CWG 2022: ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದ ಭಾರತದ ಅಣ್ಣು ರಾಣಿ

| Updated By: ಪೃಥ್ವಿಶಂಕರ

Updated on: Aug 07, 2022 | 6:20 PM

CWG 2022: ರಾಣಿ ತನ್ನ ಮೂರನೇ ಪ್ರಯತ್ನದಲ್ಲಿ 60 ಮೀಟರ್‌ ದೂರ ಜಾವೆಲಿನ್ ಎಸೆಯುವ ಮೂಲಕ ಮೂರನೇ ಸ್ಥಾನ ಪಡೆದರು. ಈ ಮೂಲಕ ಅಣ್ಣು ಇತಿಹಾಸ ಸೃಷ್ಟಿಸಿದ್ದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಜಾವೆಲಿನ್ ಎಸೆತಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

CWG 2022: ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದ ಭಾರತದ ಅಣ್ಣು ರಾಣಿ
Annu Rani
Follow us on

ಭಾನುವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ಭಾರತದ ಮಹಿಳಾ ಆಟಗಾರ್ತಿ ಅಣ್ಣು ರಾಣಿ ಅದ್ಭುತ ಸಾಧನೆ ಮಾಡಿದ್ದಾರೆ. ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 60 ಮೀಟರ್‌ ದೂರ ಜಾವೆಲಿನ್ ಎಸೆದು ದೇಶಕ್ಕೆ ಕಂಚಿನ ಪದಕ (bronze medal) ಗೆದ್ದಿದ್ದಾರೆ. ರಾಣಿ ತನ್ನ ಮೂರನೇ ಪ್ರಯತ್ನದಲ್ಲಿ 60 ಮೀಟರ್‌ ದೂರ ಜಾವೆಲಿನ್ ಎಸೆಯುವ ಮೂಲಕ ಮೂರನೇ ಸ್ಥಾನ ಪಡೆದರು. ಈ ಮೂಲಕ ಅಣ್ಣು ಇತಿಹಾಸ ಸೃಷ್ಟಿಸಿದ್ದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಜಾವೆಲಿನ್ ಎಸೆತಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ ಕೆಲ್ಸಿ ಲೀ ಬಾರ್ಬರ್ 64.43 ಮೀಟರ್ ಎಸೆದು ಚಿನ್ನ ಗೆದ್ದರೆ, ಅವರ ದೇಶವಾಸಿ ಮೆಕೆಂಜಿ ಲಿಟಲ್ 64.27 ಮೀಟರ್ ಎಸೆದು ಎರಡನೇ ಸ್ಥಾನ ಪಡೆದರು. ರಾಣಿಗಿಂತ ಮೊದಲು, ಪುರುಷರ ಜಾವೆಲಿನ್ ಎಸೆತದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಾಶಿನಾಥ್ ನಾಯಕ್ ಮತ್ತು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಕ್ರಮವಾಗಿ ಕಂಚು ಮತ್ತು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ನಾಯಕ್ 2010 ದೆಹಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದರೆ, ಚೋಪ್ರಾ 2018 ಗೋಲ್ಡ್ ಕೋಸ್ಟ್‌ನಲ್ಲಿ ಪದಕ ಗೆದಿದ್ದರು.

ನೀರಜ್ ಮತ್ತು ಅಣ್ಣು ಯಶಸ್ಸಿನಲ್ಲಿ ಸಾಮ್ಯತೆ

ಇದನ್ನೂ ಓದಿ
CWG 2022: ಅಥ್ಲೆಟಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; 10 ಕಿ.ಮೀ ನಡಿಗೆಯಲ್ಲಿ ಕಂಚು ಗೆದ್ದ ಸಂದೀಪ್ ಕುಮಾರ್
CWG 2022: ಟ್ರಿಪಲ್ ಜಂಪ್​ನಲ್ಲಿ ಇತಿಹಾಸ ನಿರ್ಮಿಸಿದ ಭಾರತ; ಎಲ್ಡೋಸ್ ಪೌಲ್​ಗೆ ಚಿನ್ನ, ಬೆಳ್ಳಿ ಗೆದ್ದ ಅಬ್ದುಲ್ಲಾ..!
CWG 2022: ಬಾಕ್ಸಿಂಗ್​ನಲ್ಲಿ ಮತ್ತೊಂದು ಸ್ವರ್ಣ; 51 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಅಮಿತ್ ಪಂಗಲ್

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ದಿನ ಅಂದರೆ ಆಗಸ್ಟ್ 7 ರಂದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅಣ್ಣು ರಾಣಿ ಪದಕ ಗೆದ್ದಿದ್ದಾರೆ. ಕಳೆದ ವರ್ಷ ಇದೇ ದಿನಾಂಕದಂದು ನೀರಜ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಜೊತೆಗೆ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗಾಯದ ಸಮಸ್ಯೆಯಿಂದಾಗಿ ಅವರು ಈ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡುತ್ತಿಲ್ಲ. ಅದೇ ದಿನಾಂಕದಂದು, ಅಣ್ಣು ರಾಣಿ ಪದಕವನ್ನು ಗೆದ್ದಿದ್ದಾರೆ. ಆದರೆ ಅವರ ಪದಕದ ಬಣ್ಣ ವಿಭಿನ್ನವಾಗಿದೆ.

ಕಾಮನ್‌ವೆಲ್ತ್‌ನಲ್ಲಿ ಮೊದಲ ಪದಕ

ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅಣ್ಣು ಗಳಿಸಿದ ಮೊದಲ ಪದಕವಾಗಿದೆ. ಆದರೆ, 2014ರಲ್ಲಿ ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದಲ್ಲದೆ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಒಮ್ಮೆ ಕಂಚಿನ ಪದಕ ಮತ್ತು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. 2017ರಲ್ಲಿ ಭುವನೇಶ್ವರದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದರೆ, 2019ರಲ್ಲಿ ದೋಹಾದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಪದಕ ಸ್ಪರ್ಧಿಯಾಗಿ ತೆರಳಿದ್ದ ಅವರು ನಿರೀಕ್ಷೆಯನ್ನು ಈಡೇರಿಸಿ ಪದಕವನ್ನು ದೇಶದ ಚೀಲಕ್ಕೆ ಹಾಕಿದ್ದಾರೆ.

Published On - 5:25 pm, Sun, 7 August 22