ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಿಂದ ಚಹಾ ಸಪ್ಲೈ: ಮೌನ ಮುರಿದ ಅನುಷ್ಕಾ ಶರ್ಮಾ

ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆಂಬ ಆರೋಪ ಇದೆ. ಆದ್ರೀಗ ಮತ್ತೊಂದು ಆರೋಪ ಕೇಳಿಬಂದಿದೆ. ಅದು ಕೊಹ್ಲಿ ಮೇಲಲ್ಲ, ಬದಲಾಗಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮೇಲೆ. 2019 ವಿಶ್ವಕಪ್​ನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ಅನುಷ್ಕಾ ಶರ್ಮಾಗೆ ಟೀ ಸಪ್ಲೈ ಮಾಡ್ತಿದ್ರು ಅಂತ ಭಾರತ ತಂಡದ ಮಾಜಿ ಕ್ರಿಕೆಟಿಗ ಫಾರೂಕ್ ಇಂಜಿನಿಯರ್ ಆರೋಪಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್​ನಲ್ಲಿ ನಡೆದ ಮಹಾಯುದ್ಧದಲ್ಲಿ ಕೊಹ್ಲಿ ಪತ್ನಿಗೆ ಬಿಸಿಸಿಐ ಆಯ್ಕೆಗಾರರು ಸೇವಕರಾಗಿದ್ರು ಅಂತ ಫಾರೂಕ್ ಇಂಜಿನಿಯರ್ […]

ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಿಂದ ಚಹಾ ಸಪ್ಲೈ: ಮೌನ ಮುರಿದ ಅನುಷ್ಕಾ ಶರ್ಮಾ
sadhu srinath

|

Nov 02, 2019 | 3:56 PM

ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆಂಬ ಆರೋಪ ಇದೆ. ಆದ್ರೀಗ ಮತ್ತೊಂದು ಆರೋಪ ಕೇಳಿಬಂದಿದೆ. ಅದು ಕೊಹ್ಲಿ ಮೇಲಲ್ಲ, ಬದಲಾಗಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮೇಲೆ.

2019 ವಿಶ್ವಕಪ್​ನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ಅನುಷ್ಕಾ ಶರ್ಮಾಗೆ ಟೀ ಸಪ್ಲೈ ಮಾಡ್ತಿದ್ರು ಅಂತ ಭಾರತ ತಂಡದ ಮಾಜಿ ಕ್ರಿಕೆಟಿಗ ಫಾರೂಕ್ ಇಂಜಿನಿಯರ್ ಆರೋಪಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್​ನಲ್ಲಿ ನಡೆದ ಮಹಾಯುದ್ಧದಲ್ಲಿ ಕೊಹ್ಲಿ ಪತ್ನಿಗೆ ಬಿಸಿಸಿಐ ಆಯ್ಕೆಗಾರರು ಸೇವಕರಾಗಿದ್ರು ಅಂತ ಫಾರೂಕ್ ಇಂಜಿನಿಯರ್ ಗಂಭೀರ ಆರೋಪ ಮಾಡಿದ್ದಾರೆ.

ಅನುಷ್ಕಾ ಶರ್ಮಾಗೆ ಟೀ ಸಪ್ಲೈ ಮಾಡ್ತಿದ್ರು: 2019ರ ವಿಶ್ವಕಪ್ ಸಮಯದಲ್ಲಿ ನಾನು ಆಯ್ಕೆ ಸಮಿತಿಯ ಸದಸ್ಯನೊಬ್ಬನನ್ನ ಗಮನಿಸುತ್ತಿದ್ದೆ. ಮೊದಲಿಗೆ ಅವನು ಯಾರು ಅಂತ ನನಗೂ ಗೊತ್ತಾಗಲಿಲ್ಲ. ಆದ್ರೆ, ಅವನು ಟೀಮ್ ಇಂಡಿಯಾದ ಸೂಟು ಬೂಟು ಧರಿಸಿದ್ದರಿಂದ, ಅವನಲ್ಲಿ ನೀನು ಯಾರೆಂದು ನಾನು ಪ್ರಶ್ನಿಸಿದೆ. ಅದಕ್ಕೆ ಅವನು ಟೀಮ್ ಇಂಡಿಯಾ ಆಯ್ಕೆ ಸಮಿತಿ ಸದಸ್ಯ ಎಂದು ಹೇಳಿದ. ಅದೇ ಸದಸ್ಯ ಅಲ್ಲಿ ಕೂತಿದ್ದ ಅನುಷ್ಕಾ ಶರ್ಮಾಗೆ ಟೀ ಸಪ್ಲೈ ಮಾಡುತ್ತಿದ್ದ ಎಂದು ಮಾಜಿ ಕ್ರಿಕೆಟಿಗ ಫಾರೂಕ್ ಇಂಜಿನಿಯರ್ ಗಂಭೀರ ಆರೋಪ ಮಾಡಿದ್ದಾರೆ.

ಫಾರೂಕ್ ಬಾಂಬ್‌.. ಕ್ರಿಕೆಟ್‌ ಜಗತ್ತಿನಲ್ಲಿ ಕೋಲಾಹಲ! ಕೊಹ್ಲಿ ಪತ್ನಿಗೆ ಆಯ್ಕೆಗಾರರು ಟೀ ಸಪ್ಲೈ ಮಾಡ್ತಿದ್ರು ಅನ್ನೋ ಗಂಭೀರ ಆರೋಪ ಮಾಡಿರುವ ಫಾರೂಕ್, ಬಿಸಿಸಿಐ ಆಯ್ಕೆಸಮಿತಿಯನ್ನು ಕಾಲೆಳೆದಿದ್ದಾರೆ. ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಆಯ್ಕೆಸಮಿತಿಯನ್ನ ಮಿಕ್ಕಿ ಮೌಸ್ ಸೆಲೆಕ್ಷನ್ ಕಮಿಟಿ ಎಂದು ಫಾರೂಕ್ ಅಣುಕಿಸಿದ್ದಾರೆ. ಅಲ್ಲದೇ ನಾಯಕ ಕೊಹ್ಲಿ ತನಗೆ ಬೇಕಾದ ಕ್ರಿಕೆಟಿಗರನ್ನ ತಂಡದಲ್ಲಿ ಇರಿಸಿಕೊಂಡು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆಂದು ಫಾರೂಕ್ ಆರೋಪಿಸಿದ್ದಾರೆ.

ಮಾಜಿ ಕ್ರಿಕೆಟಿಗನ ಮಾತಿಗೆ ಅನುಷ್ಕಾ ತಿರುಗೇಟು ನಾನು ಕಳೆದ 11 ವರ್ಷಗಳಿಂದ ಗೌರವಯುತಳಾಗಿ ವೃತ್ತಿಜೀವನ ನಡೆಸಿಕೊಂಡು ಬರ್ತಿದ್ದೇನೆ. ಟೀಮ್ ಇಂಡಿಯಾ ನಾಯಕನ ಪತ್ನಿಯಾದ ಮಾತ್ರಕ್ಕೆ ಅವರ ಕೆಟ್ಟ ಪ್ರದರ್ಶನಕ್ಕೆ ನನ್ನನ್ನು ಗುರಿಯಾಗಿಸಿ ಟೀಕಿಸುವುದು ಎಷ್ಟು ಸರಿ? ನೀವು ಸಾಮಾನ್ಯವಾಗಿ ಹರಡುವ ಸುದ್ದಿಗಳು ಅಪಾಯಕಾರಿ ಎಂದು ಗೊತ್ತಿರಲಿ. ಏಕೆಂದರೇ ಇನ್ನೊಬ್ಬರ ಪತ್ನಿಯಾದವಳು ಕೂಡ ಸ್ವತಂತ್ರ ಮಹಿಳೆಯಾಗಿರುತ್ತಾಳೆ. ವಿಶ್ವಕಪ್​ನಲ್ಲಿ ತನಗೆ ಆಯ್ಕೆಗಾರರು ಚಹಾ ವಿತರಿಸಿದರು ಎಂಬುದು ಸುಳ್ಳು. ನಿಮಗೆ ದಾಖಲೆ ಬೇಕಿದ್ದರೆ ನಾನು ಕಾಫಿ ಕುಡಿಯುತ್ತೇನೆ ಅನ್ನೋ ಸುಳ್ಳು ಸುದ್ದಿ ಹಬ್ಬಿಸಿದವರಿಗೂ ಈ ಪತ್ರದ ಮೂಲಕ ತಿರುಗೇಟು ನೀಡುತ್ತೇನೆ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada