BWF World Championship 2021: ಹಾಲಿ ಚಾಂಪಿಯನ್ ಪಿವಿ ಸಿಂಧುಗೆ ಮುಖಭಂಗ; ಕ್ವಾರ್ಟರ್ ಫೈನಲ್‌ನಲ್ಲಿ ಸೋಲು
BWF World Championship 2021: ಸ್ಪೇನ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ತಾರೆ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಸೋಲನ್ನು ಎದುರಿಸಬೇಕಾಯಿತು.
ಸ್ಪೇನ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ತಾರೆ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಸೋಲನ್ನು ಎದುರಿಸಬೇಕಾಯಿತು. ಈ ಮಹತ್ವದ ಪಂದ್ಯದಲ್ಲಿ ಸಿಂಧು ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಉಳಿಸಿಕೊಳ್ಳುವ ಸಿಂಧು ಅವರ ಕನಸನ್ನು ಚೈನೀಸ್ ತೈಪೆಯ ತೈ ತ್ಸು ಭಗ್ನಗೊಳಿಸಿದರು. ತೈ 42 ನಿಮಿಷಗಳಲ್ಲಿ ಏಕಪಕ್ಷೀಯ ರೀತಿಯಲ್ಲಿ ಪಂದ್ಯವನ್ನು ಗೆದ್ದು ಪ್ರಸ್ತುತ ವಿಶ್ವ ಚಾಂಪಿಯನ್ ಸಿಂಧುರನ್ನು 21-17, 21-13 ರಿಂದ ಸೋಲಿಸಿದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಾಲ್ವರು ಆಟಗಾರರು ಕ್ವಾರ್ಟರ್‌ಫೈನಲ್ ತಲುಪಿದ್ದು ಇದೇ ಮೊದಲು. ಸಿಂಧು ಹೊರತಾಗಿ ಕಿಡಂಬಿ ಶ್ರೀಕಾಂತ್, ಎಚ್ ಎಸ್ ಪ್ರಣೋಯ್ ಮತ್ತು ಲಕ್ಷ್ಯ ಸೇನ್ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸಿಂಧು ಸೋಲಿನೊಂದಿಗೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಮುಗಿದಿದ್ದರೂ ಪುರುಷರ ಸಿಂಗಲ್ಸ್‌ನಲ್ಲಿ ಇನ್ನೂ ಭರವಸೆ ಇದೆ. ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈಲು ಪಂದ್ಯ ಆಡಲು ಈ ಮೂವರು ಆಟಗಾರರು ಬರಲಿದ್ದಾರೆ.
ಸಿಂಧು ಮತ್ತೆ ವಿಫಲ ಈ ಸೋಲಿನೊಂದಿಗೆ ಸಿಂಧು ವಿರುದ್ಧದ ತೈ ದಾಖಲೆ 13-5ರಿಂದ 14-5ಕ್ಕೆ ಏರಿತು. ವಿಶ್ವದ 7ನೇ ಶ್ರೇಯಾಂಕದ ಭಾರತೀಯ ಆಟಗಾರ್ತಿ ಥಾಯ್ಲೆಂಡ್‌ನ ಪೋರ್ನ್‌ಪಾವೀ ಚೊಚುವಾಂಗ್‌ರನ್ನು 48 ನಿಮಿಷಗಳ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 10, 21-14, 21-18 ಸೆಟ್‌ಗಳಿಂದ ಸೋಲಿಸುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.
ಇದನ್ನೂ ಓದಿ:BWF World Tour Finals: ಪ್ರಶಸ್ತಿ ಸುತ್ತಿನಲ್ಲಿ ಮತ್ತೊಮ್ಮೆ ಎಡವಿದ ಸಿಂಧು; ಕೊರಿಯಾ ಆಟಗಾರ್ತಿಗೆ ಗೆಲುವಿನ ಕಿರೀಟ