ದೇಶದಲ್ಲಿಯೇ ಮೊದಲ ಬಾರಿಗೆ ಯೋಗ, ಅರಿವಿನ ವಿಜ್ಞಾನದಲ್ಲಿ ಸ್ನಾತ್ತಕೋತ್ತರ ಪದವಿ ಆರಂಭಿಸಿದ ಅಮೃತ ವಿಶ್ವವಿದ್ಯಾಪೀಠ ವಿಶ್ವವಿದ್ಯಾನಿಲಯ

NIRF ಶ್ರೇಯಾಂಕಗಳು 2023 ರಲ್ಲಿ ಭಾರತದ ಟಾಪ್ 10 ವಿಶ್ವವಿದ್ಯಾನಿಯಗಳಲ್ಲಿ ಸ್ಥಾನ ಪಡೆದಿರುವ ಅಮೃತ ವಿಶ್ವವಿದ್ಯಾಪೀಠವು ದೇಶದಲ್ಲಿಯೇ ಮೊದಲ ಬಾರಿಗೆ ಯೋಗ ಮತ್ತು ಅರಿವಿನ ವಿಜ್ಞಾನದಲ್ಲಿ ಸ್ನಾತ್ತಕೊತ್ತರ ಪದವಿಯನ್ನು ಆರಂಭಿಸಲಿದೆ. ಈ ಕುರಿತು ಅಧಿಕೃತವಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಯೋಗ, ಅರಿವಿನ ವಿಜ್ಞಾನದಲ್ಲಿ ಸ್ನಾತ್ತಕೋತ್ತರ ಪದವಿ ಆರಂಭಿಸಿದ ಅಮೃತ ವಿಶ್ವವಿದ್ಯಾಪೀಠ ವಿಶ್ವವಿದ್ಯಾನಿಲಯ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 04, 2023 | 9:30 PM

NIRF ರ್ಯಾಂಕಿಂಗ್ 2023 ರಲ್ಲಿ ಭಾರತದ ಟಾಪ್ 10 ವಿಶ್ವವಿದ್ಯಾನಿಯಗಳಲ್ಲಿ ಸ್ಥಾನ ಪಡೆದಿರುವ ಅಮೃತ ವಿಶ್ವವಿದ್ಯಾಪೀಠವು ದೇಶದಲ್ಲಿಯೇ ಮೊದಲ ಬಾರಿಗೆ ಯೋಗ ಮತ್ತು ಅರಿವಿನ ವಿಜ್ಞಾನದಲ್ಲಿ ಸ್ನಾತ್ತಕೊತ್ತರ ಪದವಿಯನ್ನು ಪ್ರಾರಂಭಿಸಲಿದೆ. ಅಮೃತ ಮೈಂಡ್ ಬ್ರೈನ್ ಸೆಂಟರ್​​ನಿಂದ ನೀಡಲಾಗುವ ಈ ವಿನೂತನ ಕೋರ್ಸ್ ಅರಿವಿನ ವಿಜ್ಞಾನದ ಅತ್ಯಾಧುನಿಕ ಒಳನೋಟಗಳೊಂದಿಗೆ ಪ್ರಾಚೀನ ಯೋಗ ಅಭ್ಯಾಸಗಳ ಕುರಿತು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಲಿದೆ. ಈ ಎಂ.ಎಸಿ ಕೋರ್ಸ್ ಗೆ ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು, ಮೊದಲ ಬ್ಯಾಚ್ ಸೆಪ್ಟೆಂಬರ್​​ನಲ್ಲಿ ಆರಂಭವಾಗಲಿದೆ.

ಎಂ.ಎಸ್ಸಿಗೆ ಪ್ರವೇಶ ಪ್ರಕ್ರಿಯೆಯು ಹಲವು ಹಂತಗಳಲ್ಲಿ ನಡೆಯಲಿದೆ. ಪ್ರವೇಶಪೂರ್ವ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ನಂತರ, ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಕಠಿಣ ಸಂದರ್ಶನಕ್ಕೆ ಒಳಪಡಿಸಲಾಗುತ್ತದೆ. ಸಂದರ್ಶನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳಿಗೆ ತಾತ್ಕಾಲಿಕ ಪ್ರವೇಶಾತಿಯನ್ನು ನೀಡಲಾಗುತ್ತದೆ. ಅಭ್ಯರ್ಥಿಗಳ ಪದವಿ ಅಂಕಗಳನ್ನು ಪರಿಶೀಲಿಸಿ, ಪ್ರವೇಶದ ದೃಢೀಕರಣದ ನಂತರ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಸೀಟು ನೀಡಲಾಗುತ್ತದೆ.

ಯೋಗ ಮತ್ತು ಅರಿವಿನ ವಿಜ್ಞಾನದ ಪಠ್ಯಕ್ರಮವನ್ನು ಮನಸ್ಸು, ದೇಹ ಮತ್ತು ಪ್ರಜ್ಞೆಯ ನಡುವಿನ ಸಂಕೀರ್ಣ ಸಂಪರ್ಕಗಳನ್ನು ಅನ್ವೇಷಿಸಲು ನಿಖರವಾಗಿ ರಚಿಸಲಾಗಿದೆ. ಮಾನವನ ನಡವಳಿಕೆ ಮತ್ತು ಅರಿವಿನ ಆಳವಾದ ತಿಳಿವಳಿಕೆಯನ್ನು ಇದು ಉತ್ತೇಜಿಸುತ್ತದೆ. ನಾಲ್ಕು ಸೆಮಿಸ್ಟರ್ ಗಳ ಈ ಎಂ.ಎಸ್ಸಿ ಪಠ್ಯಕ್ರಮವು ಯೋಗ ತತ್ವಶಾಸ್ತ್ರ ಮತ್ತು ಅದರ ಅಭ್ಯಾಸಗಳ ಅಧ್ಯಯನ, ಅರಿವಿನ ಮೇಲೆ ಸಂಸ್ಕೃತ ಭಾಷೆಯ ಪ್ರಭಾವ, ಮಾನವ ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರ, ಅರಿವಿನ ವಿಜ್ಞಾನ ಮತ್ತು ನರವಿಜ್ಞಾನ ಸೇರಿದಂತೆ ವಿಶಿಷ್ಟ ಮತ್ತು ಅತ್ಯಾಧುನಿಕ ವಿಷಯಗಳ ವೈವಿಧ್ಯಮಯ ಪಠ್ಯಕ್ರಮವನ್ನು ಈ ಹೊಸ ಕೋರ್ಸ್​​ನಲ್ಲಿ ಅಳವಡಿಸಲಾಗಿದೆ” ಎಂದು ಅಮೃತ ವಿಶ್ವವಿದ್ಯಾಪೀಠ ವಿಶ್ವವಿದ್ಯಾನಿಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಹತಾ ಮಾನದಂಡಗಳ ಪ್ರಕಾರ, ಈ ನಿರ್ಧಿಷ್ಟ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಲು ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ಮನೋವಿಜ್ಞಾನ ಇಂಜಿನಿಯರ್ ಅಥವಾ ಮೆಡಿಸಿನ್ ನಂತಹ ಯಾವುದೇ ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪಡೆದಿರಬೇಕು. ನೀವು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅಮೃತ ವಿಶ್ವ ವಿದ್ಯಾಪೀಠದ ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

ಇದನ್ನೂ ಓದಿ: ವಿಶ್ವ ಐವಿಎಫ್ ದಿನ ಆಚರಿಸಿಕೊಂಡ ಬೆಂಗಳೂರಿನ ಓಯಸಿಸ್​​ ಫರ್ಟಿಲಿಟಿ ಸಂಸ್ಥೆ

ಭಾರತದ ಅತ್ಯುತ್ತಮ ಖಾಸಗಿ ವಿಶ್ವವಿದ್ಯಾನಿಯ

ಭಾರತದ ಅತ್ಯುತ್ತಮ ಖಾಸಗಿ ವಿಶ್ವವಿದ್ಯಾನಿಯಗಳಲ್ಲಿ ಒಂದಾದ ಅಮೃತ ವಿಶ್ವ ವಿದ್ಯಾಪೀಠಂ ಬಹು-ಕ್ಯಾಂಪಸ್ ಸಂಸ್ಥೆಯಾಗಿದ್ದು, ನ್ಯಾಕ್ ನಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ತಮಿಳುನಾಡಿನ ಕೊಯಮುತ್ತೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಈ ವಿಶ್ವವಿದ್ಯಾನಿಲಯ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳಲ್ಲಿ ಆರು ಕ್ಯಾಂಪಸ್ ಗಳನ್ನು ಹೊಂದಿದೆ. ಅಲ್ಲದೆ ಅಮೃತ ವಿಶ್ವ ವಿದ್ಯಾಪೀಠಂ ವಿಶ್ವವಿದ್ಯಾನಿಲಯವು ಸಂಶೋಧನೆಗಳಿಗಾಗಿ ಪ್ರಪಂಚದಾದ್ಯಂತ ಶೈಕ್ಷಣಿಕ, ಉದ್ಯಮ ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಹಾರ್ವರ್ಡ್ ವಿಶ್ವವಿದ್ಯಾಲಯ, ಕೊಲಂಬಿಯಾ ವಿಶ್ವವಿದ್ಯಾಲಯ, ಕಿಂಗ್ಸ್ ಕಾಲೇಜು ಲಂಡನ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯ, ಟೋಕಿಯೊ ವಿಶ್ವವಿದ್ಯಾಲಯದೊಂದಿಗೆ ಸೇರಿದಂತೆ ಅನೇಕ ವಿಶ್ವವಿದ್ಯಾಲಯದೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

Published On - 9:13 pm, Fri, 4 August 23