Chessable Masters Final: ಚೆಸ್​ ಮಾಸ್ಟರ್ಸ್​ ಫೈನಲ್​ನಲ್ಲಿ ಸೋತರೂ ಗೆದ್ದ ಪ್ರಗ್ನಾನಂದ

TV9 Digital Desk

| Edited By: Zahir Yusuf

Updated on: May 27, 2022 | 5:58 PM

R Praggnanandhaa: ಮೆಲ್ಟ್‌ವಾಟರ್ ಚಾಂಪಿಯನ್ಸ್ ಚೆಸ್ ಟೂರ್ ಈವೆಂಟ್‌ನ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಲಿಟ್ಲ್​ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಪಾತ್ರರಾಗಿದ್ದಾರೆ.

Chessable Masters Final: ಚೆಸ್​ ಮಾಸ್ಟರ್ಸ್​ ಫೈನಲ್​ನಲ್ಲಿ ಸೋತರೂ ಗೆದ್ದ ಪ್ರಗ್ನಾನಂದ
R Praggnanandhaa

ಶುಕ್ರವಾರ ನಡೆದ ಮೆಲ್ಟ್‌ವಾಟರ್ ಚಾಂಪಿಯನ್ಸ್ ಚೆಸ್ ಟೂರ್ ಚೆಸ್ಸಬಲ್ ಮಾಸ್ಟರ್ಸ್ 2022 (Chessable Masters Final 2022) ಆನ್‌ಲೈನ್ ಟೂರ್ನಮೆಂಟ್ ಫೈನಲ್‌ನ ಟೈ ಬ್ರೇಕ್‌ನಲ್ಲಿ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ (R Praggnanandhaa) ವಿಶ್ವದ ನಂ.2 ಚದುರಂಗ ಆಟಗಾರ ಡಿಂಗ್ ಲಿರೆನ್ ವಿರುದ್ಧ ವಿರೋಚಿತ ಸೋಲನುಭವಿಸಿದ್ದಾರೆ. ಚೆನ್ನೈನ 16ರ ಹರೆಯದ ಪ್ರಗ್ನಾನಂದ ಮೊದಲ ಹಂತದಲ್ಲಿ ತುಸು ಎಡವಿದ್ದರು. ಇದಾಗ್ಯೂ ಎರಡನೇ ಸೆಟ್ ಗೆಲ್ಲಲು ಉತ್ತಮ ಪೈಪೋಟಿ ನೀಡಿದ್ದರು. ಆದರೆ ಡಿಂಗ್ ಲಿರೆನ್ ಅವರ ಜಾಣ ನಡೆಯ ಮುಂದೆ ಟೈ ಬ್ರೇಕರ್‌ ಪ್ರಗ್ನಾನಂದ ಸೋಲೊಪ್ಪಿಕೊಳ್ಳಬೇಕಾಯಿತು.

ಮೊದಲ ಸೆಟ್ ಅನ್ನು 1.5-2.5 ರಲ್ಲಿ ಕಳೆದುಕೊಂಡಿದ್ದ ಭಾರತದ ಲಿಟ್ಲ್​ ಮಾಸ್ಟರ್​, ಎರಡನೇ 2.5-1.5 ರಲ್ಲಿ ಗೆದ್ದು ಬ್ಲಿಟ್ಜ್ ಟೈ-ಬ್ರೇಕ್​ಗೆ ಮುನ್ನಡೆದಿದ್ದರು. ಆದರೆ 29 ವರ್ಷದ ಲಿರೆನ್ ತನ್ನ ಅನುಭವವನ್ನು ಧಾರೆಯೆರೆದು ಟೈ-ಬ್ರೇಕ್ ಗೇಮ್‌ಗಳ ಎರಡನೇ ಪಂದ್ಯದಲ್ಲಿ ಪ್ರಗ್ನಾನಂದ ಅವರಿಗೆ ಸೋಲುಣಿಸಿದರು. ಮೊದಲ ಬ್ಲಿಟ್ಜ್ ಬಳಿಕ, ಚೀನಾದ ಆಟಗಾರ 49 ನಡೆಗಳಲ್ಲಿ ಜಾಣ ಆಟ ಪ್ರದರ್ಶಿಸಿದರು. ಇದರೊಂದಿಗೆ ಭಾರತೀಯ ಹದಿಹರೆಯದವರ ಚೆಸ್ ಪಟು ಎನಿಸಿಕೊಂಡಿರುವ ಪ್ರಗ್ನಾನಂದ ಅವರ ಗೆಲ್ಲುವ ಕನಸು ಕೂಡ ಭಗ್ನಗೊಂಡಿತು.

ಇದಾಗ್ಯೂ ಮೆಲ್ಟ್‌ವಾಟರ್ ಚಾಂಪಿಯನ್ಸ್ ಚೆಸ್ ಟೂರ್ ಈವೆಂಟ್‌ನ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಲಿಟ್ಲ್​ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಸೆಮಿಫೈನಲ್‌ನಲ್ಲಿ ಹೆಚ್ಚು ರೇಟಿಂಗ್ ಪಡೆದ ಡಚ್‌ನ ಅನೀಶ್ ಗಿರಿಗೆ ಹಾಗೂ ಕ್ವಾರ್ಟರ್ಫೈನಲ್​ನಲ್ಲಿ ಚೀನಾದ ವೈ ಯಿ ಅವರಿಗೆ ಸೋಲುಣಿಸಿದ್ದರು.

ಇದನ್ನೂ ಓದಿ

ಇವೆಲ್ಲಕ್ಕಿಂತ ಮುಖ್ಯವಾಗಿ ಪ್ರಗ್ನಾನಂದ ಮೊದಲ ಹಂತದಲ್ಲಿ ಎರಡನೇ ಬಾರಿಗೆ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿ ಇಡೀ ವಿಶ್ವವೇ ಮತ್ತೊಮ್ಮೆ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಇದಾಗ್ಯೂ ಅಂತಿಮ ಹಣಾಹಣಿಯಲ್ಲಿ ಸೋತರೂ ಚೆಸ್ಸಬಲ್ ಮಾಸ್ಟರ್ಸ್ 2022 ಫೈನಲ್ ಆಡುವ ಮೂಲಕ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ​ ಪ್ರಗ್ನಾನಂದ. ಈ ಮೂಲಕ ಚೆಸ್​ ಮಾಸ್ಟರ್ಸ್​ ಫೈನಲ್​ನಲ್ಲಿ ಸೋತರೂ 29 ಹರೆಯದ ಡಿಂಗ್ ಲಿರೆನ್ ವಿರುದ್ದ ಸೋತರೂ ಹಲವು ಖ್ಯಾತನಾಮರಿಗೆ ಸೋಲುಣಿಸುವ ಮೂಲಕ 16 16ರ ಹರೆಯದ ಲಿಟ್ಲ್​ ಮಾಸ್ಟರ್ ಇಡೀ ವಿಶ್ವದ ಮನಗೆದ್ದಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada