India vs England Test Series | ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್​ಗಳಿಗೆ ನಟರಾಜನ್ ಡ್ರಾಪ್!

ಆಸ್ಟ್ರೇಲಿಯಾದಲ್ಲಿ ಇಂದು ಕೊನೆಗೊಂಡ ಟೆಸ್ಟ್​ ಸರಣಿಯ ಕೊನೆ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಮೊದಲ ಇನ್ನಿಂಗ್ಸ್​ನಲ್ಲಿ 75ರನ್​ಗಳಿಗೆ 3 ವಿಕೆಟ್ ಪಡೆದಿದ್ದ ತಂಗರಸು ನಟರಾಜನ್ ಅವರನ್ನು 18-ಸದಸ್ಯರ ತಂಡದಿಂದ ಕೈಬಿಡಲಾಗಿದೆ.

India vs England Test Series | ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್​ಗಳಿಗೆ ನಟರಾಜನ್ ಡ್ರಾಪ್!
ತಂಗರಸು ನಟರಾಜನ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 19, 2021 | 10:57 PM

ಯಾವುದೇ ಟೆಸ್ಟ್​ ಸರಣಿಗೆ ಟೀಮನ್ನು ಆಯ್ಕೆ ಮಾಡುವಾಗ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ತಿಕ್ಕಲುತವನ್ನು ಪ್ರದರ್ಶಿಸುವುದು ಹೊಸತೇನಲ್ಲ. ‘ಅಂದಕಾಲತ್ತಿಲ್’ನಿಂದ ಇದು ನಡೆದುಕೊಂಡು ಬಂದಿದೆ. ಸಮಿತಿ ಸದಸ್ಯರ ವಿಚಿತ್ರ ಮನಸ್ಥಿಯನ್ನು ನೋಡಿಯೇ ಮಾಜಿ ಆಟಗಾರರಾದ ಲಾಲಾ ಅಮರರ್​ನಾಥ್ ಮತ್ತು ಅವರ ಮಗ ಮೊಹಿಂದರ ಅಮರ್​ನಾಥ್ ಅವರನ್ನು ‘ಬಂಚ್ ಆಫ್ ಜೋಕರ್ಸ್’ಎಂದು ಕರೆದಿದ್ದರು.

ಬಿಸಿಸಿಐ ಆಯ್ಕೆ ಸಮಿತಿ ಇಂದು ಸಭೆ ಸೇರಿ ಇಂಗ್ಲೆಂಡ್ ವಿರುದ್ಧ ಮುಂದಿನ ತಿಂಗಳಿನಿಂದ ನಡೆಯಲಿರುವ 4-ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ 18 ಸದಸ್ಯರ ಟೀಮನ್ನು ಪ್ರಕಟಿಸಿದೆ.

ಆಸ್ಟ್ರೇಲಿಯಾದಲ್ಲಿ ಇಂದು ಕೊನೆಗೊಂಡ ಟೆಸ್ಟ್​ ಸರಣಿಯ ಕೊನೆ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಮೊದಲ ಇನ್ನಿಂಗ್ಸ್​ನಲ್ಲಿ 75ರನ್​ಗಳಿಗೆ 3 ವಿಕೆಟ್ ಪಡೆದಿದ್ದ ತಂಗರಸು ನಟರಾಜನ್ ಅವರನ್ನು ಕೈಬಿಡಲಾಗಿದೆ. ಆದರೆ, ಅವರೊಂದಿಗೆ ಟೆಸ್ಟ್​ ಕ್ರಿಕೆಟ್​ಗೆ ಕಾಲಿಟ್ಟ ವಾಷಿಂಗ್ಟನ್ ಸುಂದರ್ ಮತ್ತು ಇನ್ನೂ ಟೆಸ್ಟ್ ಆಡದ ನೀಳಕಾಯದ ಅಕ್ಸರ್ ಪಟೇಲ್ ಅವರನ್ನು ಆರಿಸಲಾಗಿದೆ. ಅಸ್ಟ್ರೇಲಿಯಾ ಪ್ರವಾಸಕ್ಕೆ ಮೂರು ಆವೃತ್ತಿಗಳಿಗೂ ಟೀಮುಗಳನ್ನು ಪ್ರಕಟಿಸಿದಾಗ ನಟರಾಜನ್ ಅವರ ಹೆಸರು ಯಾವುದೇ ತಂಡಲ್ಲಿರಲಿಲ್ಲ ಎನ್ನುವುದು ನಿಜ, ಅದೃಷ್ಟವಶಾತ್ ಎಲ್ಲ ಅವೃತ್ತಿಗಳಿಗೂ ಅವರು ಪಾದಾರ್ಪಣೆ ಮಾಡಿ ಅದ್ಭುತವಾದ ಪ್ರದರ್ಶನಗಳನ್ನು ನೀಡಿದರು. ಆದರೆ, ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್​ ಪಂದ್ಯಗಳಿಗೆ ಅವರು ಆಯ್ಕೆ ಸಮಿತಿಯ ಅವಕೃಪೆಗೊಳಗಾಗಿದ್ದಾರೆ.

ಇಶಾಂತ್ ಶರ್ಮ

ಪ್ರಮುಖ ಬೌಲರ್​ಗಳು ವಾಪಸ್ಸಾಗಿರುವುದರಿಂದ ನಟರಾಜನ್​ಗೆ ಆಡುವ ಇಲೆವೆನ್​ ಅವಕಾಶ ಸಿಗುತ್ತಿರಲಿಲ್ಲ. ಅದು ಗೊತ್ತಿರುವ ವಿಚಾರವೇ. ಆದರೆ, ಹೀಗೆ ಪ್ರತಿಭೆಯೊಂದನ್ನು ಬೇಕಾಬಿಟ್ಟಿಯಾಗಿ ಕಡೆಗಣಿಸಿದರೆ ಅದು ಅವರ ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಕರ್ನಾಟಕದ ಕರುಣ್ ನಾಯರ್ ಅವರ ಉದಾಹರಣೆ ನಮ್ಮೆದುರಿಗಿದೆ. ತ್ರಿಶತಕ ಬಾರಿಸಿದ ಮರು ಟೆಸ್ಟ್​ನಲ್ಲೇ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಅದಾದ ನಂತರ ಅವರು ಒಂದೆರಡು ಅವಕಾಶಗಳನ್ನು ಪಡೆದರು, ಅದರೆ ಅವರ ಆತ್ಮವಿಶ್ವಾಸ ಉಡುಗಿಹೋಗಿತ್ತು.

ಪಿತೃತ್ವದ ರಜೆ ಮೇಲಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ನಾಯಕನಾಗಿ ವಾಪಸ್ಸಾಗಿದ್ದಾರೆ. ಹಾಗೆಯೇ ಬೆನ್ನು ನೋವಿನಿಂದ ಆಸ್ಟ್ರೇಲಿಯಾ ಪ್ರವಾಸ ಮಿಸ್ ಮಾಡಿಕೊಂಡಿದ್ದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮ ಸಹ ತಂಡಕ್ಕೆ ಮರಳಿದ್ದಾರೆ. ಅಸ್ಟ್ರೇಲಿಯಾದಲ್ಲಿ ಗಾಯಗೊಂಡು ವಾಪಸ್ಸಾದ ಕೆ ಎಲ್ ರಾಹಲ್​ರನ್ನು ಆಯ್ಕೆ ಮಾಡಲಾಗಿದೆ. ಅದರೆ ಮೊದಲ ಟೆಸ್ಟ್​ ನಂತರ ಫಿಟ್ನೆಸ್ ಟೆಸ್ಟ್​ನಲ್ಲಿ ಪಾಸಾದರೆ ಮಾತ್ರ ಅವರನ್ನು ಆಡುವ ಇಲೆವೆನ್​ಗೆ ಪರಿಗಣಿಸಲಾಗುತ್ತದೆ.

ಅಕ್ಸರ್ ಪಟೇಲ್

ಬೌಲಿಂಗ್ ಮಾಡುವುದನ್ನು ನಿಲ್ಲಿಸಿ ಕೇವಲ ಆಕ್ರಮಣಕಾರಿ ಬ್ಯಾಟ್ಸ್​ಮನ್​ ಸಾಮರ್ಥ್ಯದಲ್ಲಿ ಸೀಮಿತ ಓವರ್​ ಪಂದ್ಯಗಳಲ್ಲಾಡುತ್ತಿದ್ದ ಮತ್ತು ಇತ್ತೀಚಿಗಷ್ಟೇ ತಂದೆಯನ್ನು ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಟೆಸ್ಟ್​ಗಳಲ್ಲಿ ಆಡುವ ಆವಕಾಶ ಕಲ್ಪಿಸಲಾಗಿದೆ. ಮೂಲಗಳ ಪ್ರಕಾರ ಹಾರ್ದಿಕ್ ತಮ್ಮ ಬೌಲಿಂಗ್ ಆಕ್ಷನ್ ಬದಲಾಯಿಸಿಕೊಂಡಿದ್ದಾರಂತೆ.

ಎರಡು ಟೆಸ್ಟ್​ಗಳಿಗೆ ಆಯ್ಕೆ ಮಾಡಿರುವ ಆಟಗಾರರ ಹೆಸರುಗಳು ಕೆಳಗಿನಂತಿವೆ.

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶುಭ್​ಮನ್ ಗಿಲ್, ಮಾಯಾಂಕ್ ಅಗರವಾಲ್, ಚೇತೇಶ್ವರ ಪೂಜಾರಾ, ಅಜಿಂಕ್ಯಾ ರಹಾನೆ. ರಿಷಭ್ ಪಂತ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಕೆ ಎಲ್ ರಾಹುಲ್ (ಫಿಟ್ನೆಸ್ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ), ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಮತ್ತು ಅಕ್ಸರ್ ಪಟೇಲ್.

ಸ್ಟ್ಯಾಂಡ್​ಬೈಗಳು: ಕೆ.ಎಸ್.ಭರತ್ (ವಿಕೆಟ್​ಕೀಪರ್), ಅಭಿಮನ್ಯು ಈಶ್ವರನ್, ಶಹಬಾಜ್ ನದೀಮ್, ರಾಹುಲ್ ಚಾಹರ್. ನೆಟ್ ಬೌಲರ್​ಗಳು: ಅಂಕಿತ್ ಕಪೂರ್, ಅವೆಶ್ ಖಾನ್, ಸಂದೀಪ್ ವಾರಿಯರ್, ಕೆ.ಗೌತಮ್, ಸೌರಭ್ ಕುಮಾರ್.

India vs Australia Test Series | ಐತಿಹಾಸಿಕ ಗೆಲುವು; ಟೀಮ್ ಇಂಡಿಯಾಗೆ ಮೋದಿ ಅಭಿನಂದನೆ

Published On - 9:37 pm, Tue, 19 January 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು