2024 ರಲ್ಲಿ ಯಶಸ್ಸಿನ ಶಿಖರವೇರಿದ ಯಶಸ್ವಿ ಜೈಸ್ವಾಲ್

2023 ರಲ್ಲಿ ಟೆಸ್ಟ್ ಕೆರಿಯರ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಈವರೆಗೆ 18 ಪಂದ್ಯಗಳಲ್ಲಿ 34 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 2 ದ್ವಿಶತಕ, 4 ಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ ಯಶಸ್ವಿ ಬ್ಯಾಟ್​ನಿಂದ 10 ಅರ್ಧಶತಕಗಳು ಸಹ ಮೂಡಿಬಂದಿವೆ. ಈ ಮೂಲಕ ಕೇವಲ 34 ಇನಿಂಗ್ಸ್​​ಗಳಲ್ಲಿ ಯುವ ಎಡಗೈ ದಾಂಡಿಗ ಒಟ್ಟು 1766 ರನ್ ಕಲೆಹಾಕಿದ್ದಾರೆ.

2024 ರಲ್ಲಿ ಯಶಸ್ಸಿನ ಶಿಖರವೇರಿದ ಯಶಸ್ವಿ ಜೈಸ್ವಾಲ್
Yashasvi Jaiswal
Follow us
ಝಾಹಿರ್ ಯೂಸುಫ್
|

Updated on: Dec 31, 2024 | 10:53 AM

2024… ಟೀಮ್ ಇಂಡಿಯಾ ಪಾಲಿಗೆ ಗೆಲುವು-ಸೋಲುಗಳ  ವರ್ಷ. ಏಕೆಂದರೆ ಈ ವರ್ಷ ಭಾರತ ತಂಡ ಆಡಿದ 15 ಟೆಸ್ಟ್​ ಪಂದ್ಯಗಳಲ್ಲಿ 8 ಜಯ ಸಾಧಿಸಿದರೆ, 6 ಸೋಲು ಕಂಡಿದೆ. ಈ ಸಿಹಿ-ಕಹಿ ನಡುವೆ ಯಶಸ್ಸಿನ ಶಿಖರವೇರಿದ್ದು ಯುವ ದಾಂಡಿಗ ಯಶಸ್ವಿ ಜೈಸ್ವಾಲ್. ಏಕೆಂದರೆ ಈ ವರ್ಷ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಶಸ್ವಿ ಜೈಸ್ವಾಲ್.

  • ಟೀಮ್ ಇಂಡಿಯಾ ಪರ ಈ ವರ್ಷ ಟೆಸ್ಟ್​ನಲ್ಲಿ 29 ಇನಿಂಗ್ಸ್​ ಆಡಿರುವ ಯಶಸ್ವಿ ಒಟ್ಟು 1478 ರನ್ ಕಲೆಹಾಕಿದ್ದಾರೆ.
  • ಈ ವರ್ಷ ಭಾರತ ಪರ ಅತ್ಯಧಿಕ ಟೆಸ್ಟ್ ಶತಕ ಸಿಡಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲೂ ಯಶಸ್ವಿ ಜೈಸ್ವಾಲ್ (3 ಸೆಂಚುರಿ) ಅಗ್ರಸ್ಥಾನದಲ್ಲಿದ್ದಾರೆ.
  • ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಪರ 2024 ರಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರ್ ಕೂಡ ಯಶಸ್ವಿ ಜೈಸ್ವಾಲ್. ಒಟ್ಟು 9 ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.
  • 2024 ಟೆಸ್ಟ್​ನಲ್ಲಿ ಅತೀ ಹೆಚ್ಚು ಫೋರ್ ಬಾರಿಸಿದ ದಾಖಲೆ ಕೂಡ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿದೆ. ಈ ವರ್ಷ 29 ಇನಿಂಗ್ಸ್​ಗಳಲ್ಲಿ ಜೈಸ್ವಾಲ್ 168 ಫೋರ್​ಗಳನ್ನು ಬಾರಿಸಿದ್ದಾರೆ.
  • ಈ ವರ್ಷದ ಟೆಸ್ಟ್​ ಕ್ರಿಕೆಟ್​ನ ಸಿಕ್ಸರ್ ಕಿಂಗ್ ಕೂಡ ಜೈಸ್ವಾಲ್. 15 ಟೆಸ್ಟ್​ ಪಂದ್ಯಗಳಲ್ಲಿ 36 ಸಿಕ್ಸ್ ಸಿಡಿಸಿ ಯಶಸ್ವಿ ಜೈಸ್ವಾಲ್ ಈ ದಾಖಲೆ ಬರೆದಿದ್ದಾರೆ.
  • ಟೀಮ್ ಇಂಡಿಯಾ ಪರ ಟೆಸ್ಟ್​ನಲ್ಲಿ ಈ ವರ್ಷ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದ ಆಟಗಾರ ಯಶಸ್ವಿ ಜೈಸ್ವಾಲ್. 29 ಇನಿಂಗ್ಸ್​ಗಳಲ್ಲಿ ಜೈಸ್ವಾಲ್ 54.74ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
  • 2024 ರಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್​ನಲ್ಲಿ ಗರಿಷ್ಠ ಸ್ಕೋರ್​ ಬಾರಿಸಿದ್ದು ಕೂಡ ಯಶಸ್ವಿ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಅಜೇಯ 214* ರನ್ ಬಾರಿಸಿದ್ದರು.
  • ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿರುವುದು ಕೂಡ ಯಶಸ್ವಿ ಜೈಸ್ವಾಲ್. 4 ಪಂದ್ಯಗಳಲ್ಲಿ 8 ಇನಿಂಗ್ಸ್ ಆಡಿರುವ ಜೈಸ್ವಾಲ್ ಒಟ್ಟು 359 ರನ್ ಕಲೆಹಾಕಿದ್ದಾರೆ.
  • ಇನ್ನು ಈ ವರ್ಷ ಟೆಸ್ಟ್ ಕ್ರಿಕೆಟ್​ನಲ್ಲಿ 1400+ ರನ್​ ಗಳಿಸಿದ ವಿಶ್ವದ 2ನೇ ಬ್ಯಾಟರ್ ಯಶಸ್ವಿ ಜೈಸ್ವಾಲ್. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಇಂಗ್ಲೆಂಡ್​ನ ಜೋ ರೂಟ್ (1556 ರನ್ಸ್).
  • ಹಾಗೆಯೇ ಈ ವರ್ಷ ಭಾರತದ ಪರ ಟೆಸ್ಟ್​ನಲ್ಲಿ 1000+ ರನ್​ ಕಲೆಹಾಕಿದ ಏಕೈಕ ಬ್ಯಾಟರ್ ಯಶಸ್ವಿ ಜೈಸ್ವಾಲ್.
  • ಯಶಸ್ವಿ ಜೈಸ್ವಾಲ್ ಅವರನ್ನು ಹೊರತುಪಡಿಸಿ ಭಾರತದ ಯಾವುದೇ ಬ್ಯಾಟರ್ 900 ರನ್​ಗಳ ಗಡಿದಾಟಿಲ್ಲ ಎಂಬುದು ವಿಶೇಷ.

ಇದನ್ನೂ ಓದಿ: Rohit Sharma: ಸೋಲಿನ ಸರದಾರನ ಹೆಸರಿಗೆ ಕೆಟ್ಟ ದಾಖಲೆ

ಅಂದರೆ ಯಶಸ್ವಿ ಜೈಸ್ವಾಲ್ 2024 ರಲ್ಲಿ ಹೊಸ ಭರವಸೆ ಮೂಡಿಸಿರುವುದು ಸ್ಪಷ್ಟ. ಅದು ಕೂಡ ತಮ್ಮ 23ನೇ ವಯಸ್ಸಿನಲ್ಲಿ. ಹೀಗಾಗಿ 2024 ಯಶಸ್ವಿ ಜೈಸ್ವಾಲ್ ಪಾಲಿನ ಯಶಸ್ವಿ ವರ್ಷ ಎನ್ನಬಹುದು.

ಚಿರತೆ ಕಂಡರೆ ಜನ ಪ್ಯಾನಿಕ್ ಆಗದೆ 1926 ನಂಬರ್​ಗೆ ಕರೆ ಮಾಡಬೇಕು: ಡಿಸಿಎಫ್
ಚಿರತೆ ಕಂಡರೆ ಜನ ಪ್ಯಾನಿಕ್ ಆಗದೆ 1926 ನಂಬರ್​ಗೆ ಕರೆ ಮಾಡಬೇಕು: ಡಿಸಿಎಫ್
10 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ ಈ ಮುಸ್ಲಿಂ ವ್ಯಕ್ತಿ
10 ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ ಈ ಮುಸ್ಲಿಂ ವ್ಯಕ್ತಿ
ದಿನಗೂಲಿ ನೌಕರರಿಗೆ ಹೆಚ್ಚಿನ ಸಮಸ್ಯೆ, ಮಗುವನ್ನು ಹೊತ್ತುಕೊಂಡೇ ನಡೆದ ಮಹಿಳೆ
ದಿನಗೂಲಿ ನೌಕರರಿಗೆ ಹೆಚ್ಚಿನ ಸಮಸ್ಯೆ, ಮಗುವನ್ನು ಹೊತ್ತುಕೊಂಡೇ ನಡೆದ ಮಹಿಳೆ
ತುಮಕೂರು: ದೂರು ನೀಡಲು ಬಂದ ಮಹಿಳೆಗೆ ಡಿವೈಎಸ್​ಪಿಯಿಂದ ಲೈಂಗಿಕ ಕಿರುಕುಳ
ತುಮಕೂರು: ದೂರು ನೀಡಲು ಬಂದ ಮಹಿಳೆಗೆ ಡಿವೈಎಸ್​ಪಿಯಿಂದ ಲೈಂಗಿಕ ಕಿರುಕುಳ
ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್
ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್
ಗ್ರಾ.ಪಂ. ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ವಿಡಿಯೋ ವೈರಲ್
ಗ್ರಾ.ಪಂ. ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ವಿಡಿಯೋ ವೈರಲ್
ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಕೊಹ್ಲಿ; ನಾಟೌಟ್ ಎಂದ ಅಂಪೈರ್
ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಕೊಹ್ಲಿ; ನಾಟೌಟ್ ಎಂದ ಅಂಪೈರ್
ಜುಟ್ಟಿಲ್ಲದ ತೆಂಗಿನಕಾಯಿ ಒಡೆಯಬಾರದು ಏಕೆ? ವಿಡಿಯೋ ನೋಡಿ
ಜುಟ್ಟಿಲ್ಲದ ತೆಂಗಿನಕಾಯಿ ಒಡೆಯಬಾರದು ಏಕೆ? ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ
ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ
ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್: ಸಿಎಂ ಸೇರಿ ಹಲವರು ಭಾಗಿ