AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

178 ಎಸೆತಗಳಲ್ಲಿ ಅಜೇಯ 508 ರನ್ ಸಿಡಿಸಿ ದಾಖಲೆ ಬರೆದ ಯುವ ಕ್ರಿಕೆಟರ್, ಆಟದ ವೈಖರಿ ಹಂಚಿಕೊಂಡ ಮುಂಬೈ ಇಂಡಿಯನ್ಸ್

ಯುವ ಕ್ರಿಕೆಟರ್ 178 ಎಸೆತಗಳಲ್ಲಿ ಅಜೇಯ 508 ರನ್ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಇದಕ್ಕೆ ಮುಂಬೈ ಇಂಡಿಯನ್ಸ್ ಉದಯೋನ್ಮುಖ ಆಟಗಾರನ ಬಗ್ಗೆ ಟ್ವೀಟ್ ಮಾಡಿದೆ.

178 ಎಸೆತಗಳಲ್ಲಿ ಅಜೇಯ 508 ರನ್ ಸಿಡಿಸಿ ದಾಖಲೆ ಬರೆದ ಯುವ ಕ್ರಿಕೆಟರ್, ಆಟದ ವೈಖರಿ ಹಂಚಿಕೊಂಡ ಮುಂಬೈ ಇಂಡಿಯನ್ಸ್
ಯಶ್‌ ಚಾವ್ಡೆ
TV9 Web
| Edited By: |

Updated on: Jan 15, 2023 | 10:36 PM

Share

ಮಹಾರಾಷ್ಟ್ರದ 13 ವರ್ಷದ ಉದಯೋನ್ಮುಖ ಕ್ರಿಕೆಟರ್‌ (Maharashtra cricketer) 178 ಎಸೆತಗಳಲ್ಲಿ ಔಟಾಗದೇ 508 ರನ್ ಗಳಿಸುವ ಮೂಲಕ ರಾಷ್ಟ್ರೀಯ ದಾಖಲೆಯೊಂದನ್ನು ಮುರಿದಿದ್ದಾರೆ. ಜೊತೆಗೆ ಕ್ರಿಕೆಟ್9 cricket) ಇತಿಹಾಸದಲ್ಲೇ 500ಕ್ಕೂ ಹೆಚ್ಚು ರನ್ ಗಳಿಸಿದ 10ನೇ ಬ್ಯಾಟ್ಸ್​ಮನ್​ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೌದು.. ಮುಂಬೈ ಇಂಡಿಯನ್ಸ್‌ನ (Mumbai Indians) ಕಿರಿಯರ ಅಂತರ್ ಶಾಲಾ (14 ವರ್ಷದೊಳಗಿನವರ) ಕ್ರಿಕೆಟ್ ಕಪ್‌ ಟೂರ್ನಿ ಶುಕ್ರವಾರ ನಾಗ್ಪುರದ ‘ಜುಲೇಲಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಸರಸ್ವತಿ ವಿದ್ಯಾಲಯದ 13 ವರ್ಷದ ಯಶ್‌ ಚಾವ್ಡೆ, ಸಿದ್ಧೇಶ್ವರ ವಿದ್ಯಾಲಯದ ವಿರುದ್ಧ 81 ಬೌಂಡರಿಗಳು ಮತ್ತು 18 ಸಿಕ್ಸರ್‌ಗಳ ನೆರವಿನೊಂದಿಗೆ ಅಜೇಯ 508 ರನ್ ಬಾರಿಸಿ ಗಮನ ಸೆಳೆದರು. ಅಲ್ಲದೇ ಅಂತರ್ ಶಾಲಾ ಕ್ರಿಕೆಟ್‌ನಲ್ಲಿ ಸೀಮಿತ ಓವರ್​ಗಳಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿ ದಾಖಲೆ ಬರೆದರು.

ಅಲ್ಲದೇ ಸಹ ಆಟಗಾರ ತಿಲಕ್ ವಾಕೋಡೆ (97 ಎಸೆತಗಳಲ್ಲಿ 127) ಅವರೊಂದಿಗೆ ಜತೆಗೂಡಿ ಚಾವ್ಡೆ 40 ಓವರ್‌ಗಳಲ್ಲಿ 714 ರನ್ ಗಳಿಸುವ ಮೂಲಕ ಅತ್ಯಧಿಕ ಜೊತೆಯಾಟದ ದಾಖಲೆಯನ್ನೂ ಸಹ ಮುರಿದರು.

ಅಂತರ್ ಶಾಲಾ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಚಾವ್ಡೆ ಸೇರಿದ್ದಾರೆ. ಅತಿ ಹೆಚ್ಚು ರನ್ ಪೇರಿಸಿದ ಭಾರತೀಯರ ಮೊದಲ ಮೂರು ಸ್ಥಾನಗಳಲ್ಲಿ ಪ್ರಣವ್ ಧನವಾಡೆ (ಅಜೇಯ 1009), ಪ್ರಿಯಾಂಶು ಮೊಲಿಯಾ (ಅಜೇಯ 556), ಪೃಥ್ವಿ ಶಾ (546) ಮತ್ತು ಡ್ಯಾಡಿ ಹವೇವಾಲಾ (515) ಅವರಿದ್ದಾರೆ. ಇದೀಗ ಚಾವ್ಡೆ ಅಜೇಯ 508 ರನ್ ಸಿಡಿಸುವ ಮೂಲಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಚಾವ್ಡೆ ಪಾತ್ರರಾಗಿದ್ದಾರೆ. 2022ರ ಆಗಸ್ಟ್‌ನಲ್ಲಿ ನಡೆದ 15 ವರ್ಷದೊಳಗಿನವರ ಅಂತರ್ ಶಾಲಾ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಬ್ಯಾಟ್ಸ್​ಮನ್ ಚಿರತ್ ಸೆಲ್ಲೆಪೆರುಮಾ ಎನ್ನುವರು 553 ರನ್ ಗಳಿಸಿದ್ದರು.

ಯಶ್ ಚಾವ್ಡೆ ಎರಡು ಶತಕಗಳ ಜೊತೆಗೆ 1000 ರನ್ ಗಳಿಸುವ ಮೂಲಕ ಈ ಋತುವಿನ U-16 VCA ಟೂರ್ನಿಯ ಸ್ಟಾರ್ ಆಟಗಾರ ಆಗಿದ್ದಾರೆ. ಇನ್ನು ಯಶ್ ಚಾವ್ಡೆ ಆಟದ ವೈಖರಿಯನ್ನು ಮುಂಬೈ ಇಂಡಿಯನ್ಸ್ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ