Bindyarani Devi: ಭಾರತಕ್ಕೆ ಮತ್ತೊಂದು ಪದಕ: ವೇಟ್​ ಲಿಫ್ಟಿಂಗ್​ನಲ್ಲಿ ಬೆಳ್ಳಿ ಗೆದ್ದ ಬಿಂದ್ಯಾರಾಣಿ

| Updated By: Vinay Bhat

Updated on: Jul 31, 2022 | 8:20 AM

CWG 2022: ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಒಟ್ಟು ನಾಲ್ಕು ಪದಕಗಳನ್ನು ಬಾಜಿಕೊಂಡಿದೆ. ಇದೀಗ 55 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಬಿಂದ್ಯಾರಾಣಿ ದೇವಿ (Bindyarani Devi) ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

Bindyarani Devi: ಭಾರತಕ್ಕೆ ಮತ್ತೊಂದು ಪದಕ: ವೇಟ್​ ಲಿಫ್ಟಿಂಗ್​ನಲ್ಲಿ ಬೆಳ್ಳಿ ಗೆದ್ದ ಬಿಂದ್ಯಾರಾಣಿ
Bindyarani Devi
Follow us on

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ (Commonwealth Games 2022) ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಆರಂಭವಾದ ಎರಡೇ ದಿನದಲ್ಲಿ ಭಾರತ ಒಟ್ಟು ನಾಲ್ಕು ಪದಕಗಳನ್ನು ಬಾಜಿಕೊಂಡಿದೆ. ಇದೀಗ 55 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಬಿಂದ್ಯಾರಾಣಿ ದೇವಿ (Bindyarani Devi) ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. 114 ಕೆಜಿಯ ತನ್ನ ಎರಡನೇ ಕ್ಲೀನ್ ಮತ್ತು ಜರ್ಕ್ ಪ್ರಯತ್ನದಲ್ಲಿ ಬಿಂದ್ಯಾರಾಣಿ ವಿಫಲವಾದಾಗ ಕಂಚಿನ ಪದಕದ ನಿರೀಕ್ಷೆಯಿತ್ತು. ಆದರೆ, ಅಂತಿಮ ಲಿಫ್ಟ್​ನಲ್ಲಿ 116 ಕೆಜಿಯೊಂದಿಗೆ ಎರಡನೇ ಸ್ಥಾನಕ್ಕೇರಿದರು. ಈ ಮೂಲಕ ಬೆಳ್ಳಿ (Silver) ಪದಕವನ್ನು ಬಾಜಿಕೊಂಡರು. ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯೆ ಅವರು ಒಟ್ಟು 203 ಕೆಜಿ (92 ಕೆಜಿ 111 ಕೆಜಿ) ಮೂಲಕ ಚಿನ್ನದ ಪದಕ ಗೆದ್ದರು. ಫ್ರೇರ್ ಮೊರೊ ಒಟ್ಟು 198 ಕೆಜಿ (86 ಕೆಜಿ 109 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಅಲಂಕರಿಸಿದರು.

ಮೀರಾಬಾಯಿಗೆ ಚಿನ್ನ:

ಇದಕ್ಕೂ ಮುನ್ನ ಮೀರಾಬಾಯಿ ಚಾನು ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು. ಚಾನು 49 ಕೆಜಿ ತೂಕ ವಿಭಾಗದಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಸ್ನ್ಯಾಚ್‌ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 113 ಕೆಜಿ ಎತ್ತುವ ಮೂಲಕ ಪ್ರಶಸ್ತಿ ಗೆದ್ದು ದಾಖಲೆ ಕೂಡ ಮಾಡಿದರು. ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಭಾರತದ ಈ ಸ್ಟಾರ್ ವೇಟ್‌ಲಿಫ್ಟರ್ ಸ್ನ್ಯಾಚ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ಮಾಡಿದ್ದಾರೆ.

ಇದನ್ನೂ ಓದಿ
CWG 2022 Day 3, Schedule: 3ನೇ ದಿನ ಭಾರತದ ಬುಟ್ಟಿಗೆ ಪದಕ ಹಾಕುವವರು ಯಾರು? ಇಲ್ಲಿದೆ ವೇಳಾಪಟ್ಟಿ
CWG 2022: ಭಾರತಕ್ಕೆ ಮೊದಲ ಚಿನ್ನದ ಪದಕ; ವೇಟ್‌ಲಿಫ್ಟಿಂಗ್​ನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು
IND vs ZIM: ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ; ಧವನ್‌ಗೆ ನಾಯಕತ್ವ, ಕೊಹ್ಲಿ- ರಾಹುಲ್​ಗೆ ಮತ್ತೆ ವಿಶ್ರಾಂತಿ
CWG 2022: ಕಾಮನ್​ವೆಲ್ತ್​​ನಲ್ಲಿ ಕಂಚು ಗೆದ್ದ ಡ್ರೈವರ್ ಮಗ; ಕನ್ನಡಿಗನ ಸಾಧನೆಯ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ನು ಸಂಕೇತ್ ಮಹಾದೇವ್ ಸಾಗರ್ ಕೂಡ ಪುರುಷರ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 21 ವರ್ಷದ ಮಹಾರಾಷ್ಟ್ರ ಮೂಲದ ವೇಟ್‌ಲಿಫ್ಟರ್‌ ಬರೋಬ್ಬರಿ 248 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಅಂತೆಯೆ ಕರ್ನಾಟಕದ ವೇಟ್‌ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕವನ್ನು ಗೆದ್ದು ಮಿಂಚಿದ್ದಾರೆ. ಇವರು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರವಾಗಿ ಪದಕ ಗೆದ್ದ ಎರಡನೇ ಕ್ರೀಡಾಪಟು. ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಪದಕಕ್ಕೆ ಕೊರಳೊಡ್ಡಿದ್ದಾರೆ.

ಸ್ವಿಮ್ಮರ್‌ ಶ್ರೀಹರಿ ನಟರಾಜನ್‌ 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯ ಫೈನಲ್‌ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು 54:55 ಸೆಕೆಂಡ್ಸ್‌ ನಲ್ಲಿ ಗುರಿ ಮುಟ್ಟಿದರು. 21 ವರ್ಷದ ಶ್ರೀಹರಿ ನಟರಾಜನ್‌ ಹೀಟ್‌ನಲ್ಲಿ 4ನೇ, ಒಟ್ಟಾರೆಯಾಗಿ 7ನೇ ಸ್ಥಾನಿಯಾದರು. ಆದರೆ, 400 ಮೀ. ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್‌ ಸೆಮಿಫೈನಲ್‌ ಪ್ರವೇಶಿಸಲು ವಿಫ‌ಲರಾದರು. ಅವರು 3:57.45 ಸೆಕೆಂಡ್‌ ಸಾಧನೆಯೊಂದಿಗೆ ಒಟ್ಟಾರೆಯಾಗಿ 14ನೇ ಸ್ಥಾನಿಯಾದರು.

Published On - 7:51 am, Sun, 31 July 22