AB de Villiers: ಕಣ್ಣು ತುಂಬಿ ಬಂತು.. ಆರ್ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ಬರೆದ ಎಬಿಡಿ!
AB de Villiers: ಕಿಕ್ಕಿರಿದು ತುಂಬಿದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ನಮ್ಮ ಡ್ರೆಸ್ಸಿಂಗ್ ರೂಮ್ನ ಬಾಲ್ಕನಿಗೆ ಕಾಲಿಡುವಾಗ, ನನ್ನ ಕಣ್ಣು ತುಂಬಿ ಬಂದಿತ್ತು ಅಂತ ಬರೆದಿರುವ ಎಬಿಡಿ, ಕೊನೆಯಲ್ಲಿ ತಂಡದ ಆಟಗಾರರಿಗೆ, ಅದರಲ್ಲೂ ವಿರಾಟ್ಗೆ, ಅಭಿಮಾನಿಗಳಿಗೆ, ಆರ್ಸಿಬಿಗೆ, ಬೆಂಗಳೂರಿಗೆ ಥ್ಯಾಂಕ್ಸ್ ಎಂದಿದ್ದಾರೆ.

ಕ್ರಿಕೆಟ್ ಜಗತ್ತಿನ ಅಜಾತಶತ್ರು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ಆಟಗಾರ, ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ಗೆ (AB de Villiers) ಎಲ್ಲಾ ದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಡಿವಿಲಿಯರ್ಸ್ ಅಭಿಮಾನಕ್ಕೆ ಕೊರತೆ ಏನಿಲ್ಲ. ಅದರಲ್ಲೂ ಕರುನಾಡಿನವರಿಗೆ ಅಥವಾ ಬೆಂಗಳೂರಿನವರಿಗೆ ಡಿವಿಲಿಯರ್ಸ್ ಮೇಲಿರುವ ಪ್ರೀತಿ, ಗೌರವದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಸದ್ಯ ಐಪಿಎಲ್ಗೆ (IPL) ಗುಡ್ಬೈ ಹೇಳಿರುವ ಡಿವಿಲಿಯರ್ಸ್, ಆರ್ಸಿಬಿ (RCB) ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ಇದಕ್ಕೆ ಕಿಂಗ್ ಕೊಹ್ಲಿ (Virat Kohli) ಕೂಡ ರಿಯಾಕ್ಟ್ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಸ್ಫೋಟಕ ಬ್ಯಾಟಿಂಗ್ ನಡೆಸ್ತಿದ್ದ ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿವಿಲಿಯರ್ಸ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅದರಲ್ಲೂ, ಎಬಿಡಿ ಐಪಿಎಲ್ನಲ್ಲಿ ಯಾವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂಟ್ರಿಕೊಟ್ರೋ, ಅಂದಿನಿಂದ ಎಬಿಡಿ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿತ್ತು. ಆರ್ಸಿಬಿಯಲ್ಲಿ ಸುದೀರ್ಘ ಕಾಲ ರಂಜಿಸಿದ್ದ ಎಬಿಡಿಗೂ ಫ್ರಾಂಚೈಸಿಗೂ ಭಾವನಾತ್ಮಕ ಸಂಬಂಧವಿದೆ. ಇದೇ ಕಾರಣಕ್ಕೆ ಮಾರ್ಚ್ 26ರಂದು ಆರ್ಸಿಬಿ, ಎಬಿಡಿಗೆ ಹಾಲ್ ಆಫ್ ಫೇಮ್ ನೀಡಿ ವಿಶೇಷ ರೀತಿಯಲ್ಲಿ ಗೌರವಿಸಿತ್ತು.
Some ? from the Lap of honor! ?
Our ?s gave a fitting tribute to our 12th Man Army! ❤️#PlayBold #ನಮ್ಮRCB #IPL2023 #RCBUnbox pic.twitter.com/k8a8Mc0iIy
— Royal Challengers Bangalore (@RCBTweets) March 26, 2023
IPL 2023: ಐಪಿಎಲ್ ಆರಂಭಕ್ಕೆ ಮೂರೇ ದಿನ ಬಾಕಿ: ಆರ್ಸಿಬಿ ಮೊದಲ ಪಂದ್ಯ ಯಾವಾಗ?: ಇಲ್ಲಿದೆ ಫಾಫ್ ಪಡೆಯ ವೇಳಾಪಟ್ಟಿ
ಭಾವನೆಯ ಹೊಳೆಯಲ್ಲಿ ಮಿಂದೆದ್ದ ಮಿ.360!
2011ರಿಂದ 2021ರ ವರೆಗೆ ದಶಕದ ಕಾಲ ಎಬಿಡಿ, ಆರ್ಸಿಬಿ ಪರ ಬ್ಯಾಟ್ ಬೀಸಿದ್ದಾರೆ. ಇದೇ ಕಾರಣಕ್ಕೆ ಕಳೆದ ಭಾನುವಾರ ಆರ್ಸಿಬಿ ಫ್ರಾಂಚೈಸಿ, ಡಿವಿಲಿಯರ್ಸ್ ಮತ್ತು ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ಗೆ ಹಾಲ್ ಆಫ್ ಫೇಮ್ ನೀಡಿ ಗೌರವಿಸಿತ್ತು. ಈ ವೇಳೆ ತುಂಬಿದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳ ಹರ್ಷೋದ್ಘಾರ.. ಎಬಿಡಿ.. ಎಬಿಡಿ ಘೋಷಣೆ.. ಅಭಿಮಾನಿಗಳ ಪ್ರೀತಿಗೆ ಡಿವಿಲಿಯರ್ಸ್, ಭಾವನೆಯ ಹೊಳೆಯಲ್ಲೇ ಮಿಂದೆದಿದ್ರು.
We love you 3000 ?❤️
The memories you‘ve given us, and the chants of ABD ABD will never fade away! ?
Still not too late to come back from retirement, legend! ?#ThankYouAB #PlayBold #ನಮ್ಮRCB #IPL2023 @ABdeVilliers17 pic.twitter.com/t5Ly8scPmw
— Royal Challengers Bangalore (@RCBTweets) March 28, 2023
ಭಾವನಾತ್ಮಕ ಸಂದೇಶ ಬರೆದ ಎಬಿಡಿ!
ಆರ್ಸಿಬಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ತನಗೆ ಅನಿಸಿದ ಭಾವನೆಗಳನ್ನೆಲ್ಲಾ ಬರೆದು ಎಬಿಡಿ, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಿಂದ ಆರಂಭಿಸಬೇಕೋ ಗೊತ್ತಾಗ್ತಿಲ್ಲ. ಮಾರ್ಚ್ 26ಕ್ಕೆ ನಾನು ಮತ್ತು ಕ್ರಿಸ್ಗೆ ಹಾಲ್ ಆಫ್ ಫೇಮ್ ಗೌರವ ನೀಡಿ, ನಮ್ಮ ಜೆರ್ಸಿ ನಂಬರ್ಗಳನ್ನು ನಿವೃತ್ತಿಗೊಳಿಸಲಾಯ್ತು. ನನ್ನ ಪತ್ನಿ ಮತ್ತು ಮಕ್ಕಳೊಂದಿಗೆ ನಾನು ಸ್ಟೇಡಿಯಂನಲ್ಲಿ ನಡೆದಾಡುವಾಗ ನನ್ನ ಹೊಟ್ಟೆಯೊಳಗೆ ಚಿಟ್ಟೆಗಳು ಓಡಾಡಿದಂತೆ ರೋಮಾಂಚನವಾಯ್ತು. ಕಿಕ್ಕಿರಿದು ತುಂಬಿದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ನಮ್ಮ ಡ್ರೆಸ್ಸಿಂಗ್ ರೂಮ್ನ ಬಾಲ್ಕನಿಗೆ ಕಾಲಿಡುವಾಗ, ನನ್ನ ಕಣ್ಣು ತುಂಬಿ ಬಂದಿತ್ತು ಅಂತ ಬರೆದಿರುವ ಎಬಿಡಿ, ಕೊನೆಯಲ್ಲಿ ತಂಡದ ಆಟಗಾರರಿಗೆ, ಅದರಲ್ಲೂ ವಿರಾಟ್ಗೆ, ಅಭಿಮಾನಿಗಳಿಗೆ, ಆರ್ಸಿಬಿಗೆ, ಬೆಂಗಳೂರಿಗೆ ಥ್ಯಾಂಕ್ಸ್ ಎಂದಿದ್ದಾರೆ.
View this post on Instagram
ಆರ್ಸಿಬಿ ತಂಡದಲ್ಲಿ ಬ್ಯಾಟಿಂಗ್ ಅಬ್ಬರ ನಡೆಸ್ತಿದ್ದ, ಸೂಪರ್ ಮ್ಯಾನ್ನಂತೆ ಫೀಲ್ಡಿಂಗ್ ಮಾಡ್ತಿದ್ದ ಎಬಿಡಿ ಮತ್ತು ಕಿಂಗ್ ಕೊಹ್ಲಿ ನಡುವಿನ ಸ್ನೇಹ ಎಂಥದ್ದು ಅನ್ನೋದು ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತೇಯಿದೆ. ಎಬಿಡಿ ಇಸ್ಟಾಗ್ರಾಮ್ನಲ್ಲಿ ಬರೆದಿರುವ ಈ ಭಾವನಾತ್ಮಕ ಸಂದೇಶಕ್ಕೆ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ, ಹಾರ್ಟ್ ಇಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
