
ಭಾರತ ಮಹಿಳಾ ಹಾಕಿ ತಂಡ ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಅದ್ಭುತ ದಾಖಲೆ ಮಾಡಿದೆ. ಕಂಚಿನ ಪದಕದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಭಾರತ ಮಹಿಳಾ ತಂಡ ಕಂಚಿನ ಪದಕ ಗೆದ್ದಿದೆ. ಇದರೊಂದಿಗೆ ಭಾರತದ ಚೀಲದಲ್ಲಿ ಮತ್ತೊಂದು ಪದಕ ಬಿದ್ದಿದೆ. ಭಾರತ ಮತ್ತು ನ್ಯೂಜಿಲೆಂಡ್ (India and New Zealand) ಮಹಿಳಾ ತಂಡಗಳ ನಡುವಿನ ಕಂಚಿನ ಪದಕದ ಪಂದ್ಯವು ರೋಚಕವಾಗಿತ್ತು. ಎರಡೂ ತಂಡಗಳಿಂದ ಅತ್ಯುತ್ತಮ ಪ್ರದರ್ಶನ ಕಂಡುಬಂತು. ಆದರೆ ಕೊನೆಯಲ್ಲಿ, ಭಾರತದ ಮಹಿಳಾ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಕಂಚಿನ ಪದಕದ ಪಂದ್ಯದ ಮೊದಲ ಕ್ವಾರ್ಟರ್ ಗೋಲು ರಹಿತವಾಗಿತ್ತು. ಉಭಯ ತಂಡಗಳು ಸಾಕಷ್ಟು ಪ್ರಯತ್ನ ಮಾಡಿದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಇದರ ನಂತರ ಭಾರತ ತಂಡ ಎರಡನೇ ಕ್ವಾರ್ಟರ್ನಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಮೂರನೇ ಕ್ವಾರ್ಟರ್ ಮತ್ತೆ ಗೋಲು ರಹಿತವಾಗಿತ್ತು. ಪಂದ್ಯದ ಎರಡನೇ ಗೋಲು ಮತ್ತು ನ್ಯೂಜಿಲೆಂಡ್ನಿಂದ ಮೊದಲ ಗೋಲು ನಾಲ್ಕನೇ ಕ್ವಾರ್ಟರ್ನ ಕೊನೆಯ ಕ್ಷಣಗಳಲ್ಲಿ ಕಂಡುಬಂದಿತು, ನಂತರ ಪಂದ್ಯ 4 ಕ್ವಾರ್ಟರ್ಗಳ ನಂತರ 1-1 ರಿಂದ ಡ್ರಾದಲ್ಲಿ ಕೊನೆಗೊಂಡಿತು.
ಶೂಟೌಟ್ನಲ್ಲಿ ಕಂಚಿನ ಪದಕ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕಂಚಿನ ಪದಕದ ಪಂದ್ಯ ಶೂಟೌಟ್ನಲ್ಲಿ ನಿರ್ಧಾರವಾಯಿತು. ಅದರಲ್ಲಿ ಭಾರತ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. ಭಾರತದ ಪರ ಗೋಲ್ಕೀಪರ್ ಸವಿತಾ ನ್ಯೂಜಿಲೆಂಡ್ನ 3 ಶೂಟ್ಗಳನ್ನು ವಿಫಲಗೊಳಿಸಿ ಪಂದ್ಯವನ್ನು ಭಾರತದತ್ತ ತಿರುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶೂಟೌಟ್ನಲ್ಲಿ ಭಾರತ ಮೂರು ಗೋಲುಗಳನ್ನು ಗಳಿಸಿದರೆ, ಗೋಲ್ಕೀಪರ್ ಸವಿತಾ ಮೂರು ಗೋಲುಗಳನ್ನು ಉಳಿಸಿದರು. 16 ವರ್ಷಗಳ ನಂತರ ಭಾರತೀಯ ಮಹಿಳಾ ಹಾಕಿ ತಂಡವು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾದ ವಿಚಾರ.
Published On - 3:14 pm, Sun, 7 August 22