
2026 ರ ಏಷ್ಯನ್ ಗೇಮ್ಸ್ ಇದೇ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಸುತ್ತಿಗೆ ಇಂದಿನಿಂದ ಚಾಲನೆ ಸಿಕ್ಕಿದೆ. ಅದರಂತೆ ಇಂದು ಬಾಂಗ್ಲಾದೇಶ ಮತ್ತು ಚೀನಾ ನಡುವೆ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಬೇಕಿತ್ತು. ಆದರೆ ಈ ಪಂದ್ಯ ನಡೆಯಲಿಲ್ಲ. ಪರಿಣಾಮವಾಗಿ, ಚೀನಾದ ಮಹಿಳಾ ಕ್ರಿಕೆಟ್ ತಂಡವು ಒಂದು ಪಂದ್ಯವನ್ನೂ ಆಡದೆ ಏಷ್ಯನ್ ಕ್ರೀಡಾಕೂಟದಿಂದ ಹೊರಬಿತ್ತು. ವಾಸ್ತವವಾಗಿ ಉಭಯ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಪಂದ್ಯ ರದ್ದಾದ ಕಾರಣ ರ್ಯಾಂಕಿಂಗ್ನಲ್ಲಿ ಮೇಲಿದ್ದ ಬಾಂಗ್ಲಾದೇಶ ಸೆಮಿಫೈನಲ್ಗೇರಿದರೆ, ಚೀನಾ ಮಹಿಳಾ ತಂಡ ಕ್ರೀಡಾಕೂಟದಿಂದ ಹೊರಬಿತ್ತು.
ಏಷ್ಯನ್ ಗೇಮ್ಸ್ ಕ್ರಿಕೆಟ್‌ನ ನಿಯಮ 16.10.2(b) ಪ್ರಕಾರ, ಒಂದು ಪಂದ್ಯ ಮಳೆಯಿಂದ ರದ್ದಾದರೆ, ರ್ಯಾಂಕಿಂಗ್ನಲ್ಲಿ ಮೇಲಿದ್ದ ತಂಡವು ಮುಂದಿನ ಸುತ್ತಿಗೆ ಮುನ್ನಡೆಯುತ್ತದೆ. ಅದರಂತೆ ಈ ಎರಡೂ ತಂಡಗಳಲ್ಲಿ, ಬಾಂಗ್ಲಾದೇಶವು ಐಸಿಸಿ ಶ್ರೇಯಾಂಕದಲ್ಲಿ ಚೀನಾಕ್ಕಿಂತ ಮುಂದಿತ್ತು. ಅದಕ್ಕಾಗಿಯೇ ಬಾಂಗ್ಲಾದೇಶ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಇತ್ತ ಚೀನಾ ನಿರಾಶೆಯಿಂದಲೇ ಟೂರ್ನಿಯಿಂದ ಹೊರನಡೆಯಿತು.
ಇತ್ತ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥೈಲ್ಯಾಂಡ್ ತಂಡವನ್ನು ಕೊನೆಯ ಓವರ್ನಲ್ಲಿ ಮಣಿಸಿದ ಪಾಕಿಸ್ತಾನ ಮಹಿಳಾ ತಂಡ ಸೆಮಿಫೈನಲ್‌ಗೆ ಟಿಕೆಟ್ ಪಡೆದುಕೊಂಡಿತು. ಮಳೆಯಿಂದಾಗಿ ಪಾಕಿಸ್ತಾನ ಮತ್ತು ಥೈಲ್ಯಾಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ತಲಾ 11 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಅದರಂತೆ ಪಾಕಿಸ್ತಾನ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು.
ಏಷ್ಯನ್ ಗೇಮ್ಸ್ಗೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ
ಮೊದಲು ಬ್ಯಾಟಿಂಗ್ ಮಾಡಿದ ಥೈಲ್ಯಾಂಡ್, ಪಾಕಿಸ್ತಾನಕ್ಕೆ 11 ಓವರ್‌ಗಳಲ್ಲಿ 92 ರನ್‌ಗಳ ಗುರಿ ನೀಡಿತು. ಥೈಲ್ಯಾಂಡ್‌ಗೆ ಹೋಲಿಸಿದರೆ, ಪಾಕಿಸ್ತಾನ ತಂಡ ಬಲಿಷ್ಠವಾಗಿ ಕಾಣುತ್ತಿತ್ತು. ಆದರೆ ಥೈಲ್ಯಾಂಡ್ ಸುಲಭವಾಗಿ ಸೋಲೊಪ್ಪಿಕೊಳ್ಳದೆ ಕೊನೆಯ ಓವರ್ವರೆಗೂ ಪಂದ್ಯವನ್ನು ಕೊಂಡೊಯ್ಯಿತು. ಆದಾಗ್ಯೂ ಪಾಕಿಸ್ತಾನ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.
Published On - 6:11 pm, Thu, 17 September 26