AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Financial Problems: ನಿಮ್ಮ ಹಣಕಾಸಿನ ಸಮಸ್ಯೆ ಪರಿಹರಿಸಲು ಪ್ರತಿದಿನ ಸಂಜೆ ಈ ಕೆಲಸ ಮಾಡಿ

ಎಷ್ಟೇ ದುಡಿದರೂ ದುಡ್ಡು ಕೈಯಲ್ಲೇ ನಿಲ್ಲುತ್ತಿಲ್ಲ, ಸಾಲ ಹೆಚ್ಚಾಗುತ್ತಿದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ವಾಸ್ತು ತಜ್ಞರು ನೀಡಿರುವ ಈ ಸಲಹೆಗಳನ್ನು ಅನುಸರಿಸಿ. ಪ್ರತಿದಿನ ಸಂಜೆ ಈ ಕೆಲಸ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ಸುಧಾರಿಸುತ್ತದೆ.

Financial Problems: ನಿಮ್ಮ ಹಣಕಾಸಿನ ಸಮಸ್ಯೆ ಪರಿಹರಿಸಲು ಪ್ರತಿದಿನ ಸಂಜೆ ಈ ಕೆಲಸ ಮಾಡಿ
Financial ProblemsImage Credit source: Pinterest
ಅಕ್ಷತಾ ವರ್ಕಾಡಿ
|

Updated on:Dec 21, 2023 | 4:34 PM

Share

ಲಕ್ಷ್ಮೀ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಅವರಿಂದ ದೇವಿಯ ಆಶೀರ್ವಾದ ಪಡೆದ ವ್ಯಕ್ತಿಯು ತನ್ನ ಜೀವನದಲ್ಲಿ ಎಂದಿಗೂ ಹಣದ ಕೊರತೆಯ ಸಮಸ್ಯೆಯನ್ನು ಅನುಭವಿಸುವುದಿಲ್ಲ ಎಂಬ ನಂಬಿಕೆ. ಇದರೊಂದಿಗೆ ಆತ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ. ಧರ್ಮಗ್ರಂಥಗಳ ಪ್ರಕಾರ, ಲಕ್ಷ್ಮಿ ದೇವಿಯು ಸಮುದ್ರ ಮಂಥನದ ಸಮಯದಲ್ಲಿ ಹುಟ್ಟಿಕೊಂಡಳು. ನೀರಿನಿಂದ ಹುಟ್ಟಿದ್ದು, ಒಂದೇ ಸ್ಥಳದಲ್ಲಿ ಉಳಿಯುವುದು ಆಕೆಯ ಸ್ವಭಾವವಲ್ಲ. ಆದ್ದರಿಂದ ಜನರು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದ್ದರಿಂದ ಇಲ್ಲಿ ನೀಡಿರುವ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಲಕ್ಷ್ಮಿ ದೇವಿಯನ್ನು ಮೆಚ್ಚಿಸಬಹುದು. ಈ ಮೂಲಕ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಶಾಶ್ವತವಾಗಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.

ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಸಂಜೆ ಈ ಕಾರ್ಯ ಮಾಡಿ:

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದ ಜನರು ಸಂತೋಷದ ಜೀವನದ ಜೊತೆಗೆ ಸಮಾಜದಲ್ಲಿ ಗೌರವವೂ ಸಿಗುತ್ತದೆ. ಹಿಂದೂ ಧರ್ಮದಲ್ಲಿ, ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಪೂಜೆಯ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಾಡುವ ಪೂಜೆಯು ಶುಭ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಂಜೆ ಈ ಪರಿಹಾರವನ್ನು ಮಾಡಿ.

ಇದನ್ನೂ ಓದಿ: ಒಂದು ರೂಪಾಯಿ ಖರ್ಚು ಮಾಡದೆ ಮನೆಯ ವಾಸ್ತು ದೋಷ ನಿವಾರಿಸುವುದು ಹೇಗೆ ಗೊತ್ತಾ?

ಪ್ರತಿದಿನ ಸಂಜೆ ತುಳಸಿ ಗಿಡಕ್ಕೆ ಶುದ್ಧ ಹಸುವಿನ ತುಪ್ಪದ ದೀಪವನ್ನು ಹಚ್ಚಬೇಕು. ತುಳಸಿ ಕಟ್ಟೆಗೆ ಪ್ರದಕ್ಷಿಣೆಯನ್ನು ಮಾಡಿ ಮತ್ತು ಈ ಸಮಯದಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿ. ನೀವು ಇದನ್ನು ಪ್ರತಿದಿನ ಮಾಡುವುದರಿಂದ, ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ನಿಮ್ಮ ಮೇಲೆ ದೇವಿಯ ಆಶೀರ್ವಾದ ಸದಾ ಇರುತ್ತದೆ. ಜೊತೆಗೆ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆ ಕೊನೆಗೊಳ್ಳುತ್ತದೆ.

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದ್ದು, ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗಿದೆ. ತುಳಸಿ ಕೂಡ ವಿಷ್ಣುವಿಗೆ ತುಂಬಾ ಪ್ರಿಯ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡವನ್ನು ಪೂಜಿಸುವ ಮತ್ತು ಅರ್ಘ್ಯವನ್ನು ಪ್ರತಿದಿನ ಅರ್ಪಿಸುವ ಮನೆಯಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ.

ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:30 pm, Thu, 21 December 23