ಗೀತಾ ಜಯಂತಿ: 1 ಲಕ್ಷ ಜನರಿಂದ 42 ಗಂಟೆಗಳ ಕಾಲ ಅಖಂಡ ಗೀತಾ ಪಾರಾಯಣ

Akhand Geeta parayana: ಗೀತಾ ಜಯಂತಿಯಂದು ಅಖಾಂಡ ಗೀತಾ ಪಾರಾಯಣ ಕಾರ್ಯಕ್ರಮದ ಮೂಲಕ ಶ್ರೀಮದ್ಭಗವದ್ಗೀತೆಯ 18 ಅಧ್ಯಾಯಗಳನ್ನು ಆನ್‌ಲೈನ್​​ನಲ್ಲಿ 42 ಗಂಟೆಗಳ ಕಾಲ 18 ಬಾರಿ ಪಠಿಸಲಿದ್ದಾರೆ. ಇಂತಹ ದಾಖಲೆಯನ್ನು ಯಾವ ಗ್ರಂಥಗಳು ಮಾಡಿಲ್ಲ. ಶ್ರೀಮದ್ಭಗವದ್ಗೀತೆಯನ್ನು 5160 ವರ್ಷಗಳ ಹಿಂದೆ, ಇದೇ ವರ್ಷ ಡಿಸೆಂಬರ್​​​ 22-23 ರಂದು ಮೋಕ್ಷದ ಏಕಾದಶಿಯ ದಿನದಂದು ಪ್ರಕಟಿಸಲಾಯಿತು. ಈ ಕಾರಣಕ್ಕೆ ಒಂದು ದೊಡ್ಡ ದಾಖಲೆಯನ್ನು ಮಾಡಲು ವಿಶ್ವವೇ ತಯಾರಾಗಿದೆ.

ಗೀತಾ ಜಯಂತಿ: 1 ಲಕ್ಷ ಜನರಿಂದ 42 ಗಂಟೆಗಳ ಕಾಲ ಅಖಂಡ ಗೀತಾ ಪಾರಾಯಣ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Dec 22, 2023 | 12:52 PM

ಶ್ರೀಮದ್ಭಗವದ್ಗೀತೆ  (srimad bhagavad gita) ವಿಶ್ವದ ಇತಿಹಾಸದಲ್ಲೇ ಒಂದು ದೊಡ್ಡ ದಾಖಲೆಯನ್ನು ನಿರ್ಮಾಣ ಮಾಡಲಿದೆ. ಗೀತಾ ಜಯಂತಿಯಂದು(Geeta Jayanti) ಅಖಾಂಡ ಗೀತಾ ಪಾರಾಯಣ ಕಾರ್ಯಕ್ರಮದ ಮೂಲಕ ಶ್ರೀಮದ್ಭಗವದ್ಗೀತೆಯ 18 ಅಧ್ಯಾಯಗಳನ್ನು ಆನ್‌ಲೈನ್​​ನಲ್ಲಿ 42 ಗಂಟೆಗಳ ಕಾಲ 18 ಬಾರಿ ಪಠಿಸಲಿದ್ದಾರೆ. ಇಂತಹ ದಾಖಲೆಯನ್ನು ಯಾವ ಗ್ರಂಥಗಳು ಮಾಡಿಲ್ಲ. ಶ್ರೀಮದ್ಭಗವದ್ಗೀತೆಯನ್ನು 5160 ವರ್ಷಗಳ ಹಿಂದೆ, ಇದೇ ವರ್ಷ ಡಿಸೆಂಬರ್​​​ 22-23 ರಂದು ಮೋಕ್ಷದ ಏಕಾದಶಿಯ ದಿನದಂದು ಪ್ರಕಟಿಸಲಾಯಿತು. ಈ ಕಾರಣಕ್ಕೆ ಒಂದು ದೊಡ್ಡ ದಾಖಲೆಯನ್ನು ಮಾಡಲು ವಿಶ್ವವೇ ತಯಾರಾಗಿದೆ. ಡಿಸೆಂಬರ್​​ 23, ಬೆಳಿಗ್ಗೆ 6.00ರಿಂದ ಡಿಸೆಂಬರ್​​ 24, ಮಧ್ಯರಾತ್ರಿ 12.00 ಗಂಟೆಯವರೆಗೆ ಪಠಿಸಲಿದ್ದಾರೆ. 18 ಅಧ್ಯಾಯಗಳ ಅಖಂಡ ಪಾರಾಯಣವನ್ನು ಆನ್‌ಲೈನ್‌ನಲ್ಲಿ ನಡೆಸಲಿದೆ. ಜೂಮ್ ಅಪ್ಲಿಕೇಶನ್‌ನ್ನು ಇದಕ್ಕಾಗಿ ಬಳಸಲಾಗುವುದು. ಅಖಂಡ ಪಾರಾಯಣವನ್ನು ಹಿಂದಿ, ಇಂಗ್ಲಿಷ್, ಮರಾಠಿ, ಗುಜರಾತಿ, ಬಂಗಾಳಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ನೇಪಾಳಿ, ಒಡಿಯಾ, ಅಸ್ಸಾಮಿ, ಸಿಂಧಿಗಳಲ್ಲೂ ನಡೆಸಲಾಗುವುದು. ಒಟ್ಟು 180 ದೇಶಗಳು ಈ ಕಾರ್ಯದಲ್ಲಿ ಭಾಗಿಯಾಗಲಿದೆ.

13 ಭಾಷೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಗೀತಾ ಪಠಣ ಮಾಡಲಿದ್ದಾರೆ. ಇನ್ನು ಅಖಂಡ ಪಾರಾಯಣವನ್ನು Learngeeta.com ಮತ್ತು ಗೀತಾ ಪರಿವಾರದ YouTube ಚಾನಲ್​​​ನಲ್ಲಿ ವೀಕ್ಷಣೆ ಮಾಡಬಹುದು. ಈ ಕಾರ್ಯಕ್ಕೆ ಶ್ರೀರಾಮ ಮಂದಿರ ಖಜಾಂಚಿ ಹಾಗೂ ಗೀತಾ ಪರಿವಾರದ ಸಂಸ್ಥಾಪಕ ಪರಮ ಪೂಜ್ಯ ಸ್ವಾಮಿ ಶ್ರೀ ಗೋವಿಂದದೇವ ಗಿರಿ ಜಿ ಮಹಾರಾಜ್ ಅವರು ಚಾಲನೆ ನೀಡಲಿದ್ದಾರೆ. 1986ರಲ್ಲಿ ಸ್ಥಾಪನೆಯಾದ ಗೀತಾ ಪರಿವಾರ ವಿಶ್ವದಲ್ಲೇ ದೊಡ್ಡ ಮಟ್ಟದಲ್ಲಿ ಶ್ರೀಮದ್ಭಗವದ್ಗೀತೆ ತರಬೇತಿಯನ್ನು ನೀಡುತ್ತಿದೆ. ಹಿಂದಿ, ಇಂಗ್ಲಿಷ್, ಮರಾಠಿ, ಗುಜರಾತಿ, ಬೆಂಗಾಲಿ, ಕನ್ನಡ, ತಮಿಳು, ತೆಲುಗು, ಒರಿಯಾ, ನೇಪಾಳಿ, ಅಸ್ಸಾಮಿ, ಮಲಯಾಳಂ, ಸಿಂಧಿ ಮುಂತಾದ 13 ಭಾಷೆಗಳಲ್ಲಿ ಜೂಮ್ ಆನ್‌ಲೈನ್ ಮೂಲಕ ಪ್ರತಿದಿನ 8 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: ಧರ್ಮಗ್ರಂಥ ಭಗವದ್ಗೀತಾ ಆವಿರ್ಭವಿಸಿದ ದಿನ, ಗೀತಾಜಯಂತಿ ದಿನಾಂಕ, ಮಹತ್ವ, ಆಚರಣೆ ಇಲ್ಲಿದೆ

ಗೀತೆಯನ್ನು ಕಲಿಯುವ, ತಿಳಿದುಕೊಳ್ಳುವ ಮತ್ತು ಅಳವಡಿಸಿಕೊಳ್ಳುವ ಆಕಾಂಕ್ಷಿಗಳು Learngeeta ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಗೀತೆಯನ್ನು ಸರಳವಾಗಿ ಮತ್ತು ನಿಮ್ಮ ಭಾಷೆಗಳಲ್ಲಿ ಕಲಿಯಬಹುದು. ಯಾರು ಬೇಕಾದರೂ ಈ ತರಬೇತಿಗೆ ಸೇರಿಕೊಳ್ಳಬಹುದು. ಇನ್ನು ಗೀತೆಯನ್ನು ಸ್ಕ್ರಿಪ್ಟ್ ಮಾಡಿದ ಸ್ಲೈಡ್‌ಗಳನ್ನು ಪರದೆಯ ಮೇಲೆ ತೋರಿಸಲಾಗುವುದು. ಆಫ್‌ಲೈನ್‌ನಲ್ಲಿ ಕೂಡ ಈ ಕಾರ್ಯದಲ್ಲಿ ಸೇರಿಕೊಳ್ಳುತ್ತಾರೆ. ದೇಶ ಮತ್ತು ವಿದೇಶಗಳಲ್ಲಿ 1000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಗೀತಾ ಪಠಣೆ ಮಾಡಲಾಗುತ್ತದೆ.

ಗೀತಾ ಜಯಂತಿ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು learngeeta.com/geetajayanti ಗೆ ಭೇಟಿ ನೀಡುವ ಮೂಲಕ ಅಥವಾ ಟೋಲ್-ಫ್ರೀ ಸಂಖ್ಯೆ 1800 203 6500 ಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು.

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ