ಶನಿವಾರ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಸಂಕೇತ್ ಸರ್ಗರ್ ಅದ್ಭುತ ಪ್ರದರ್ಶನ ನೀಡಿ ವೇಟ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದು ಭಾರತದ ಖಾತೆ ತೆರೆದಿದ್ದಾರೆ. ಆದರೆ ಒಂದು ಕಿಲೋ ಅಂತರದಿಂದ ಸಂಕೇತ್ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು. ಸರ್ಗರ್ ಒಟ್ಟು 248 ಕೆಜಿ ಎತ್ತಿದರೆ, ಚಿನ್ನ ವಶಪಡಿಸಿಕೊಂಡ ಮಲೇಷ್ಯಾದ ಬಿನ್ ಕಸ್ದನ್ 249 ಕೆಜಿ ಎತ್ತಿದರು. ಭಾರತದ ಆಟಗಾರ ಸ್ನ್ಯಾಚ್‌ನಲ್ಲಿ 113 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 135 ಕೆಜಿ ಎತ್ತಿದರು. ಕ್ಲೀನ್ ಮತ್ತು ಜರ್ಕ್ನ ಕೊನೆಯ ಎರಡು ಪ್ರಯತ್ನಗಳಲ್ಲಿ ಅವರು ವಿಫಲರಾಗಿದ್ದರು. ಇದರ ಹಿಂದಿನ ಕಾರಣ ಅವರ ಇಂಜುರಿ.
ಇಂಜುರಿಯಿಂದ ಚಿನ್ನ ಮಿಸ್
ಸ್ನ್ಯಾಚ್‌ನಲ್ಲಿ ಸರ್ಗರ್ ಮೊದಲ ಪ್ರಯತ್ನದಲ್ಲಿ 107 ಕೆಜಿ ಮತ್ತು ಎರಡನೇ ಪ್ರಯತ್ನದಲ್ಲಿ 111 ಕೆಜಿ ಎತ್ತಿದರು. ಮೂರನೇ ಯತ್ನದಲ್ಲಿ 113 ಕೆ.ಜಿ ಭಾರ ಎತ್ತುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಅದೇ ಸಮಯದಲ್ಲಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ ಮೊದಲ ಪ್ರಯತ್ನದಲ್ಲಿ ಸರ್ಗರ್ 135 ಭಾರ ಎತ್ತಿದರು, ಆದರೆ ಎರಡನೇ ಮತ್ತು ಮೂರನೇ ಪ್ರಯತ್ನದಲ್ಲಿ ಅವರು 139 ಕೆಜಿ ತೂಕ ಎತ್ತುವ ಪ್ರಯತ್ನದಿಂದ ಹಿಂದೆ ಸರಿದರು. ಮಲೇಷ್ಯಾ ಆಟಗಾರ ಕೊನೆಯ ಪ್ರಯತ್ನದಲ್ಲಿ 142 ಕೆಜಿ ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ ಮಲೇಷ್ಯಾದ ಬಿನ್ 107 ಕೆಜಿ ಭಾರ ಎತ್ತಿದರು. ಹೀಗಾಗಿ ಚಿನ್ನದ ಪದಕಕ್ಕೆ ಅವರು ಕೊರಳೊಡ್ಡಿದರು.
And here comes our first Medal in CWG. Silver it is for Sanket Sagar. Missed out on Gold by just 1 kg. Got unlucky with the injury in the second last lift. So unfortunate. ?#RuknaNahiHaiCheer pic.twitter.com/VDC6WYwoIZ
— Prasad ⭐⭐ (@Prasadnaks) July 30, 2022
ನೀರು ಕೂಡ ಕುಡಿಯಲಿಲ್ಲ
ಸರ್ಗರ್ ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್ 2020 ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2020 ರ ಚಾಂಪಿಯನ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರ ಹೆಸರಿನಲ್ಲಿ ರಾಷ್ಟ್ರೀಯ ದಾಖಲೆಯೂ ಇದೆ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಖಾತೆ ತೆರೆದಿರುವ ಈ ಆಟಗಾರ 2024ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದು, ಒಲಿಂಪಿಕ್ಸ್‌ನಲ್ಲಿ 61 ಕೆಜಿ ವಿಭಾಗದಲ್ಲಿ ಪ್ರವೇಶಿಸಲು ಬಯಸಿದ್ದಾರೆ. ಸಂಕೇತ್ ಸರ್ಗರ್ ತೂಕ ಹೆಚ್ಚುವ ಭಯದಲ್ಲಿ ಹೆಚ್ಚು ನೀರು ಕುಡಿಯುವುದನ್ನು ಕೂಡ ಕಡಿಮೆ ಮಾಡಿದ್ದರು. ಜೊತೆಗೆ ಅನ್ನದ ಬದಲಿಗೆ ಬೇಯಿಸಿದ ತರಕಾರಿ ಮತ್ತು ಸಲಾಡ್‌ಗಳನ್ನು ಮಾತ್ರ ಸೇವಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
Published On - 3:54 pm, Sat, 30 July 22