ABD ಕನಸಿನ ತಂಡದ ನಾಯಕ ಕೊಹ್ಲಿ ಅಲ್ಲ.. ಮತ್ತೆ ಯಾರಂತೆ!
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಮಿ.360 ಎಬಿ ಡಿವಲಿಯರ್ಸ್ ಫ್ರೆಂಡ್ಶಿಪ್ ಹಾಗಿದೆ. ಎರಡು ದೇಹವಾದ್ರೂ ಒಂದೇ ಪ್ರಾಣ ಅನ್ನೋ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅದ್ರಲ್ಲೂ ಐಪಿಎಲ್ನಲ್ಲಿ ಇವರಿಬ್ಬರ ಬ್ಯಾಟಿಂಗ್ ಜುಗಲ್ಬಂದಿ ಅಷ್ಟೇ ಅಲ್ಲ. ಇವರಿಬ್ಬರ ಕುಚಿಕು ಕುಚಿಕು ಫ್ರೆಂಡ್ಶಿಪ್ ಅಭಿಮಾನಿಗಳಿಗೆ ಇನ್ನಿಲ್ಲದ ಕಿಕ್ ನೀಡುತ್ತೆ. ಅಷ್ಟರ ಮಟ್ಟಿಗೆ ಕೊಹ್ಲಿ, ಎಬಿಡಿ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಕೇವಲ ಆರ್ಸಿಬಿ ತಂಡಕ್ಕಷ್ಟೆ ಕೊಹ್ಲಿ, ಎಬಿಡಿ ಸ್ನೇಹ ಸೀಮಿತವಾಗಿಲ್ಲ. ಮೈದಾನದಾಚೆಗೂ ಕೊಹ್ಲಿ ಮತ್ತು ಎಬಿಡಿ […]
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಮಿ.360 ಎಬಿ ಡಿವಲಿಯರ್ಸ್ ಫ್ರೆಂಡ್ಶಿಪ್ ಹಾಗಿದೆ. ಎರಡು ದೇಹವಾದ್ರೂ ಒಂದೇ ಪ್ರಾಣ ಅನ್ನೋ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅದ್ರಲ್ಲೂ ಐಪಿಎಲ್ನಲ್ಲಿ ಇವರಿಬ್ಬರ ಬ್ಯಾಟಿಂಗ್ ಜುಗಲ್ಬಂದಿ ಅಷ್ಟೇ ಅಲ್ಲ. ಇವರಿಬ್ಬರ ಕುಚಿಕು ಕುಚಿಕು ಫ್ರೆಂಡ್ಶಿಪ್ ಅಭಿಮಾನಿಗಳಿಗೆ ಇನ್ನಿಲ್ಲದ ಕಿಕ್ ನೀಡುತ್ತೆ. ಅಷ್ಟರ ಮಟ್ಟಿಗೆ ಕೊಹ್ಲಿ, ಎಬಿಡಿ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ.
ಕೇವಲ ಆರ್ಸಿಬಿ ತಂಡಕ್ಕಷ್ಟೆ ಕೊಹ್ಲಿ, ಎಬಿಡಿ ಸ್ನೇಹ ಸೀಮಿತವಾಗಿಲ್ಲ. ಮೈದಾನದಾಚೆಗೂ ಕೊಹ್ಲಿ ಮತ್ತು ಎಬಿಡಿ ಆತ್ಮೀಯ ಸ್ನೇಹಿತರಾಗೇ ಗುರುತಿಸಿಕೊಂಡಿದ್ದಾರೆ. ನಾವ್ಯಾಕೆ ಇವರಿಬ್ಬರ ಫ್ರೆಂಡ್ ಶಿಪ್ ಬಗ್ಗೆ ಹೇಳ್ತಿದ್ದೀವಿ ಅಂದ್ರೆ, ಎಬಿಡಿ ಈಗ ತಮ್ಮ ಐಪಿಎಲ್ ಕನಸಿನ ತಂಡವೊಂದನ್ನ ರಚಿಸಿದ್ದಾರೆ.
ಎಬಿಡಿ ಐಪಿಎಲ್ ಡ್ರೀಮ್ ಟೀಮ್ ರೆಡಿ ಮಾಡಿದ್ದಾರೆ ಅಂದ್ರೆ, ಅದಕ್ಕೆ ವಿರಾಟ್ ಕೊಹ್ಲಿಯಲ್ಲದೇ ಮತ್ತಿನ್ಯಾರು ನಾಯಕರಾಗೋದಕ್ಕೆ ಸಾಧ್ಯ ಅಂತಾ ನೀವಂದ್ಕೊಂಡಿರಬಹುದು. ಅಲ್ಲೇ ಇರೋದು ಇಂಟ್ರಸ್ಟಿಂಗ್ ಸ್ಟೋರಿ. ಅದೇನಂದ್ರೆ ಎಬಿಡಿ ಕೊಹ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ ಐಪಿಎಲ್ ಡ್ರೀಮ್ ಇಲೆವೆನ್ಗೆ ಮಹೇಂದ್ರ ಸಿಂಗ್ ಧೋನಿಯನ್ನ ನಾಯಕನನ್ನಾಗಿ ನೇಮಿಸಿದ್ದಾರೆ.
ತಮ್ಮ ತಂಡಕ್ಕೆ ಧೋನಿಯನ್ನ ನಾಯಕನನ್ನಾಗಿ ನೇಮಿಸಿರುವ ಡಿವಿಲಿಯರ್ಸ್, ತಮ್ಮನ್ನು ಸೇರಿದಂತೆ ನಾಲ್ಕು ವಿದೇಶಿ ಕ್ರಿಕೆಟಿಗರಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಹಾಗಾದ್ರೆ ಎಬಿಡಿ ಐಪಿಎಲ್ ಡ್ರೀಮ್ ಟೀಮ್ ಹೇಗಿದೆ ಅನ್ನೋದನ್ನ ನೋಡೋದಾದ್ರೆ, ಎಂ.ಎಸ್ ಧೋನಿ ನಾಯಕತ್ವದ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಇಂಗ್ಲೆಂಡ್ನ ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ, ಅಫ್ಘಾನಿಸ್ತಾನ ತಂಡದ ರಶೀದ್ ಖಾನ್, ಭುವನೇಶ್ವರ್ ಕುಮಾರ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಾ ಮತ್ತು ಜಸ್ಪ್ರೀತ್ ಬುಮ್ರಾಗೆ ಚಾನ್ಸ್ ನೀಡಿದ್ದಾರೆ.
ಎಬಿಡಿಯ ಐಪಿಎಲ್ ಡ್ರೀಮ್ ಟೀಮ್ ಪ್ರಕಟವಾಗುತ್ತಿದ್ದಂತೆ, ಕೊಹ್ಲಿ ಅಭಿಮಾನಿಗಳೆಲ್ಲಾ, ಅವರೇ ನಾಯಕರಾಗಿರ್ತಾರೆ ಅಂದ್ಕೊಂಡಿದ್ರು. ಆದ್ರೆ ಎಬಿಡಿ ನಾಯಕತ್ವದ ವಿಚಾರದಲ್ಲಿ ಸ್ನೇಹಕ್ಕೆ ಮಣೆ ಹಾಕಿಲ್ಲ. ನಿಜಕ್ಕೂ ಕ್ಯಾಪ್ಟನ್ಸಿ ವಿಚಾರದಲ್ಲಿ ಧೋನಿ ಮುಂದೆ ಕೊಹ್ಲಿ ಸರಿಸಮರಲ್ಲ ಅನ್ನೋದು, ಎಬಿಡಿ ತಂಡದಲ್ಲೂ ಎದ್ದು ಕಾಣ್ತಿದೆ.
Published On - 11:54 am, Fri, 3 July 20