ ಅಮೃತ ಉದ್ಭವವಾದ ದಿನ, ಹಾಗೆ ಪಿತಾಮಹ ಬೀಷ್ಮರು ವಿಷ್ಣುಸಹಸ್ರನಾಮವನ್ನು ಬೋಧಿಸಿದ ದಿನವೂ ವೈಕುಂಠ ಏಕಾದಶಿಯಾಗಿದೆ. ಏಕಾದಶಿ ವ್ರತ ಮಾಡುವುದರಿಂದ ಪಿತೃ ದೋಷ ಪರಿಹಾರವಾಗುತ್ತದೆ. ಆದ್ದರಿಂದ ಇದನ್ನು ‘ಮೋಕ್ಷದ’ ಮತ್ತು ಪುತ್ರದಾ ಏಕಾದಶಿ ಎಂದೂ ಕರೆಯುತ್ತಾರೆ.

ಇಂದು ಸೂರ್ಯೋದಯಕ್ಕೂ ಮೊದಲೇ ಎದ್ದು ಸ್ನಾನ, ನಿತ್ಯ ಕರ್ಮಗಳನ್ನು ಮುಗಿಸಿ, ವೆಂಕಟೇಶ್ವರ ಅಥವಾ ಕೃಷ್ಣನ ಫೋಟೋ ಅಥವಾ ವಿಗ್ರಹ ಇಟ್ಟುಕೊಂಡು ಪೂಜೆ ಮಾಡಬೇಕು. ನೈವೇದ್ಯಕ್ಕೆ ತುಪ್ಪ ಸಕ್ಕರೆ ಅಥವಾ ಬೆಲ್ಲ ಹಾಕಿ ಕಾಯಿತುರಿ, ಕಲಸಿದ ಅವಲಕ್ಕಿ, ಅಥವಾ ಸಜ್ಜಿಗೆ, ಹಣ್ಣು ಏರಿಸಲು ಸುಗಂಧ ಭರಿತ ಬಿಳಿ ಹೂವುಗಳು ಇಟ್ಟುಕೊಳ್ಳಿ. ಈ ವೈಕುಂಠ ಏಕಾದಶಿಯ ಉಪವಾಸದ ವಿಶೇಷತೆ ಎಂದರೆ ಆ ವರ್ಷದಲ್ಲಿ ಬರುವ ಏಕಾದಶಿಗಳಲ್ಲಿ ವ್ರತ ಉಪವಾಸ ಮಾಡದೆ ಇದ್ದವರು ಈ ಒಂದು ದಿನ ಮಾಡಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಅದರಲ್ಲೂ ಧನುರ್ಮಾಸದಲ್ಲಿ ಬಂದಿರುವುದು ಹೆಚ್ಚಿನ ಮಹತ್ವ ಪಡೆದಿದೆ.

ವೈಕುಂಠ ಏಕಾದಶಿ ಕುರಿತಾಗಿ ಪುರಾಣ ಕಥೆಗಳು ಎರಡು

1.ದ್ವಾಪರದಲ್ಲಿ ಶ್ರೀ ಕೃಷ್ಣನು ಗೋಪಾಲಕರಿಗೆ ವೈಕುಂಠ ದರ್ಶನ ಮಾಡಿಸಿದ ಕಥೆ

ಗೋಕುಲದಲ್ಲಿ ಕೃಷ್ಣನ ತಂದೆ ನಂದಗೋಪನು ಏಕಾದಶಿ ವ್ರತವನ್ನು ತಪ್ಪದೇ ಆಚರಿಸುತ್ತಿದ್ದರು. ಒಮ್ಮೆ ಏಕಾದಶಿ ವ್ರತವನ್ನು ಆಚರಿಸಿ ಮರುದಿನ ದ್ವಾದಶಿ ಪಾರಣೆ ಮಾಡಬೇಕಿತ್ತು. ಅಂದು ದ್ವಾದಶಿ ಸ್ವಲ್ಪವೇ ಇತ್ತು. ಬೇಗ ಸ್ನಾನ ಮಾಡಿ ಬಂದು ಪೂಜಾ ಕಾರ್ಯಗಳನ್ನು ಮುಗಿಸಿ ಪಾರಣೆ ಮಾಡಬೇಕೆಂದು ಬೆಳಗಿನ ಜಾವಕ್ಕೂ ಮೊದಲೇ ಯಮುನಾ ನದಿಗೆ ಸ್ನಾನಕ್ಕೆ ಹೋದರು. ಅದು ರಾಕ್ಷಸರು ಸಂಚಾರ ಮಾಡುವ ಸಮಯವಾಗಿತ್ತು. ನಂದಗೋಪನು ನೀರಿನಲ್ಲಿ ಮುಳುಗಿದಾಗ ‘ವರುಣ’ ಎಂಬ ರಾಕ್ಷಸನ ಸೇವಕ ನಂದಗೋಪನನ್ನು ಹೊತ್ತೊಯ್ದು ವರುಣನಿಗೆ ಒಪ್ಪಿಸುತ್ತಾನೆ. ಇತ್ತ ಗೋಕುಲದಲ್ಲಿ ಸ್ನಾನಕ್ಕೆ ಹೋದ ನಂದಗೋಪಾಲ ಇನ್ನೂ ಬಂದಿಲ್ಲವೆಂದು ಊರು ತುಂಬಾ ಹರಡಿತು. ಚಿಂತಿತರಾದ ಗೋಪಾಲಕರು ಬಲರಾಮನಿಗೆ ಹೇಳಿದರು.

ಈ ವಿಷಯ ಶ್ರೀ ಕೃಷ್ಣನಿಗೆ ತಿಳಿಯಿತು. ಗೋಪಾಲಕರಿಗೆ ಚಿಂತೆ ಮಾಡಬೇಡಿ ನನ್ನ ತಂದೆಯನ್ನು ಕರೆದು ತರುತ್ತೇನೆ ಎಂದು ವಚನ ಕೊಡುತ್ತಾನೆ. ನಂತರ ವರುಣ ಲೋಕಕ್ಕೆ ಬರುತ್ತಾನೆ. ವರುಣ ಲೋಕದಲ್ಲಿ ಶ್ರೀ ಕೃಷ್ಣನನ್ನು ಕಂಡು ನಮಸ್ಕಾರ ಮಾಡಿದನು. ಪ್ರಾರ್ಥಿಸಿ, ಶ್ರೀ ಕೃಷ್ಣನಿಗೆ ವಿಶೇಷ ಆಧಾರಥಿತ್ಯ ಮಾಡಿ ಗೌರವಿಸಿದರು ಹಾಗೂ ವರುಣ ರಾಕ್ಷಸನು ತನ್ನ ಸೇವಕನು ತಿಳಿಯದೆ ಮಾಡಿದ ಕೃತ್ಯಕ್ಕಾಗಿ ಕೃಷ್ಣನಲ್ಲಿ ಕ್ಷಮೆ ಯಾಚಿಸುತ್ತಾನೆ. ತೃಪ್ತಿ ಹೊಂದಿದ ಶ್ರೀ ಕೃಷ್ಣನು ತನ್ನ ವಿವಿಧ ರೂಪಗಳ ದರ್ಶನ ಕೊಟ್ಟನು. ಅರುಣನನ್ನು ಕ್ಷಮಿಸಿ ಆಶೀರ್ವದಿಸಿ ತನ್ನ ತಂದೆಯನ್ನು ಕರೆದುಕೊಂಡು ಯಮನೆಯ ದಡಕ್ಕೆ ಬಂದನು.

ಇದನ್ನೂ ಓದಿ: ಬೆಂಗಳೂರಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ: ಮಲ್ಲೆಶ್ವರಂ ಟಿಟಿಡಿಯಲ್ಲಿ ಹಬ್ಬದ ವಾತಾವರಣ

ನಂದಗೋಪನು ವರುಣ ಲೋಕದಲ್ಲಿ ಕಂಡ ದೃಶ್ಯವನ್ನು ಶ್ರೀ ಕೃಷ್ಣನ ವಿವಿಧ ರೂಪಗಳ ದರ್ಶನ ಕೊಟ್ಟಿದ್ದು, ಅಲ್ಲಿನ ಅತಿಥಿಸತ್ಕಾರ ಕೃಷ್ಣನಿಗೆ ಉಪಚಾರ ಮಾಡಿದ್ದು ಎಲ್ಲವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವುದನ್ನು ಭಕ್ತಿಯಿಂದ ಕೇಳಿದ ಗೋಪಾಲಕರು, ತಮಗೆ ಮಾತ್ರ ಕೃಷ್ಣನ ವಿವಿಧ ರೂಪದ ದರ್ಶನ ಭಾಗ್ಯ ಇಲ್ಲವಾಯಿತು ಎಂದು ಬೇಸರಪಟ್ಟರು. ಇದನ್ನು ತಿಳಿದ ಶ್ರೀ ಕೃಷ್ಣ ಗೋಪಾಲಕರಿಗೆ ಯಮುನಾ ತೀರ್ಥದ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬರಲು ಹೇಳಿದನು. ಎಲ್ಲಾ ಗೋಪ ಬಾಲಕರು ಯಮುನೆಯ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬಂದರು ಶ್ರೀ ಕೃಷ್ಣನು ಗೋಪ ಬಾಲಕರಿಗೆಲ್ಲ ತನ್ನ ವಿವಿಧ ರೂಪಗಳ ದರ್ಶನ ಮಾಡಿಸಿದನು. ಹೀಗೆ ಗೋಪ ಬಾಲಕರು ಶ್ರೀ ಕೃಷ್ಣನ ದಿವ್ಯ ರೂಪದ ದರ್ಶನವನ್ನು ಕಣ್ತುಂಬಿಕೊಂಡರು, ಇದು ನಡೆದಿದ್ದು ಇಂದಿನ ಭೂ ವೈಕುಂಠ ಎಂದು ಪ್ರಸಿದ್ಧಿ ಪುಣ್ಯಕ್ಷೇತ್ರವಾದ ತಿರುಪತಿಯಲ್ಲಿ. ಗೋಪಾಲಕರಿಗೆ ಶ್ರೀ ಕೃಷ್ಣನು ದಿವ್ಯ ದರ್ಶನ ತೋರಿದ್ದು ವೈಕುಂಠ ಏಕಾದಶಿಯಂದು, ಹೀಗಾಗಿ ಭೂವೈಕುಂಠದಲ್ಲಿ ನೆಲೆಸಿರುವ ತಿರುಪತಿಯ ಶ್ರೀನಿವಾಸನ ದರ್ಶನ ಪಡೆದವರಿಗೆ ಪುತ್ರ ಪೌತ್ರಾದಿ, ಸಂಪತ್ತು ಅಭಿವೃದ್ಧಿ, ಆರೋಗ್ಯ- ಭಾಗ್ಯ ಸೇರಿದಂತೆ ಸಕಲವನ್ನೂ ವಿಷ್ಟು ಕರುಣಿಸುವನು.

ಮೋಕ್ಷದ ಹಾಗೂ ಪುತ್ರದಾ ಏಕಾದಶಿ ಮಹತ್ವ

ರಾಜರ್ಷೀ ವೈಖಾನಸ ಎಂಬ ರಾಜ ‘ಚಂಪಕ’ ನಗರವನ್ನು ಆಳುತ್ತಿದ್ದನು. ಅವನ ಪತ್ನಿ ಶೈಭ್ಯ. ಈ ದಂಪತಿಗಳಿಗೆ ಸಂತಾನವಿಲ್ಲದೆ ಕೊರಗುತ್ತಿದ್ದರು. ರಾಜನ ನಂತರ ರಾಜ್ಯಭಾರ ಮಾಡುವವರು ಯಾರು? ಎಂದು ಪತಿ- ಪತ್ನಿ ಮಾತಾಡಿಕೊಂಡು ಚಿಂತಿಸುತ್ತಾ ಅಂತಃಪುರದಲ್ಲಿ ಕಾಲ ಕಳೆಯುತಿದ್ದರು. ಒಮ್ಮೆ ರಾಜನಿಗೆ ಒಂದು ಕನಸು ಬಿದ್ದಿತು. ತನ್ನ ತಂದೆ ನರಕದಲ್ಲಿ ಪ್ರೇತಾತ್ಮವಾಗಿ ನೇತಾಡುವುದನ್ನು ಕಂಡನು. ಈ ಕುರಿತು ಅರಮನೆ ಹಿರಿಯ ‘ಪಂಡಿತ’ ರಲ್ಲಿ ವಿಚಾರಿಸಿದಾಗ, ಅವರು ಧ್ಯಾನಮಜ್ಞ್ರಾಗಿ ತಿಳಿದು ರಾಜನಿಗೆ ನಿಮ್ಮ ತಂದೆ ನರಕದಲ್ಲಿ ಪ್ರೇತಾತ್ಮ ಆಗಿರುವ ಕಾರಣ ಅವರು ಜೀವಿಸಿರುವಾಗ ಅನೇಕ ಪತ್ನಿಯರನ್ನು ಹೊಂದಿದ್ದರು. ಅದರಲ್ಲಿ ಒಬ್ಬ ಪತ್ನಿ ಋತುಮತಿಯಾದಾಗ, ಆಕೆ ಬೇಡವೆಂದರು ಆಕೆಯ ಜೊತೆ ಸಂಬಂಧವನ್ನು ಮಾಡಿದರು. ಹಾಗೂ ಇನ್ನೊಮ್ಮೆ ಅದೇ ಪತ್ನಿ ರಸಿಕತೆಯನ್ನು ಬಯಸಿ ಬಂದಾಗ ದೂರ ತಳ್ಳಿದರು. ಈ ಪಾಪ ಕೃತ್ಯದಿಂದಾಗಿ ನರಕ ವಾಸ ಅನುಭವಿಸುತ್ತಿದ್ದಾರೆ. ನರಕದಿಂದ ಮುಕ್ತರಾಗಿ ಸದ್ಗತಿ ಹೊಂದಲು ಏನು ಮಾಡಬೇಕು ಎಂಬುದನ್ನು ಪರ್ವತ ಪ್ರದೇಶಗಳಲ್ಲಿ ಇರುವ ಋಷಿಮುನಿಗಳಲ್ಲಿ ಪರಿಹಾರ ಕೇಳಿ ಎಂದರು.

ರಾಜನು ಕುದುರೆ ಹತ್ತಿ ದಟ್ಟಾರಣ್ಯದತ್ತ ಹೊರಟನು. ಅಲ್ಲಿ, ಪಶು ಪಕ್ಷಿಗಳೆಲ್ಲ ತಮ್ಮ ಸಂತಾನದೊಂದಿಗೆ ಸಂತೋಷವಾಗಿ ಜೀವಿಸುವುದನ್ನು ಕಂಡು ತನಗೆ ಆ ಭಾಗ್ಯ ವಿಲ್ಲ ಎಂದುಕೊಂಡು ಮುಂದೆ ಹೋದಂತೆ ಹಸಿವು ಹೆಚ್ಚಾಗಿ ಎಲ್ಲಾದರೂ ಋಷಿ ಆಶ್ರಮ ಇರುವುದೇ ಎಂದು ಹುಡುಕುತ್ತಾ ಹೋದಾಗ ಮುಂದೆ ಸರೋವರ ಕಾಣಿಸಿತು. ಅಲ್ಲಿ ಕೆಲ ಮುನಿವರ್ಯರು ಸ್ನಾನ- ಜಪ – ತಪ- ಧ್ಯಾನಗಳಲ್ಲಿ ತೊಡಗಿದ್ದರು. ರಾಜನು ಸಹ ಅಲ್ಲಿ ಹೋಗಿ ಅವರ ಮುಂದೆ ಕೈ ಮುಗಿದು ನಿಂತನು. ಮುನಿಗಳು ರಾಜನನ್ನು ಕಂಡು, ರಾಜ ನೀನೇಕೆ ಇಲ್ಲಿಗೆ ಬಂದಿರುವೆ ನಿನ್ನ ಮನದ ದುಗುಡವೇನು ಎಂದು ಪ್ರಶ್ನಿಸಿದರು. ರಾಜ ಕೇಳಿದ ಮುನಿಗಳೇ ತಾವೆಲ್ಲ ಯಾರು ಏಕಾಗಿ ಇಲ್ಲಿದ್ದೀರಿ ಎಂದು ಕೇಳಿದಾಗ, ಅವರು ಹೇಳಿದರು ನಾವು ಒಟ್ಟು 10 ಜನ ನಮ್ಮನ್ನು ‘ವಿಶ್ವ’ ದೇವತೆಗಳು ಎನ್ನುತ್ತಾರೆ. ‘ಧರ್ಮ’ ಎಂಬ ಮುನಿಯ ಮಕ್ಕಳು. ದಕ್ಷನ ಪುತ್ರಿ ‘ವಿಶ್ವ’ ನಮ್ಮ ತಾಯಿ. ನಮ್ಮ ಹೆಸರು ಪೃಥು, ದಕ್ಷ, ವಸು, ಸತ್ಯ, ಕಾಲ ಕಾಲ, ಮುನಿ, ಕುರಜಾ, ಮನುಜ, ವಿರಜ, ರೋಚಮಾನ ಎಂದು. ನಾವೆಲ್ಲರೂ ಪುಷ್ಯ ಮಾಸದ, ಪುತ್ರದಾ ಏಕಾದಶಿ ನಿಮಿತ್ತ ಸ್ನಾನಕ್ಕಾಗಿ ಇಲ್ಲಿಗೆ ಬಂದಿದ್ದೇವೆ ಇನ್ನು ಐದು ದಿನ ಇರುತ್ತೇವೆ ಎಂದರು.

ಇದನ್ನೂ ಓದಿ: ಬೆಂಗಳೂರಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ: ಮಲ್ಲೆಶ್ವರಂ ಟಿಟಿಡಿಯಲ್ಲಿ ಹಬ್ಬದ ವಾತಾವರಣ

ರಾಜ ಹೇಳಿದ ಮುನಿಗಳೇ ನನ್ನ ತಂದೆ ನರಕದಲ್ಲಿ ಪ್ರೇತಾತ್ಮವಾಗಿದ್ದಾರೆ ಏನು ಮಾಡಬೇಕು ಹಾಗೂ ನನಗೆ ಸಂತಾನವಿಲ್ಲ ನಾನು ಏನು ಮಾಡಲಿ? ದಯವಿಟ್ಟು ಪರಿಹಾರ ಹೇಳಿ ಎಂದು ಪ್ರಾರ್ಥಿಸಿದನು. ಮುನಿಗಳು ಹೇಳಿದರು ಚಿಂತಿಸಬೇಡ ನಾಳೆ ಬರುವ ಏಕಾದಶಿ’ ವ್ರತವನ್ನು ಶ್ರದ್ಧಾ ಭಕ್ತಿ ಯಿಂದ ಆಚರಿಸು ನಿನಗೆ ಒಳ್ಳೆಯ ಪುತ್ರ ಸಂತಾನವಾಗುತ್ತದೆ, ನಿಮ್ಮ ತಂದೆ ಪ್ರೇತಾತ್ಮದಿಂದ ಮುಕ್ತರಾಗಿ ಸ್ವರ್ಗ ಲೋಕ ಸೇರುತ್ತಾರೆ ಎಂದರು. ಅವರು ಹೇಳಿದಂತೆ ‘ಏಕಾದಶಿ ವ್ರತ’ ಮಾಡಿದನು. ಮುಂದೆ ರಾಜನಿಗೆ ಒಳ್ಳೆಯ ಪುತ್ರ ಸಂತಾನವಾಯಿತು. ಅವನ ತಂದೆಗೆ ಪ್ರೇತಾತ್ಮದಿಂದ ಮುಕ್ತಿಯಾಗಿ ಸದ್ಗತಿ ದೊರೆಯಿತು. ರಾಜ ರಾಣಿ ಇಬ್ಬರೂ ಸುಖ ಸಂತೋಷದಿಂದ ಬಾಳಿ ಬದುಕಿದರು. ಮುಂದೆ ಅವರ ಮಗನು ರಾಜನಾಗಿ ಪ್ರಜೆಗಳನ್ನು ಚೆನ್ನಾಗಿ ನೋಡಿಕೊಂಡು ಒಳ್ಳೆಯ ರಾಜನಾಗಿ ಸಮೃದ್ಧಿಯ ರಾಜ್ಯಭಾರ ನಡೆಸಿದನು. ಆತನು ಸಹ ತಂದೆ ಯಂತೆ ‘ಏಕಾದಶಿ’ ವ್ರತವನ್ನು ತಪ್ಪದೇ ಆಚರಿಸಿ ಸದ್ಗತಿಯನ್ನು ಪಡೆದನು. ಅಂದಿನಿಂದ ಈ ಏಕಾದಶಿ ಪುತ್ರದಾ ಏಕಾದಶಿ ಹಾಗೂ ಮೋಕ್ಷದ ಏಕಾದಶಿ ಎಂದಾಯಿತು.

ವೈಕುಂಠ ಏಕಾದಶಿ ವ್ರತದ ಈ ಕಥೆಯನ್ನು ಹೇಳಿ ಕೇಳಿದ ಎಲ್ಲರ ಕಷ್ಟಗಳು ದೂರವಾಗಿ ಸುಖ- ಸಮೃದ್ಧಿ ಹೊಂದುವರು. ಮತ್ತು ಅಶ್ವಮೇಧ ಯಾಗದ ಫಲ ದೊರೆಯುತ್ತದೆ.

ಸಂಕಷ್ಟ ನಾಶನ ವಿಷ್ಣು ಸ್ತೋತ್ರಂ(ಪದ್ಮ ಪುರಾಣಾಂತರ್ಗತಂ)

(ಪದ್ಮ ಪುರಾಣಾಂತರ್ಗತಂ) ನಾರದ ಊವಾಚ !

ಪುನರ್ದೈತ್ಯಂ ಸಮಾಯಾಂತಂ

ದೃಷ್ಟ್ವಾ ದೇವಾ: ಸವಾಸವಾ: !

ಭಯಪ್ರಕಂಪಿತಾ: ಸರ್ವೇ

ವಿಷ್ಣು ಸ್ತೋತುಂ ಪ್ರಚಕ್ರಮು.

ಅಧ್ಯಾತ್ಮಕ್ಕೆ ಸಂಬಂಧಪಟ್ಟ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:52 am, Sat, 23 December 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್