CWG 2022: ಕಾಮನ್‌ವೆಲ್ತ್ ಗೇಮ್ಸ್ನಲ್ಲಿನ ಭಾರತದ ಇಂದಿನ ಸ್ಪರ್ಧೆಗಳ ವೇಳಾಪಟ್ಟಿ
Commonwealth Games 2022: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಮೂವರು ವೇಟ್‌ಲಿಫ್ಟರ್‌ಗಳು ಶನಿವಾರ ಕಣಕ್ಕಿಳಿಯಲಿದ್ದು, ಮೂವರಿಂದ ದೇಶವು ಪದಕಗಳನ್ನು ನಿರೀಕ್ಷಿಸುತ್ತಿದೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ (Commonwealth Games 2022) ಎರಡನೇ ದಿನದಾಟದಲ್ಲೂ ಭಾರತೀಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ವೇಟ್‌ಲಿಫ್ಟಿಂಗ್‌ನಿಂದ ಅಥ್ಲೆಟಿಕ್ಸ್ ಮತ್ತು ಟೇಬಲ್ ಟೆನ್ನಿಸ್‌ನವರೆಗೆ ಭಾರತೀಯ ಆಟಗಾರರು ವಿವಿಧ ಸ್ಪರ್ಧೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಜುಲೈ 30ರಂದು ಭಾರತದ 12 ಬಾಕ್ಸರ್‌ಗಳು ಅಭಿಯಾನ ಆರಂಭಿಸಲಿದ್ದು, ಇವರಲ್ಲಿ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಕೂಡ ಇರುವುದು ವಿಶೇಷ. ಹಾಗೆಯೇ, ವಿಶ್ವ ಚಾಂಪಿಯನ್ ನಿಖಾತ್ ಜರೀನ್ ಮತ್ತು ಸ್ಟಾರ್ ಬಾಕ್ಸರ್ ಅಮಿತ್ ಪಂಗಲ್ ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.
ಹಾಗೆಯೇ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಮೂವರು ವೇಟ್‌ಲಿಫ್ಟರ್‌ಗಳು ಶನಿವಾರ ಕಣಕ್ಕಿಳಿಯಲಿದ್ದು, ಮೂವರಿಂದ ದೇಶವು ಪದಕಗಳನ್ನು ನಿರೀಕ್ಷಿಸುತ್ತಿದೆ. ವಿಶೇಷವಾಗಿ ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರು 55 ಕೆಜಿ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಲ್ಲದೆ ಸಂಕೇತ್ ಮಹದೇವ್ ಮತ್ತು ಸಿ ರಿಷಿಕಾಂತ ಸಿಂಗ್ ಪುರುಷರ 55 ಕೆಜಿ ವಿಭಾಗದಲ್ಲಿ ಪದಕಕ್ಕಾಗಿ ಸೆಣಸಲಿದ್ದಾರೆ. ಲೀಗ್ ಸುತ್ತಿನ ಹಾಕಿಯಲ್ಲಿ ಭಾರತ ವನಿತೆಯರ ತಂಡ ಗೆಲುವಿಗೆ ಪ್ರಬಲ ಸ್ಪರ್ಧಿಯಾಗಿರುವ ವೇಲ್ಸ್ ತಂಡವನ್ನು ಎದುರಿಸಲಿದೆ. ಅದರಂತೆ 2ನೇ ದಿನದಾಟದ ಭಾರತದ ಸಂಪೂರ್ಣ ವೇಳಾಪಟ್ಟಿ ಹೀಗಿದೆ.
1:00 PM: ಲಾನ್ ಬೌಲ್ಸ್
- -ತಾನಿಯಾ ಚೌಧರಿ ಮಹಿಳೆಯರ ವಿಭಾಗೀಯ ಪ್ಲೇ ರೌಂಡ್ 3 ರಲ್ಲಿ ಸ್ಪರ್ಧಿಸಲಿದ್ದಾರೆ.
- – ಭಾರತ ಪುರುಷರ ತಂಡ ಸೆಕ್ಷನಲ್ ಪ್ಲೇ ರೌಂಡ್ 3 vs ಮಾಲ್ಟ
1:30 PM: ಅಥ್ಲೆಟಿಕ್ಸ್
- – ಪುರುಷರ ಮ್ಯಾರಥಾನ್ ಫೈನಲ್‌ನಲ್ಲಿ ನಿತೇಂದ್ರ ಸಿಂಗ್ ರಾವತ್
1:30 PM: ಬ್ಯಾಡ್ಮಿಂಟನ್
- – ಶ್ರೀಲಂಕಾ ವಿರುದ್ಧ ಭಾರತ ಮಿಶ್ರ ತಂಡ
1:30 PM: ಜಿಮ್ನಾಸ್ಟಿಕ್ಸ್
- – ಯೋಗೇಶ್ವರ್ ಸಿಂಗ್
1:30 PM: ವೇಟ್‌ಲಿಫ್ಟಿಂಗ್
- – ಪುರುಷರ 55 ಕೆ ವಿಭಾಗದಲ್ಲಿ ಸಂಕೇತ್ ಮಹದೇವ್ ಸರ್ಗರ್
2:00 PM: ಟೇಬಲ್ ಟೆನ್ನಿಸ್
- – ಮಹಿಳೆಯರ ತಂಡ ಗುಂಪು 2 ರಲ್ಲಿ ಭಾರತ vs ಗಯಾನಾ
2:30 PM: ಸೈಕ್ಲಿಂಗ್
- – ಮಹಿಳೆಯರ ಸ್ಪ್ರಿಂಟ್ ಅರ್ಹತಾ ಸುತ್ತಿನಲ್ಲಿ ಮಯೂರಿ ಲೂಟ್ ಮತ್ತು ತ್ರಿಯಾಶಿ ಪಾಲ್
2:30 PM : ಸೈಕ್ಲಿಂಗ್
- – ಪುರುಷರ 4000 ಮೀ ವೈಯಕ್ತಿಕ ಪರ್ಸ್ಯೂಟ್ ಅರ್ಹತಾ ಸ್ಪರ್ಧೆಯಲ್ಲಿ ವಿಶ್ವಜೀತ್ ಸಿಂಗ್ ಮತ್ತು ದಿನೇಶ್ ಕುಮಾರ್
3:00 PM: ಈಜು
- – 200 ಮೀ ಫ್ರೀಸ್ಟೈಲ್ ಹೀಟ್ 3 ರಲ್ಲಿ ಕುಶಾಗ್ರಾ ರಾವತ್
3:11 PM: ಸೈಕ್ಲಿಂಗ್
- – ಮಹಿಳೆಯರ 3000ಮೀ ವೈಯಕ್ತಿಕ ಪರ್ಸ್ಯೂಟ್ ಅರ್ಹತಾ ಸುತ್ತಿನಲ್ಲಿ ಮೀನಾಕ್ಷಿ
4:03 PM: ಸೈಕ್ಲಿಂಗ್
- – ಮಹಿಳೆಯರ ಸ್ಪ್ರಿಂಟ್‌ನಲ್ಲಿ ಮಯೂರಿ ಲೂಟ್ ಮತ್ತು ತ್ರಿಯಾಶಿ ಪಾಲ್
4:15 PM: ವೇಟ್‌ಲಿಫ್ಟಿಂಗ್
- – ಪುರುಷರ 61 ಕೆಜಿ ವಿಭಾಗದ ಫೈನಲ್‌ನಲ್ಲಿ ಗುರುರಾಜ
4:30 PM: ಟೇಬಲ್ ಟೆನ್ನಿಸ್
- – ಪುರುಷರ ತಂಡ vs ಉತ್ತರ ಐರ್ಲೆಂಡ್
4:36 PM: ಸೈಕ್ಲಿಂಗ್
- – ಮಹಿಳೆಯರ ಸ್ಪ್ರಿಂಟ್ ಕ್ವಾರ್ಟರ್‌ಫೈನಲ್‌ನಲ್ಲಿ ಮಯೂರಿ ಲೂಟ್ ಮತ್ತು ತ್ರಿಯಾಶಿ ಪಾಲ್
4:52 PM: ಸೈಕ್ಲಿಂಗ್
- – ಪುರುಷರ 400M ವೈಯಕ್ತಿಕ ಪರ್ಸ್ಯೂಟ್ ಅರ್ಹತಾ ಸುತ್ತಿನಲ್ಲಿ ವಿಶ್ವಜೀತ್/ದಿನೇಶ್
5:00 PM: ಬಾಕ್ಸಿಂಗ್
- – 54-57 ಕೆಜಿ ತೂಕ ವಿಭಾಗದಲ್ಲಿ ಹುಸನ್ಮುದ್ದೀನ್ ಮೊಹಮ್ಮದ್ (IND) ವಿರುದ್ಧ ಅಮ್ಜೋಲಿ (SA) (32 ರ ಸುತ್ತು)
5:00 PM: ಸ್ಕ್ವಾಷ್
- – ಪುರುಷರ ಸಿಂಗಲ್ಸ್ ಸುತ್ತಿನಲ್ಲಿ ರಮಿತ್ ಟಂಡನ್ ಮತ್ತು ಸೌರವ್ ಘೋಸಲ್
- – ಮಹಿಳೆಯರ ಸಿಂಗಲ್ಸ್ ಸುತ್ತಿನಲ್ಲಿ ಜೋಷ್ನಾ ಚಿನಪ್ಪ ಮತ್ತು ಸುನಯ್ನಾ ಸಾರಾ ಕುರುವಿಲ್ಲಾ.
5:45 PM: ಸ್ಕ್ವಾಷ್
- ಜೋಶ್ನಾ ಚಿನಪ್ಪ vs ಮೇಗನ್ ಅತ್ಯುತ್ತಮ ಮಹಿಳಾ ಸಿಂಗಲ್ಸ್ ರೌಂಡ್
5:45 PM: ಸ್ಕ್ವಾಷ್
- – ಸುನಯ್ನಾ ಕುರುವಿಲಾ vs ಐಫಾ ಅಜ್ಮಾನ್ ಮಹಿಳೆಯರ ಸಿಂಗಲ್ಸ್ ರೌಂಡ್
6:15 PM: ಸ್ಕ್ವಾಷ್
- – ಸೌರವ್ ಘೋಷಾಲ್ ವಿರುದ್ಧ ಶಮಿ ವಕೀಲ್ ಪುರುಷರ ಸಿಂಗಲ್ಸ್ ರೌಂಡ್
7:30 PM: ಲಾನ್ ಬೌಲ್ಸ್
- – ಪುರುಷರ ತಂಡ ವರ್ಸಸ್ ಕುಕ್ ದ್ವೀಪಗಳು
8:00 PM: ವೇಟ್‌ಲಿಫ್ಟಿಂಗ್
- – ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸಾಯಿಖೋಮ್ ಮೀರಾಬಾಯಿ ಚಾನು
8:30 PM: ಟೇಬಲ್ ಟೆನ್ನಿಸ್
- – ಮಹಿಳೆಯರ ತಂಡ ಕ್ವಾರ್ಟರ್ ಫೈನಲ್
8:30 PM : ಸೈಕ್ಲಿಂಗ್
- – ಪುರುಷರ ಕೀರಿನ್ ಮೊದಲ ಸುತ್ತಿನಲ್ಲಿ ಎಸೊವ್ ಅಲ್ಬೆನ್
- 8:30 PM – ಪುರುಷರ ಟೇಬಲ್ ಟೆನಿಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ vs ಉತ್ತರ ಐಲ್ಯಾಂಡ್
- 9:00 PM: ಜಿಮ್ನಾಸ್ಟಿಕ್ಸ್ – ಮಹಿಳಾ ತಂಡ ಫೈನಲ್ ಮತ್ತು ವೈಯಕ್ತಿಕ ಅರ್ಹತಾ ಉಪವಿಭಾಗ 3 ರಲ್ಲಿ ಪ್ರಣತಿ ನಾಯಕ್, ರುತುಜಾ ನಟರಾಜ್ ಮತ್ತು ಪ್ರತಿಷ್ಟಾ ಸಮಂತಾ
- 10:30 PM: ಲಾನ್ ಬೌಲ್ಸ್ – ಮಹಿಳಾ ತಂಡ ಫೋರ್ಸ್ ವಿಭಾಗೀಯ ಆಟ ಕೆನಡಾ ವಿರುದ್ಧ.
- 11:30 PM: ಬ್ಯಾಡ್ಮಿಂಟನ್ – ಆಸ್ಟ್ರೇಲಿಯಾ ವಿರುದ್ಧ ಭಾರತ ಮಿಶ್ರ ತಂಡ
- 11:30 PM: ಹಾಕಿ – ಭಾರತ vs ವೇಲ್ಸ್ (ಮಹಿಳೆಯರು)
- 12:00 AM: ಬಾಕ್ಸಿಂಗ್ – 70 ಕೆಜಿ ವಿಭಾಗದ ರೌಂಡ್ 1 ರಲ್ಲಿ ಲೊವ್ಲಿನಾ ಬೊರ್ಗೊಹೈನ್ ವಿರುದ್ಧ ಎನ್ ಏರಿಯನ್
- 12:13 AM: ಈಜು – ಕುಶಾಗ್ರಾ ರಾವತ್ 200M ಫ್ರೀಸ್ಟೈಲ್ ಫೈನಲ್
- 12:30 AM: ವೇಟ್‌ಲಿಫ್ಟಿಂಗ್ – ಮಹಿಳೆಯರ 55 ಕೆಜಿ ಫೈನಲ್‌ನಲ್ಲಿ ಬಿಂದ್ಯಾರಾಣಿ ದೇವಿ
- 1:00 AM: ಬಾಕ್ಸಿಂಗ್ – 92 ಕೆಜಿ ವಿಭಾಗದಲ್ಲಿ 1 ರೌಂಡ್‌ನಲ್ಲಿ ಸಂಜೀತ್ ವಿರುದ್ಧ ಅಟೊ ಲೆಯು
- 1:35 AM: ಈಜು – ಶ್ರೀಹರಿ ನಟರಾಜ್, ಪುರುಷರ 100M ಬ್ಯಾಕ್‌ಸ್ಟ್ರೋಕ್ ಫೈನಲ್