You are FRAMED Washington Sundar! ಇದಕ್ಕಿಂತ ಸುಂದರ ಒಕ್ಕಣೆ, ಮನ್ನಣೆ ಇನ್ನೇನು ಬೇಕು ಅಲ್ವಾ?

80ರ ದಶಕದ ಆಟವನ್ನು ನೆನಪಿಸುವಂತೆ ಮೊನ್ನೆ ವಾಷಿಂಗ್ಟನ್​ ಸುಂದರ್ ಅಂತಹುದೇ ಹುಕ್​ ಶಾಟ್​ ಎತ್ತಿ, ಚೆಂಡನ್ನು ಬೌಂಡರಿಯಾಚೆಗೆ ಅಟ್ಟಿದ್ದರು! Exactly ವಾಷಿಂಗ್ಟನ್​ ಸುಂದರ್ ಅವರ ಆ ಸುಂದರ ಹೊಡತದ ಭಂಗಿಯನ್ನೇ ಐಸಿಸಿ Exactly (ICC -International Cricket Council) ಫ್ರೇಂ ಮಾಡಿದೆ.

You are FRAMED Washington Sundar!  ಇದಕ್ಕಿಂತ ಸುಂದರ ಒಕ್ಕಣೆ, ಮನ್ನಣೆ ಇನ್ನೇನು ಬೇಕು ಅಲ್ವಾ?
You are FRAMED Washington Sundar! ಇದಕ್ಕಿಂತ ಸುಂದರ ಒಕ್ಕಣೆ, ಮನ್ನಣೆ ಇನ್ನೇನು ಬೇಕು ಅಲ್ವಾ?
Follow us
ಸಾಧು ಶ್ರೀನಾಥ್​
|

Updated on:Jan 20, 2021 | 11:24 AM

ನಿನ್ನೆ ಬ್ರಿಸ್ಬೇನ್​ನ ಗಾಬಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತದ ಬ್ಲೂ ಬಾಯ್ಸ್​ ನಿಜಕ್ಕೂ ಅದ್ಭುತವಾಗಿ ಆಡಿದ್ದು, ತಮ್ಮ ಅಮೋಘ ಪ್ರದರ್ಶನಕ್ಕೆ ಇಡೀ ವಿಶ್ವವೇ ತಲೆದೂಗುವಂತೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿಯೂ ವಿಭಿನ್ನ ರೀತಿಯಲ್ಲಿ ಶಹಭಾಶ್ ಹುಡುಗರಾ! ಅಂದಿದೆ.

80ರ ದಶಕದಲ್ಲಿ ಕೆಲ ಆಲ್​ರೌಂಡರ್​ ಆಟಗಾರರು ಕ್ರಿಕೆಟ್​ ಆಟದಲ್ಲಿ ಹುಕ್​ ಶಾಟ್​​ ಬಾರಿಸುವುದನ್ನು ಒಂದು ಕಲೆಯಾಗಿಸಿಕೊಂಡಿದ್ದರು. ಕ್ರಿಕೆಟ್​ ಪ್ರೇಮಿಗಳಿಗೆ ಆ ಹುಕ್​ ಶಾಟ್​​ ನಯನ ಮನೋಹರವಾಗಿದ್ದವು. ಅದರಲ್ಲೂ ನಮ್ಮ ಕಪಿಲ್​ ದೇವ್​ ಸೇರಿದಂತೆ ಅಯಾನ್ ಬೋಥಾಂ, ರಿಚರ್ಡ್ಸ್​ ಹ್ಯಾಡ್ಲಿ, ನೆರೆಯ ಇಮ್ರಾನ್ ಖಾನ್​ ಮುಂತಾದ ಕೆಲ ಆಲ್​ರೌಂಡರ್​ ಆಟಗಾರರು ಹುಕ್​ ಶಾಟ್​​ ಮೂಲಕ ವಿಜೃಂಭಿಸುತ್ತಿದ್ದರು. ಅದಾದ ಮೇಲೆ ಅಲ್ಲೊಂದು ಇಲ್ಲೊಂದು ಎಂಬಂತೆ ಬ್ಯಾಟ್ಸ್​ಮನ್​ಗಳು ಹುಕ್​ ಶಾಟ್ ಗಳನ್ನು ತಮ್ಮ ಬ್ಯಾಟಿಂದ ಸಿಡಿಸುತ್ತಿದ್ದರು.

You are FRAMED Washington Sundar! 80ರ ದಶಕದ ಆಟವನ್ನು ನೆನಪಿಸುವಂತೆ ಮೊನ್ನೆ ವಾಷಿಂಗ್ಟನ್​ ಸುಂದರ್ ಅಂತಹುದೇ ಹುಕ್​ ಶಾಟ್​ ಎತ್ತಿ, ಚೆಂಡನ್ನು ಬೌಂಡರಿಯಾಚೆಗೆ ಅಟ್ಟಿದ್ದರು! Exactly ವಾಷಿಂಗ್ಟನ್​ ಸುಂದರ್ ಅವರ ಆ ಸುಂದರ ಹೊಡತದ ಭಂಗಿಯನ್ನೇ ಐಸಿಸಿ (ICC -International Cricket Council) ಫ್ರೇಂ ಮಾಡಿದೆ. ಅದಕ್ಕೊಂದು ಸುಂದರ ಚೌಕಟ್ಟನ್ನು ತೊಡಿಸಿ, ಯು ಆರ್​ ಫ್ರೇಮ್ಡ್​ ಮೈ ಬಾಯ್​ ಎಂದು ಆತನನ್ನು ಹುರಿದುಂಬಿಸಿದೆ.

ಆ ಚೌಕಟ್ಟಿಗೆ ಒಂದು ಸುಂದರ ಕ್ಯಾಪ್ಷನ್​ ಸಹ ನೀಡಿ.. ಹುಕ್​ ಶಾಟ್​​ ಭಂಗಿಯನ್ನು ಅದೊಂದು ಸುಂದರ ಪದ್ಯ (Poetry) ಎಂದು ಬಣ್ಣಿಸಿದೆ. POETRY IN MOTION ಎಂದಿದೆ. ಇದಕ್ಕಿಂತ ಸುಂದರ ಒಕ್ಕಣೆ, ಮನ್ನಣೆ ಇನ್ನೇನು ಬೇಕು ಅಲ್ವಾ?

ಕಪಿಲ್​ ದೇವ್ ನಟರಾಜ ಶಾಟ್

ಕಾಂಗರೂಗಳ ಬಾಲ ಕಟ್; 4ನೇ ಟೆಸ್ಟ್​ ಗೆದ್ದುಬೀಗಿದ ಭಾರತ: ಸರಣಿಯೂ ಬ್ಲೂ ಬಾಯ್ಸ್​ ಮಡಿಲಿಗೆ!

ಮೂರು ದಶಕಗಳ ಬಳಿಕ ಗಾಬಾದಲ್ಲಿ ಗಾಬರಿಗೊಂಡ ಕಾಂಗರೂ ಪಡೆ.. ಗಾಬಾ ಹೆಸರು ಎಲ್ಲಿಂದ ಬಂತು?

Published On - 11:19 am, Wed, 20 January 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು