ಅಂಡರ್​ಟೇಕರ್​ VS​ ಅಕ್ಷಯ್​ ಕುಮಾರ್ ರಿಯಲ್​ ಫೈಟ್​; WWE ದೈತ್ಯನ ಸವಾಲಿಗೆ ಅಕ್ಕಿ ಕೊಟ್ಟ ಉತ್ತರವೇನು?

Akshay Kumar vs Undertaker: ‘ರಿಯಲ್​ ಮ್ಯಾಚ್​ಗೆ ನೀವು ಯಾವಾಗ ಸಿದ್ಧವಿದ್ದೀರಿ ಹೇಳಿ’ ಎಂದು ಅಕ್ಷಯ್​ ಕುಮಾರ್​ಗೆ ಅಂಡರ್​ಟೇಕರ್​ ನೇರವಾಗಿ ಸವಾಲು ಹಾಕಿದ್ದಾರೆ. ಅದಕ್ಕೆ ಅಕ್ಕಿ ಕಮೆಂಟ್​ ಮಾಡಿದ್ದಾರೆ.

ಅಂಡರ್​ಟೇಕರ್​ VS​ ಅಕ್ಷಯ್​ ಕುಮಾರ್ ರಿಯಲ್​ ಫೈಟ್​; WWE ದೈತ್ಯನ ಸವಾಲಿಗೆ ಅಕ್ಕಿ ಕೊಟ್ಟ ಉತ್ತರವೇನು?
ಅಕ್ಷಯ್​ ಕುಮಾರ್​, ಅಂಡರ್​ಟೇಕರ್​

Updated on: Jun 19, 2021 | 5:13 PM

ನಟ ಅಕ್ಷಯ್​ ಕುಮಾರ್​ ಅವರು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಸಾಹಸ ಮಾಡುತ್ತಾರೆ. ಹಾಗಂತ ಅವರು ನಿಜಜೀವನದಲ್ಲಿಯೂ WWE ಫೈಟರ್​ಗಳ ಜೊತೆ ಬಡಿದಾಡಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಆದರೂ ಅವರನ್ನು WWE ದೈತ್ಯ ಪ್ರತಿಭೆ ಅಂಡರ್​ಟೇಕರ್​ ಅವರು ಕಾದಾಟಕ್ಕೆ ಆಹ್ವಾನಿಸಿದ್ದಾರೆ. ಆ ಆಹ್ವಾನ ಕಂಡ ಫ್ಯಾನ್ಸ್​ ಸಖತ್ ಎಗ್ಸೈಟ್​ ಆಗಿದ್ದಾರೆ. WWE ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಗಳಲ್ಲೂ ಈ ವಿಚಾರ ಚರ್ಚೆ ಆಗಿದೆ.

ಅಷ್ಟಕ್ಕೂ ಈ ಚರ್ಚೆ ಹುಟ್ಟಿಕೊಳ್ಳಲು ಕಾರಣ ‘ಖಿಲಾಡಿಯೋಂಕಾ ಕಾ ಖಿಲಾಡಿ’ ಸಿನಿಮಾ. ಈ ಚಿತ್ರ ಇತ್ತೀಚೆಗೆ 25 ವರ್ಷ ಪೂರೈಸಿತು. ಅದರಲ್ಲಿ ಅಕ್ಷಯ್​ ಕುಮಾರ್​ ಮತ್ತು ಅಂಡರ್​ಟೇಕರ್​ ನಡುವಿನ ಒಂದು ಫೈಟಿಂಗ್​ ದೃಶ್ಯವಿತ್ತು. ಆದರೆ ಅದರಲ್ಲಿ ನಟಿಸಿರುವುದು ನಿಜವಾದ ಅಂಡರ್​ಟೇಕರ್​ ಅಲ್ಲ ಎಂಬ ಸತ್ಯವನ್ನು ಅಕ್ಷಯ್​ ಕುಮಾರ್​ ಇತ್ತೀಚೆಗೆ ಬಾಯಿ ಬಿಟ್ಟಿದ್ದರು. ಅದಕ್ಕೆ ಅಂಡರ್​ಟೇಕರ್​ ಕಡೆಯಿಂದ ಈಗ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

‘ರಿಯಲ್​ ಮ್ಯಾಚ್​ಗೆ ನೀವು ಯಾವಾಗ ಸಿದ್ಧವಿದ್ದೀರಿ ಹೇಳಿ’ ಎಂದು ಅಕ್ಷಯ್​ ಕುಮಾರ್​ಗೆ ಅಂಡರ್​ಟೇಕರ್​ ನೇರವಾಗಿ ಸವಾಲು ಹಾಕಿದ್ದಾರೆ. ಅದಕ್ಕೆ ಕಮೆಂಟ್​ ಮಾಡಿರುವ ಅಕ್ಕಿ, ‘ನಾನು ನನ್ನ ಇನ್​ಶೂರೆನ್ಸ್​ ಚೆಕ್​ ಮಾಡಿಕೊಂಡು ಬರುತ್ತೇನೆ. ಸ್ವಲ್ಪ ನಿಲ್ಲಿ’ ಎಂದು ತಮಾಷೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಕೆಲವು ಅಭಿಮಾನಿಗಳು ನಿಜವಾಗಿಯೂ ಅಕ್ಷಯ್​ ಕುಮಾರ್​ ಈ ಸವಾಲು ಸ್ವೀಕರಿಸಬೇಕು, ಇಬ್ಬರ ನಡುವೆ ಒಂದು ರಿಯಲ್​ ಮ್ಯಾಚ್​ ಆಗಲೇ ಬೇಕು ಎಂದಿದ್ದಾರೆ. ಆದರೆ ಅಕ್ಷಯ್​ ಕುಮಾರ್​ ಹುಷಾರಾಗಿ ಇರಬೇಕು ಎಂದು ಕೆಲವಿ ಫ್ಯಾನ್ಸ್​ ಎಚ್ಚರಿಕೆ ಕೂಡ ನೀಡಿದ್ದಾರೆ.

ಅನೇಕ ಜನಪರ ಕಾರ್ಯಗಳ ಮೂಲಕವೂ ಅಕ್ಷಯ್​ ಕುಮಾರ್​ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಜಮ್ಮು ಕಾಶ್ಮೀರ ಪ್ರದೇಶಕ್ಕೆ ಅವರು ಭೇಟಿ ನೀಡಿದ್ದರು. ಅಲ್ಲಿನ ಜನರೊಂದಿಗೆ ಕೆಲ ಕಾಲ ಬೆರೆತರು. ನಂತರ ಸೈನಿಕರ ಜೊತೆ ಸಂವಾದ ನಡೆಸಿದರು. ಅವರಿಗೆ ಉತ್ಸಾಹ ತುಂಬಲು ಹಾಡಿ, ಕುಣಿದರು. ಬಿಎಸ್​ಎಫ್​ ಸೈನಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಬಾಲಿವುಡ್​ ನಟನನ್ನು ನೋಡಲು ಸುತ್ತಮುತ್ತಲಿನ ಹಳ್ಳಿಯ ಜನರು ಮುಗಿಬಿದ್ದಿದ್ದರು. ಈ ವೇಳೆ ಅಲ್ಲಿನ ನೀರೂ ಗ್ರಾಮದಲ್ಲಿ ಶಾಲೆ ನಿರ್ಮಾಣಕ್ಕಾಗಿ 1 ಕೋಟಿ ರೂ. ದೇಣಿಗೆ ಕೊಟ್ಟು ಬಂದಿದ್ದಾರೆ.

ಇದನ್ನೂ ಓದಿ:

Akshay Kumar: ಪಾಕಿಸ್ತಾನದ ಬಗ್ಗೆ ಅಕ್ಷಯ್​ ಕುಮಾರ್​ ಪ್ರೀತಿಯ ಮಾತು; ವಿಡಿಯೋ ವೈರಲ್​ ಮಾಡಿದ ಕಮಾಲ್​ ಖಾನ್​

ಅಂಡರ್​ಟೇಕರ್​ ಜತೆ ಗುದ್ದಾಡಿದ್ದ ಅಕ್ಷಯ್​ ಕುಮಾರ್​? ಫೋಟೋ ಹಂಚಿಕೊಂಡ ನಟ